ಆರೋಗ್ಯ ಪೂರ್ಣ ಆಹಾರ ಹಸಿರು ಸ್ಮೂಥಿಗಳು... ತಪ್ಪದೇ ಸೇವಿಸಿ

By Divya Pandith
Subscribe to Boldsky

ಹಸಿ ತರಕಾರಿ ಮತ್ತು ಸೊಪ್ಪುಗಳ ಸೇವನೆಯಿಂದ ಆರೋಗ್ಯಕ್ಕೆ ಬೇಕಾದ ಎಲ್ಲಾ ಬಗೆಯ ಪೋಷಕಾಂಶಗಳು, ವಿಟಮಿನ್‍ಗಳನ್ನು ದೊರೆಯುತ್ತವೆ. ಆದರೆ ಗಡಿಬಿಡಿಯ ಜೀವನ, ಒತ್ತಡದ ಕೆಲಸದ ನಡುವೆ ಸೂಕ್ತ ಆಹಾರವನ್ನು ಸೇವಿಸಲು ಮರೆತು ಬಿಡುತ್ತೇವೆ. ಕೆಲವೊಮ್ಮೆ ಆರೋಗ್ಯ ಪೂರ್ಣ ಆಹಾರ ತಿನ್ನಲು ಸಮಯವಿದೆ ಎಂದರೆ ಮನೆಯಿಂದಾಚೆ ಇದ್ದಿರುತ್ತೇವೆ. ಒಟ್ಟಿನಲ್ಲಿ ಆರೋಗ್ಯ ಪೂರ್ಣ ಆಹಾರದಿಂದ ವಂಚಿತರಾಗಿರುತ್ತೇವೆ. ದೇಹಕ್ಕೂ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ.

ಚಿಂತಿಸಬೇಡಿ, ಆಹಾರ ಕ್ರಮದಲ್ಲಿ ಹೆಚ್ಚಿನ ತರಕಾರಿ ಹಾಗೂ ಸೊಪ್ಪಿನ ಸ್ಮೂಥಿ ಅಥವಾ ಜ್ಯೂಸ್ ರೂಪದಲ್ಲಿ ಸೇವಿಸಬಹುದು. ರುಚಿಯಲ್ಲಿ ರಾಜಿಮಾಡಿಕೊಳ್ಳದೆ, ಆಹಾರ ಕ್ರಮದಲ್ಲಿ ಹೆಚ್ಚಿನ ತರಕಾರಿಯನ್ನು ಸೇವಿಸಿದಂತೆ ಆಗುವುದು. ಹಸಿರು ಸ್ಮೂಥಿಗಳನ್ನು ವಿಭಿನ್ನ ಪರಿಮಳ ಹಾಗೂ ರುಚಿಯಲ್ಲಿ ಸಂಯೋಜಿಸಬಹುದು. ಇವುಗಳನ್ನು ತಯಾರಿಸಲು ಸಹ ಹೆಚ್ಚು ಸಮಯ ಬೇಕಾಗದು. ಕೇವಲ 10 ನಿಮಿಷದಲ್ಲಿ ತಯಾರಿಸಬಹುದು. ನಿಮಗೂ ಈ ಸ್ಮೂಥಿಗಳ ರುಚಿ ನೋಡಬೇಕೆಂದರೆ ಹೀಗೆ ಮಾಡಿ ನೋಡಿ...

Green Smoothies

ಬಸಳೆ ಮತ್ತು ಕಿತ್ತಳೆ ಹಣ್ಣಿನ ಸ್ಮೂಥಿ

ಸಿಟ್ರಸ್ ಹಣ್ಣುಗಳು ಕೆಫಿನ್ ಇಲ್ಲದೆಯೇ ಶಕ್ತಿಯನ್ನು ಹೆಚ್ಚಿಸುತ್ತವೆ. ಬಸಳೆ ಸೊಪ್ಪು, ಕಿತ್ತಳೆ ಹಣ್ಣಿನ ತಿರುಳನ್ನು ಒಟ್ಟಿಗೆ ಬೆರೆಸಿ ರುಬ್ಬಿಕೊಂಡರೆ ಸ್ಮೂಥಿ ಸಿದ್ಧವಾಗುತ್ತದೆ. ಬೇಕಿದ್ದರೆ ಚೆನ್ನಾಗಿ ಬಲಿತ ಬಾಳೆ ಹಣ್ಣನ್ನು ಸೇರಿಸಬಹುದು. ರಾತ್ರಿ ಇದನ್ನು ಫ್ರಿಜ್‍ನಲ್ಲಿ ಇಟ್ಟುಕೊಂಡು ಬೆಳಗ್ಗೆ ಸೇವಿಸಿದರೆ ಐಸ್ ಸೇರಿಸುವ ಅಗತ್ಯ ಇರುವುದಿಲ್ಲ.

ಕಿತ್ತಳೆ ಮತ್ತು ಕೇಲ್(ಹೂಕೋಸು ಜಾತಿಯ ಸಸ್ಯ)

ಮೊದಲು ಕೇಲ್ ಅನ್ನು ಬೇಯಿಸಿ ತಣಿಸಿಕೊಳ್ಳಬೇಕು. ನಂತರ ಕಿತ್ತಳೆ ಹಣ್ಣಿನ ತಿರುಳಿನೊಂದಿಗೆ ರುಬ್ಬಿಕೊಂಡು, ಜ್ಯೂಸ್ ಅಥವಾ ಸ್ಮೂಥಿ ಮಾಡಿ ಸವಿಯಬಹುದು. ಇದರಿಂದ 30 ಗ್ರಾಂ. ಪ್ರೋಟೀನ್ ಹೊಂದಬಹುದು.

ಶುಂಠಿ ಮತ್ತು ಕಿತ್ತಳೆ

ಬಸಳೆ, ಕಾಸ್ ಲೆಟಿಸ್/ರೊಮೈನ್, ಬಾಳೆಹಣ್ಣು, ಕಿತ್ತಳೆ ಮತ್ತು ಶುಂಠಿ. ಇವೆಲ್ಲವನ್ನು ಒಟ್ಟಿಗೆ ಸೇರಿಸಿ ರುಬ್ಬಿಕೊಂಡು ಸ್ಮೂಥಿ ತಯಾರಿಸಿ ಸೇವಿಸಿ.

ಬ್ಲೂಬೆರ್ರಿ-ಪುದೀನ ಸ್ಮೂಥಿ

ಇವೆರಡನ್ನು ಒಟ್ಟಿಗೆ ಬೆರೆಸಿ ರುಬ್ಬಿಕೊಂಡು ಸ್ಮೂಥಿ ತಯಾರಿಸಿಕೊಳ್ಳಬೇಕು. ಇದರಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚಾಗಿರುತ್ತದೆ. ನಾರಿನಂಶ ಮತ್ತು ಮ್ಯಾಂಗನೀಸ್ ಮತ್ತು ಜೀವಸತ್ವಗಳ ಉತ್ತಮ ಮೂಲವಾಗಿದೆ.

Green Smoothies

ಸ್ಪ್ರಿಂಗ್ ಡಿಟಾಕ್ಸ್ ಗ್ರೀನ್ ಸ್ಮೂಥಿ

ಈ ಟೇಸ್ಟಿ ಪಾನೀಯ ತಯಾರಿಸಲು ಸಿಲಾಂಟೋ, ಜೇನು, ಶುಂಠಿ ಮತ್ತು ಅನಾನಸ್ ಮಿಶ್ರಣದಿಂದ ಸ್ಮೂಥಿಯನ್ನು ತಯಾರಿಸಿ. ಇದರಲ್ಲಿ ಅಗತ್ಯವಾದ ಕೆಫೀನ್‍ಅನ್ನು ಪಡೆದುಕೊಳ್ಳಬೇಕು.

ಸ್ಪ್ರಿಂಗ್‍ಡಿಟಾಕ್ಸ್ ಗ್ರೀನ್‍ಸ್ಮೂಥಿ

ಸಿಲಾಂಟ್ರೋ, ಜೇನು, ಶುಂಠಿ ಮತ್ತು ಅನಾನಸ್ ಮಿಶ್ರಣವನ್ನು ರುಬ್ಬಿದರೆ ಆರೋಗ್ಯಕರ ಸ್ಮೂಥಿ ಸಿದ್ಧವಾಗುವುದು. ಇದರಿಂದ ಅಗತ್ಯ ಕೆಫೀನ್ ಪಡೆದುಕೊಳ್ಳಬಹುದು.

ಅಗಸೆ ಮತ್ತು ಓಟ್ಸ್ ಸ್ಮೂಥಿ

ಅಗಸೆ ಮತ್ತು ಓಟ್‍ನ ಮಿಶ್ರಣವನ್ನು ರುಬ್ಬಿಕೊಂಡರೆ ಆರೋಗ್ಯಕರ ಸ್ಮೂಥಿ ಸಿದ್ಧವಾಗುವುದು.

vegetable smoothiee

ಪೀಚಿ ಗ್ರೀನ್ ಪ್ರೋಟೀನ್ ಸ್ಮೂಥಿ

ಈ ಸ್ಮೂಥಿಯಲ್ಲಿ 31 ಗ್ರಾಂ. ಫೈಬರ್‍ಅನ್ನು ಹೊಂದಿರುತ್ತದೆ. ಬೆಳಗಿನ ಉಪಹಾರಕ್ಕೆ ಅಥವಾ ವ್ಯಾಯಾಮದ ನಂತರ ಸೇವಿಸಲು ಉತ್ತಮವಾದದ್ದು. ಇದಕ್ಕೆ ಅನಾನಸ್ ಅಥವಾ ಪೀಚ್ ಹಣ್ಣನ್ನು ಸೇರಿಸಿದರೆ ಸಿಹಿ ಹೆಚ್ಚುವುದು.

ಕೇಲ್ ಪಿನಾ ಕೊವಡೊ ಸ್ಮೂಥಿ

ಇವೆರಡರ ಮಿಶ್ರಣದಿಂದ ರುಚಿಕರ ಸ್ಮೂಥಿಯನ್ನು ತಯಾರಿಸಬಹುದು. ನೀವು ಇದನ್ನು ಸುಮಾರು ಎರಡು ದಿನಗಳ ವರೆಗೆ ಫ್ರಿಜ್‍ನಲ್ಲಿ ಇಡಬಹುದು.

ಗ್ರೀನ್ ಮಾನ್ಸ್ಟರ್ ಶೇಕ್

ಈ ಪಾನೀಯದಲ್ಲಿ ಸಮೃದ್ಧವಾದ ಪೊಟ್ಯಾಸಿಯಂ ಇರುತ್ತದೆ. ಇದು ಸ್ನಾಯುಗಳ ಆರೋಗ್ಯ ವೃದ್ಧಿಸಿ, ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ.

ಹಸಿರು ಪ್ರೋಟೀನ್ ಸ್ಮೂಥಿ

ಹಸಿರು ಪ್ರೋಟೀನ್ ಸ್ಮೂಥಿಯಲ್ಲಿ ವಿಟಮಿನ್-ಕೆ, ಪ್ರೋಟೀನ್ ಅಂಶವು ಹೆಚ್ಚಾಗಿರುತ್ತದೆ. ಈ ಸ್ಮೂಥಿಗೆ ಬಾಳೆಹಣ್ಣನ್ನು ಸೇರಿಸಬಹುದು.

ವೆನಿಲ್ಲಾ ಮ್ಯಾಚಾ ಪ್ರೋಟೀನ್ ಸ್ಮೂಥಿ

ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಈ ಸ್ಮೂಥಿ ಹಸಿರು ಚಹಾಕ್ಕಿಂತ ಹೆಚ್ಚು ಕಹಿ ಇರುತ್ತದೆ. ಇದರಲ್ಲಿ ಬಾಳೆಹಣ್ಣು, ವೆನಿಲಾ ಸಾರ, ಬಾದಾಮಿ ಹಾಲಿನ ಕೆನೆಯ ಅಂಶಗಳು ಸಹ ಇರುತ್ತವೆ.

ಮೆಟಾ ಪಿಯರ್ ಗ್ರೀನ್‍ಪ್ರೋಟೀನ್ ಸ್ಮೂಥಿ

ಈ ಸ್ಮೂಥಿಯ ಉತ್ಪನ್ನ ಸೂಪರ್ ಮಾರ್ಕೇಟ್‍ಗಳಲ್ಲಿ ಲಭ್ಯವಿದೆ. ಗ್ರೀನ್ ಟೀ ತಯಾರಿಸುವ ವಿಧಾನದಲ್ಲೇ ಇದನ್ನು ತಯಾರಿಸಬೇಕು. ಇದು ದೇಹಕ್ಕೆ ಅಗತ್ಯವಾದ ಶಕ್ತಿ ವರ್ಧಕವನ್ನು ನೀಡುತ್ತದೆ.

papaya smoothie

ಪಪ್ಪಾಯಿ ಸ್ಮೂಥಿ

ಪಪ್ಪಾಯಿ ತಿನ್ನುವ ಮತ್ತೊಂದು ವಿಧಾನವೆಂದರೆ ಪಪ್ಪಾಯಿಯ ಸ್ಮೂಥಿ ಮಾಡಿಕೊಳ್ಳಬೇಕು. ಆದರೆ ಇದಕ್ಕೆ ಕೊಬ್ಬು ರಹಿತ ಹಾಲನ್ನು ಸೇರಿಸಬೇಕು. ಸ್ಮೂಥಿ ನಿಮ್ಮ ಹಸಿವನ್ನು ಆರೋಗ್ಯಕರ ರೀತಿಯಲ್ಲಿ ನಿಯಂತ್ರಿಸುವುದು ಮತ್ತು ದೇಹದಲ್ಲಿ ಹೆಚ್ಚುವರಿಯಾಗಿ ಕೊಬ್ಬು ಶೇಖರಣೆಯಾಗದಂತೆ ತಡೆಯುವುದು.

For Quick Alerts
ALLOW NOTIFICATIONS
For Daily Alerts

    English summary

    Tired Of Eating Vegetables? Try this Green Smoothies

    Getting the greens into your diet is the first thing that you need to do to your body. But eating out, living away from home, etc., can get on the way of you eating the right number of veggies or leafy greens in a day. Getting the greens into your diet is the first thing that you need to do to your body. But eating out, living away from home, etc., can get on the way of you eating the right number of veggies or leafy greens in a day. There are several health benefits of green smoothies that will help you out. Read further to know about some of the best green smoothies
    Story first published: Wednesday, November 8, 2017, 23:31 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more