For Quick Alerts
ALLOW NOTIFICATIONS  
For Daily Alerts

  ಋತುಚಕ್ರ ಅವಧಿಯಲ್ಲಿ ಹೀಗೆಲ್ಲಾ ಸಮಸ್ಯೆ ಆದ್ರೆ, ಆರೋಗ್ಯಕ್ಕೆ ಬಹಳ ಅಪಾಯಕಾರಿ!!

  By Arshad
  |

  ಮಹಿಳೆಯರು ನಿಯಮಿತವಾಗಿ ಅನುಭವಿಸುವ ಮಾಸಿಕ ಋತುಚಕ್ರಕ್ಕೆ ಹೆಚ್ಚಿನ ಗಮನ ನೀಡಲೇಬೇಕು. ಈ ದಿನಗಳನ್ನು ಯಾವುದೇ ಕಾರಣಕ್ಕೂ ಉಪೇಕ್ಷಿಸುವಂತಿಲ್ಲ. ಋತುಚಕ್ರವನ್ನು ಜೀವನದ ಪ್ರಮುಖ ಸೂಚನೆಯಾಗಿ ಪರಿಗಣಿಸಬೇಕು. ಅಂದರೆ ಇದರಲ್ಲಿ ಯಾವುದೇ ಬದಲಾವಣೆ ಅಥವಾ ಹಿಂದು ಮುಂದಾದರೂ ಇದು ನಿಮ್ಮ ಆರೋಗ್ಯ ಏರುಪೇರಾಗಿರುವುದನ್ನು ಸೂಚಿಸುತ್ತದೆ.

  ಅಲ್ಲದೇ ಮುಂದಿನ ಋತುಚಕ್ರ ಯಾವಾಗ ಆಗಬಹುದು ಎಂಬುದನ್ನು ಮುಂಚಿತವಾಗಿ ಕ್ಯಾಲೆಂಡರಿನಲ್ಲಿ ಗುರುತಿಸಿಟ್ಟುಕೊಂಡು ಅದೇ ಪ್ರಕಾರದ ವೇಳಾಪಟ್ಟಿಯನ್ನು ದೇಹವೂ ಅನುಸರಿಸುತ್ತಿದ್ದರೆ ನಿಮ್ಮ ಆರೋಗ್ಯ ಉತ್ತಮವಾಗಿದೆ ಎಂದು ತಿಳಿದುಕೊಳ್ಳಬಹುದು. ಎಷ್ಟು ದಿನಗಳ ನಂತರ ಇದು ಸಂಭವಿಸುತ್ತದೆ ಹಾಗೂ ಎಷ್ಟು ದಿನಗಳವರೆಗೆ ಇರುತ್ತದೆ ಎಂಬುದನ್ನೂ ಗಮನಿಸಬೇಕಾಗುತ್ತದೆ.

  ಅಷ್ಟೇ ಅಲ್ಲ, ನಿಮ್ಮ ದೇಹದ ಆರೋಗ್ಯವನ್ನು ಈ ದಿನಗಳಲ್ಲಿ ಸೂಕ್ಷ್ಮವಾಗಿ ಗಮನಿಸಬಹುದಾಗಿದ್ದು ಈ ಸೂಚನೆಗಳು ದೇಹದ ಯಾವುದೋ ತೊಂದರೆಯನ್ನು ಪ್ರಕಟಿಸುತ್ತವೆ. ಇದನ್ನು ಸರಳವಾಗಿಸಲು ಇಂದಿನ ಲೇಖನದಲ್ಲಿ ಕೆಲವು ಮಾಹಿತಿಗಳನ್ನು ಸಂಗ್ರಹಿಸಲಾಗಿದ್ದು ಋತುಚಕ್ರದಲ್ಲಿ ಕಾಣಬರುವ ಸೂಚನೆಗಳು ಆರೋಗ್ಯದ ಯಾವ ತೊಂದರೆಯನ್ನು ಪ್ರಕಟಿಸುತ್ತಿವೆ ಎಂಬ ವಿವರಗಳನ್ನು ನೀಡಲಾಗಿದೆ...

  ಅಧಿಕ ರಕ್ತಸ್ರಾವ

  ಅಧಿಕ ರಕ್ತಸ್ರಾವ

  ಒಂದು ವೇಳೆ ಸ್ರಾವ ಅಧಿಕವಾಗಿದ್ದು ಇದನ್ನು ನಿಲ್ಲಿಸಲು ಸಾಮಾನ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದ ರಕ್ತಹೀರುವ ಉತ್ಪನ್ನಗಳನ್ನು ಬಳಸಬೇಕಾಗಿ ಬಂದರೆ ಇದು fibroid tumour ಅಥವಾ ಗರ್ಭಕೋಶದಲ್ಲಿ ಗಂಟುಗಳಾಗಿರುವ ತೊಂದರೆಯನ್ನು ಪ್ರಕಟಿಸುತ್ತದೆ. ಒಂದು ವೇಳೆ ಎರಡು ಅಥವಾ ಹೆಚ್ಚಿನ ಋತುಚಕ್ರದಲ್ಲಿಯೂ ಹೆಚ್ಚಿನ ರಕ್ತಸ್ರಾವ ಮುಂದುವರೆಯುತ್ತಿದ್ದರೆ ತಕ್ಷಣ ವೈದ್ಯರಿಂದ ತಪಾಸಣೆಗೊಳಪಡಬೇಕು. ಯಾವುದಕ್ಕೂ ಎರಡನೆಯ ಮಾಸದಲ್ಲಿ ರಕ್ತಸ್ರಾವ ಹೆಚ್ಚಿದ್ದರೂ ತಪಾಸಣೆಗೊಳಪಡುವುದು ಉತ್ತಮ.

  ಅತಿ ಕಡಿಮೆ ಸ್ರಾವ

  ಅತಿ ಕಡಿಮೆ ಸ್ರಾವ

  ಇದು ಒಂದು ವರದಾನದಂತೆ ಕಂಡುಬರುತ್ತದೆ ಅಲ್ಲವೇ? ನಿಮಗೆ ಇಷ್ಟೇ ಸ್ರಾವ ನಿಯಮಿತವಾಗಿ ಆಗುತ್ತಿದ್ದರೆ ಪರವಾಗಿಲ್ಲ. ಆದರೆ ಯಾವಾಗಲೂ ಸಾಮಾನ್ಯವಾಗಿದ್ದು ಈಗ ಒಮ್ಮೆಲೇ ಈ ಪ್ರಮಾಣ ಅತಿ ಕಡಿಮೆಯಾದರೆ ಇದು ಥೈರಾಯ್ಡ್ ಗ್ರಂಥಿಯ ಕ್ಷಮತೆ ಉಡುಗಿರುವ ಸಂಕೇತವಾಗಿದೆ ಅಥವಾ ಗರ್ಭಾಶಯದ ಒಳಗಿನ ಗೋಡೆಯ ಅಂಗಾಂಶ ಘಾಸಿಗೊಂಡಿರುವುದನ್ನು ತೋರುತ್ತದೆ.

  ಅನಿಯಮಿತ ಋತುಚಕ್ರ

  ಅನಿಯಮಿತ ಋತುಚಕ್ರ

  ಪ್ರತಿಬಾರಿಯೂ ಋತುಚಕ್ರ ಸಂಭವಿಸುವ ದಿನಾಂಕ ಸಮಾನ ಅಂತರಗಳಲ್ಲಿ ಬರದೇ ಹೆಚ್ಚೂ ಕಡಿಮೆಯಾಗುತ್ತಿದ್ದರೆ ಮುಂದಿನ ಋತುಚಕ್ರದ ದಿನಾಂಕವನ್ನು ಊಹಿಸುವುದು ಕಷ್ಟವಾಗಬಹುದು. ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಅನಿಯಮಿತ ಋತುಚಕ್ರ ಸಂಭವಿಸುತ್ತಿದ್ದರೆ ತಕ್ಷಣವೇ ಸ್ತ್ರೀರೋಗ ತಜ್ಞರಲ್ಲಿ ಸಲಹೆ ಪಡೆಯಬೇಕು. ಇದು ಥೈರಾಯ್ಡ್ ಗ್ರಂಥಿಯ ತೊಂದರೆ ಅಥವಾ polycystic ovarian syndrome ಅಥವಾ ಹಾರ್ಮೋನುಗಳ ಏರುಪೇರಿನಿಂದ ಗರ್ಭಾಶಯದಲ್ಲಿ ಅಂಡಾಣು ಬಿಡುಗಡೆಯಾಗುವ ದಿನ ಏರುಪೇರಾಗುವುದು ಸಹಾ ಕಾರಣವಿರಬಹುದು.

  ಒಂದು ಮಾಸದ ಋತುಚಕ್ರ ತಪ್ಪಿಯೇ ಹೋಗುವುದು

  ಒಂದು ಮಾಸದ ಋತುಚಕ್ರ ತಪ್ಪಿಯೇ ಹೋಗುವುದು

  ಇದು ಅತ್ಯಂತ ಗಂಭೀರವಾದ ಚಿಂತನೆಗೆ ಕಾರಣವಾಗಿದೆ. ಸಾಮಾನ್ಯವಾಗಿ ಋತುಚಕ್ರವಾಗಲಿಲ್ಲ ಎಂದರೆ ಗರ್ಭ ನಿಂತಿದೆ ಎಂದೇ ಎಲ್ಲರೂ ಗ್ರಹಿಸುತ್ತಾರೆ. ಆದರೆ ಗರ್ಭನಿಂತಿರುವ ಸಾಧ್ಯತೆ ಇಲ್ಲದಿದ್ದು ಋತುಚಕ್ರ ಸಂಭವಿಸದೇ ಇದ್ದರೆ ಮೊದಲಿಗೆ ನಿಮ್ಮ ಮಾನಸಿಕ ಒತ್ತಡವನ್ನು ಪರಿಗಣಿಸಬೇಕಾಗುತ್ತದೆ. ಅತೀವ ಮಾನಸಿಕ ಒತ್ತಡದಿಂದ ತೂಕವೂ ಭಾರೀ ಇಳಿದಿದ್ದರೆ ಕೆಲವೊಮ್ಮೆ ಅಂಡಾಣು ಬಿಡುಗಡೆಯಾಗುವುದೇ ಇಲ್ಲ. ಈ ಸಂದರ್ಭದಲ್ಲಿ ಋತುಚಕ್ರವೂ ಸಂಭವಿಸುವುದಿಲ್ಲ.

  ಅತಿ ಹೆಚ್ಚಿನ ಕಿಬ್ಬೊಟ್ಟೆ ನೋವು

  ಅತಿ ಹೆಚ್ಚಿನ ಕಿಬ್ಬೊಟ್ಟೆ ನೋವು

  ಸಾಮಾನ್ಯವಾಗಿ ಋತುಚಕ್ರದ ಸಮಯದಲ್ಲಿ ಕಿಬ್ಬೊಟ್ಟೆಯಲ್ಲಿ ನೋವು ಇದ್ದೇ ಇರುತ್ತದೆ. ಆದರೆ ಇದು ತೀರಾ ಹೆಚ್ಚಾಗಿದ್ದರೆ ಇದಕ್ಕೆ ಗರ್ಭಾಶಯದಲ್ಲಿ ರುವ ಗಂಟುಗಳು ಅಥವಾ endometriosis ಎಂಬ ಸ್ಥಿತಿ ಕಾರಣವಾಗಿರಬಹುದು. ಇದಕ್ಕೆ ಪೈಬ್ರಾಯ್ಡ್ ಹಾಗೂ ಲಘುಗಾತ್ರದ ಗಡ್ಡೆಗಳಾಗಿರುವುದೂ ಕಾರಣವಾಗಿರಬಹುದು. ಇವೇ ಭಾರೀ ಕಿಬ್ಬೊಟ್ಟೆ ನೋವಿಗೆ ಕಾರಣವಾಗಿರುತ್ತವೆ. ತಕ್ಷಣವೇ ವೈದ್ಯರಿಂದ ತಪಾಸಣೆಗೊಂಡು ಸೂಕ್ತ ಚಿಕಿತ್ಸೆ ಹಾಗೂ ಔಷಧಿಗಳನ್ನು ಪಡೆಯಬೇಕು.

  ಮನೋಭಾವದಲ್ಲಿ ತೀವ್ರ ಬದಲಾವಣೆ

  ಮನೋಭಾವದಲ್ಲಿ ತೀವ್ರ ಬದಲಾವಣೆ

  ಸಾಮಾನ್ಯವಾಗಿ ಋತುಚಕ್ರದ ಸಮಯದಲ್ಲಿ ಮಾನಸಿಕ ಕಿರಿಕಿರಿ, ಸಿಡಿಮಿಡಿ, ಎಲ್ಲರ ಮೇಲೆ ಹರಿಹಾಯುವುದು ಮೊದಲಾದವು ಸಾಮಾನ್ಯವಾಗಿರುತ್ತವೆ. ಆದರೆ ಇವುಗಳು ಒಂದು ಮಿತಿಯಲ್ಲಿಯೇ ಇರುತ್ತವೆ. ಆದರೆ ಇವು ಮಿತಿಮೀರಿದರೆ ಅಥವಾ ಇದಕ್ಕೆ ವಿರುದ್ದವಾಗಿ ಖಿನ್ನತೆ ಮತ್ತು ಏಕಾಂತಕ್ಕೆ ಶರಣಾಗುವಂತಾದರೆ ಮಾತ್ರ ವೈದ್ಯರನ್ನು ಕಂಡು ಸಲಹೆ ಪಡೆಯುವುದು ಅಗತ್ಯವಾಗಿದೆ.

  English summary

  Things Your Periods Can Tell You About Your Health

  You all are highly familiar with the monthly drill, each time that you get your periods, isn't it, ladies? Paying little or no attention to your periods is not a good idea. Periods need to be considered almost like a vital sign. General changes and alterations to your periods can actually be a window to your general health status. You also need a keep a tab on the calender to know the regular schedule in which you get your periods. You need to also be aware of the duration and intensity of your periods.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more