ಕಿಡ್ನಿ ಸ್ಟೋನ್ ಸಮಸ್ಯೆ ಇದ್ದರೆ, ದಿನಕ್ಕೆ ಒಂದು ಲೋಟ ಲಿಂಬೆ ಜ್ಯೂಸ್ ಕುಡಿಯಿರಿ

By: Hemanth
Subscribe to Boldsky

ದೇಹದಲ್ಲಿರುವ ಹಲವಾರು ರೀತಿಯ ವಿಷವನ್ನು ಹೊರಹಾಕುವ ಕೆಲಸ ಮಾಡುವಂತಹ ಕಿಡ್ನಿ ಆರೋಗ್ಯವಾಗಿರಬೇಕು. ಕಿಡ್ನಿಯಲ್ಲಿ ಯಾವುದೇ ರೀತಿಯ ತೊಂದರೆ ಕಾಣಿಸಿಕೊಂಡರೂ ಅದು ದೇಹದ ಮೇಲೆ ಭಾರೀ ಪರಿಣಾಮ ಉಂಟು ಮಾಡುವುದು. ಕಿಡ್ನಿಯು ವಿಷ ಹಾಗೂ ರಕ್ತದಲ್ಲಿ ಬೇಡದ ಕಲ್ಮಷಗಳನ್ನು ಮೂತ್ರದ ಮೂಲಕ ಹೊರಹಾಕುತ್ತದೆ. ಆದರೆ ಕೆಲವೊಂದು ಸಲ ಉಪ್ಪು, ಖನಿಜಾಂಶಗಳು ಮತ್ತು ಇತರ ಕೆಲವೊಂದು ವಸ್ತುಗಳು ಕಿಡ್ನಿಯಲ್ಲಿ ನಿಂತು ಕಿಡ್ನಿಯಲ್ಲಿ ಕಲ್ಲನ್ನು ಉಂಟು ಮಾಡುವುದು.

ಕಿಡ್ನಿಯಲ್ಲಿ ಉಂಟಾಗುವ ಹೆಚ್ಚಿನ ಕಲ್ಲುಗಳು ಕ್ಯಾಲ್ಸಿಯಂ ಆಕ್ಸಲೇಟ್ ಅಥವಾ ಕ್ಯಾಲ್ಸಿಯಂ ಪೊಸ್ಪೆಟ್ ಆಗಿರುವುದು. ಕಿಡ್ನಿಯಲ್ಲಿರುವ ಸಣ್ಣ ಗಾತ್ರದ ಕಲ್ಲುಗಳು ತನ್ನಿಂದ ತಾನೇ ಹೊರಬರುವುದು. ಆದರೆ ದೊಡ್ಡ ಗಾತ್ರದ ಕಲ್ಲು ಹೊರಬರಲು ಔಷಧಿ ಬೇಕು. ಕೆಲವೊಂದು ಸಲ ವೈದ್ಯರು ಕಲ್ಲು ತೆಗೆಯಲು ಶಸ್ತ್ರಚಿಕಿತ್ಸೆ ಮಾಡಬೇಕೆಂದು ತಿಳಿಸುತ್ತಾರೆ. ಆದರೆ ಇಂತಹ ಶಸ್ತ್ರಚಿಕಿತ್ಸೆ ಮಾಡಿ ಹಣ ಖರ್ಚು ಮಾಡುವ ಮೊದಲು ನಮಗೆ ತುಂಬಾ ಸುಲಭವಾಗಿ ಸಿಗುವಂತಹ ಲಿಂಬೆ ಹಣ್ಣಿನ ರಸದಿಂದ ಕಿಡ್ನಿ ಕಲ್ಲನ್ನು ತೆಗೆಯಬಹುದಾಗಿದೆ. 

ಕಿಡ್ನಿ ಕಲ್ಲುಗಳನ್ನು ದೇಹದಿಂದ ಹೊರಹಾಕುವ ಸೂಪರ್ ಮನೆಮದ್ದುಗಳು

ಲಿಂಬೆ ಹಣ್ಣಿನಲ್ಲಿ ಹಲವಾರು ರೀತಿಯ ಆರೋಗ್ಯ ಗುಣಗಳು ಇವೆ. ಇದು ನಮಗೆ ದೇವರು ಕೊಟ್ಟಿರುವ ವರ ಎಂದರೂ ತಪ್ಪಾಗದು. ಲಿಂಬೆ ಹಣ್ಣನ್ನು ಹಲವಾರು ರೀತಿಯ ಪದಾರ್ಥಗಳಲ್ಲಿ ಬಳಸಲಾಗುತ್ತದೆ ಹಾಗೂ ಇದರ ಜ್ಯೂಸ್ ತುಂಬಾ ಜನಪ್ರಿಯವಾಗಿದೆ. ವಿಶ್ವದೆಲ್ಲೆಡೆಯಲ್ಲಿ ಸಿಗುವಂತಹ ಲಿಂಬೆಹಣ್ಣಿನಲ್ಲಿ ವಿಟಮಿನ್ ಸಿ, ಥೈಮೆನ್ ರಿಬೊಫ್ಲಾವಿನ್, ಪ್ಯಾಂಟೊಥೆನಿಕ್ ಆಮ್ಲ, ಕಬ್ಬಿನ, ಮೆಗ್ನಿಶಿಯಂ, ಫಾಲೆಟ್ ಮತ್ತು ಪೊಟಾಶಿಯಂ ಇದೆ. ಇಷ್ಟೆಲ್ಲಾ ಅಂಶಗಳನ್ನು ಹೊಂದಿರುವ ಲಿಂಬೆಹಣ್ಣಿನ ರಸದಿಂದ ಕಿಡ್ನಿ ಕಲ್ಲನ್ನು ತೆಗೆಯುವುದು ಹೇಗೆ ಎಂದು ತಿಳಿದುಕೊಳ್ಳುವ..... 

ಲಿಂಬೆ ಜ್ಯೂಸ್

ಲಿಂಬೆ ಜ್ಯೂಸ್

ಲಿಂಬೆ ಜ್ಯೂಸ್‌ನಲ್ಲಿ ಇರುವಂತ ಸಿಟ್ರಿಕ್ ಆ್ಯಸಿಡ್ ಮೂತ್ರದಲ್ಲಿ ಆಮ್ಲೀಯತೆ ಹೆಚ್ಚು ಮಾಡಿ ಕಿಡ್ನಿಯಲ್ಲಿ ಕಲ್ಲು ರಚನೆಯಾಗದಂತೆ ನೋಡಿಕೊಳ್ಳುತ್ತದೆ. ಕಿಡ್ನಿ ಕಲ್ಲುಗಳನ್ನು ತೆಗೆಯಲು ಬಳಸುವಂತಹ ಪೊಟಾಶಿಯಂ ಸಿಟ್ರೇಟ್ ಎನ್ನುವುದು ಲಿಂಬೆ ಹಣ್ಣಿನಲ್ಲಿ ಇರುವಂತಹ ಸಿಟ್ರಿಕ್ ಆಮ್ಲದ ಒಂದು ಅಂಗವಾಗಿದೆ. ಎರಡರಿಂದ ನಾಲ್ಕು ಔನ್ಸ್ ಲಿಂಬೆರಸವವನ್ನು ಪ್ರತಿದಿನ ಸೇವಿಸಿದರೆ ಕಿಡ್ನಿಯ ಆರೋಗ್ಯವು ಚೆನ್ನಾಗಿರುವುದು. ಲಿಂಬೆ ಜ್ಯೂಸ್ ನ್ನು ನೇರವಾಗಿ ಅಥವಾ ಬಿಸಿ ನೀರು ಮತ್ತು ಜೇನುತುಪ್ಪದೊಂದಿಗೆ ಸೇವಿಸಿಬಹುದು.

ಲಿಂಬೆ ಜ್ಯೂಸ್ ಮತ್ತು ಆ್ಯಪಲ್ ಸೀಡರ್ ವಿನೇಗರ್

ಲಿಂಬೆ ಜ್ಯೂಸ್ ಮತ್ತು ಆ್ಯಪಲ್ ಸೀಡರ್ ವಿನೇಗರ್

ಗೋಧಿಹುಲ್ಲಿನ ಜ್ಯೂಸ್ ಮತ್ತು ಒಂದು ಚಮಚ ಲಿಂಬೆರಸ ಮತ್ತು ಒಂದು ಚಮಚ ತುಳಸಿ ರಸ ಹಾಗೂ ಆ್ಯಪಲ್ ಸೀಡರ್ ವಿನೇಗರ್ ಮಿಶ್ರಣ ಮಾಡಿಕೊಂಡು ದಿನದಲ್ಲಿ ಎರಡು ಸಲ ಕುಡಿಯಿರಿ.

ಲಿಂಬೆಜ್ಯೂಸ್ ಮತ್ತು ಆಲಿವ್ ಎಣ್ಣೆ

ಲಿಂಬೆಜ್ಯೂಸ್ ಮತ್ತು ಆಲಿವ್ ಎಣ್ಣೆ

¼ ಕಪ್ ಲಿಂಬೆ ಜ್ಯೂಶ್ ಜತೆಗೆ ಸ್ವಲ್ಪ ಆಲಿವ್ ತೈಲ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣ ಸೇವಿಸಿದ ಬಳಿಕ ಆದಷ್ಟು ನೀರು ಕುಡಿಯಿರಿ. ಮೂರು ದಿನಗಳ ಕಾಲ ಅಥವಾ ಕಲ್ಲು ಹೊರಹೋಗುವ ತನಕ ಮುಂದುವರಿಸಬೇಕು.

ಸಿಟ್ರಿಕ್ ಆಮ್ಲ

ಸಿಟ್ರಿಕ್ ಆಮ್ಲ

ಲಿಂಬೆಯಲ್ಲಿ ಇರುವಂತಹ ಸಿಟ್ರಿಕ್ ಆಮ್ಲವು ಕಿಡ್ನಿಯಲ್ಲಿ ಕಲ್ಲುಗಳು ಆಗದಂತೆ ತಡೆಯುತ್ತದೆ. ಸಿಟ್ರಿಕ್ ಆಮ್ಲವನ್ನು ಹೆಚ್ಚು ಸೇವಿಸುವುದರಿಂದ ಕ್ಯಾಲ್ಸಿಯಂನಿಂದ ಉಂಟಾಗುವ ಕಲ್ಲುಗಳನ್ನು ಅಪಾಯವನ್ನು ತಗ್ಗಿಸುತ್ತದೆ. ಲಿಂಬೆ ನೀರು ಸೇವನೆ ಮಾಡಿದರೆ ಸಿಟ್ರಿಕ್ ಆಮ್ಲದೊಂದಿಗೆ ನೀರಿನ ಸೇವನೆಯು ಹೆಚ್ಚಾಗಿ ಕಲ್ಲುಗಳು ಆಗದಂತೆ ತಡೆಯುತ್ತದೆ.

ಲಿಂಬೆ ಹಣ್ಣು- ಹುಳಿಯಾದರೂ, ಆರೋಗ್ಯಕ್ಕೆ ಸಿಹಿ!

ಈ ಮನೆಮದ್ದುಗಳನ್ನು ಸೇವಿಸುವಾಗ ಕೆಲವೊಂದು ವಿಷಯಗಳನ್ನು ಗಮದಲ್ಲಿರಿಸಬೇಕು

ಈ ಮನೆಮದ್ದುಗಳನ್ನು ಸೇವಿಸುವಾಗ ಕೆಲವೊಂದು ವಿಷಯಗಳನ್ನು ಗಮದಲ್ಲಿರಿಸಬೇಕು

*ಯಾವಾಗಲೂ ತಾಜಾ ಲಿಂಬೆರಸ ಬಳಸಿ. ಮಾರುಕಟ್ಟೆಯಲ್ಲಿ ಸಿಗುವ ಪ್ಯಾಕ್ ಮಾಡಿದ ಲಿಂಬೆಜ್ಯೂಸ್ ಅಲ್ಲ.

*ಭವಿಷ್ಯದಲ್ಲಿ ಕಿಡ್ನಿಯಲ್ಲಿ ಕಲ್ಲು ನಿಲ್ಲದೆ ಇರಲು ಯಾವಾಗಲೂ ಲೆಮನ್ ಟೀ ಕುಡಿಯುತ್ತಾ ಇರಿ.

*2-3 ದಿನಗಳ ಕಾಲ ಈ ಮನೆಮದ್ದನ್ನು ಬಳಸಿದ ಬಳಿಕವೂ ಕಿಡ್ನಿಯಲ್ಲಿ ಕಲ್ಲು ಹಾಗೆ ಇದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಿರಿ.

English summary

To Use Lemon Juice To Treat Kidney Stones

Kidney is a bean shaped organ found in the lower abdomen region of the human body and is involved in the filtration and removal of toxic and unwanted substances from the blood through urine. However, sometimes excess salt, minerals and other discarded substances get accumulated in the kidney and form a solid mass called kidney stone. Most of these kidney stones are calcium oxalate or calcium phosphate.
Subscribe Newsletter