ಒಣ ಕೆಮ್ಮಿಗೆ 'ತುಳಸಿ ಚಹಾ' ಒಂದೆರಡು ದಿನಗಳಲ್ಲಿಯೇ ಕೆಮ್ಮು ನಿಯಂತ್ರಣಕ್ಕೆ!

By: Divya Pandith
Subscribe to Boldsky

ಒಣ ಕೆಮ್ಮಿನಿಂದ ವ್ಯಕ್ತಿ ಅಧಿಕವಾಗಿ ಆಯಾಸಕ್ಕೆ ಹಾಗೂ ಹಿಂಸೆಗೆ ಒಳಗಾಗುತ್ತಾನೆ. ಒಣಕೆಮ್ಮಿನಿಂದ ಎದೆಯುರಿ, ಗಂಟಲು ನೋವು, ದೇಹದಲ್ಲಿ ಆಯಾಸ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ಆರೋಗ್ಯ ಸಮಸ್ಯೆಗೆ ವಿವಿಧ ಬಗೆಯ ಇಂಗ್ಲಿಷ್ ಔಷಧಗಳಿವೆ. ಅವು ಒಮ್ಮೆ ಬಹುಬೇಗ ಆರೋಗ್ಯವನ್ನು ಸುಧಾರಿಸಬಹುದು. ಆದರೆ ಕ್ರಮೇಣ ಪದೇ ಪದೇ ಒಣಕೆಮ್ಮು ಕಾಣಿಸಿಕೊಳ್ಳುತ್ತದೆ. ಮೇಲ್ನೋಟಕ್ಕೆ ಒಣಕೆಮ್ಮು ಶೀತದ ಕೆಮ್ಮಿನಂತೆ ಇದ್ದರೂ ಬಹು ಅಪಾಯಕಾರಿ.

ಈ ಸಮಸ್ಯೆಗೆ ಮನೆಯಲ್ಲಿ ಸಿಗುವ ನೈಸರ್ಗಿಕ ಉತ್ಪನ್ನವನ್ನು ಬಳಸಿ ಔಷಧವನ್ನು ತಯಾರಿಸಬಹುದು. ನಿಜ, ಒಣಕೆಮ್ಮಿಗೆ ಅತ್ಯುತ್ತಮ ಪರಿಹಾರದಂತೆ ಕೆಲಸ ನಿರ್ವಹಿಸುವ ನೈಸರ್ಗಿಕ ಉತ್ಪನ್ನ ತುಳಸಿ. ತುಳಸಿ ಅತ್ಯುತ್ತಮ ಔಷಧೀಯ ಗುಣಗಳನ್ನು ಒಳಗೊಂಡಿದೆ. ಆಯುರ್ವೇದ ಚಿಕಿತ್ಸಾವಿಧಾನದಲ್ಲಿ ತುಳಸಿ ಪ್ರಧಾನ ಸ್ಥಾನವನ್ನು ಪಡೆದುಕೊಂಡಿದೆ.

ಇದರ ಚಹಾವನ್ನು ತಯಾರಿಸಿ ಸೇವಿಸುವುದರಿಂದ ಬಹುಬೇಗ ಒಣಕೆಮ್ಮಿನಿಂದ ಪರಿಹಾರ ಕಾಣಬಹುದು. ಜೊತೆಗೆ ಯಾವುದೇ ಅಡ್ಡ ಪರಿಣಾಮವೂ ಉಂಟಾಗದು. ಆಯುರ್ವೇದದಲ್ಲಿ ತುಳಸಿ ಎಲೆಗಳು ಮತ್ತು ಬೀಜಗಳನ್ನು ಸೂಕ್ಷ್ಮಜೀವಿಯ ಸೋಂಕುಗಳು ಮತ್ತು ರೋಗನಿರೋಧಕತೆಯನ್ನು ಹೆಚ್ಚಿಸಲು ದೇಸಿ ಮಿಶ್ರಣಗಳನ್ನು ತಯಾರಿಸಲು ವ್ಯಾಪಕವಾಗಿ ಬಳಸಲಾಗುತ್ತದೆ. ತುಳಸಿ ಎಲೆಗಳ ಬಗ್ಗೆ ಉತ್ತಮವಾದ ಭಾಗವೆಂದರೆ ನೀವು ಎಲೆಗಳನ್ನು ತಿನ್ನಬಹುದು ಅಥವಾ ಸೋಂಕನ್ನು ಹೋರಾಡಲು ದಪ್ಪ ಪೇಸ್ಟ್ ಅನ್ನು ಅನ್ವಯಿಸಬಹುದು.

ತುಳಸಿ ಚಹಾ: ಸ್ವಾದದ ಜೊತೆ ಆರೋಗ್ಯದ ಭಾಗ್ಯ

ಇದು ಸೌಮ್ಯವಾದ ನಂಜುನಿರೋಧಕ ಮತ್ತು ನೋವುನಿವಾರಕ ಗುಣಲಕ್ಷಣಗಳನ್ನು ಹೊಂದಿದೆ. ಪವಿತ್ರ ತುಳಸಿಯ ಎಲೆಗಳಿಂದ ಮಾಡಿದ ಚಹಾವು ಶೀತ, ಕೆಮ್ಮು ಮತ್ತು ಸೌಮ್ಯ ಅಜೀರ್ಣಕ್ಕೆ ಸಾಮಾನ್ಯ ಪರಿಹಾರವಾಗಿದೆ. ಇದು ಅಲರ್ಜಿಕ್ ಬ್ರಾಂಕೈಟಿಸ್, ಆಸ್ತಮಾ ಮತ್ತು ಎನೊನೋಫಿಲಿಕ್ ಶ್ವಾಸಕೋಶದ ರೋಗಗಳನ್ನು ನಿವಾರಿಸುತ್ತದೆ. ಆದ್ದರಿಂದ ಕೇವಲ ಕೆಮ್ಮು ಮತ್ತು ಶೀತವಲ್ಲ, ತುಳಸಿ ಎಲೆಗಳು ನಿಮ್ಮ ಉಸಿರಾಟದ ಆರೋಗ್ಯವನ್ನು ಸುಧಾರಿಸಬಹುದು. ತುಳಸಿ ಅಥವಾ ಪವಿತ್ರ ತುಳಸಿಯ ಆರೋಗ್ಯದ ಅನುಕೂಲಗಳ ಬಗ್ಗೆ ಓದಿ...

ತುಳಸಿ ಚಹಾ ತಯಾರಿಸಲು ಹೇಗೆ?

ತುಳಸಿ ಚಹಾ ತಯಾರಿಸಲು ಹೇಗೆ?

*ಒಂದು ಪಾತ್ರೆಯಲ್ಲಿ ಒಂದು ಕಪ್ ನೀರು ಮತ್ತು 5-7 ತುಳಸಿ ಎಲೆಯನ್ನು ಸೇರಿಸಿ.

*ಪಾತ್ರೆಗೆ ಮುಚ್ಚಳವನ್ನು ಮುಚ್ಚಿ ಸಣ್ಣ ಉರಿಯಲ್ಲಿ 10 ನಿಮಿಷಗಳ ಕಾಲ ಕುದಿಸಿ.

*ನಂತರ ಉರಿಯನ್ನು ಆರಿಸಿ, ಚಹಾವನ್ನು ತಣಿಯಲು ಬಿಡಿ.

*ಉಗುರು ಬೆಚ್ಚಗಿರುವಾಗಲೇ ಸೇವಿಸಬಹುದು.

*ಬೇಕಿದ್ದರೆ ಆರೋಗ್ಯ ಉತ್ಪನ್ನಗಳಾದ ಶುಂಠಿ, ಏಲಕ್ಕಿ, ಕರಿಮೆಣಸು, ಲವಂಗ ಹಾಗೂ ಕೆಲವು ಮಸಾಲೆ ಗಿಡಮೂಲಿಕೆಗಳನ್ನು ಸೇರಿಸಬಹುದು.

*ಇದನ್ನು ನಿತ್ಯವೂ ಸೇವಿಸಬಹುದು. ಇಲ್ಲವೇ ಅಗತ್ಯವಿದ್ದಾಗ ಸೇವಿಸಬಹುದು.

ತುಳಸಿ ಎಲೆಗಳ ಇನ್ನಷ್ಟು ಪ್ರಯೋಜನಗಳು

ತುಳಸಿ ಎಲೆಗಳ ಇನ್ನಷ್ಟು ಪ್ರಯೋಜನಗಳು

ಜ್ವರವನ್ನು ಕಡಿಮೆಗೊಳಿಸುತ್ತದೆ

ಒಂದು ವೇಳೆ ಯಾವುದೋ ಕಾರಣಕ್ಕೆ ಜ್ವರ ಬಂದಿದ್ದು ಸಾಮಾನ್ಯ ಔಷಧಿಗಳಿಗೆ ಬಗ್ಗದೇ ಇದ್ದಾಗ ತುಳಸಿ ಎಲೆಗಳ ಸೇವನೆಯನ್ನು ದಿನಕ್ಕೆ ಮೂರು ಎಲೆಗಳಿಗೆ ವಿಸ್ತರಿಸಿ ದಿನಕ್ಕೆ ಮೂರು ಹೊತ್ತು ಸೇವಿಸುವುದರಿಂದ ಜ್ವರ ಇಳಿಯಲು ನೆರವಾಗುತ್ತದೆ.

ಸೋಂಕು ಉಂಟಾಗಿದ್ದರೆ ಗುಣವಾಗಲು ನೆರವಾಗುತ್ತದೆ

ಸೋಂಕು ಉಂಟಾಗಿದ್ದರೆ ಗುಣವಾಗಲು ನೆರವಾಗುತ್ತದೆ

ನಮ್ಮ ದೇಹಕ್ಕೆ ಹಲವು ವಿಧದ ವೈರಸ್ ಮತ್ತು ಬ್ಯಾಕ್ಟೀರಿಯಾಗಳು ಧಾಳಿ ಮಾಡುತ್ತಲೇ ಇರುತ್ತವೆ. ಒಂದು ವೇಳೆ ಯಾವುದೋ ತೊಂದರೆಯಿಂದ ವೈರಸ್ಸೊಂದು ದೇಹದ ಒಂದು ಭಾಗವನ್ನು ಆಕ್ರಮಿಸಲು ಯಶಸ್ವಿಯಾದರೆ ದೇಹ ತನ್ನ ರೋಗ ನಿರೋಧಕ ಶಕ್ತಿಯನ್ನು ಬಳಸಿ ಈ ಸೋಂಕನ್ನು ಎದುರಿಸಲು ಮುನ್ನುಗ್ಗುತ್ತದೆ. ದಿನಕ್ಕೊಂದು ತುಳಸಿ ಎಲೆಯನ್ನು ಜಗಿದು ತಿನ್ನುವುದರಿಂದ ಇದರ ಶಿಲೀಂಧ್ರನಾಶಕ ಮತ್ತು ಬ್ಯಾಕ್ಟೀರಿಯಾ ನಿವಾರಕ ಗುಣಗಳ ಗರಿಷ್ಠ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ.

ಮೂತ್ರಪಿಂಡಗಳಲ್ಲಿ ಕಲ್ಲುಂಟಾಗಿದ್ದರೆ ಕರಗಿಸುತ್ತದೆ

ಮೂತ್ರಪಿಂಡಗಳಲ್ಲಿ ಕಲ್ಲುಂಟಾಗಿದ್ದರೆ ಕರಗಿಸುತ್ತದೆ

ಮೂತ್ರಪಿಂಡಗಳಲ್ಲಿ ಕಲ್ಲುಂಟಾಗುವುದು ಸಾಮಾನ್ಯವಾಗಿದೆ. ಇದರ ತೊಂದರೆ ಏನೆಂದರೆ ಈ ಕಲ್ಲು ಒಂದು ನಿರ್ದಿಷ್ಟ ಗಾತ್ರಕ್ಕೆ ಬೆಳೆಯುವವರೆಗೂ ನೋವು ನೀಡದೇ ಗೋಪ್ಯವಾಗಿರುತ್ತದೆ. ಒಮ್ಮೆ ಈ ಕಲ್ಲಿನ ಗಾತ್ರ ಮೂತ್ರಪಿಂಡದ ಸಹನೆಗೆ ಮೀರಿತೋ, ಅತೀವ ನೋವು ನೀಡಲು ಪ್ರಾರಂಭಿಸುತ್ತದೆ. ತುಳಸಿ ಎಲೆಗಳ ನಿತ್ಯದ ಸೇವನೆಯಿಂದ ಮೂತ್ರಪಿಂಡಗಳಲ್ಲಿ ಕಲ್ಲುಂಟಾಗಿದ್ದು ಇದುವರೆಗೆ ಅರಿವಿಗೆ ಬಾರದಿದ್ದರೂ ಕರಗುತ್ತದೆ. ಒಂದು ವೇಳೆ ಮೂತ್ರಪಿಂಡಗಳಲ್ಲಿ ನೋವು ಪ್ರಾರಂಭವಾಗಿದ್ದರೂ ಇದು ಕಡಿಮೆಯಾಗಲು ತುಳಸಿ ನೆರವಾಗುತ್ತದೆ.

ಒಸಡಿನ ಸೋಂಕು ಹೋಗಲಾಡಿಸುತ್ತದೆ

ಒಸಡಿನ ಸೋಂಕು ಹೋಗಲಾಡಿಸುತ್ತದೆ

ಬಾಯಿ ದುರ್ವಾಸನೆಗೆ ಒಂದು ಕಾರಣವೆಂದರೆ ಒಸಡಿನಲ್ಲಿ ಉಳಿದ ಆಹಾರದಲ್ಲಿ ಬ್ಯಾಕ್ಟೀರಿಯಾಗಳು ಬೆಳೆದು ಆಹಾರವನ್ನು ಕೊಳೆಸುವುದು. ಇದಕ್ಕಾಗಿ ಬೆಳಿಗ್ಗೆ ಹಲ್ಲುಗಳನ್ನು ಬ್ರಶ್ ಮಾಡಿದ ಬಳಿಕ ತುಳಸಿ ಎಲೆಯೊಂದನ್ನು ಬೆರಳುಗಳಲ್ಲಿಯೇ ಹಿಚುಕಿ ಒಸಡುಗಳಿಗೆ ರಸ ತಗಲುವಂತೆ ಹಚ್ಚಿಕೊಳ್ಳಿ. ಇಡಿಯ ದಿನ ಬಾಯಿಯಲ್ಲಿ ದುರ್ವಾಸನೆ ಬರದಿರಲು ಇದು ನೆರವಾಗುತ್ತದೆ.

 ಶ್ವಾಸಕೋಶಗಳಿಗೆ ಉತ್ತಮವಾಗಿದೆ

ಶ್ವಾಸಕೋಶಗಳಿಗೆ ಉತ್ತಮವಾಗಿದೆ

ತುಳಸಿ ಎಲೆಗಳಲ್ಲಿರುವ ಪಾಲಿಫಿನಾಲ್ ಕಣಗಳು ಶ್ವಾಸಕೋಶದಲ್ಲಿ ಅಡಚಣೆಗೆ ಕಾರಣವಾಗಿರುವ ತೊಂದರೆಗಳನ್ನು ನಿವಾರಿಸಲು ನೆರವಾಗುತ್ತವೆ. ಇದರಿಂದ ಶ್ವಾಸಕೋಶಕ್ಕೆ ಪೂರ್ಣವಾಗಿ ಶ್ವಾಸವನ್ನು ಎಳೆದುಕೊಳ್ಳಲು ಸಾಧ್ಯವಾಗುತ್ತದೆ. ತನ್ಮೂಲಕ ಆಮ್ಲಜನಕದ ಪ್ರಮಾಣ ಹೆಚ್ಚಾಗುವುದರಿಂದ ಆರೋಗ್ಯ ಉತ್ತಮಗೊಳ್ಳುವುದು.

ತಲೆನೋವನ್ನು ನಿವಾರಿಸುತ್ತದೆ

ತಲೆನೋವನ್ನು ನಿವಾರಿಸುತ್ತದೆ

ಸಾಮಾನ್ಯವಾದ ತಲೆನೋವಿಗೆ ತುಳಸಿ ಉತ್ತಮವಾಗಿದೆ. ತುಳಸಿ ರಸದಲ್ಲಿರುವ ನರಗಳನ್ನು ಸಡಿಲಗೊಳಿಸುವ ಗುಣ ಮೆದುಳಿಗೆ ಹೆಚ್ಚಿನ ರಕ್ತ ಸರಬರಾಜು ಮಾಡಲು ನೆರವಾಗುತ್ತದೆ ಹಾಗೂ ಮೂಗು ಕಟ್ಟಿರುವುದನ್ನು ತೆರೆದು ಹೆಚ್ಚಿನ ಆಮ್ಲಜನಕ ಪಡೆಯಲು ನೆರವಾಗುತ್ತದೆ.ಸಾಮಾನ್ಯವಾಗಿ ಮೆದುಳಿಗೆ ರಕ್ತಸರಬರಾಜು ಮಾಡುವ ನಾಳ, ಮೂಗಿನ ಮೇಲೆ, ಎರಡು ಕಣ್ಣುಗಳ ನಡುವೆ ಹಣೆಯ ಹಿಂಬದಿಯಲ್ಲಿ ಇರುವ ಟೊಳ್ಳಾದ ಭಾಗವಾದ ಕುಹರ ಅಥವಾ ಸೈನಸ್ ನಲ್ಲಿ ಸೋಂಕು ಆಗಿದ್ದರೆ ಇದು ತಲೆನೋವಿಗೆ ಕಾರಣವಾಗಬಹುದು. ತುಳಸಿಯ ಸೇವನೆ ಅಥವಾ ತುಳಸಿಯ ಎಣ್ಣೆಗಳನ್ನು ಹಣೆ, ಕುತ್ತಿಗೆಗೆ ಹಿಂಭಾಗ, ಕಿವಿಯ ಹಿಂಭಾಗದಲ್ಲಿ ಹಚ್ಚಿಕೊಳ್ಳುವುದರಿಂದ ಮೈಗ್ರೇನ್ ನಂತಹ ಅತ್ಯುಗ್ರ ತಲೆನೋವು ಸಹಾ ತಹಬಂದಿಗೆ ಬರುತ್ತದೆ.

ತುಳಸಿ ಎಲೆಗಳ ಸೇವನೆ ಮಾಡುವುದು ಹೇಗೆ?

ತುಳಸಿ ಎಲೆಗಳ ಸೇವನೆ ಮಾಡುವುದು ಹೇಗೆ?

ತುಳಸಿ ಎಲೆಗಳನ್ನು ಎರಡು ವಿಧಗಳಲ್ಲಿ ಸೇವನೆ ಮಾಡಬಹುದು. ಒಂದು ತುಳಸಿ ಗಿಡವನ್ನು ಮನೆಯಲ್ಲಿ ಇಟ್ಟುಕೊಂಡು ಅದರ ಕೆಲವು ಎಲೆಗಳನ್ನು ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿ. 4-5 ತುಳಸಿ ಎಲೆಗಳು ಅಥವಾ ಒಂದು ಚಮಚ ತುಳಸಿ ಚಹಾವನ್ನು ಬಿಸಿ ನೀರಿಗೆ ಹಾಖಿ ಕೆಲವು ನಿಮಿಷ ಕುದಿಸಬೇಕು. ಈ ಚಹಾವನ್ನು ದಿನದಲ್ಲಿ ಒಂದು ಸಲ ಕುಡಿಯಬೇಕು. ಈ ಚಹಾಗೆ ಶುಂಠಿ ಮತ್ತು ಲವಂಗ ಹಾಕಿದರೆ ಮತ್ತಷ್ಟು ಲಾಭಗಳು ಸಿಗುವುದು.

English summary

Tulsi tea – a natural remedy for dry cough

In Ayurveda, Tulsi leaves and seeds are widely used to prepare desi concoctions to treat microbial infections and boost immunity. The best part about tulsi leaves is that you can either consume the leaves or apply a thick paste to fight infections. It has mild antiseptic and analgesic properties. A tea made with leaves of holy basil is a common remedy for cold, cough and mild indigestion. It not only relieves allergic bronchitis, asthma and eosinophilic lung diseases. Hence, not just cough and cold, tulsi leaves can improve your respiratory health. Read about health benefits of tulsi or holy basil.
Please Wait while comments are loading...
Subscribe Newsletter