ವಯಸ್ಸು ಮೂವತ್ತಾಯಿತೇ?, ಸ್ವಲ್ಪ ಆರೋಗ್ಯದ ಬಗ್ಗೆ ಜಾಸ್ತಿ ಕಾಳಜಿ ವಹಿಸಿ!

By: Divya
Subscribe to Boldsky

ವಯಸ್ಸು ಮೂವತ್ತು ದಾಟುತಿದ್ದಂತೆ ಆರೋಗ್ಯದಲ್ಲಿ ಒಂದೊಂದೇ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುವುದು. ಹಾರ್ಮೋನ್‍ಗಳ ವ್ಯತ್ಯಾಸ, ಅಜೀರ್ಣ, ಮಲ ಮೂತ್ರಗಳ ಸಮಸ್ಯೆ, ಶ್ವಾಸಕೋಶದಲ್ಲಿ ತೊಂದರೆ ಹೀಗೆ ಒಂದಕ್ಕೊಂದು ಸರಪಳಿಯಂತೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು.

ಇವುಗಳ ಪಟ್ಟಿಗೆ ಕೇವಲ ವಯಸ್ಸೊಂದೇ ಕಾರಣವಲ್ಲ. ನಾವು ಸೇವಿಸುವ ಪೋಷಕಾಂಶ ರಹಿತವಾದ ಆಹಾರ ಮತ್ತು ಕ್ರಮಬದ್ಧವಾದ ದೈಹಿಕ ವ್ಯಾಯಾಮ ಇಲ್ಲದಿರುವುದು ಕಾರಣವಾಗುತ್ತದೆ. ಆಧುನಿಕ ಜೀವನ ಶೈಲಿ ಮತ್ತು ಕೆಲಸದ ಒತ್ತಡದಿಂದ ಕಾಲ ಕಾಲಕ್ಕೆ ಅಗತ್ಯವಾದ ಆಹಾರ ಸೇವನೆ ಮತ್ತು ದೈಹಿಕ ವ್ಯಾಯಾಮ ಮಾಡಲಾಗದು. ನಿಜ, ಹಾಗಂತ ವೃತ್ತಿ ಜೀವನಕ್ಕಾಗಿ ಆರೋಗ್ಯದ ಬಗ್ಗೆ ನಿಷ್ಕಾಳಜಿ ವಹಿಸುವುದು ಸೂಕ್ತವಲ್ಲ.

ಜೀವನ ಹಂತ ಇನ್ನೇನು ಪ್ರಾರಂಭವಾಗುತ್ತದೆ ಎನ್ನುವಷ್ಟರಲ್ಲೇ ಆರೋಗ್ಯ ಸಮಸ್ಯೆ ತಲೆದೂರಿರುತ್ತದೆ. 30 ಮೀರುತ್ತಿದ್ದಂತೆ ಗಂಡು-ಹೆಣ್ಣು ಎನ್ನುವ ತಾರತಮ್ಯವಿಲ್ಲದೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅದಕ್ಕಾಗಿ ಕೆಲವು ಸೂಕ್ತ ಜೀವನ ಕ್ರಮವನ್ನು ಅನುಸರಿಸಬೇಕು. ಆಗಲೇ ದೇಹ ಹಾಗೂ ಮನಸ್ಸು ಖುಷಿಯಲ್ಲಿರಲು ಸಾಧ್ಯ. ಈ ವಿಚಾರವಾಗಿಯೇ ಯಾವೆಲ್ಲಾ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ಅರಿಯೋಣ ಬನ್ನಿ...  

ತರಕಾರಿಯ ಮೊರೆ ಹೋಗುವುದು...

ತರಕಾರಿಯ ಮೊರೆ ಹೋಗುವುದು...

ಆಹಾರದಲ್ಲಿ ಹಸಿ ತರಕಾರಿ ಮತ್ತು ಸೊಪ್ಪಿನ ಪದಾರ್ಥವನ್ನು ಸೇವಿಸಬೇಕು. ಇವುಗಳಲ್ಲಿ ಸಮೃದ್ಧವಾದ ಪೋಷಕಾಂಶಗಳು ಇರುವುದರಿಂದ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು. ಉತ್ತಮ ಆರೋಗ್ಯ ಹಾಗೂ ಆಯಷ್ಯವನ್ನು ಇವು ಹೆಚ್ಚಿಸುತ್ತವೆ. ಅಲ್ಲದೆ ದೇಹದ ತೂಕವೂ ನಿಯಂತ್ರಣದಲ್ಲಿರುತ್ತದೆ.

ತೂಕದ ಸಮತೋಲನ

ತೂಕದ ಸಮತೋಲನ

ಬೇಕರಿ ಪದಾರ್ಥ ಮತ್ತು ಎಣ್ಣೆಯುಕ್ತ ಆಹಾರದ ಸೇವನೆ ಮತ್ತು ಕನಿಷ್ಠ ಮಟ್ಟದ ದೈಹಿಕ ವ್ಯಾಯಾಮದಿಂದ ತೂಕ ಹೆಚ್ಚಾಗುವ ಸಾಧ್ಯತೆ ಇರುತ್ತದೆ. 30ರ ನಂತರ ನಮ್ಮ ದೇಹದ ತೂಕವನ್ನು ಆದಷ್ಟು ಸಮತೋಲನದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ತೂಕದ ಹೆಚ್ಚಳದಿಂದಲೇ ಅನೇಕ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ.

ದೇಹದ ಮಾತನ್ನು ಕೇಳಬೇಕು

ದೇಹದ ಮಾತನ್ನು ಕೇಳಬೇಕು

ವಯಸ್ಸಾಗುತ್ತಿದ್ದಂತೆ ಕೆಲವರಿಗೆ ಕೆಲವು ಆಹಾರ ಪದಾರ್ಥಗಳ ಅಲರ್ಜಿ ಉಂಟಾಗುವ ಸಾಧ್ಯತೆ ಇರುತ್ತದೆ. ಕೆಲವು ತರಕಾರಿ, ಬೇಕರಿ ತಿನಿಸು, ಹಾಲು ಹೀಗೆ ಅನೇಕ ವಸ್ತುಗಳಿಗೆ ದೇಹ ಒಗ್ಗದು. ಅಂತಹ ಸಂದರ್ಭದಲ್ಲಿ ಅಂತಹ ವಸ್ತುಗಳಿಂದ ದೂರವಿರಿ. ಇಲ್ಲವಾದರೆ ರೋಗ ನಿರೋಧಕ ಶಕ್ತಿ ಕುಗ್ಗುವುದು, ಉರಿ ಊತ ಮತ್ತು ತೂಕ ಹೆಚ್ಚುವುದು.

ಅಡುಗೆ ಮಾಡಲು ಅರಿತಿರಿ

ಅಡುಗೆ ಮಾಡಲು ಅರಿತಿರಿ

ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎನ್ನುವುದಾದರೆ ನಿಮಗೆ ಬೇಕಾದ ಆಹಾರವನ್ನು ನೀವೇ ತಯಾರಿಸಿಕೊಳ್ಳಬೇಕು. ಮನೆಯಲ್ಲಿ ತಯಾರಿಸಿಕೊಂಡ ಆಹಾರ ಪದಾರ್ಥವು 100ರಷ್ಟು ಕ್ಯಾಲೋರಿಯನ್ನು ಉಳಿಸುತ್ತದೆ. ಜೊತೆಗೆ ಗುಣಮಟ್ಟದ ಆಹಾರವನ್ನು ಸೇವಿಸಬಹುದು.

ಫ್ರಿಜ್‍ನಲ್ಲಿ ಆರೋಗ್ಯಯುಕ್ತ ಆಹಾರ ಶೇಖರಣೆ

ಫ್ರಿಜ್‍ನಲ್ಲಿ ಆರೋಗ್ಯಯುಕ್ತ ಆಹಾರ ಶೇಖರಣೆ

ಆಯಾಸವಾದಾಗ ಮತ್ತು ಹಸಿವಾದಾಗ ಮನಸ್ಸು ಸುಲಭವಾಗಿ ದೊರೆಯುವ ಆಹಾರವನ್ನು ಸೇವಿಸಲು ಮನಸ್ಸು ಮಾಡುತ್ತದೆ. ಹಾಗಾಗಿ ಫ್ರಿಜ್‍ನಲ್ಲಿ ಆದಷ್ಟು ಅಗತ್ಯವಿರುವ ತಾಜಾ ತರಕಾರಿ ಹಾಗೂ ಆಹಾರಪದಾರ್ಥವನ್ನು ಶೇಖರಿಸಿಟ್ಟಿರಿ.

ಕೊಬ್ಬಿನಾಂಶಕ್ಕೆ ಭಯ ಬೇಡ

ಕೊಬ್ಬಿನಾಂಶಕ್ಕೆ ಭಯ ಬೇಡ

ಆರೋಗ್ಯಕರವಾದ ಕೊಬ್ಬನ್ನು ಸೇವಿಸುವುದರಿಂದ ದೇಹದ ಕೊಬ್ಬಿನ ಪ್ರಮಾಣ ಹೆಚ್ಚುವುದಿಲ್ಲ. ದೇಹಕ್ಕೂ ಕೆಲವು ಕೊಬ್ಬಿನ ಪದಾರ್ಥದ ಅಗತ್ಯವಿರುತ್ತದೆ. ಅಂತಹ ವಸ್ತುಗಳು ಸಹ ದೇಹದ ಕೆಲವು ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ.

ಸಂಬಾರ ಪದಾರ್ಥಗಳ ಹಿಂದೆ

ಸಂಬಾರ ಪದಾರ್ಥಗಳ ಹಿಂದೆ

ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿ ದಾಲ್ಚಿನ್ನಿ, ಅರಿಶಿನ, ಬೆಳ್ಳುಳ್ಳಿ, ಈರುಳ್ಳಿಯಂತಹ ವಸ್ತುಗಳನ್ನು ಸೇರಿಸುವುದರಿಂದ ಉತ್ತಮ ಪರಿಮಳ ಹಾಗೂ ರುಚಿಯನ್ನು ಹೊಂದಬಹುದು. ಇವು ರಕ್ತದ ಒತ್ತಡ, ಸಕ್ಕರೆ ಮಟ್ಟವನ್ನು ಕುಗ್ಗಿಸುವುದು ಹಾಗೂ ಕ್ಯಾನ್ಸರ್‌ನಂತಹ ಸಮಸ್ಯೆಗಳು ಬರದಂತೆ ನೋಡಿಕೊಳ್ಳುತ್ತವೆ.

ಗುಣಮಟ್ಟ ಮತ್ತು ಪ್ರಮಾಣದ ಬಗ್ಗೆ ಅರಿವು

ಗುಣಮಟ್ಟ ಮತ್ತು ಪ್ರಮಾಣದ ಬಗ್ಗೆ ಅರಿವು

ತಿನ್ನುವ ಆಹಾರದ ಪ್ರಮಾಣ ಅತಿಯಾದರೆ ಅದರಿಂದ ಕ್ಯಾಲೋರಿ ಪ್ರಮಾಣವೂ ಹೆಚ್ಚಾಗುತ್ತದೆ. ಕೆಲವೊಮ್ಮೆ ಅತಿಹೆಚ್ಚು ತಿಂದರೂ ಅದರಲ್ಲಿ ನಾರಿನಂಶ ಮತ್ತು ಪೋಷಕಾಂಶದ ಪ್ರಮಾಣ ಕಡಿಮೆ ಇದ್ದರೆ ಅದು ಆರೋಗ್ಯಕ್ಕೆ ಒಳ್ಳೆಯದ್ದಲ್ಲ. ಹಾಗಾಗಿ ಆಹಾರದ ಗುಣಮಟ್ಟ ಮತ್ತು ಪ್ರಮಾಣವನ್ನು ಪರಿಶೀಲಿಸಿಯೇ ಸೇವಿಸಬೇಕು.

ಮಿತವಾದ ಸಕ್ಕರೆ ಸೇವನೆ

ಮಿತವಾದ ಸಕ್ಕರೆ ಸೇವನೆ

ಸಕ್ಕರೆ ಪ್ರಮಾಣ ಹೆಚ್ಚಿರುವ ಆಹಾರ ಪದಾರ್ಥವನ್ನು ಸೇವಿಸುವುದರಿಂದ ಬೊಜ್ಜು, ಹೃದಯ ಸಂಬಂಧಿ ರೋಗ ಮತ್ತು ಉರಿ ಊತಗಳು ಕಾಣಿಸಿಕೊಳ್ಳುತ್ತದೆ. ಆದಷ್ಟು ಕಡಿಮೆ ಮಟ್ಟದ ಸಕ್ಕರೆ ಅಂಶವನ್ನು ಸೇವಿಸಿದರೆ ಒಳ್ಳೆಯದು.

ಸೂಕ್ತ ವ್ಯಾಯಾಮ ವಿಧಾನ

ಸೂಕ್ತ ವ್ಯಾಯಾಮ ವಿಧಾನ

ದೇಹದಿಂದ ಬೆವರು ಹೊರಹೋಗುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ದೇಹವು ಸ್ವಲ್ಪ ಶ್ರಮ ಪಟ್ಟರೆ ಅಂಗಾಂಗಗಳು ಸಹ ಆರೋಗ್ಯದಿಂದ ಕೂಡಿರುತ್ತವೆ. ಅದಕ್ಕಾಗಿ ನಮ್ಮ ದೈನಂದಿನ ದಿನಚರಿಯಲ್ಲಿ ಮುಂಜಾನೆಯ ವ್ಯಾಯಾಮ ಅಥವಾ ಮುಸ್ಸಂಜೆಯ ವ್ಯಾಯಾಮ ಕ್ರಮಗಳನ್ನು ಅನುಸರಿಸುವುದು ಸೂಕ್ತ.

ವ್ಯಸನದಿಂದ ದೂರವಿರಿ

ವ್ಯಸನದಿಂದ ದೂರವಿರಿ

ಅತಿಯಾದ ಮದ್ಯಸೇವನೆ, ಧೂಮಪಾನ ಮತ್ತು ಮಾದಕ ವಸ್ತಗಳ ಸೇವನೆ ಮಾಡುತ್ತಿದ್ದರೆ ಸ್ಥೂಲಕಾಯ, ಹೃದಯ ನಾಳದ ಸಮಸ್ಯೆಗಳು, ಕಿಡ್ನಿ ಸಮಸ್ಯೆ ಸೇರಿದಂತೆ ಅನೇಕ ಕಾಯಿಲೆಗಳು ಬರುವುದು. ಇವುಗಳ ಸೇವನೆ ಕ್ಷಣ ಕಾಲ ಖುಷಿಯನ್ನು ನೀಡಬಹುದು. ಆದರೆ ಸಂಪೂರ್ಣ ಜೀವನದ ಖುಷಿಯನ್ನು ಕಳೆಯುತ್ತದೆ ಎನ್ನುವುದನ್ನು ಮರೆಯದಿರಿ.

ಡಯಟ್ ಮಾಡಲು ಹೋಗದಿರಿ

ಡಯಟ್ ಮಾಡಲು ಹೋಗದಿರಿ

ಡಯಟ್ ಮಾಡಿ ಆರೋಗ್ಯ ಕಾಪಾಡಿಕೊಳ್ಳುತ್ತೇವೆ ಎನ್ನುವ ತಪ್ಪು ಕಲ್ಪನೆಯ ಹಾದಿ ಹಿಡಿಯಬೇಡಿ. ಬೇಕಾದದ್ದನ್ನು ತಿಂದು ಖುಷಿಯಾಗಿರಿ. ಆದರೆ ಸಕ್ಕರೆ, ಸೋಡಿಯಂ ಮತ್ತು ರಾಸಾಯನಿಕ ವಸ್ತುಗಳಿಂದ ಕೂಡಿರುವ ಆಹಾರ ಪದಾರ್ಥಗಳಿಂದ ಆದಷ್ಟು ದೂರವಿರಬೇಕಷ್ಟೆ. ಆಗ ಆರೋಗ್ಯವೂ ಚೆನ್ನಾಗಿ ಇರುವುದು.

ಮುಂಜಾನೆ ಬೇಗ ಎದ್ದೇಳಿ

ಮುಂಜಾನೆ ಬೇಗ ಎದ್ದೇಳಿ

ರಾತ್ರಿ ಬೇಗ ಮಲಗಿ, ಮುಂಜಾನೆ ಬೇಗ ಏಳುವುದು ಶಿಸ್ತಿನ ಜೀವನ ಕ್ರಮವನ್ನು ಸೂಚಿಸುತ್ತದೆ. ಬೆಳಗ್ಗೆ ಬೇಗ ಎದ್ದು ವ್ಯಾಯಾಮ ಮಾಡಿ ನಂತರ ಸೂಕ್ತ ಆಹಾರ ಸೇವಿಸುವುದು ಆರೋಗ್ಯಕರ ವಿಧಾನ. ಈ ವಿಧಾನವನ್ನು ವಾರಾಂತ್ಯ ರಜೆಯಲ್ಲೂ ಬಿಡಬಾರದು. ಆಗ ನೀವು ಹೆಚ್ಚು ಚೈತನ್ಯ ಶೀಲರಾಗಿರಲು ಸಾಧ್ಯ.

ನಡೆದು ಸಾಗಿರಿ

ನಡೆದು ಸಾಗಿರಿ

ಆಫೀಸ್‍ಗೆ ಹೋಗುವಾಗ ಲಿಫ್ಟ್ ಬಳಸುವ ಬದಲು ಮೆಟ್ಟಿಲನ್ನು ಏರಿಯೇ ಸಾಗಿರಿ. ಮನೆಯ ಹತ್ತಿರದ ಅಂಗಡಿ ಅಥವಾ ಸ್ನೇಹಿತರ ಮನೆಗೆ ಹೋಗುವಾಗ ವಾಹನದಲ್ಲಿ ಹೋಗುವ ಬದಲು ನಡೆದು ಸಾಗಿರಿ. ಆಗ ದೇಹದಲ್ಲಿರುವ ಹೆಚ್ಚುವರಿ ಕ್ಯಾಲೋರಿ ಕಡಿಮೆಯಾಗುತ್ತದೆ.

ಊಟ ತ್ಯಜಿಸದಿರಿ

ಊಟ ತ್ಯಜಿಸದಿರಿ

ಮಿತ ಆಹಾರದ ಸೇವನೆ ಎನ್ನುವ ಪರಿಯಲ್ಲಿ ಊಟ ಮಾಡುವುದನ್ನು ಬಿಡಬಾರದು. ಸೂಕ್ತ ಕ್ರಮದ ಊಟವು ದೇಹಕ್ಕೆ ಬಹಳ ಮುಖ್ಯವಾದದ್ದು. ಆರೋಗ್ಯಕರ ದೇಹ ನಿಮ್ಮದಾಗಬೇಕೆಂದರೆ ದಿನಕ್ಕೆ ಎರಡು ಹೊತ್ತಿನ ಊಟವನ್ನು ಮಾಡಬೇಕು.

English summary

Top Healthy Habits That You Need To Start By Your 30s

Healthy lifestyle factors like having an ideal body mass index (BMI), no excess alcohol intake, healthy diet, no smoking as well regular physical activity will help you reach middle age with lower risk of heart disease. So, before you turn 30 or if you're already 30, there are certain healthy habits for 30 plus people that you can swear by for better health. Scroll down further to know about the healthy habits for 30 year old women and men.
Story first published: Friday, June 2, 2017, 10:04 [IST]
Subscribe Newsletter