Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ನೈಸರ್ಗಿಕ ವಿಧಾನದಿಂದ ಎರಡೇ ತಿಂಗಳಲ್ಲಿ ಬೊಜ್ಜು ಕರಗುವುದು ಖಚಿತ
ಇಂದಿನ ದಿನಗಳಲ್ಲಿ ಆರೋಗ್ಯ ಮತ್ತು ದೇಹದಾರ್ಢ್ಯತೆ ಎಂಬ ಪದಗಳಿಗೆ ಹಿಂದಿಗಿಂತಲೂ ಹೆಚ್ಚಿನ ಮಹತ್ವ ದೊರಕಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಬಗ್ಗೆ ಹೆಚ್ಚು ಜಾಗರೂಕರಾಗುತ್ತಿದ್ದಾರೆ. ಸ್ಥೂಲಕಾಯ ಆರೋಗ್ಯದ ಮಾನದಂಡವಲ್ಲ ಎಂಬುದನ್ನು ಮನಗಂಡವರು ಸ್ಥೂಲಕಾಯವನ್ನು ಕಳೆದುಕೊಳ್ಳುವತ್ತ ಹಾಗೂ ಹುರಿಗಟ್ಟಿದ ಸ್ನಾಯುಗಳನ್ನು ಪಡೆಯುವತ್ತ ಚಿತ್ತ ಹರಿಸುತ್ತಿದ್ದಾರೆ. ಏಕೆಂದರೆ ಸ್ಥೂಲಕಾಯ ಮುಂದುವರೆಸಿದಷ್ಟೂ ಅನಾರೋಗ್ಯ ಹೆಚ್ಚು ಹೆಚ್ಚು ಹತ್ತಿರಾಗುವುದು ವಾಸ್ತವವಾಗಿದೆ.
ಹುರಿಗಟ್ಟಿದ ಸ್ನಾಯು, ಸಪಾಟಾದ ಹೊಟ್ಟೆ ಹಾಗೂ ದೃಢವಾದ ಶರೀರ ಯಾರಿಗೆ ಬೇಡ? ವಿಶೇಷವಾಗಿ ಸಪಾಟಾದ ಹೊಟ್ಟೆ ಪಡೆಯುವುದು ಎಲ್ಲರ ಕನಸಾಗಿದ್ದು ಸಿನೇಮಾ ತಾರೆಯರೂ ಈ ಬಗ್ಗೆ ಹೆಚ್ಚಿನ ಅಸ್ಥೆಯನ್ನು ವಹಿಸುತ್ತಿದ್ದಾರೆ ಹಾಗೂ ಇತರರಿಗೂ ಮಾದರಿಯಾಗುತ್ತಿದ್ದಾರೆ. ಮುಂದೆ ಬಂದಿರುವ ಹೊಟ್ಟೆ ಇಂದಿನ ದಿನಗಳಲ್ಲಿ ಅನಾರೋಗ್ಯದ ಸಂಕೇತ ಮಾತ್ರವಲ್ಲ, ಸೌಂದರ್ಯ ಕುಂದಿಸುವ ಕೇಂದ್ರವೂ ಆಗಿದೆ.

ಇಂದಿನ ದಿನಗಳಲ್ಲಿ ದೇಹದ ಇತರ ಭಾಗದಲ್ಲಿ ಕೊಬ್ಬು ಹೆಚ್ಚಿರದೇ ಇದ್ದರೂ ಹೊಟ್ಟೆಯ ಮತ್ತು ಸೊಂಟದ ಸುತ್ತಲೇ ಹೆಚ್ಚು ಕೊಬ್ಬು ತುಂಬಿರುವುದು ವಯಸ್ಸು ಮತ್ತು ಅಂತಸ್ತು ಎಂಬ ತಾರತಮ್ಯ ತೋರದೇ ಎಲ್ಲರಲ್ಲಿಯೂ ಕಂಡುಬರುತ್ತಿದೆ. ಅದರಲ್ಲೂ ಇಂದು ಲಭ್ಯವಿರುವ ಹೆಚ್ಚಿನ ಉದ್ಯೋಗಗಳು ಕುಳಿತು ಮಾಡುವ ಉದ್ಯೋಗಗಳಾಗಿದ್ದು ಹೊಟ್ಟೆ ಹೆಚ್ಚಿಸಲು ಪರೋಕ್ಷ ಕಾರಣವೂ ಆಗಿದೆ.
ಹೊಟ್ಟೆಯ ಗಾತ್ರ ಹೆಚ್ಚುವ ಮೂಲಕ ಸ್ಥೂಲಕಾಯ, ಹೃದಯ ಸಂಬಂಧಿ ತೊಂದರೆಗಳು, ಮಧುಮೇಹ, ಹೃದಯ ಸ್ತಂಭನ ಮತ್ತು ಕ್ಯಾನ್ಸರ್ ಸಹಿತ ಹಲವು ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ. ಆದರೆ ಹೊಟ್ಟೆಯನ್ನು ಕರಗಿಸುವುದು ಅಷ್ಟು ಸುಲಭವಲ್ಲ. ವಾಸ್ತವದಲ್ಲಿ ದೇಹದ ಯಾವುದೇ ಕೊಬ್ಬಿಗಿಂತಲೂ ಹೊಟ್ಟೆಯ ಕೊಬ್ಬು ಕರಗಿಸುವುದೇ ಎಲ್ಲಕ್ಕಿಂತ ಕಷ್ಟ ಹಾಗೂ ಕಟ್ಟ ಕಡೆಯದಾಗಿ ಕರಗುವ ಕಾರಣ ಹೆಚ್ಚಿನ ಸಮಯ ಕಬಳಿಸುವ ಕ್ರಿಯೆಯೂ ಆಗಿದೆ. ಆದರೆ ಇದನ್ನು ಎರಡೇ ತಿಂಗಳಲ್ಲಿ ಕರಗಿಸುವ ಸಮರ್ಥ ವಿಧಾನವೊಂದಿಗೆ, ಬನ್ನಿ, ಇದರ ಬಗ್ಗೆ ಅರಿಯೋಣ:
ಅಗತ್ಯವಿರುವ ಸಾಮಾಗ್ರಿಗಳು:
ಚಿಯಾ ಕಾಳುಗಳು: ಎರಡುದೊಡ್ಡ ಚಮಚ,
ಕೊಬ್ಬು ರಹಿತ ಮೊಸರು: ಎರಡು ದೊಡ್ಡ ಚಮಚ
ಈ ವಿಧಾನವನ್ನು ಸರಿಯಾಗಿ ಅನುಸರಿಸಿದರೆ ಎರಡೇ ತಿಂಗಳಲ್ಲಿ ಕೊಬ್ಬು ಕರಗುತ್ತದೆ ಹಾಗೂ ಸ್ನಾಯುಗಳು ಹುರಿಗಟ್ಟುತ್ತವೆ. ಆದರೆ ಈ ಆಹಾರವನ್ನು ಮಾತ್ರ ಸೇವಿಸಿದರೆ ಸಾಲದು, ಇದರೊಂದಿಗೆ ನಿಮ್ಮ ನಿತ್ಯದ ಜೀವನಶೈಲಿಯಲ್ಲಿ ಕೆಲವಾರು ಬದಲಾವಣೆಗಳನ್ನೂ ಮಾಡಬೇಕಾಗುತ್ತದೆ.
ಆರೋಗ್ಯಕರ ಆಹಾರಸೇವನೆ, ಎಣ್ಣೆ ಸೇವನೆಯನ್ನು ನಿಲ್ಲಿಸುವುದು, ಸಕ್ಕರೆ, ಕೆಂಪು ಮಾಂಸದ ಸೇವನೆ ಮಿತಗೊಳಿಸುವುದು, ದಿನಕ್ಕೆ ಕನಿಷ್ಟ ನಲವತ್ತು ನಿಮಿಷ ವ್ಯಾಯಾಮ ಮಾಡುವುದು, ಹೆಚ್ಚು ಕಾಲ ಕುಳಿತುಕೊಳ್ಳದೇ ಇರುವುದು, ಹೊಟ್ಟೆಯ ಸ್ನಾಯುಗಳಿಗೆ ಸೆಳೆತ ನೀಡುವ ವ್ಯಾಯಾಮಗಳಿಗೆ ಹೆಚ್ಚಿನ ಒತ್ತು ನೀಡುವುದು ಮೊದಲಾದವುಗಳನ್ನು ನಿಮ್ಮ ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ರಜಾದಿನಗಳ ಸಹಿತ!
ಅಷ್ಟೇ ಅಲ್ಲ, ನಿಯಮಿತವಾಗಿ ವೈದ್ಯರ ಬಳಿ ತೆರಳಿ ತಪಾಸಣೆಗೊಳಪಡುವುದು ಹಾಗೂ ಕೊಬ್ಬಿನ ಪ್ರಮಾಣದಿಂದ ದೇಹದ ಮೇಲೆ ಆಗುತ್ತಿರುವ ತೊಂದರೆಗಳ ಬಗ್ಗೆ ವಿವರ ಪಡೆದುಕೊಳ್ಳುವುದೂ ಅಗತ್ಯವಾಗಿದೆ. ಚಿಯಾ ಕಾಳುಗಳಲ್ಲಿ ಒಮೆಗಾ-೩ ಕೊಬ್ಬಿನ ಆಮ್ಲಗಳು ಹಾಗೂ ಆಂಟಿ ಆಕ್ಸಿಡೆಂಟುಗಳಿದ್ದು ಜೀವರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುತ್ತದೆ ಹಾಗೂ ಹೊಟ್ಟೆಯ ಕೊಬ್ಬನ್ನು ಇಳಿಸಲು ನೆರವಾಗುತ್ತದೆ. ಕೊಬ್ಬು ರಹಿತ ಮೊಸರಿನಲ್ಲಿ ಪ್ರೋಟೀನು ಹೆಚ್ಚಾಗಿದ್ದು ಸ್ನಾಯುಗಳ ಸೆಳೆತ ಹೆಚ್ಚಿಸಲು ನೆರವಾಗುತ್ತದೆ. ವಿಶೇಷವಾಗಿ ಹೊಟ್ಟೆಯ ಸ್ನಾಯುಗಳು ಸೆಳೆತಗೊಳ್ಳುವ ಮೂಲಕ ಕೊಬ್ಬು ಕರಗಲು ನೆರವಾಗುತ್ತದೆ.
ತಯಾರಿಕಾ ವಿಧಾನ:
ಎರಡೂ ಸಾಮಾಗ್ರಿಗಳನ್ನು ಒಂದು ಬೋಗುಣಿಯಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಪ್ರತಿದಿನ ಬೆಳಿಗ್ಗೆ ಉಪಾಹಾರದ ಬಳಿಕ ಸತತವಾಗಿ ಎರಡು ತಿಂಗಳು ಸೇವಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


