Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕ್ಯಾರೆಟ್ ರೆಸಿಪಿ: ಪುರುಷರ ಗುಪ್ತ ಸಮಸ್ಯೆಗೆ ಶೀಘ್ರ ಪರಿಹಾರ!
ಸಂಗಾತಿಗಳಿಬ್ಬರು ಪ್ರೀತಿಯಲ್ಲಿ ಮುಳುಗಿ ಅಂತಿಮವಾಗಿ ಲೈಂಗಿಕ ಸುಖ ಪಡೆಯಲು ಮುಂದಾಗುವ ವೇಳೆ ಕೆಲವೊಮ್ಮೆ ಪುರುಷರಲ್ಲಿ ಶೀಘ್ರ ಸ್ಖಲನ ಉಂಟಾಗುತ್ತದೆ. ಇಂತಹ ಸಮಸ್ಯೆಯಿಂದಾಗಿ ಸಂಪೂರ್ಣವಾಗಿ ಇಬ್ಬರ ಸಂತೋಷವು ಹಾಳಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಸಂಗಾತಿಗಳಿಬ್ಬರು ಲೈಂಗಿಕ ಕ್ರಿಯೆಯನ್ನು ಸಂಪೂರ್ಣವಾಗಿ ಆನಂದಿಸಿ ಅಂತಿಮವಾಗಿ ಕ್ಲೈಮ್ಯಾಕ್ಸ್ ತಲುಪಿದರೆ ಮಾತ್ರ ಆ ಕ್ರಿಯೆಯು ಸುಖದಲ್ಲಿ ಮುಕ್ತಾಯಗೊಳ್ಳುತ್ತದೆ.
ಆದರೆ ಇಂದಿನ ದಿನಗಳಲ್ಲಿ ಕೆಲವೊಂದು ಕಾರಣಗಳಿಂದಾಗಿ ಇಬ್ಬರ ನಡುವೆ ಆಟಗಳು ನಡೆದರೂ ಅಂತಿಮವಾಗಿ ಪುರುಷನಿಗೆ ಶೀಘ್ರ ಸ್ಖಲನವಾಗುತ್ತದೆ. ಇಂತಹ ಸಮಯದಲ್ಲಿ ಇಬ್ಬರಿಗೂ ತುಂಬಾ ನಿರಾಶೆಯಾಗುವುದು ಮತ್ತು ಕೆಲವೊಂದು ಸಂದರ್ಭದಲ್ಲಿ ಇದು ಬೇಡದ ಗರ್ಭಕ್ಕೂ ಕಾರಣವಾಗುವುದು. ಲೈಂಗಿಕ ಕ್ರಿಯೆ ವೇಳೆ ತಡೆದುಕೊಳ್ಳಲು ಸಾಧ್ಯವಾಗದೆ ಇರುವ ಕಾರಣ ಪುರುಷನಿಗೆ ಶೀಘ್ರ ಸ್ಖಲನವಾಗುವುದು.

ಶೀಘ್ರ ಸ್ಖಲನಕ್ಕೆ ಪ್ರದರ್ಶನದ ಆತಂಕ, ಅಧಿಕ ರಕ್ತದೊತ್ತಡ, ಮಧುಮೇಹ, ಬೊಜ್ಜು, ಖಿನ್ನತೆ, ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆ ಇರುವುದು, ಅಧಿಕ ಕೊಲೆಸ್ಟ್ರಾಲ್ ಇತ್ಯಾದಿ. ಶೀಘ್ರ ಸ್ಖಲನದಿಂದ ಪುರುಷರಿಗೆ ತುಂಬಾ ನಿರಾಶೆಯಾಗುವುದು ಖಚಿತ. ಇದರೊಂದಿಗೆ ಅವರ ಸಂಗಾತಿಗೂ ತೃಪ್ತಿ ಸಿಗದೆ ಇರುವುದರಿಂದ ಸಂಬಂಧಕ್ಕೂ ತೊಂದರೆಯಾಗಬಹುದು.
ಇದರಿಂದ ಬೇಸತ್ತು ಕೆಲವು ಪುರುಷರು ತುಂಬಾ ದುಬಾರಿ ಚಿಕಿತ್ಸೆಗಳಿಗೆ ಮೊರೆ ಹೋಗುತ್ತಾರೆ. ಇದರಿಂದ ಹಲವಾರು ರೀತಿಯ ಅಡ್ಡಪರಿಣಾಮಗಳು ಕೂಡ ಉಂಟಾಗಬಹುದು. ನೈಸರ್ಗಿಕವಾಗಿ ಇದಕ್ಕೆ ಚಿಕಿತ್ಸೆ ನೀಡಬೇಕಾದರೆ ಮನೆಯಲ್ಲೇ ಮನೆಮದ್ದನ್ನು ತಯಾರಿಸಿಕೊಳ್ಳಬಹುದು. ಹೆಚ್ಚು ಖರ್ಚು ಇಲ್ಲದೆ ಸುಲಭವಾಗಿ ತಯಾರಿಸಬಹುದಾದ ಕ್ಯಾರೆಟ್ ಚಿಕಿತ್ಸೆ ಬಗ್ಗೆ ತಿಳಿಯಿರಿ.
ಬೇಕಾಗುವ ಸಾಮಗ್ರಿಗಳು
ತುರಿದಿರುವ ಕ್ಯಾರೆಟ್ ½ ಕಪ್
ಒಂದು ಮೊಟ್ಟೆಯ ಲೋಳೆ
ಮೆಂತೆ- 1 ಚಮಚ
ಶೀಘ್ರ ಸ್ಖಲನ ತಡೆಯಲು ಇದು ತುಂಬಾ ಒಳ್ಳೆಯ ಮನೆಮದ್ದು ಎಂದು ಇದನ್ನು ಬಳಸಿ ಪರಿಹಾರ ಕಂಡುಕೊಂಡಿರುವ ಹಲವಾರು ಮಂದಿ ಇದರ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಮನೆಮದ್ದನ್ನು ಬಳಸುವುದರೊಂದಿಗೆ ಒತ್ತಡ ಹಾಗೂ ಪ್ರದರ್ಶನದ ಆತಂಕ ಕಡಿಮೆ ಮಾಡಿಕೊಳ್ಳಬೇಕು. ನಿಯಮಿತ ವ್ಯಾಯಾಮ ಮತ್ತು ಧ್ಯಾನದಿಂದ ಶೀಘ್ರ ಸ್ಖಲನ ತಪ್ಪಿಸಬಹುದು. ಲೈಂಗಿಕ ಕ್ರಿಯೆ ವೇಳೆ ತುಂಬಾ ಆರಾಮವಾಗಿರಿ.
ಕ್ಯಾರೆಟ್‌ನಲ್ಲಿ ಬೆಟಾ ಕ್ಯಾರೋಟಿನ್ ಮತ್ತು ಆ್ಯಂಟಿಆಕ್ಸಿಡೆಂಟ್ ಅಧಿಕವಾಗಿದೆ. ಇದು ಮೆದುಳಿನಿಂದ ಜನನಾಂಗದ ತನಕ ರಕ್ತಸಂಚಾರವನ್ನು ಸುಧಾರಿಸುತ್ತದೆ. ಲೈಂಗಿಕ ಕ್ರಿಯೆ ವೇಳೆ ಶೀಘ್ರ ಸ್ಖಲನವಾಗುವುದು ತಪ್ಪುತ್ತದೆ. ಮೊಟ್ಟೆಯ ಲೋಳೆಯು ಟೆಸ್ಟೋಸ್ಟೆರಾನ್ ಮಟ್ಟವನ್ನು ಉತ್ತಮಪಡಿಸಿ ಶೀಘ್ರ ಸ್ಖಲನ ತಡೆಯುವುದು. ಮೆಂತೆ ಕೂಡ ಟೆಸ್ಟೋಸ್ಟೆರಾನ್ ಮಟ್ಟವನ್ನು ಪರಿಣಾಮಕಾರಿಯಾಗಿ ಸುಧಾರಣೆ ಮಾಡುವುದು.
ತಯಾರಿಸುವ ವಿಧಾನ
*ಹೇಳಿದಷ್ಟು ಪ್ರಮಾಣದ ಸಾಮಗ್ರಿಗಳನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.
*ಸರಿಯಾಗಿ ರುಬ್ಬಿಕೊಂಡು ಪೇಸ್ಟ್ ಮಾಡಿ.
*ಪ್ರತೀ ದಿನ ಮಲಗುವ ಮೊದಲು ಮೂರು ತಿಂಗಳ ಕಾಲ ಈ ಮದ್ದನ್ನು ಸೇವಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


