For Quick Alerts
ALLOW NOTIFICATIONS  
For Daily Alerts

ಬಲವಂತವಾಗಿ ಆ ಕೆಲಸ ನಿಲ್ಲಿಸಿ ಬಿಟ್ಟರೆ, ಆರೋಗ್ಯಕ್ಕೆ ಬಹಳ ತೊಂದರೆ ಇದೆಯಂತೆ!

By Arshad
|

ಸಮಾಗಮ ನಿಸರ್ಗ ನೀಡಿರುವ ವರವಾಗಿದ್ದು ಉತ್ತಮ ಆರೋಗ್ಯಕ್ಕೆ ಮೂಲವಾಗಿದೆ. ಯಾವುದೋ ಕಾರಣಕ್ಕೆ ಒಮ್ಮಿಂದೊಮ್ಮೇ ಸಮಾಗಮವನ್ನು ನಿಲ್ಲಿಸಿಬಿಟ್ಟರೆ ಇದರಿಂದ ದೈಹಿಕ ಹಾಗೂ ಮಾನಸಿಕವಾದ ಆಘಾತಗಳನ್ನು ಎದುರಿಸಬೇಕಾಗುತ್ತದೆ ಹಾಗೂ ದೇಹದಲ್ಲಿ ಹಲವಾರು ಬದಲಾವಣೆಗಳು ಕಂಡುಬರುತ್ತವೆ.

ಸಮಾಗಮವೇ ಬೇಡ ಎಂದ ನಿರ್ಧಾರ ತಳೆದ ಬಳಿಕ ಕೆಲವರಿಗೆ ನಿಜವಾಗಿಯೂ ಕಾಮಸಾಕ್ತಿ ಇಲ್ಲವಾಗಬಹುದು, ಆದರೆ ಹೆಚ್ಚಿನವರಲ್ಲಿ ಇದು ಹೆಚ್ಚುವುದನ್ನು ಕಂಡುಕೊಳ್ಳಲಾಗಿದೆ. ಬಲವಂತವಾಗಿ ಕಾಮಹಸಿವನ್ನು ತಣಿಸದಿರುವವರು ಜೀವನದಲ್ಲಿ ಉತ್ಸಾಹವನ್ನೂ ಕಳೆದುಕೊಳ್ಳುತ್ತಾ ಹೋಗುತ್ತಾರೆ.

ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಎಂಟು ಆಹಾರ ಪದಾರ್ಥಗಳು

ಕೆಲವರಲ್ಲಿ ಕಾಲಕ್ರಮೇಣ ಈ ನಿರಾಸಕ್ತಿ ಒಗ್ಗಿಕೊಂಡರೆ ಕೆಲವರಲ್ಲಿ ಅತಿಯಾಗಿ ಭುಗಿಲೇಳಬಹುದು. ಕೆಲವರು ತಮ್ಮ ಜೀವನದ ಗುರಿಯತ್ತ ಹೆಚ್ಚು ಗಮನ ನೀಡುವ ಮೂಲಕ ಕಾಮಾಸಕ್ತಿ ಮನದಲ್ಲಿ ಮೂಡದಂತೆ ನೋಡಿಕೊಂಡರೆ ಕೆಲವು ಸಂದರ್ಭಗಳಲ್ಲಿ ಕಾಮಾಸಕ್ತಿ ಇಷ್ಟೊಂದು ಹೆಚ್ಚುತ್ತದೆಂದರೆ ದಿನದ ಎಚ್ಚರಿದ್ದಷ್ಟೂ ಹೊತ್ತು ಕಾಮದ ಬಗೆಗಿನ ಯೋಚನೆಗಳೇ ಮನದಲ್ಲಿ ಮೂಡುತ್ತಾ ಇರುತ್ತವೆ. ಇದನ್ನೇ ಹಿರಿಯರು 'ಸದಾಶಿವನಿಗೆ ಸದಾ ಅದೇ ಧ್ಯಾನ' ಎಂದು ಕರೆದಿದ್ದಾರೆ. ಸಮಾಗಮವೆನ್ನುವುದು ನಿಸರ್ಗದ ನಿಯಮವಾಗಿದ್ದು ಇದು ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಪೂರಕವಾಗಿದೆ ಹಾಗೂ ಪರಸ್ಪರ ಅನ್ಯೋನ್ಯತೆ, ವಿಶ್ವಾಸಗಳಿಗೂ ಮೂಲವಾಗಿದೆ.


ಲೈಂಗಿಕ ಕ್ರಿಯೆ ನಡೆಸಿದ ಮೇಲೆ ಮೂತ್ರ ವಿಸರ್ಜನೆ ಮಾಡಲೇಬೇಕು!

ಕಾಮಹಸಿವನ್ನು ತಣಿಸುವ ಮೂಲಕ ಮೆದುಳಿನಲ್ಲಿ ಎಂಡಾರ್ಫಿನ್ನುಗಳೆಂಬ ರಸದೂತಗಳು ಬಿಡುಗಡೆಯಾಗುತ್ತವೆ. ಇವು ಮನಸ್ಸನ್ನು ನಿರಾಳಗೊಳಿಸುವ ರಸದೂತಗಳಾಗಿದ್ದು ಇವುಗಳಿಲ್ಲದೇ ಇದ್ದರೆ ದಿನವಿಡೀ ಖಿನ್ನತೆ ಹಾಗೂ ಮಾನಸಿಕ ಕಿರಿಕಿರಿ ಎದುರಾಗುತ್ತದೆ. ರಜೋನಿವೃತ್ತಿಯ ಸಮಯದಲ್ಲಿ ಮಹಿಳೆಯರ ಮನೋಭಾವದಲ್ಲಿ ಅಪಾರವಾದ ಏರುಪೇರಾಗಲಿಕ್ಕೂ ಇದೇ ಕಾರಣ. ಈ ಪ್ರಕ್ರಿಯೆ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ.

ಸಮೀಕ್ಷೆಗಳಿಂದ ಕಂಡುಕೊಂಡಿರುವ ಪ್ರಕಾರ ಬಲವಂತವಾಗಿ ಕಾಮದ ಹಸಿವನ್ನು ಮೆಟ್ಟಿರುವವರು ಹೆಚ್ಚಾಗಿ ಖಿನ್ನತೆ ಹಾಗೂ ಮನೋವೈಕಲ್ಯಕ್ಕೆ ಗುರಿಯಾಗುತ್ತಾರೆ. ಆದರೆ ಇದು ಸಹಾ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಿರುತ್ತದೆ. ಬಲವಂತವಾಗಿ ಕಾಮದ ಹಸಿವನ್ನು ಹತ್ತಿಕ್ಕಿದರೆ ಏನಾಗುತ್ತದೆ ಎಂಬ ಬಗ್ಗೆ ಇಂದು ಹೆಚ್ಚಿನ ಮಾಹಿತಿಗಳನ್ನು ಸಂಗ್ರಹಿಸಲಾಗಿದ್ದು ನಿಮ್ಮಲ್ಲಿರುವ ತಪ್ಪು ಗ್ರಹಿಕೆಗಳನ್ನು ಇವು ದೂರಾಗಿಸಲಿವೆ....

ಹೆಚ್ಚು ಹೆಚ್ಚಾಗಿ ಕಾಯಿಲೆಗಳು ಆವರಿಸುತ್ತವೆ

ಹೆಚ್ಚು ಹೆಚ್ಚಾಗಿ ಕಾಯಿಲೆಗಳು ಆವರಿಸುತ್ತವೆ

ಯಾವಾಗ ಹೆಚ್ಚಿನ ಸಮಯದ ಕಾಲ ಸಮಾಗಮ ನಡೆಸಿಲ್ಲವೋ ಆಗ ದೇಹದ ರೋಗ ನಿರೋಧಕ ಶಕ್ತಿ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳತೊಡಗುತ್ತದೆ. ಆಗ ಕ್ರಿಮಿಗಳಿಗೆ ಧಾಳಿ ಮಾಡಲು ಸಾಧ್ಯವಾಗುತ್ತದೆ ಹಾಗೂ ಸುಲಭವಾಗಿ ಶೀತ, ಫ್ಲೂ ಜ್ವರ ಮೊದಲಾದವು ಆವರಿಸಿಕೊಳ್ಳುತ್ತವೆ. ಆದರೆ ನಿಯಮಿತವಾಗಿ ಸಮಾಗಮವನ್ನು ನಡೆಸುತ್ತಿದ್ದರೆ ರೋಗ ನಿರೋಧಕ ಶಕ್ತಿಯೂ ಉತ್ತಮವಾಗಿರುತ್ತದೆ.

ಮಾನಸಿಕ ಒತ್ತಡಗಳು ಹೆಚ್ಚುತ್ತವೆ

ಮಾನಸಿಕ ಒತ್ತಡಗಳು ಹೆಚ್ಚುತ್ತವೆ

ನಿತ್ಯದ ಒತ್ತಡಗಳಿಂದ ಮಾನಸಿಕವಾದ ಒತ್ತಡಗಳನ್ನು ನಾವೆಲ್ಲರೂ ಅನುಭವಿಸುತ್ತೇವೆ. ನಿಯಮಿತವಾದ ಸಮಾಗಮದಿಂದ ಈ ಒತ್ತಡಗಳು ನಿವಾರಣೆಯಾಗುತ್ತವೆ ಹಾಗೂ ನಿತ್ಯದ ಜೀವನದಲ್ಲಿ ನಿರಾಳತೆಯನ್ನು ಅನುಭವಿಸಲು ಸಾಧ್ಯ.

ಮುಂದೆ ಬೇಕೆಂದರೆ ತಕ್ಷಣದ ನಿಮಿರುತನ ಸಾಧ್ಯವಾಗದಿರಬಹುದು

ಮುಂದೆ ಬೇಕೆಂದರೆ ತಕ್ಷಣದ ನಿಮಿರುತನ ಸಾಧ್ಯವಾಗದಿರಬಹುದು

ಸಮಾಗಮ ನಿಯಮಿತವಾಗಿಲ್ಲದಿದ್ದರೆ ಜನನಾಂಗಗಳಿಗೆ ಹರಿಯುವ ರಕ್ತಕ್ಕೆ ಕೆಲಸವೇ ಇಲ್ಲವಾಗಿ ಶೀಘ್ರವಾಗಿ ಹರಿಯಲು ಸಾಧ್ಯವಾಗದೇ ಇರಬಹುದು. ಇದು ಮುಂದಿನ ದಿನದಲ್ಲಿ ಯಾವಾಗಲಾದರೂ ನಿಮಿರುತನ ಬೇಕಿನಿಸಿದಾಗ ಅಸಾಧ್ಯವಾಗಿಸಬಹುದು ಹಾಗೂ ಮಹಿಳೆಯನ್ನು ಪರಾಕಾಷ್ಠೆಗೆ ಕರೆದೊಯ್ಯಲೂ ಸಾಧ್ಯವಾಗಿಸಲಾರದು.

ದಿನಗಳೆದಂತೆ ಸಮಾಗಮಕ್ಕೆ ಮನಸ್ಸೇ ಒಪ್ಪದಿರಬಹುದು

ದಿನಗಳೆದಂತೆ ಸಮಾಗಮಕ್ಕೆ ಮನಸ್ಸೇ ಒಪ್ಪದಿರಬಹುದು

ಸಮಾಗಮವನ್ನು ಬಹುಕಾಲ ನಡೆಸದೇ ಇದ್ದರೆ ದೇಹವೂ ಇದಕ್ಕೆ ಒಗ್ಗಿಬಿಡುತ್ತದೆ. ಸಮಾಗಮವೇ ಇಲ್ಲದ ಮೇಲೆ ಇದಕ್ಕೆ ಅಗತ್ಯವಿರುವ ಹಾರ್ಮೋನುಗಳ ಅಗತ್ಯವೇನಿದೆ ಎಂದು ಉತ್ಪಾದನೆಯನ್ನೇ ನಿಲ್ಲಿಸಿಬಿಡುತ್ತದೆ. ದಿನಗಳೆದಂತೆ ಸಮಾಗಮಕ್ಕೆ ಮನಸ್ಸೇ ಇಲ್ಲವಾಗುತ್ತದೆ ಹಾಗೂ ಯಾವುದೇ ಸಂದರ್ಭದಲ್ಲಿ ನಿಮಿರುತನ ಸಾಧ್ಯವಾಗದೇ ಹೋಗಬಹುದು. ಕೆಲವು ಹಠಯೋಗಿಗಳು ಇದನ್ನು ತಮ್ಮ ಸಾಮರ್ಥ್ಯ ಎಂದೇ ಪ್ರಕಟಿಸುತ್ತಾರೆ.

ಕ್ಯಾನ್ಸರ್ ಆವರಿಸುವ ಸಾಧ್ಯತೆ ಹೆಚ್ಚುತ್ತದೆ

ಕ್ಯಾನ್ಸರ್ ಆವರಿಸುವ ಸಾಧ್ಯತೆ ಹೆಚ್ಚುತ್ತದೆ

ಪುರುಷರಲ್ಲಿ ಈ ಹಾರ್ಮೋನುಗಳ ಕೊರತೆಯಿಂದ ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಆವಸಿರುವ ಸಾಧ್ಯತೆ ಹೆಚ್ಚುತ್ತದೆ. ಸಮಾಗಮದಿಂದ ದೂರಾಗುವ ಮೂಲಕ ಎದುರಾಗುವ ಅಪಯಾಗಳಲ್ಲಿ ಇದು ಪ್ರಮುಖವಾಗಿದೆ.

ಮಹಿಳೆಯರ ಜನನಾಂಗಗಳು ಸಡಿಲವಾಗುತ್ತವೆ

ಮಹಿಳೆಯರ ಜನನಾಂಗಗಳು ಸಡಿಲವಾಗುತ್ತವೆ

ಸಮಾಗಮದ ಸುಖವಂಚಿತ ಮಹಿಳೆಯರಿಗೆ ಐವತ್ತಾಗುತ್ತಿದ್ದಂತೆ ಯಾವುದೇ ಸಂವೇದನೆಯನ್ನು ಪಡೆಯುವುದು ಅಸಾಧ್ಯವಾಗುತ್ತದೆ. ವಿಶೇಷವಾಗಿ ಜನನಾಂಗದ ಗೋಡೆಗಳು ಸಡಿಲ ಹಾಗೂ ತೀರಾ ತೆಳುವಾಗುವ ಮೂಲಕ ಸುಲಭವಾಗಿ ಹರಿಯುವಂತಿರುತ್ತದೆ ಹಾಗೂ ಹೊರಚಾಚುವಂತೆ ಜೋತುಬೀಳುತ್ತವೆ. ರಜೋನಿವೃತ್ತಿಯ ಸಮಯದಲ್ಲಿ ಮನಸ್ಸಿನ ಕಿರಿಕಿರಿ ಇನ್ನಷ್ಟು ಹೆಚ್ಚುತ್ತದೆ. ಈ ಸಮಯದಲ್ಲಿ ಸಮಾಗಮ ಬೇಕೆಂದರೂ ಅತ್ಯಂತ ಕಷ್ಟಕರವಾಗುತ್ತದೆ.

ಮೂತ್ರನಾಳದ ಸೋಂಕಿನ ಸಾಧ್ಯತೆ ಹೆಚ್ಚುತ್ತದೆ

ಮೂತ್ರನಾಳದ ಸೋಂಕಿನ ಸಾಧ್ಯತೆ ಹೆಚ್ಚುತ್ತದೆ

ಮೂತ್ರನಾಳದ ಸೋಂಕಿಗೆ ಹೆಚ್ಚಿನ ಸಂಭವವಿರುವುದು ಸಮಾಗಮದ ಬಳಿಕವೇ. ಇದೇ ಕಾರಣಕ್ಕೆ ಸಮಾಗಮದ ಮುಂದಿನ ಇಪ್ಪತ್ತನಾಲ್ಕು ಘಂಟೆಗಳಲ್ಲಿ ಈ ಸೋಂಕು ತಗಲುವ ಸಾಧ್ಯತೆ ಇತರ ಸಮಯಕ್ಕಿಂತ 80% ಹೆಚ್ಚು. ಆದ್ದರಿಂದ ಸಮಾಗಮವೇ ಇಲ್ಲದಿದ್ದರೆ ಈ ಸೋಂಕು ಹರಡುವ ಸಾಧ್ಯತೆಯೂ ಕಡಿಮೆಯಾಗುತ್ತದೆ. ಆದರೆ ಇದರರ್ಥ ಸಮಾಗಮವೇ ಬೇಡವೆಂದಲ್ಲ. ಸಮಾಗಮದ ಬಳಿಕ ಮೂತ್ರ ವಿಸರ್ಜಿಸಿ ಸ್ವಚ್ಛತೆಯನ್ನು ಕಾಪಾಡಿಕೊಂಡರೆ ಈ ಸೋಂಕು ಹರಡುವ ಸಾಧ್ಯತೆಯನ್ನು ಅಪಾರವಾಗಿ ಕಡಿಮೆ ಮಾಡಬಹುದು.

ತೂಕ ಹೆಚ್ಚುತ್ತದೆ

ತೂಕ ಹೆಚ್ಚುತ್ತದೆ

ಸಮಾಗಮದ ಸಮಯದಲ್ಲಿ ದೇಹ ಹೆಚ್ಚಿನ ಕ್ಯಾಲೋರಿಗಳನ್ನು ಖರ್ಚು ಮಾಡಬೇಕಾಗಿ ಬರುತ್ತದೆ. ಸಂಶೋಧನೆಗಳಲ್ಲಿ ಕಂಡುಕೊಂಡಂತೆ ಒಂದು ಚುಂಬನ ಸುಮಾರು 68 ಕ್ಯಾಲೋರಿಗಳನ್ನು ದಹಿಸುತ್ತದೆ. ಒಂದು ಸಾಮಾನ್ಯ ಅವಧಿಯ ಸಮಾಗಮ ಹೆಚ್ಚಿನ ಕ್ಯಾಲೋರಿಗಳನ್ನು ಬಳಸಿಕೊಳ್ಳುತ್ತದೆ. ಯಾವಾಗ ಸಮಾಗಮ ಇಲ್ಲವಾಯಿಯೋ ಈ ಮೂಲಕ ಕಡಿಮೆಯಾಗಬಹುದಾಗಿದ್ದ ಕ್ಯಾಲೋರಿಗಳಲ್ಲವೂ ಹಾಗೇ ಉಳಿದು ಸ್ಥೂಲಕಾಯಕ್ಕೆ ಕಾರಣವಾಗುತ್ತವೆ. ಸಮಾಗಮ ಬೇಡವೆನ್ನುವ ಮೂಲಕ ಸ್ಥೂಲಕಾಯಕ್ಕೆ ಆಹ್ವಾನ ನೀಡಿದಂತಾಗುತ್ತದೆ.

English summary

This Is What Happens To Your Body If You Stop Making Love

When you stop having sex all of a sudden due to general reasons, then there will be a lot of changes that you'll be seeing in yourself.You may either feel a loss of sex drive or an increase in libido. When people begin to refrain from sex, they begin to feel more sluggish with less vitality for sex. For some, not having sex can tone down their sexual desiresand for others, it can make it more desirable. You might either be thinking of it all the time or you may not think about it at all. Making love is part physical and part mental. This activity can help to regulate one another's mood.
X
Desktop Bottom Promotion