Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆಳಗಿನ ತಿಂಡಿಗೆ ಅವಲಕ್ಕಿ ತಿಂತೀರಾ? ಹಾಗಿದ್ರೆ ಇದು ಒಳ್ಳೆಯದು ನೋಡಿ...
ಉತ್ತಮ ಆರೋಗ್ಯ ನಮ್ಮದಾಗಬೇಕೆಂದರೆ "ರಾಜನಂತೆ ಬೆಳಗ್ಗೆಯ ತಿಂಡಿ, ರಾಣಿಯಂತೆ ಮಧ್ಯಾಹ್ನದ ಊಟ ಹಾಗೂ ಬಡವನಂತೆ ರಾತ್ರಿಯ ಊಟ' ಮಾಡಬೇಕು. ಆಗಲೇ ಜೀರ್ಣಕ್ರಿಯೆಯೂ ಸರಾಗವಾಗಿ ಆಗುವುದು. ಜೊತೆಗೆ ದೇಹಕ್ಕೆ ಬೇಕಾದ ಪೋಷಕಾಂಶ ದೊರೆಯುವುದು. ಹೊತ್ತಿಗೆ ಸರಿಯಾಗಿ ಹೊಟ್ಟೆ ತುಂಬಿಸಿಕೊಂಡರೆ ಸಾಲದು. ಅದು ಯಾವ ಬಗೆಯ ತಿಂಡಿ/ಊಟ ಎನ್ನುವುದು ಸಹ ಮುಖ್ಯವಾಗುತ್ತದೆ.
ಬೆಳಗ್ಗೆ ತಿನ್ನುವ ಉಪಹಾರ ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕಿಂತ ಹೆಚ್ಚು ಪೋಷಕಾಂಶಗಳಿಂದ ಕೂಡಿರಬೇಕಾಗುತ್ತದೆ. ಬೆಳಗ್ಗೆ ತಿನ್ನುವ ಆಹಾರವೇ ದಿನವಿಡೀ ನಮ್ಮ ದೇಹಕ್ಕೆ ಬೇಕಾಗುವ ಪೋಷಕಾಂಶವನ್ನು ಒದಗಿಸುತ್ತದೆ. ಹಾಗಾಗಿ ಬೆಳಗಿನ ತಿಂಡಿ ಆರೋಗ್ಯ ಪೂರ್ಣವಾಗಿರಬೇಕು. ಅಂತಹ ತಿಂಡಿಗಳಲ್ಲಿ ಅವಲಕ್ಕಿಯೂ (ಗೊಜ್ಜವಲಕ್ಕಿ) ಒಂದು. ಮುಂಜಾನೆಯ ತಿಂಡಿಗೆ ಅವಲಕ್ಕಿಯನ್ನು ತಿನ್ನುವುದರಿಂದ ಯಾವೆಲ್ಲಾ ಉಪಯೋಗವಾಗುವುದು ಎನ್ನುವುದನ್ನು ತಿಳಿಯೋಣ ಬನ್ನಿ...

ದೇಹದ ತೂಕ ಇಳಿಸಿಕೊಳ್ಳಲು
ಅಂಟು ಮುಕ್ತ ಅವಲಕ್ಕಿಯು ಮುಂಜಾನೆಯ ತಿಂಡಿಗೆ ಉತ್ತಮವಾದದ್ದು. ಅತಿಯಾದ ತೂಕ ಇರುವವರು ಇದನ್ನು ಸೇವಿಸುವುದರಿಂದ ತೂಕ ಇಳಿಸಬಹುದು.

ಸಾಕಷ್ಟು ಶಕ್ತಿಯನ್ನು ಪೂರೈಸುತ್ತದೆ
ನೀವು ಮು೦ದಿನ ಭೋಜನವನ್ನು ಸೇವಿಸುವವರೆಗೂ ನಿಮ್ಮ ಬೆಳಗಿನ ಉಪಾಹಾರವು ದಿನದ ವೇಳೆಯ ಕೆಲಸವನ್ನು ಕೈಗೊಳ್ಳಲು ನಿಮಗೆ ಸಹಕರಿಸಬೇಕು. ಮಧ್ಯಾಹ್ನದ ಊಟದ ವೇಳೆಯಾಗುವವರೆಗೂ ನಿಮಗೆ ಶಕ್ತಿಯನ್ನು ಪೂರೈಸುವ೦ತಾಗಲು ಅವಲಕ್ಕಿ (ಪೋಹಾ) ಯು ಅ೦ತಹ ಒ೦ದು ಬೆಳಗಿನ ಉಪಾಹಾರವಾಗಿರುತ್ತದೆ. ಗೊಜ್ಜವಲಕ್ಕಿಯ ಹಲವಾರು ಪ್ರಯೋಜನಗಳ ಪೈಕಿ ಇದೂ ಸಹ ಒ೦ದು.

ಕಬ್ಬಿಣಾ೦ಶದಿ೦ದ ಸ೦ಪನ್ನವಾಗಿದೆ
ಬೆಳಗಿನ ಉಪಹಾರಕ್ಕೆ ಅವಲಕ್ಕಿ ಸೇವನೆಯು ಆರೋಗ್ಯಕ್ಕೆ ಒಳ್ಳೆಯದು. ಏಕೆ೦ದರೆ, ಇದರಲ್ಲಿ ಕಬ್ಬಿಣಾ೦ಶವು ಸಾಕಷ್ಟು ಪ್ರಮಾಣದಲ್ಲಿದೆ. ಇನ್ನೊ೦ದು ರೀತಿಯಲ್ಲಿ ಹೇಳುವುದಾದರೆ, ಪ್ರತಿದಿನವೂ ನೀವು ಅವಲಕ್ಕಿಯನ್ನು ಬೆಳಗಿನ ಉಪಾಹಾರದ ರೂಪದಲ್ಲಿ ಸೇವಿಸಿದ್ದೇ ಆದರೆ, ಕಬ್ಬಿಣಾ೦ಶದ ಕೊರತೆಯಿ೦ದ ನಿಮ್ಮ ಶರೀರವನ್ನು ನೀವು ದೂರವಿರಿಸಿಕೊಳ್ಳಬಹುದು. ಅವಲಕ್ಕಿಯನ್ನು ಗರ್ಭಿಣಿಯರು ಹಾಗೂ ಮಕ್ಕಳೂ ಕೂಡ ಸೇವಿಸಬಹುದು. ಕಬ್ಬಿಣಾ೦ಶವು ಶರೀರದ ಪಾಲಿಗೆ ಒ೦ದು ಪ್ರಮುಖವಾದ ಖನಿಜವಾಗಿದೆ. ಏಕೆ೦ದರೆ, ಕಬ್ಬಿಣದ ಅ೦ಶವು ರಕ್ತದ ಹಿಮೋಗ್ಲೋಬಿನ್ ಮಟ್ಟಗಳನ್ನು ಸಹಜ ಸ್ಥಿತಿಯಲ್ಲಿರಿಸಲು ನೆರವಾಗುತ್ತದೆ.

ರಕ್ತ ಕಣಗಳ ಸಂಖ್ಯೆ ವೃದ್ಧಿ
ಅವಲಕ್ಕಿಯಲ್ಲಿ ಸಮೃದ್ಧವಾದ ಕಬ್ಬಿಣದಂಶ ಇರುವುದರಿಂದ ರಕ್ತ ಕಣಗಳ ಸಂಖ್ಯೆ ವೃದ್ಧಿಯಾಗುತ್ತದೆ. ಜೊತೆಗೆ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.

ಮಧುಮೇಹಿಗಳಿಗೆ ಉತ್ತಮ ಉಪಹಾರ
ಇದರಲ್ಲಿ ವಿಟಮಿನ್ ಬಿ1 ಇರುವುದರಿಂದ ಮಧುಮೇಹಿಗಳಿಗೆ ಉತ್ತಮ ಉಪಹಾರದ ಆಯ್ಕೆ ಇದು. ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಸಮತೋಲನದಲ್ಲಿರಿಸುತ್ತದೆ.

ಸುಲಭವಾಗಿ ಜೀರ್ಣವಾಗುವುದು
ಬೆಳಗಿನ ವೇಳೆ ನೀವು ಸೇವಿಸಿದ ಉಪಾಹಾರವು ದಿನವಿಡೀ ನಿಮಗೆ ಹೊಟ್ಟೆಯುಬ್ಬರದ ಅನುಭವವನ್ನು ನೀಡುವ೦ತಿರಬಾರದು. ಹೀಗಾಗಿ, ಅವಲಕ್ಕಿಯನ್ನು ಬೆಳಗ್ಗೆ ಉಪಹಾರದ ರೂಪದಲ್ಲಿ ಸೇವಿಸುವುದು ಒ೦ದು ಉತ್ತಮ ಉಪಾಯವಾಗಿರುತ್ತದೆ.

ಬೇಗ ಹಸಿವಾಗುವುದಿಲ್ಲ
ಬೇಗ ಹಸಿವಾಗದಂತೆ ನೋಡಿಕೊಳ್ಳುವ ಉಪಹಾರ ಇದು. ಇದರ ಸೇವನೆಯು ಆರಾಮದಾಯಕ ಅನುಭವ ನೀಡುವುದು.

ಪ್ರೋಟೀನ್ ಸಮೃದ್ಧವಾಗಿದೆ
ಪ್ರೋಟೀನ್ ಸಮೃದ್ಧವಾಗಿರುವುದರಿಂದ ಸ್ನಾಯುಗಳ ದುರಸ್ತಿ ಹಾಗೂ ಆರೋಗ್ಯ ರಕ್ಷಣೆಗೆ ಸಹಾಯವಾಗುವುದು.

ಮೊಸರಿನ ಜೊತೆ ಸೇವಿಸಿದರೆ ಒಳ್ಳೆಯದು
ಮೊಸರಿನ ಜೊತೆ ಅವಲಕ್ಕಿಯನ್ನು ಬೆರೆಸಿ ತಿನ್ನುವುದರಿಂದ ಮೂಳೆಗೆ ಅಗತ್ಯವಿರುವ ಕ್ಯಾಲ್ಸಿಯಂ ದೊರೆಯುತ್ತದೆ.

ಒಟ್ಟಾರೆ ಪೋಷಕಾ೦ಶಭರಿತವಾಗಿದೆ...
ಅವಲಕ್ಕಿಯು ಒದಗಿಸುವ ವಿಟಮಿನ್‌ಗಳು ಹಾಗೂ ಖನಿಜಾ೦ಶಗಳ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ನೀವು ಅಜ್ಜವಲಕ್ಕಿಗೆ ಯಾವುದೇ ತರಕಾರಿಯನ್ನೂ ಕೂಡ ಸೇರಿಸಿಕೊಳ್ಳಬಹುದು. ಇದು ಪ್ರೋಟೀನ್ ನ ಪ್ರಮಾಣವನ್ನು ಹೆಚ್ಚಿಸಿಕೊಳ್ಳಲು ಹಾಗೂ ಅದರ ಸ್ವದವನ್ನು ಮತ್ತಷ್ಟು ಹೆಚ್ಚಿಸಲು, ಅದಕ್ಕೆ ಕಡಲೇಬೀಜ ಹಾಗೂ ಮೊಳಕೆಬರಿಸಿದ ಕಾಳುಗಳನ್ನೂ ಸಹ ಸೇರಿಸಿಕೊಳ್ಳಬಹುದು. ಪ್ರೋಟೀನ್ ನಿ೦ದ ಸಮೃದ್ಧವಾದ ಆಹಾರಪದಾರ್ಥವನ್ನಾಗಿ ಅವಲಕ್ಕಿಯನ್ನು ಪರಿವರ್ತಿಸಿಕೊಳ್ಳಲು
ಕೆಲವರು ಅದಕ್ಕೆ ಮೊಟ್ಟೆಗಳನ್ನೂ ಸಹ ಸೇರಿಸಿಕೊಳ್ಳುತ್ತಾರೆ.ನಿಮ್ಮ ಮಕ್ಕಳ ಶಾಲೆಯ ಬುತ್ತಿಯಲ್ಲಿಯೂ ಕೂಡ ಅವಲಕ್ಕಿಯನ್ನು ಪ್ಯಾಕ್ ಮಾಡಿಕೊಡಬಹುದು.



Click it and Unblock the Notifications











