ದೇಹದ ತೂಕ ಇಳಿಸಬೇಕೇ? ಬೇಯಿಸಿದ ಮೊಟ್ಟೆಯ ಟ್ರಿಕ್ಸ್ ಅನುಸರಿಸಿ!

By: Arshad
Subscribe to Boldsky

ದಿಢೀರನೇ ತಯಾರಿಸಿ ಸೇವಿಸಬಹುದಾದ ಆರೋಗ್ಯಕರ ಆಹಾರಗಳಲ್ಲಿ ಮೊಟ್ಟೆ ಪ್ರಮುಖಸ್ಥಾನದಲ್ಲಿದೆ. ಮೊಟ್ಟೆಗಳನ್ನು ಬೇಯಿಸುವ ಮೂಲಕವೂ ಉತ್ತಮ ಖಾದ್ಯಗಳನ್ನು ಕಡಿಮೆ ಸಮಯದಲ್ಲಿ ತಯಾರಿಸಬಹುದು. ತೂಕ ಇಳಿಸುವವರಿಗೊಂದು ಬೇಯಿಸಿದ ಮೊಟ್ಟೆಯನ್ನು ಪ್ರಮುಖ ಆಹಾರವಾಗಿಸುವ ಕ್ರಮವೊಂದನ್ನು ಇಂದು ಪರಿಚಯಿಸಲಾಗುತ್ತಿದ್ದು ಇದು ಪೌಷ್ಟಿಕವಾದುದರ ಜೊತೆಗೇ ತೂಕವನ್ನು ಇಳಿಸುವ ನಿಮ್ಮ ಯಾವುದೇ ಪ್ರಯತ್ನಕ್ಕೆ ಅಡ್ಡಿಯಾಗದು.

ಅಷ್ಟೇ ಅಲ್ಲ, ಶೀಘ್ರ ತೂಕ ಇಳಿಸಲೂ ನೆರವಾಗುತ್ತದೆ. ಇಂದು ಸ್ಥೂಲಕಾಯ ಜಗತ್ತಿನ ಸಾಮಾನ್ಯ ತೊಂದರೆಯಾಗಿದೆ. ಸ್ಥೂಲಕಾಯ ಮಧುಮೇಹ, ಹೃದಯಸಂಬಂಧಿ ತೊಂದರೆ, ಕೆಲವಾರು ಬಗೆಯ ಕ್ಯಾನ್ಸರ್ ಸಹಾ ಹಲವು ಕಾಯಿಲೆಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ತೂಕ ಇಳಿಸಲು ಎಲ್ಲರೂ ಬಯಸುತ್ತಾರೆ ಆದರೆ ನಾಲಿಗೆಯ ಚಪಲಕ್ಕೆ ಸೋಲುತ್ತಾರೆ. ಆದರೆ ನಾಲಿಗೆಯ ಚಪಲವನ್ನು ತಣಿಸಿಯೂ ತೂಕ ಇಳಿಸಲು ಈ ವಿಧಾನ ಅತ್ಯುತ್ತಮ ಆಯ್ಕೆಯಾಗಿದೆ. 

ಮಧ್ಯಾಹ್ನ ಊಟದ ಜೊತೆ, ಒಂದು ಮೊಟ್ಟೆಯೂ ಇರಲಿ!

ತೂಕ ಇಳಿಸಬೇಕೆಂದರೆ ನಮ್ಮ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬನ್ನು ಕರಗಿಸಬೇಕು ಅಂದರೆ ಬಳಸಿಕೊಳ್ಳಬೇಕು. ನಮ್ಮ ದೇಹ ಇದನ್ನು ಬಳಸಿಕೊಳ್ಳುವ ಬದಲು ಹೆಚ್ಚಿನ ಕ್ಯಾಲೋರಿಗಳ ಆಹಾರವನ್ನು ಬೇಡುತ್ತದೆ. ಆಗ ಕಡಿಮೆ ಕ್ಯಾಲೋರಿಗಳಿರುವ ಆಹಾರ ಸೇವಿಸಿ ದೈಹಿಕ ವ್ಯಾಯಾಮವನ್ನು ಹೆಚ್ಚಿಸಿದಾಗ ಮಾತ್ರ ಅನಿವಾರ್ಯವಾಗಿ ದೇಹಕ್ಕೆ ಕೊಬ್ಬನ್ನು ಬಳಸಿಕೊಳಬೇಕಾಗಿ ಬರುತ್ತದೆ. ಆದ್ದರಿಂದ ಹೆಚ್ಚಿನ ಕ್ಯಾಲೋರಿಗಳನ್ನು ನೀಡುವ ಸಿದ್ಧ ಆಹಾರಗಳು, ಸಿಹಿಪದಾರ್ಥಗಳು, ಬುರುಗುಬರುವ ಪಾನೀಯಗಳು, ಸಿಹಿ ಪದಾರ್ಥಗಳು ಮೊದಲಾದವನ್ನು ಅನಿವಾರ್ಯವಾಗಿ ತ್ಯಜಿಸಲೇಬೇಕು. ಆದರೆ ಈ ವಿಧಾನವನ್ನು ಮೂರು ವಾರಗಳವರೆಗೆ ಸೇವಿಸಬೇಕಾಗಿದ್ದು ಇದರ ಪ್ರಯೋಜನಗಳನ್ನು ಅರಿತ ಬಳಿಕ ನಿಮ್ಮ ನಾಲಿಗೆಯ ಚಪಲವನ್ನು ತ್ಯಜಿಸಿದ ಬಗ್ಗೆ ನಿಮಗೆ ಖೇದವಿರುವುದಿಲ್ಲ. ಬನ್ನಿ, ಈ ಬೇಯಿಸಿದ ಮೊಟ್ಟೆಯನ್ನು ವಾರದ ದಿನಕ್ಕನುಗುಣವಾಗಿ ಸೇವಿಸುವ ಬಗೆಯನ್ನು ನೋಡೋಣ...

ಸೋಮವಾರ

ಸೋಮವಾರ

ಬೆಳಗ್ಗಿನ ಉಪಾಹಾರಕ್ಕೆ ಎರಡು ಬೇಯಿಸಿದ ಮೊಟ್ಟೆಗಳನ್ನು ಒಂದು ನಿಮ್ಮ ಇಷ್ಟದ ಹಣ್ಣಿನೊಂದಿಗೆ ಸೇವಿಸಿ. ಮಧ್ಯಾಹ್ನದ ಊಟಕ್ಕೆ ಎರಡು ಎಸಳು ಬ್ರೆಡ್ ಮತ್ತು ಒಂದು ಹಣ್ಣನ್ನು ಸೇವಿಸಿ. ರಾತ್ರಿಯ ಊಟಕ್ಕೆ ಬೇಯಿಸಿದ ಕೋಳಿ ಮಾಂಸ ಹಾಗೂ ಕೊಂಚ ಸಾಲಾಡ್ ಸೇವಿಸಿ.

ಮಂಗಳವಾರ

ಮಂಗಳವಾರ

ಬೆಳಗ್ಗಿನ ಉಪಾಹಾರಕ್ಕೆ ಎರಡು ಬೇಯಿಸಿದ ಮೊಟ್ಟೆಗಳನ್ನು ಒಂದು ನಿಮ್ಮ ಇಷ್ಟದ ಹಣ್ಣಿನೊಂದಿಗೆ ಸೇವಿಸಿ. ಮದ್ಯಾಹ್ನದ ಊಟಕ್ಕೆ ಕೊಂಚ ಬೇಯಿಸಿದ ಕೋಳಿಮಾಂಸ ಮತ್ತು ಹಸಿರು ಸಾಲಾಡ್ ಸೇವಿಸಿ. ರಾತ್ರಿಯ ಊಟಕ್ಕೆ ಒಂದು ಕಿತ್ತಳೆ, ಕೊಂಚ ಸಲಾಡ್ ಹಾಗೂ ಎರಡು ಬೇಯಿಸಿದ ಮೊಟ್ಟೆಗಳನ್ನು ಸೇವಿಸಿ.

ಬುಧವಾರ

ಬುಧವಾರ

ಇಂದೂ ಬೆಳಗ್ಗಿನ ಉಪಾಹಾರಕ್ಕೆ ಎರಡು ಬೇಯಿಸಿದ ಮೊಟ್ಟೆಗಳನ್ನು ಒಂದು ನಿಮ್ಮ ಇಷ್ಟದ ಹಣ್ಣಿನೊಂದಿಗೆ ಸೇವಿಸಿ. ಮಧ್ಯಾಹ್ನದ ಊಟಕ್ಕೆ ಒಂದು ಟೊಮೆಟೊ, ಒಂದು ಎಸಳು ಬ್ರೆಡ್ ಗೆ ಕೊಂಚ ಕಡಿಮೆ ಕ್ಯಾಲೋರಿ ಇರುವ ಚೀಸ್ ಹಚ್ಚಿ ಸೇವಿಸಿ.

ಗುರುವಾರ

ಗುರುವಾರ

ಇಂದೂ ಬೆಳಗ್ಗಿನ ಉಪಾಹಾರಕ್ಕೆ ಎರಡು ಬೇಯಿಸಿದ ಮೊಟ್ಟೆಗಳನ್ನು ಒಂದು ನಿಮ್ಮ ಇಷ್ಟದ ಹಣ್ಣಿನೊಂದಿಗೆ ಸೇವಿಸಿ. ಮಧ್ಯಾಹ್ನದ ಊಟಕ್ಕೆ ಕೇವಲ ತಾಜಾ ಹಣ್ಣುಗಳನ್ನು ಸೇವಿಸಿ. ರಾತ್ರಿಯ ಊಟಕ್ಕೆ ಹಬೆಯಲ್ಲಿ ಬೇಯಿಸಿದ ಕೋಳಿಮಾಂಸವನ್ನು ಸೇವಿಸಿ

ಶುಕ್ರವಾರ

ಶುಕ್ರವಾರ

ಇಂದು ಬೆಳಿಗ್ಗೆ ಕೇವಲ ಎರಡು ಬೇಯಿಸಿದ ಮೊಟ್ಟೆಗಳನ್ನು ಸೇವಿಸಿ. ಮಧ್ಯಾಹ್ನದ ಊಟಕ್ಕೆ ಎರಡು ಬೇಯಿಸಿದ ಮೊಟ್ಟೆ ಹಾಗೂ ಕೊಂಚ ಬೇಯಿಸಿದ ತರಕಾರಿಗಳನ್ನು ಸೇವಿಸಿ. ರಾತ್ರಿಯ ಊಟಕ್ಕೆ ಬಾರ್ಬೆಕ್ಯೂ ವಿಧಾನದಲ್ಲಿ ಬೇಯಿಸಿದ ಮೀನು ಹಾಗೂ ಕೊಂಚ ಸಾಲಾಡ್ ಸೇವಿಸಿ.

ಶನಿವಾರ

ಶನಿವಾರ

ಇಂದೂ ಬೆಳಿಗ್ಗೆ ಕೇವಲ ಎರಡು ಬೇಯಿಸಿದ ಮೊಟ್ಟೆಗಳನ್ನು ಸೇವಿಸಿ. ಮಧ್ಯಾಹ್ನದ ಊಟಕ್ಕೆ ಕೊಂಚ ತಾಜಾ ಹಣ್ಣುಗಳನ್ನು ಸೇವಿಸಿ. ರಾತ್ರಿಯ ಊಟಕ್ಕೆ ಹಬೆಯಲ್ಲಿ ಬೇಯಿಸಿದ ಕೋಳಿಮಾಂಸ ಹಾಗೂ ಕೊಂಚ ಸಾಲಾಡ್ ಸೇವಿಸಿ.

ಭಾನುವಾರ

ಭಾನುವಾರ

ಬೆಳಗ್ಗಿನ ಉಪಾಹಾರಕ್ಕೆ ಎರಡು ಬೇಯಿಸಿದ ಮೊಟ್ಟೆಗಳನ್ನು ಒಂದು ನಿಮ್ಮ ಇಷ್ಟದ ಹಣ್ಣಿನೊಂದಿಗೆ ಸೇವಿಸಿ. ಮಧ್ಯಾಹ್ನದ ಊಟಕ್ಕೆ ಒಂದು ಟೊಮೆಟೊ ಸಾಲಡ್ ಹಾಗೂ ಕೊಂಚ ಬೇಯಿಸಿದ ತರಕಾರಿ ಮತ್ತು ಕೋಳಿಮಾಂಸವನ್ನು ಸೇವಿಸಬಹುದು. ರಾತ್ರಿಯೂಟಕ್ಕೆ ಹಬೆಯಲ್ಲಿ ಬೇಯಿಸಿದ ತರಕಾರಿಗಳಿರಲಿ.

ವಿಶೇಷ ಸೂಚನೆ

ವಿಶೇಷ ಸೂಚನೆ

ಮುಂದಿನ ಎರಡು ವಾರಗಳವರೆಗೆ ಇದೇ ಆಹಾರಕ್ರಮವನ್ನು ಅನುಸರಿಸಿ. ಒಟ್ಟು ಮೂರು ವಾರಗಳ ಕಾರ ನಾಲಿಗೆಯ ಮೇಲೆ ಹತೋಟಿಯಿರಿಸಿ ಈ ಕ್ರಮವನ್ನು ಅನುಸರಿಸಿದರೆ ನಿಮ್ಮ ತೂಕ ಖಂಡಿತವಾಗಿಯೂ ಕಡಿಮೆಯಾಗುತ್ತದೆ ಹಾಗೂ ನಿತ್ರಾಣವೂ ಎದುರಾಗುವುದಿಲ್ಲ. ಅಲ್ಲದೇ ನಿತ್ಯವೂ ವ್ಯಾಯಾಮವನ್ನು ಅನುಸರಿಸುವ ಮೂಲಕ ತೂಕ ಇಳಿಸುವ ಪ್ರಕ್ರಿಯೆಗೆ ಇನ್ನಷ್ಟು ನೆರವು ಲಭಿಸುತ್ತದೆ.

English summary

Try The Boiled Egg Diet To Burn Fat & Reduce Body Weight

Boiled egg diet is considered to be one of the most amazing ways to lose weight in the right way. This diet is also suggested by several health experts and nutritionists. This diet is known to trigger fast weight loss and burns calories much faster than any of the crash diets that you have ever come across until now.
Story first published: Wednesday, July 19, 2017, 7:03 [IST]
Subscribe Newsletter