ಪುರುಷರ ಆರೋಗ್ಯ ಹೆಚ್ಚಿಸುವ ಹತ್ತು ಸೂತ್ರಗಳು

By: Divya
Subscribe to Boldsky

ಮನೆಯ ಪ್ರಮುಖ ಆಧಾರ ಸ್ಥಂಭವಾಗಿ ನಿಲ್ಲುವವರು ಪುರುಷರು. ಮನೆ ಮಂದಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡುವವರು ಪುರುಷರು. ಹಾಗಾಗಿ ಪುರುಷರ ಆರೋಗ್ಯ ಹೆಚ್ಚು ಸುರಕ್ಷಿತವಾಗಿರಬೇಕಾಗುತ್ತದೆ. ಕಲುಷಿತ ಆಹಾರ ಹಾಗೂ ಸೂಕ್ತ ವ್ಯಾಯಾಮಗಳಿಲ್ಲದೆ ಇರುವುದು ಇಂದು ಅನೇಕ ಪುರುಷರ ಆರೋಗ್ಯ ಹದಗೆಡುವುದಕ್ಕೆ ಕಾರಣವಾಗಿವೆ. ಪ್ರತಿಯೊಬ್ಬ ಪುರುಷರು ನಿರ್ದಿಷ್ಟವಾದ ಆಹಾರ ಕ್ರಮ, ಸೂಕ್ತ ಕೆಲಸದಲ್ಲಿ ತೊಡಗಿಕೊಳ್ಳುವುದು ಹಾಗೂ ಇನ್ನಿತರ ಮುನ್ನೆಚ್ಚರಿಕೆ ವಿಧಾನದಲ್ಲಿ ತೊಡಗಿಕೊಳ್ಳಬೇಕಾಗಿದೆ.

ಕೆಲವು ಸಮೀಕ್ಷೆಗಳ ಪ್ರಕಾರ ಇಂದು ಗಂಡಸರು ಸಾಮಾನ್ಯವಾಗಿ ಕ್ಯಾನ್ಸರ್, ಹೃದಯದ ತೊಂದರೆ, ಮಾನಸಿಕ ಒತ್ತಡ ಹಾಗೂ ಲೈಂಗಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಇಂದು ಅನೇಕ ಪುರುಷರು ಬಳಲುತ್ತಿದ್ದಾರೆ. ಇಂತಹ ಪರಿಸ್ಥಿತಿಯಿಂದ ಹೊರಬರಲು ಕೆಲವು ಸುಲಭ ಉಪಾಯವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಿಮಗೂ ನಿಮ್ಮ ಸಮಸ್ಯೆಯಿಂದ ಹೊರ ಬರಬೇಕೆಂಬ ಮನಸ್ಸಿದ್ದರೆ ಈ ಕೆಳಗಿನ ನಿಯಮವನ್ನು ಅನುಸರಿಸಿ....

ತಣ್ಣೀರಿನ ಸ್ನಾನ

ತಣ್ಣೀರಿನ ಸ್ನಾನ

ನಿತ್ಯವೂ ತಣ್ಣೀರಿನ ಸ್ನಾನ ಮಾಡುವುದರಿಂದ ಪುರುಷರ ಆರೋಗ್ಯದಲ್ಲಿ ಗಣನೀಯ ಬದಲಾವಣೆಯನ್ನು ಕಾಣಬಹುದು. ಅಲ್ಲದೆ ಲೈಂಗಿಕತೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಪರಿಹಾರಗೊಳ್ಳುವುದು. ಪುರುಷರು ಹೆಚ್ಚು ಫಲವತ್ತತೆಗೆ ಒಳಗಾಗುವರು ಎಂದು ಹೇಳಲಾಗುತ್ತದೆ.

ಆರೋಗ್ಯಕರವಾದ ದೇಹದ ತೂಕ

ಆರೋಗ್ಯಕರವಾದ ದೇಹದ ತೂಕ

ದೇಹವು ಎತ್ತರಕ್ಕೆ ತಕ್ಕಂತೆ ಆರೋಗ್ಯಕರವಾದ ತೂಕವನ್ನು ಹೊಂದುವುದರಿಂದ ಲೈಂಗಿಕ ಆರೋಗ್ಯ, ಟೆಸ್ಟೋಸ್ಟೆರಾನ್ ಮಟ್ಟ ಮತ್ತು ವೀರ್ಯಾಣು ಸಂಖ್ಯೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ದೇಹದ ತೂಕವನ್ನು ಸೂಕ್ತ ರೀತಿಯಲ್ಲಿರುವಂತೆ ನೋಡಿಕೊಳ್ಳಬೇಕು.

ಲ್ಯಾಪ್ ಟಾಪ್ ಬಳಕೆ

ಲ್ಯಾಪ್ ಟಾಪ್ ಬಳಕೆ

ನೀವು ಲ್ಯಾಪ್ ಟಾಪ್ ಬಳಕೆದಾರರಾಗಿದ್ದರೆ ಆದಷ್ಟು ಮೇಜಿನ ಮೇಲೆ ಅಥವಾ ಕಾಲಿನ ಮೇಲೆ ತಲೆದಿಂಬನ್ನು ಇಟ್ಟು ನಂತರ ಅದರ ಮೇಲೆ ಲ್ಯಾಪ್ ಟಾಪ್ ಇಟ್ಟು ಬಳಕೆ ಮಾಡಿ. ಇಲ್ಲವಾದರೆ ಅದು ಹೊರ ಸೂಸುವ ಶಾಖವು ನಿಮ್ಮ ಫಲವತ್ತತೆ (ಫರ್ಟಿಲಿಟಿ)ಯ ಮೇಲೆ ಪರಿಣಾಮ ಬೀರುತ್ತದೆ.

ಬೈಕಿಂಗ್ ಕಡಿಮೆ ಮಾಡಿ

ಬೈಕಿಂಗ್ ಕಡಿಮೆ ಮಾಡಿ

ಕೆಲವು ವರದಿಯ ಪ್ರಕಾರ ಬೈಕಿಂಗ್ ಹೋಗುವುದು ಗಂಡಸರ ಒತ್ತಡವನ್ನು ಹೆಚ್ಚಿಸುತ್ತದೆ. ಇದು ಅವರ ಲೈಗಿಂಕ ಆಸಕ್ತಿಯನ್ನು ಕಡಿಮೆ ಮಾಡುತ್ತದೆ.

ಉತ್ತಮ ನಿದ್ರೆಗೆ ಜಾರಿ

ಉತ್ತಮ ನಿದ್ರೆಗೆ ಜಾರಿ

ನಿದ್ರೆಯ ಅಭಾವವು ನಿಮ್ಮ ಲೈಂಗಿಕ ಆಸಕ್ತಿ ಹಾಗೂ ಫಲವತ್ತತೆಯ ಮೇಲೆ ಪರಿಣಾಮ ಬೀರುವುದು. ಹಾಗಾಗಿ ಆದಷ್ಟು ಶಾಂತ ಮನಃಸ್ಥಿತಿಯಲ್ಲಿ ಸೊಂಪಾದ ನಿದ್ರೆಗೆ ಜಾರಿ.

ಧೂಮಪಾನದಿಂದ ದೂರವಿರಿ

ಧೂಮಪಾನದಿಂದ ದೂರವಿರಿ

ಧೂಮಪಾನ, ಕುಡಿತ ಹಾಗೂ ಮಾದಕ ವಸ್ತುಗಳ ಸೇವನೆಯು ಲೈಂಗಿಕ ಆಸಕ್ತಿಯನ್ನು ಕ್ಷೀಣಿಸುತ್ತವೆ. ಧೂಮಪಾನವು ನೇರವಾಗಿ ವೀರ್ಯ ಚದುರುವಿಕೆ ಹಾಗೂ ಎಣಿಕೆಯ ಮೇಲೆ ಪ್ರಭಾವ ಬೀರುಯವುದು. ಜೊತೆಗೆ ವೀರ್ಯಾಣುಗಳ ಗುಣಮಟ್ಟವನ್ನು ಕಡಿಮೆ ಮಾಡುವುದು. ಅಲ್ಲದೆ ಇತರ ಆರೋಗ್ಯ ಸಮಸ್ಯೆಗಳ ಉದ್ಭವಕ್ಕೆ ಕಾರಣವಾಗುವುದು.

ತೀವ್ರವಾದ ವ್ಯಾಯಾಮ

ತೀವ್ರವಾದ ವ್ಯಾಯಾಮ

ಅತಿಯಾದ ದೈಹಿಕ ಶ್ರಮವೂ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ವಾರದಲ್ಲಿ ಎರಡು ಬಾರಿ ವ್ಯಾಯಾಮದ ಮೊರೆ ಹೋಗಿ. ಅದು ನಿಮ್ಮ ಆರೋಗ್ಯದ ಒಳಿತಿಗಾಗಿ ಹಾಗೂ ಸೂಕ್ತ ರೀತಿಯಲ್ಲಿರಬೇಕು.

ಆರೋಗ್ಯ ತಪಾಸಣೆ ಮಾಡಿಸಿ

ಆರೋಗ್ಯ ತಪಾಸಣೆ ಮಾಡಿಸಿ

ತಿಂಗಳಿಗೊಮ್ಮೆ ಅಥವಾ 3 ತಿಂಗಳಿಗೊಮ್ಮೆ ನಿಮ್ಮ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಸಿ, ಮಧುಮೇಹ, ರಕ್ತದೊತ್ತಡ, ಲೈಂಗಿಕ ಸಮಸ್ಯೆ ಹೀಗೆ ಅನೇಕ ವಿಚಾರದ ಬಗ್ಗೆ ಅಥವಾ ಆರೋಗ್ಯ ಸಮಸ್ಯೆಯ ಬಗ್ಗೆ ಪರಿಹಾರವನ್ನು ಪಡೆದುಕೊಂಡು ಆರೋಗ್ಯವಂತರಾಗಿರಬಹುದು.

ಹಸಿ ತರಕಾರಿಯನ್ನು ಸೇವಿಸಿ

ಹಸಿ ತರಕಾರಿಯನ್ನು ಸೇವಿಸಿ

ನಿಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಕೆಲವು ಉತ್ತಮ ಕ್ರಮಗಳ ಮೊರೆ ಹೋಗಿ. ಧ್ಯಾನ ಮತ್ತು ಯೋಗ ಮಾಡುವುದು ಸೂಕ್ತ. ತೀವ್ರವಾದ ಒತ್ತಡವು ನಿಮ್ಮ ಲೈಂಗಿಕ ಆಸಕ್ತಿಯನ್ನು ಕಡಿಮೆಗೊಳಿಸುತ್ತದೆ. ಜೊತೆಗೆ ಫಲವಂತಿಕೆಯನ್ನು ಕಡಿಮೆ ಮಾಡಿ ಅನೇಕ ಆರೋಗ್ಯ ಸಮಸ್ಯೆಗಳ ಉದಯಕ್ಕೆ ಕಾರಣವಾಗುವುದು.

English summary

Top 10 Health Tips For Men

Male health is about two things. One is about maintaining a healthy body and the other is about fertility. Maintaining both of them requires specific diet, engaging workouts and certain other precautions. There are some health tips for male fertility.According to a survey, the health threats faced by an average man are cancer, heart problems and fertility issues. These health issues can be prevented in some cases, with the help of healthy living habits.
Story first published: Wednesday, September 6, 2017, 23:35 [IST]
Subscribe Newsletter