For Quick Alerts
ALLOW NOTIFICATIONS  
For Daily Alerts

  ಅರಿಶಿನ ಹಾಲು: ಇದು ಬರೋಬ್ಬರಿ ಎಂಟು ಕಾಯಿಲೆಗಳಿಗೆ ರಾಮಬಾಣ

  By Lekhaka
  |

  ಹಿಂದೆ ಶೀತ ಅಥವಾ ಕೆಮ್ಮು ಕಾಣಿಸಿಕೊಂಡರೆ ಅಮ್ಮ ತಕ್ಷಣ ಅಡುಗೆ ಮನೆಗೆ ಹೋಗಿ ಒಂದು ಲೋಟ ಬಿಸಿ ಹಾಲಿಗೆ ಅರಶಿನ ಹಾಕಿ ತಂದು ಕುಡಿಯಲು ನೀಡುತ್ತಿದ್ದಳು. ಮರುದಿನ ಶೀತ ಮತ್ತು ಕೆಮ್ಮು ಮಾಯ. ಆದರೆ ಇಂದಿನ ದಿನಗಳಲ್ಲಿ ಈ ರೀತಿಯ ಮನೆಮದ್ದುಗಳು ಮೂಲೆಗುಂಪಾಗುತ್ತಾ ಇದೆ. ಅದನ್ನು ತಯಾರಿಸುವಷ್ಟು ತಾಳ್ಮೆ ಹಾಗೂ ಸಮಯ ಜನರಲ್ಲಿ ಇಲ್ಲ. ಇದರ ಬದಲಿಗೆ ಒಂದು ಮಾತ್ರೆ ತೆಗೆದುಕೊಂಡರೆ ಎಲ್ಲವೂ ನಿವಾರಣೆ. ಆದೆರ ಮುಂದೆ ಈ ಮಾತ್ರೆ ಎಷ್ಟು ಅಡ್ಡಪರಿಣಾಮ ಬೀರಬಹುದು ಎನ್ನುವ ಬಗ್ಗೆ ಯೋಚನೆ ಮಾಡುವುದಿಲ್ಲ.

  ಹಲವಾರು ರೀತಿಯ ಆರೋಗ್ಯ ಗುಣಗಳನ್ನು ಹೊಂದಿರುವಂತಹ ಅರಶಿನಹಾಲು ಆಯುರ್ವೇದದಲ್ಲಿ ತುಂಬಾ ಪರಿಣಾಮಕಾರಿ ಮನೆಮದ್ದು. ಅರಶಿನದಲ್ಲಿ ನಂಜುನಿರೋಧಕ ಮತ್ತು ಉರಿಯೂತ ಶಮನಕಾರಿ ಗುಣಗಳು ಇವೆ. ಇದರಿಂದ ದೇಹದಲ್ಲಿರುವ ಹಲವಾರು ರೀತಿಯ ಸೋಂಕು ಮತ್ತು ಕಾಯಿಲೆಗಳ ವಿರುದ್ಧ ಇದು ಹೋರಾಡುವುದು. ಯಾವುದೇ ಗಾಯವಾದಾಗ ಅರಶಿನ ಹಾಕಿದರೆ ರಕ್ತವು ಹೆಪ್ಪುಗಟ್ಟಿ ಸೋಂಕು ಕಡಿಮೆಯಾಗುವುದು. ಚರ್ಮದ ಕೋಶಗಳು ವೇಗವಾಗಿ ಪುನರುಜ್ಜೀವನಗೊಳ್ಳಲು ಇದು ನೆರವಾಗುವುದು. ಇದರಿಂದ ಗಾಯಗಳು ಬೇಗನೆ ನಿವಾರಣೆಯಾಗುವುದು.

  ಇದರಲ್ಲಿ ಇರುವಂತಹ ಹಲವಾರು ರೀತಿಯ ಆ್ಯಂಟಿ ಆಕ್ಸಿಡೆಂಟ್ ಗಳು ಫ್ರೀ ರ್ಯಾಡಿಕಲ್ ವಿರುದ್ಧ ಹೋರಾಡುವುದು. ಇದನ್ನು ತ್ವಚೆಗೆ ಹಚ್ಚಿಕೊಂಡರೆ ತ್ವಚೆಯು ಕಾಂತಿಯುತವಾಗಿ ಹೊಳೆಯುವುದು. ಕಾಲಜನ್ ಉತ್ಪತ್ತಿಯನ್ನು ಹೆಚ್ಚಿಸಿ ನೆರಿಗೆ ಕಡಿಮೆ ಮಾಡುವುದು. ಇಷ್ಟು ಮಾತ್ರವಲ್ಲದೆ ಮೊಡವೆಗಳನ್ನು ನಿವಾರಣೆ ಮಾಡುವುದು. ಇದು ಅರಶಿನದಲ್ಲಿರುವ ಆರೋಗ್ಯ ಲಾಭಗಳು. ಅದೇ ರೀತಿ ಹಾಲಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದು ಸುಲಭವಾಗಿ ಕರಗುವುದು ಮತ್ತು ಒಳ್ಳೆಯ ಆಹಾರ ಕೂಡ. ಅರಶಿನ ಹಾಲಿನ ಲಾಭಗಳು ಅನೇಕ.

  ಅರಿಶಿನ ಹಾಲು ದೇಹದಲ್ಲಿರುವ ವಿಷಕಾರಿ ಅಂಶ ಹೊರಹಾಕುವುದು. ದೇಹದೊಳಗೆ ಕಲ್ಮಷವು ತುಂಬಿಕೊಂಡಾಗ ಅರಶಿನ ನೈಸರ್ಗಿಕವಾಗಿ ಇದರ ನಿವಾರಣೆ ಮಾಡುವುದು ಮತ್ತು ಕಾಯಿಲೆಗಳು ಬರದಂತೆ ತಡೆಯುವುದು. ಶೀತ ಮತ್ತು ಕೆಮ್ಮಿಗೆ ಅರಿಶಿನ ಹಾಲು ಅದ್ಭುತ ಮನೆಮದ್ದು ಎಂದು ಹೇಳಲಾಗುತ್ತದೆ. ಅರಶಿನ ಹಾಲು ತಯಾರಿಸುವ ವಿಧಾನಗಳನ್ನು ತಿಳಿದುಕೊಳ್ಳಿ.

  ಬೇಕಾಗುವ ಸಾಮಗ್ರಿಗಳು

  ½ ಚಮಚ ಅರಶಿನ ಹುಡಿ-ಒಂದು ಕಪ್ ಹಾಲು

  ½ ಕಪ್ ನೀರು

  2-3 ಜಜ್ಜಿದ ಕರಿಮೆಣಸು

  ವಿಧಾನ

  1.ಹಾಲನ್ನು ಬಿಸಿ ಮಾಡಿ. ಹಾಲು ಈಗಾಗಲೇ ಬಿಸಿ ಮಾಡಿದ್ದರೆ ಉಗುರು ಬೆಚ್ಚ ಮಾಡಿಕೊಳ್ಳಿ.

  2.ಖಾಲಿ ಲೋಟಕ್ಕೆ ಹಾಲು ಹಾಕಿ.

  3.ಅರಿಶಿನ ಹುಡಿ ಮತ್ತು ಜಜ್ಜಿರುವ ಕರಿಮೆಣಸಿನ ಕಾಳು ಹಾಕಿ ಮಿಶ್ರಣ ಮಾಡಿ.

  4.ಇದಕ್ಕೆ ನೀರು ಹಾಕಿ. ಕುಡಿಯುವಾಗ ಹಾಲು ಉಗುರುಬೆಚ್ಚಗೆ ಇರಬೇಕು ಎಂದು ನೆನಪಿಟ್ಟುಕೊಳ್ಳಿ.

  5. ಪ್ರತಿರಾತ್ರಿ ಮಲಗುವ ಮೊದಲು ಇದನ್ನು ಸೇವಿಸಿ. ಈ ಅರಿಶಿನ ಹಾಲಿನ ಲಾಭವು ಕೇವಲ ಶೀತ ಮತ್ತು ಕೆಮ್ಮಿನ ನಿವಾರಣೆಯಲ್ಲ. ಇದರಲ್ಲಿ ಇನ್ನು ಹಲವಾರು ರೀತಿಯ ಲಾಭಗಳು ಇವೆ. ನಿಯಮಿತವಾಗಿ ಇದನ್ನು ಸೇವಿಸಿದರೆ ಯಾವ ಲಾಭಗಳು ಸಿಗಲಿದೆ ಎಂದು ಇಲ್ಲಿ ಪಟ್ಟಿ ಮಾಡಲಾಗಿದೆ.

  1.ಪ್ರತಿರೋಧಕ ಶಕ್ತಿ ಹೆಚ್ಚಳ

  1.ಪ್ರತಿರೋಧಕ ಶಕ್ತಿ ಹೆಚ್ಚಳ

  ಅರಿಶಿನದಲ್ಲಿ ಇರುವಂತಹ ಲಿಪೋಪೊಲಿಸ್ಯಾಕರೈಡ್ ಎನ್ನುವ ಅಂಶವು ಪ್ರತಿರೋಧಕ ವ್ಯವಸ್ಥೆಯ ಕಾರ್ಯವನ್ನು ಬಲಪಡಿಸಿ ಸೋಂಕಿನ ವಿರುದ್ಧ ಉತ್ತಮ ರೀತಿಯಲ್ಲಿ ಹೋರಾಡಲು ನೆರವಾಗುವುದು. ಹಾಲಿನೊಂದಿಗೆ ಇದನ್ನು ಸೇವಿಸಿದಾಗ ಇದು ವೈರಲ್ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುವುದು. ಇದು ಸೋಂಕನ್ನು ನಿವಾರಿಸಲು ನೆರವಾಗುವುದು. ಅರಶಿನದಲ್ಲಿರುವ ಕುರ್ಕ್ಯೂಮಿನ್ ಉರಿಯೂತ ಶಮನಕಾರಿ ಗುಣ ಹೊಂದಿದೆ. ಇದು ಸೂಕ್ಷ್ಮಾಣು ಜೀವಿಗಳು ಉಂಟುಮಾಡುವ ಕಾಯಿಲೆಗಳನ್ನು ತಡೆಯುವುದು.

  2.ಶೀತ ಮತ್ತು ಕೆಮ್ಮಿಗೆ

  2.ಶೀತ ಮತ್ತು ಕೆಮ್ಮಿಗೆ

  ಅರಿಶಿನ ಹಾಲು ನಂಜುನಿರೋಧಕ ಮತ್ತು ಸಂಕೋಚನ ಅಂಶವನ್ನು ಹೊಂದಿದೆ. ಇದರಿಂದ ಶೀತ ಮತ್ತು ಕೆಮ್ಮನ್ನು ಬುಡದಿಂದಲೇ ಕಿತ್ತು ಹಾಕುವುದು. ಇದು ಸೋಂಕು ಬರದಂತೆ ತಡೆಯುವುದು. ಶಾಸ್ವನಾಳದಲ್ಲಿ ಕಫ ಶೇಖರಣೆಯಾಗುವುದನ್ನು ತಡೆಯುವ ಈ ಪಾನೀಯವು ಕಿರಿಕಿರಿ ಉಂಟುಮಾಡುವ ಗಂಟಲಿಗೆ ಶಮನ ನೀಡುವುದು. ಇದರಿಂದ ಕಫ ಕಡಿಮೆಯಾಗಿ ಕಟ್ಟಿದ ಮೂಗು ತೆರೆಯುವುದು.

  3.ಯಕೃತ್ ಗೆ ಒಳ್ಳೆಯದು

  3.ಯಕೃತ್ ಗೆ ಒಳ್ಳೆಯದು

  ದೇಹದಲ್ಲಿ ವಿಷವನ್ನು ಹೊರಹಾಕುವಲ್ಲಿ ಯಕೃತ್ ಪ್ರಮುಖ ಪಾತ್ರ ನಿರ್ವಹಿಸುವುದು. ಇದು ದೇಹದಲ್ಲಿರುವ ವಿಷ ಹೊರಹಾಕಲು ಹಗಲುರಾತ್ರಿ ಕೆಲಸ ಮಾಡುವುದು. ಈ ಕಾರ್ಯಕ್ಕೆ ಅರಶಿನವು ನೆರವಾಗುವುದು. ಇದು ಯಕೃತ್ ನ ಕೋಶಗಳನ್ನು ಸರಿಪಡಿಸುವುದು. ಕರ್ಕ್ಯುಮಿನ್ ನಮ್ಮ ದೇಹದಲ್ಲಿರುವ ಕಾರ್ಸಿನೋಜೆನ್ಗಳನ್ನು ತೆಗೆದುಹಾಕುವ ಕಿಣ್ವಗಳ ಸ್ರವಿಸುವಿಕೆಗೆ ನೆರವಾಗುವುದು. ಇದು ಮಧುಮೇಹಿಗಳಿಗೆ ಒಳ್ಳೆಯದು. ಯಾಕೆಂದರೆ ಅವರ ಯಕೃತ್ ಯಾವಾಗಲೂ ಹಾನಿಯಾಗಿರುವುದು.

  4.ಜೀರ್ಣಕ್ರಿಯೆಗೆ ಒಳ್ಳೆಯದು

  4.ಜೀರ್ಣಕ್ರಿಯೆಗೆ ಒಳ್ಳೆಯದು

  ಅರಿಶಿನ ಹಾಲು ಪಿತ್ತರಸ ಉತ್ಪತ್ತಿಯನ್ನು ಹೆಚ್ಚು ಮಾಡುವುದು. ಇದರಿಂದ ಆಹಾರವು ಸರಿಯಾಗಿ ಜೀರ್ಣವಾಗುವುದು. ಆಮ್ಲದ ಹಿಮ್ಮುಖ ಹರಿವು ಮತ್ತು ಹೊಟ್ಟೆಯುಬ್ಬರ ತಡೆಯುವುದು. ಇದು ಕರುಳಿನ ಕ್ರಿಯೆಯನ್ನು ಸರಾಗವಾಗಿಸಿ ಮಲಬದ್ಧತೆ ನಿವಾರಿಸುವುದು.

  5.ರಕ್ತ ಶುದ್ಧೀಕರಿಸುವುದು

  5.ರಕ್ತ ಶುದ್ಧೀಕರಿಸುವುದು

  ದುಗ್ಧರಸ ವ್ಯವಸ್ಥೆಯ ಕ್ರಿಯೆಯನ್ನು ಹೆಚ್ಚು ಮಾಡುವ ಅರಶಿನ ಹಾಲು ರಕ್ತವು ಸರಿಯಾಗಿ ಸಂಚಾರವಾಗಲು ನೆರವಾಗುವುದು. ರಕ್ತದಲ್ಲಿರುವ ಎಲ್ಲಾ ರೀತಿಯ ಕಲ್ಮಷ ಹೊರಹಾಕಿ ರಕ್ತವು ಸರಿಯಾಗಿ ಆಮ್ಲಜನಕ ಹೀರಿಕೊಳ್ಳುವಂತೆ ಮಾಡುವುದು.

  6.ಸಂಧಿವಾತ ನೋವು ನಿವಾರಣೆ

  6.ಸಂಧಿವಾತ ನೋವು ನಿವಾರಣೆ

  ಅರಿಶಿನ ಹಾಲಿನಲ್ಲಿ ಇರುವಂತಹ ಅತ್ಯುತ್ತಮವಾದ ಉರಿಯೂತ ಶಮನಕಾರಿ ಗುಣವು ಸಂಧಿವಾತದ ನೋವು ಕಡಿಮೆ ಮಾಡುವುದು. ಮೂಳೆ ಮತ್ತು ಗಂಟುಗಳನ್ನು ಬಲಪಡಿಸಿ ನೋವು ನಿವಾರಿಸುವುದು. ದ್ರವವನ್ನು ಕಾಪಾಡಿಕೊಳ್ಳುವ ಕಾರಣ ಗಂಟುಗಳಲ್ಲಿ ಸ್ಥಿತಿಸ್ಥಾಪಕತ್ವ ಉಳಿದುಕೊಳ್ಳುವುದು.

  7.ನಿದ್ರಾಹೀನತೆಗೆ

  7.ನಿದ್ರಾಹೀನತೆಗೆ

  ಒಂದು ಲೋಟ ಬಿಸಿ ಹಾಲು ಸೇವಿಸಿದರೆ ಅದರಿಂದ ಒಳ್ಳೆಯ ನಿದ್ರೆ ಬರುವುದು ಎನ್ನಲಾಗಿದೆ. ಅರಶಿನ ಹಾಕಿಕೊಂಡು ಹಾಲು ಸೇವಿಸಿದಾಗ ಮೆದುಳು ಆರಾಮ ಮಾಡಲು ಮತ್ತು ನಿದ್ರೆಗೆ ನೆರವಾಗುವುದು.

  8. ಋತುಚಕ್ರದ ನೋವು ನಿವಾರಣೆ

  8. ಋತುಚಕ್ರದ ನೋವು ನಿವಾರಣೆ

  ತಿಂಗಳಿನ ಮುಟ್ಟಿನ ವೇಳೆ ನೋವು ಕಾಣಿಸಿಕೊಳ್ಳುವುದು ಮಹಿಳೆಯರಿಗೆ ಸಾಮಾನ್ಯ. ನೋವು ನಿವಾರಕ ಔಷಧಿ ತೆಗೆದುಕೊಳ್ಳುವ ಬದಲು ಅರಶಿನ ಹಾಲು ಸೇವಿಸಿದರೆ ಒಳ್ಳೆಯದು. ಇದರಲ್ಲಿನ ಆಂಟಿಸ್ಪಾಸ್ಮೊಡಿಕ್ ಸೆಳೆತ ಕಡಿಮೆ ಮಾಡಿ ಅದು ಬರದಂತೆ ತಡೆಯುವುದು. ಮಹಿಳೆಯರ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಇದು ಆರೋಗ್ಯವಾಗಿಡುವುದು.

  English summary

  Turmeric milk to fight eight diseases

  Turmeric is known to be the most potent natural remedy in Ayurveda. It is an antiseptic and an anti-inflammatory, which makes it a suitable ingredient to fight off a lot of infections and diseases. When applied to open wounds and cuts, turmeric helps the blood to clot and prevents infections. It also helps the skin cells to regenerate faster, helping in faster healing of the wound.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more