Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸರಿಯಾಗಿ ಊಟ-ತಿಂಡಿ ಮಾಡದಿದ್ದರೆ, ಇಂತಹ ಸಮಸ್ಯೆ ನಿಮಗೂ ಬರಬಹುದು!
ಭೂಮಿ ಮೇಲೆ ಯಾರಿಗೂ ಹಸಿವಾಗದೆ ಇರುತ್ತಾ ಇದ್ದರೆ ಏನಾಗುತ್ತಾ ಇತ್ತು ಎಂದು ಕಲ್ಪನೆ ಮಾಡಿಕೊಳ್ಳುವುದು ಕಷ್ಟ. ಭೂಮಿ ಮೇಲಿರುವ ಪ್ರತಿಯೊಬ್ಬ ವ್ಯಕ್ತಿ ಕೂಡ ಹೊಟ್ಟೆಪಾಡಿಗಾಗಿ ಏನಾದರೊಂದು ಕೆಲಸ ಮಾಡುತ್ತಾ ಇರುತ್ತಾನೆ. ಹಸಿವೇ ಇಲ್ಲದೆ ಇರುತ್ತಿದ್ದರೆ ಯಾರು ಕೆಲಸ ಮಾಡುತ್ತಾ ಇರಲಿಲ್ಲ. ಕೆಲಸ ಮಾಡಲು ನಮ್ಮ ದೇಹಕ್ಕೆ ಶಕ್ತಿ ಬೇಕು. ದೇಹಕ್ಕೆ ಶಕ್ತಿ ಬರುವುದು ನಾವು ತಿನ್ನುವಂತಹ ಆಹಾರದಿಂದ. ತಿನ್ನುವ ಆಹಾರವು ದೇಹಕ್ಕೆ ಪೋಷಕಾಂಶ ಒದಗಿಸುವುದು. ಇದರಿಂದಾಗಿಯೇ ನಾವು ದೈನಂದಿನ ಕೆಲಸಕಾರ್ಯ ಮಾಡಲು ಶಕ್ತಿ ದೊರಕುವುದು.
ದೈಹಿಕ ಹಾಗೂ ಮಾನಸಿಕವಾಗಿ ಬಲಿಷ್ಠರಾಗಿರಲು ತಿನ್ನುವಂತಹ ಆಹಾರವು ಸಮತೋಲಿತವಾಗಿರಬೇಕು. ಇಂದಿನ ವ್ಯಸ್ತ ಜೀವನದಲ್ಲಿ ಕೆಲವರಿಗೆ ಸರಿಯಾಗಿ ಊಟ ಮಾಡಲು ಸಮಯವಿರುವುದಿಲ್ಲ. ಇನ್ನು ಕೆಲವರು ದೇಹ ಇನ್ನಷ್ಟು ಸಪೂರವಾಗಬೇಕೆಂಬ ಇಚ್ಛೆಯಲ್ಲಿ ಆಹಾರವನ್ನೇ ತ್ಯಜಿಸುತ್ತಾರೆ. ಊಟ ಮಾಡದೆ ಇರುವುದು ಸರಿಯಾದ ಕ್ರಮವಲ್ಲ ಮತ್ತು ಇದು ಅನಾರೋಗ್ಯಕಾರಿ.
ಬೆಳಗ್ಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟ ಮಾಡಲು ನಿಮ್ಮಲ್ಲಿ ಸರಿಯಾದ ಸಮಯವಿಲ್ಲವೆಂದಾದರೆ ಅದರಿಂದ ದೇಹಕ್ಕೆ ಬೇಕಾಗಿರುವ ಪೋಷಕಾಂಶಗಳ ಕೊರತೆಯಾಗುವುದು. ರಾಷ್ಟ್ರೀಯ ಪೋಷಕಾಂಶಗಳ ವಾರದಂದು ಆಹಾರ ಸೇವನೆ ಮಾಡದೇ ಇದ್ದರೆ ದೇಹಕ್ಕೆ ಏನಾಗಬಹುದು ಎಂದು ಬೋಲ್ಡ್ ಸ್ಕೈ ಈ ಲೇಖನ ಮೂಲಕ ಹೇಳಲಿದೆ.....

ಜೀರ್ಣಕ್ರಿಯೆ ಪರಿಣಾಮ
ನಾವು ತಿನ್ನುವಂತಹ ಎಲ್ಲಾ ಆಹಾರವು ಹೊಟ್ಟೆಗೆ ಹೋಗಿ ಸೇರಿಕೊಳ್ಳುವುದು. ಹಸಿವು ನಿಯಂತ್ರಿಸುತ್ತಾ ಇದ್ದರೆ ಅದರಿಂದ ಕರುಳು ಕುಗ್ಗುವುದು ಮತ್ತು ಇದರಿಂದ ಸಾಮಾನ್ಯವಾಗಿ ಸೇವಿಸುವಷ್ಟು ಆಹಾರ ಸೇವಿಸಲು ಸಾಧ್ಯವಾಗದು. ಹೊಟ್ಟೆಯಲ್ಲಿನ ಆಮ್ಲದ ಉತ್ಪಾದನೆಯು ಕಡಿಮೆಯಾಗುವುದು. ದೀರ್ಘಕಾಲ ತನಕ ಅಥವಾ ನಿಯಮಿತವಾಗಿ ಹಸಿವು ತಡೆದುಕೊಳ್ಳುತ್ತಾ ಇದ್ದರೆ ಹೊಟ್ಟೆಯಲ್ಲಿರುವ ಕಿಣ್ವಗಳು ತಮ್ಮ ಚಟುವಟಿಕೆ ನಿಲ್ಲಿಸಬಹುದು. ಇಂತಹ ಸಮಯದಲ್ಲಿ ನಿಮಗೆ ಚಿಕಿತ್ಸೆ ಬೇಕಾಗಬಹುದು.

ಮಲಬದ್ಧತೆ
ನಾರಿನಾಂಶದ ಸಹಿತ ಕೆಲವೊಂದು ಪ್ರಮುಖ ಪೋಷಕಾಂಶಗಳು ದೇಹಕ್ಕೆ ಲಬ್ಯವಾಗುತ್ತಿಲ್ಲವೆಂದು ಮಲಬದ್ದತೆಯಿಂದ ತಿಳಿದುಬರುವುದು. ನಾರಿನಾಂಶವಿರುವ ಆಹಾರ ಸೇವನೆ ಮಾಡದೆ ಇದ್ದರೆ ಮಲಬದ್ಧತೆ ಉಂಟಾಗುವುದು. ಮಲವು ಗಟ್ಟಿಯಾಗುವುದು ಮತ್ತು ಸೇವಿಸುವ ಆಹಾರದ ಪ್ರಮಾಣವು ಕಡಿಮೆಯಾಗುವುದು.

ಅತಿಯಾಗಿ ಕೂದಲು ಉದುರುವಿಕೆ
ಕೂದಲು ಸಾಮಾನ್ಯವಾಗಿ ಪ್ರೋಟೀನ್ ನಿಂದ ಮಾಡಲ್ಪಟ್ಟಿರುವುದು. ಆದರೆ ಇದಕ್ಕೆ ಕ್ಯಾಲ್ಸಿಯಂ, ಕಬ್ಬಿನಾಂಶ ಮತ್ತು ಏಕಪರ್ಯಾಪ್ತ ಕೊಬ್ಬಿನಾಮ್ಲವು ಅಗತ್ಯವಿದೆ. ಈ ಎಲ್ಲವೂ ದೇಹಕ್ಕೆ ಸಿಗದೆ ಇದ್ದರೆ ತಲೆಬುರುಡೆಯು ಒಣಗುವುದು ಮತ್ತು ಕೂದಲಿನ ಕಿರುಚೀಲಗಳು ದುರ್ಬಲವಾಗುವುದು. ಇದರಿಂದ ಕೂದಲು ಉದುರುವಿಕೆ ಹೆಚ್ಚಾಗುವುದು.

ಕೋಪ ಮತ್ತು ಕಿರಿಕಿರಿ
ನೀವು ಯಾವಾಗಲೂ ಕುಪಿತರಾಗಲು ಮತ್ತು ಕಿರಿಕಿರಿಯಿಂದ ಇರಲು ಕಾರಣವೇನೆಂದು ಯಾವತ್ತಾದರೂ ಯೋಚಿಸಿದ್ದೀರಾ? ಬೆಳಗ್ಗಿನ ಉಪಾಹಾರ ತ್ಯಜಿಸಿರುವುದೇ ಇದಕ್ಕೆ ಕಾರಣವಾಗಿದೆ. ಇದರ ಹಿಂದೆ ಒಂದು ಸರಳ ನಿಯಮವಿದೆ. ಹೊಟ್ಟೆ ಹಸಿದಿರುವಾಗ ಸೆರೊಟೊನಿನ್ ಮಟ್ಟವು ಕುಸಿಯುವುದು. ಇದರಿಂದ ನಿಮಗೆ ಕೋಪ ಮತ್ತು ಕಿರಿಕಿರಿ ಉಂಟಾಗುವುದು.



Click it and Unblock the Notifications
