ಬೇಗನೇ ನಿದ್ದೆ ಬರಬೇಕೇ? ಅರಿಶಿನ ಬೆರೆಸಿದ ತೆಂಗಿನ ಹಾಲು ಕುಡಿಯಿರಿ...

By: Arshad
Subscribe to Boldsky

ಅರಿಶಿನದ ಪುಡಿ ಬೆರೆಸಿದ ಹಾಲಿನ ಸೇವನೆಯನ್ನು ಆಯುರ್ವೇದದಲ್ಲಿ ಉತ್ತಮ ಎಂದು ಬಣ್ಣಿಸಲಾಗಿದೆ. ವಿಶೇಷವಾಗಿ ರಾತ್ರಿ ಮಲಗುವ ಮುನ್ನ ಕುಡಿಯುವುದರಿಂದ ಬೇಗನೇ ನಿದ್ದೆ ಆವರಿಸಲು ನೆರವಾಗುತ್ತದೆ ಹಾಗೂ ದೇಹವನ್ನು ಬೆಚ್ಚಗಿರಿಸಲು ನೆರವಾಗುತ್ತದೆ.

ಇಂದು ಹಾಲಿನ ಬದಲು ತೆಂಗಿನ ಹಾಲನ್ನು ಬಳಸಿದರೆ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ನೋಡೋಣ. ಇದಕ್ಕೆ ಕೊಂಚವೇ ಹಸಿಶುಂಠಿ ಬೆರೆಸಿ ಇದರ ಉರಿಯೂತ ನಿವಾರಕ ಗುಣಗಳನ್ನು ಪಡೆಯುವ ಮೂಲಕ ಈ ದ್ರವವನ್ನು ಇನ್ನಷ್ಟು ಪ್ರಯೋಜನಕಾರಿಯಾಗಿಸಬಹುದು. 

turmeric

ಅಷ್ಟೇ ಅಲ್ಲ, ಕೊಂಚವೇ ಜೇನನ್ನು ಬೆರೆಸಿ ಇದರ ಆರೋಗ್ಯಕರ ಗುಣಗಳನ್ನು ಇನ್ನಷ್ಟು ವೃದ್ಧಿಸಬಹುದು. ತೆಂಗಿನ ಹಾಲಿನಲ್ಲಿ ಪ್ರಮುಖವಾಗಿ ಲಾರಿಕ್ ಆಮ್ಲ, ಕ್ಯಾಪ್ರಿಕ್ ಆಮ್ಲ, ಬ್ಯಾಕ್ಟೀರಿಯಾ ನಿರೋಧಕ ಮೇಧಸ್ಸು (anti-microbial lipids) ಹಾಗೂ ಆರೋಗ್ಯಕರ ಕೊಬ್ಬು ಇವೆ. ಅಲ್ಲದೇ ಶಿಲೀಂಧ್ರ ನಿವಾರಕ ಹಾಗೂ ವೈರಸ್ ನಿವಾರಕ ಗುಣಗಳನ್ನೂ ಹೊಂದಿದೆ. ಇವೆಲ್ಲವೂ ಈ ಪೇಯವನ್ನು ಆರೋಗ್ಯಕರ ಪೇಯವನ್ನಾಗಿಸಿವೆ. ಇದರ ಸೇವನೆಯಿಂದ ಅತಿ ಕಡಿಮೆ ಸಮಯದಲ್ಲಿ ನಿದ್ದೆ ಆವರಿಸುವುದು ಇದರ ಪ್ರಮುಖ ಪ್ರಯೋಜನವಾಗಿದೆ. ಬನ್ನಿ, ಈ ಪೇಯವನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ...

coconut milk

ಅಗತ್ಯವಿರುವ ಸಾಮಾಗ್ರಿಗಳು:

*ಒಂದು ಚಿಕ್ಕಚಮಚ ಜೇನು

*ಚಿಟಿಕೆಯಷ್ಟು ಕಾಳುಮೆಣಸಿನ ಪುಡಿ

*ಒಂದು ಚಿಕ್ಕ ಚಮಚ ಅರಿಶಿನ ಪುಡಿ

*ಒಂದು ಚಿಕ್ಕ ತುಂಡು ಹಸಿಶುಂಠಿ (ಜಜ್ಜಿದ್ದು)

*ಎರಡು ಕಪ್ ತೆಂಗಿನ ಹಾಲು. 

coconut milk

ತಯಾರಿಕಾ ವಿಧಾನ:

*ಜೇನನ್ನು ಹೊರತುಪಡಿಸಿ ಬೇರೆಲ್ಲಾ ಸಾಮಾಗ್ರಿಗಳನ್ನು ಒಂದು ಚಿಕ್ಕ ಬೋಗುಣಿಯಲ್ಲಿ ಹಾಕಿ ಮಧ್ಯಮ ಉರಿಯಲ್ಲಿ ಕುದಿಯುವವರೆಗೆ ಬಿಸಿ ಮಾಡಿ.  

*ಕುದಿಯಲು ಆರಂಭವಾಗುತ್ತಲೂ ಉರಿಯನ್ನು ಚಿಕ್ಕದಾಗಿಸಿ ಐದು ನಿಮಿಷ ಕುದಿಸಿ. ಬಳಿಕ ಈ ಪೇಯವನ್ನು ಸೋಸಿ

*ಇನ್ನೊಂದು ಪಾತ್ರೆಯಲ್ಲಿ ಸಂಗ್ರಹಿಸಿ. ಬಳಿಕ ಜೇನನ್ನು ಬೆರೆಸಿ ಕಲಕಿ.

*ಅರಿಶಿನ ಪುಡಿಯಲ್ಲಿರುವ ಕುರ್ಕುಮಿನ್ ಎಂಬ ಪೋಷಕಾಂಶಕ್ಕೆ ಉರಿಯೂತ ನಿವಾರಕ ಗುಣವಿದೆ. ಅರಿಶಿನದಲ್ಲಿ ಆಂಟಿ ಆಕ್ಸಿಡೆಂಟುಗಳೂ ಇವೆ. ಇವುಗಳು ಸಂಧಿವಾತದಿಂದ ರಕ್ಷಿಸುತ್ತವೆ ಹಾಗೂ ಇತರ ಉರಿಯೂತಗಳಿಂದಲೂ ರಕ್ಷಣೆ ನೀಡುತ್ತವೆ.

turmeric

ಈ ಪೇಯದ ಸೇವನೆಯ ಬಳಿಕ ಮೆದುಳಿಗೆ ರವಾನೆಯಾಗುವ ಸೆರೋಟೋನಿನ್ ಹಾಗೂ ಡೋಪಮೈನ್ ಎಂಬ ರಸದೂತಗಳ ಪ್ರಮಾಣ ಹೆಚ್ಚುತ್ತದೆ. ಇವು ಮೆದುಳಿಗೆ ಮುದ ನೀಡುವ ರಸದೂತಗಳಾಗಿದ್ದು ಖಿನ್ನತೆಯಿಂದ ರಕ್ಷಿಸುತ್ತವೆ.

ಮನಸ್ಸು ನಿರಾಳವಾಗಿ ಶೀಘ್ರವೇ ನಿದ್ದೆಗೆ ಜಾರಲು ನೆರವಾಗುತ್ತದೆ. ಅಲ್ಲದೇ ವೃದ್ಧಾಪ್ಯ ಆವರಿಸುವ ಗತಿಯನ್ನು ನಿಧಾನವಾಗಿಸುತ್ತದೆ ಹಾಗೂ ಯಕೃತ್‌ನಲ್ಲಿರುವ ಕಲ್ಮಶಗಳನ್ನು ನಿವಾರಿಸುತ್ತದೆ. ಅಷ್ಟೇ ಅಲ್ಲ, ಜೀರ್ಣಕ್ರಿಯೆಗೆ ಸಹಕರಿಸುವ ಮೂಲಕ ಜೀರ್ಣಾಂಗ ವ್ಯವಸ್ಥೆಯಲ್ಲಿ ಯಾವುದಾದರೂ ತೊಂದರೆ ಇದ್ದರೆ ಸೂಕ್ತ ಉಪಶಮನವನ್ನೂ ಒದಗಿಸುತ್ತದೆ.

English summary

Try This Coconut Milk And Turmeric Recipe To Fall Asleep

Turmeric milk has lots of significance in ayurveda. It helps you fall asleep when consumed before going to bed. It can help you feel warm. In this recipe, we'll use coconut milk. Also, ginger is added as an additional ingredient as it contains anti-inflammatory properties. Now, let us discuss about the recipe.
Story first published: Monday, June 5, 2017, 23:36 [IST]
Subscribe Newsletter