ಮಕ್ಕಳನ್ನೇ ಟಾರ್ಗೆಟ್ ಮಾಡುವ ಗಂಟಲಿನಲ್ಲಿ ಕಾಣಿಸಿಕೊಳ್ಳುವ ಬ್ಯಾಕ್ಟೀರಿಯ!

By: manu
Subscribe to Boldsky

ಉತ್ತರ ಪ್ರದೇಶದಲ್ಲಿ ಮಕ್ಕಳ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕೆಲವೊಂದು ವೈದ್ಯಕೀಯ ನಿರ್ಲಕ್ಷ್ಯದಿಂದ ಹೀಗೆ ಆಗುತ್ತಾ ಇರುತ್ತದೆ. ಆದರೆ ಮಕ್ಕಳ ಬಗ್ಗೆ ಪೋಷಕರು ತುಂಬಾ ಎಚ್ಚರಿಕೆ ವಹಿಸಬೇಕು. ಗಂಟಲಿನಲ್ಲಿ ಕಾಣಿಸಿಕೊಳ್ಳುವ ಬ್ಯಾಕ್ಟೀರಿಯಾವು ಮಕ್ಕಳ ಗಂಟು ಅಥವಾ ಎಲುಬಿನಲ್ಲಿ ಸೋಂಕಿಗೆ ಕಾರಣವಾಗುವುದು. ಇದರಿಂದ ಮಗುವಿನ ಆರೋಗ್ಯ ಕೆಡಬಹುದು ಮತ್ತು ಸಾವು ಸಂಭವಿಸಬಹುದು ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.

ಬ್ಯಾಕ್ಟೀರಿಯಾ ಕಿಂಗ್ಜೆಲ್ಲಾ ಕಜೆ ಎನ್ನುವುದು ಮಕ್ಕಳ ಗಂಟಲಿನಲ್ಲಿ ಕಾಣಿಸಿಕೊಳ್ಳುವುದು. ಇದು ಎಲುಬು ಮತ್ತು ಗಂಟಿನ ಸೋಂಕಿಗೆ ಸಂಬಂಧ ಹೊಂದಿದೆ ಎಂದು ಹೇಳಲಾಗುತ್ತಿದೆ. ಹಿಂದೆ ಈ ಸೋಂಕಿಗೆ ಸ್ಟ್ರೆಪ್ಟೋಕೊಕಸ್ ಮತ್ತು ಹೈಮೋಫಿಲಸ್ ಬ್ಯಾಕ್ಟೀರಿಯಾಗಳು ಕಾರಣವಾಗಿತ್ತು ಎಂದು ನಂಬಲಾಗಿದೆ. ಇದನ್ನು ಆ್ಯಂಟಿಬಯೋಟಿಕ್ ಮತ್ತು ಶಸ್ತ್ರಚಿಕಿತ್ಸೆ ಮೂಲಕ ನಿವಾರಣೆ ಮಾಡಲಾಗುತ್ತಿತ್ತು.

throat pain

ಈ ಸೋಂಕಿಗೆ ಕಾರಣವಾಗುವ ಬ್ಯಾಕ್ಟೀರಿಯಾದ ಪತ್ತೆ ಮಾಡಲು ಕಳೆದ ವರ್ಷದಿಂದ ತುಂಬಾ ಸೂಕ್ಷ್ಮ ತಂತ್ರಜ್ಞಾನವನ್ನು ಬಳಸಲಾಗಿದೆ. 6 ತಿಂಗಳಿಂದ 4 ವರ್ಷದವರೆಗಿನ ಸುಮಾರು 77 ಮಂದಿ ಮಕ್ಕಳನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಇವರೆಲ್ಲರಿಗೂ ಮೂಳೆಯ ಸೋಂಕು ಕಾಣಿಸಿಕೊಂಡಿತ್ತು. ಈ ಸೋಂಕಿಗೆ ಸುಮಾರು 65 ಮಕ್ಕಳಿಗೆ ಮೂಳೆ ಮತ್ತು ಗಂಟಿನ ಸೋಂಕು ಇರುವುದು ದೃಢವಾಗಿತ್ತು. ಕಿಂಗ್ಜೆಲ್ಲಾ ಕಜೆ ಬ್ಯಾಕ್ಟೀರಿಯಾದ ಸೋಂಕಿಗೆ ಗುರಿಯಾದವರು ಒಂದು ವರ್ಷದ ಮೇಲ್ಪಟ್ಟ ಮಕ್ಕಳಾಗಿದ್ದರು. 

ಗಂಟಲು ನೋವೇ? ಈ ಆಹಾರಗಳನ್ನು ದೂರವಿಡಿ!

ಸೋಂಕು ಕಾಣಿಸಿಕೊಂಡಿರುವ ಶೇ.70ರಷ್ಟು ಮಕ್ಕಳ ಗಂಟಲಿನಲ್ಲಿ ಈ ಬ್ಯಾಕ್ಟೀರಿಯಾವು ಪತ್ತೆಯಾಗಿದೆ. ಶೇ.6ರಷ್ಟು ಮಕ್ಕಳಲ್ಲಿ ಈ ಬ್ಯಾಕ್ಟೀರಿಯಾ ಕಾಣಿಸಿಲ್ಲ ಎಂದು ಕೆನಡಾದ ಮೊಂಟ್ರೆಲಾ ವಿಶ್ವವಿದ್ಯಾನಿಲಯದ ಜೋಸೆಲಿನ್ ಗ್ರ್ಯಾವೆಲ್ ತಿಳಿಸಿದರು. ಈ ಫಲಿತಾಂಶವು ಯಾಕೆ ಪ್ರಾಮುಖ್ಯತೆ ಪಡೆದಿದೆ ಎಂದರೆ ಹಿಂದಿನ ಅಧ್ಯಯನಗಳಲ್ಲಿ ಅಜ್ಞಾತ ರೋಗಕಾರಕಗಳ ಪ್ರಮಾಣವು ಹೆಚ್ಚಾಗಿತ್ತು.

bacteria

ತುಂಬಾ ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಇದನ್ನು ಪತ್ತೆ ಹಚ್ಚಿರುವ ಕಾರಣ ಕಿಂಗ್ಜೆಲ್ಲಾ ಕಜೆ ಬ್ಯಾಕ್ಟೀರಿಯಾ ಸಾಮಾನ್ಯವೆನ್ನುವಂತಾಗಿದೆ. ಮಕ್ಕಳಲ್ಲಿ ಎಲುಬು ಮತ್ತು ಗಂಟಿನ ಸೋಂಕಿಗೆ ಇದು ಪ್ರಮುಖ ಕಾರಣವಾಗಿದೆ ಎಂದು ಅಧ್ಯಯನಗಳು ಹೇಳಿವೆ. ಅಧ್ಯಯನ ವರದಿಯನ್ನು ಕೆನಡಿಯನ್ ಮೆಡಿಕಲ್ ಅಸೋಸಿಯೇಷನ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

English summary

Throat-bacteria-sign-of-joint-infection-in-kids

Presence of a bacterium in children's throat may indicate a bone and joint infection that can have devastating effects on mobility and even cause death, scientists say. In a new study, researchers found that the presence of the bacterium Kingella kingae in children's throats was strongly linked to bone and joint infection with the same bacterium.
Subscribe Newsletter