Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ದೇಹವನ್ನು ಸುಲಭವಾಗಿ ಪ್ರವೇಶಿಸುವ ರೋಗಾಣುಗಳು ಇವೆ! ಸ್ವಚ್ಛತೆ ಕಾಪಾಡಿ
ಸರಳವಾದ ನಮ್ಮ ದೈನಂದಿನ ಜೀವನ ಶೈಲಿಯು ನಮ್ಮ ಆರೋಗ್ಯವನ್ನು ಕಾಪಾಡುತ್ತವೆ ಎನ್ನುವುದು ಸುಳ್ಳು. ಸರಳತೆಯ ಜೊತೆಗೆ ಶುಚಿತ್ವದ ಬಗ್ಗೆಯೂ ಕಾಳಜಿ ಇರಬೇಕು. ಇಲ್ಲವಾದರೆ ನಮ್ಮ ದೇಹದಲ್ಲಿರುವ ಕೆಲವು ಸೂಕ್ಷ್ಮ ಅಂಗಗಳ ಮೂಲಕ ಸೂಕ್ಷ್ಮಾಣುಗಳು ದಾಳಿ ಮಾಡುತ್ತವೆ.
ಇವುಗಳ ದಾಳಿ ಕೆಲವೊಮ್ಮೆ ಗಂಭೀರ ಆರೋಗ್ಯ ಸಮಸ್ಯೆಗಳಾಗಿ ಪರಿವರ್ತನೆಗೊಳ್ಳಬಹುದು. ಹಾಗಾದರೆ ನಮ್ಮ ದೇಹದ ಸೂಕ್ಷ್ಮ ಅಂಗಗಳು ಯಾವವು? ಅವುಗಳ ಸ್ವಚ್ಛತೆ ಹೇಗೆ? ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ....

ಬಾಯಿ
ಬಾಯಿಯಲ್ಲಿ ಸುಮಾರು 600 ವಿಭಿನ್ನ ರೀತಿಯ ಬ್ಯಾಕ್ಟೀರಿಯಾಗಳಿವೆ. ಬಾಯಿಯ ಸ್ವಚ್ಛತೆಯ ಬಗ್ಗೆ ಗಮನ ನೀಡದಿದ್ದರೆ ನಿಸ್ಸಂದೇಹವಾಗಿ ಮಾನವನ ದೇಹದಲ್ಲಿ ಸೋಂಕು ಹರಡುವುದು.

ನಾಲಗೆಯ ಸೋಂಕು
ನಾಲಗೆಯಲ್ಲಿ ಸೋಂಕು ಇದ್ದರೆ ಗುಲಾಬಿ ಬಣ್ಣದಿಂದ ಹಳದಿ ಬಣ್ಣಕ್ಕೆ, ಹಳದಿ ಬಣ್ಣದಿಂದ ಬೂದು ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಗಂಭೀರವಾದ ಸಮಸ್ಯೆ ಉಂಟಾಗಬಹುದು. ಹಾಗಾಗಿ ಪ್ರತಿದಿನ ನಾಲಿಗೆಯನ್ನು ಸ್ವಚ್ಛಗೊಳಿಸುವುದನ್ನು ಮರೆಯಬೇಡಿ.

ತೋಳುಗಳ ಅಡಿ ಭಾಗ
ತೋಳಿನ ಅಡಿ ಭಾಗದಲ್ಲಿ ಅತಿ ಹೆಚ್ಚು ಬೆವರುವುದು. ಇದರೊಟ್ಟಿಗೆ ಕೊಳೆಗಳು ಹಾಗೂ ಸೋಂಕುಗಳು ಬಹು ಬೇಗ ಅಂಟಿಕೊಳ್ಳುತ್ತವೆ. ಹಾಗಾಗಿ ನಿತ್ಯವೂ ಇದರ ಶುಚಿಯ ಬಗ್ಗೆ ಗಮನ ಇಡಬೇಕು.

ಹೊಕ್ಕಳು
ಹೊಕ್ಕಳಿನ ಒಳಭಾಗದಲ್ಲೂ ಬೆವರುವುದು. ಜೊತೆಗೆ ಸ್ನಾನ ಮಾಡುವಾಗ ಕೊಳೆಗಳು ಅಲ್ಲಿ ಕುಳಿತುಕೊಳ್ಳುವ ಸಾಧ್ಯತೆ ಇರುತ್ತದೆ. ಇವುಗಳನ್ನು ಸರಿಯಾಗಿ ಶುಚಿಗೊಳಿಸಿಕೊಳ್ಳದಿದ್ದರೆ ಬ್ಯಾಕ್ಟೀರಿಯಾಗಳು ದೇಹವನ್ನು ಆವರಿಸಿಕೊಳ್ಳುತ್ತವೆ.

ಮೂಗಿನ ನಾಳ
ಮೂಗಿನಲ್ಲಿ ಬೆರಳನ್ನು ತೂರಿಸುವುದು ಅಥವಾ ಚಿಕ್ಕ ಪುಟ್ಟ ಗುಳ್ಳೆಗಳಿಂದ ಸೋಂಕು ಉತ್ಪತ್ತಿ ಆಗಬಹುದು. ಈ ಕುರಿತು ಹೆಚ್ಚು ಎಚ್ಚರಿಕೆ ವಹಿಸಬೇಕು.

ತಲೆ ಕೂದಲು
ತಲೆ ಕೂದಲು ಹಾಗೂ ತ್ವಚೆಯ ಬಗ್ಗೆ ಗಮನ ನೀಡದಿದ್ದರೆ ತಲೆ ಹೊಟ್ಟು, ಹೇನು, ಕಜ್ಜಿ, ಅತಿಯಾದ ಬೆವರಿನಿಂದ ವಾಸನೆ ಕಾಣಿಸಿಕೊಳ್ಳುವುದು. ಇವುಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಗಂಭೀರ ಸಮಸ್ಯೆಗೆ ಎಡೆಮಾಡಿಕೊಡುವುದು.

ಕಿವಿಗಳು
ಕಿವಿಯಲ್ಲಿ ಉತ್ಪತ್ತಿಯಾಗುವ ಕಿಗ್ಗನ್ನು ಆಗಾಗ ಸ್ವಚ್ಛ ಮಾಡದಿದ್ದರೆ ಸೋಂಕು ಉತ್ಪತ್ತಿಯಾಗಿ, ಕಿವಿ ಸೋರುವಿಕೆ ಅಥವಾ ಇನ್ನಿತರ ಕಿವಿ ಸಂಬಂಧಿ ತೊಂದರೆಗಳುಂಟಾಗಬಹುದು.

ಉಗುರು
ಉದ್ದನೆಯ ಉಗುರು ಬೆಳೆಸಿದರೆ ಅದರ ಸ್ವಚ್ಛತೆಯ ಬಗ್ಗೆ ಗಮನ ನೀಡಬೇಕು. ಇಲ್ಲವಾದರೆ ಕೊಳೆಗಳ ಶೇಖರಣೆಯಿಂದ ರೋಗಾಣುಗಳು ನಿಮ್ಮ ದೇಹದೊಳಗೆ ಸೇರಿಕೊಳ್ಳುವ ಸಾಧ್ಯತೆ ಇರುತ್ತದೆ.

ಕಣ್ಣು ರೆಪ್ಪೆ
ಕಣ್ಣುಗಳಿಗೆ ಪ್ರವೇಶಿಸುವ ಧೂಳುಗಳನ್ನು ರೆಪ್ಪೆಗಳೇ ತಡೆಯುವುದರಿಂದ ಸೂಂಕುಗಳು, ಬ್ಯಾಕ್ಟೀರಿಯಾಗಳು ಶೇಖರಣೆ ಹೊಂದುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿತ್ಯವೂ ಇದರ ಬಗ್ಗೆ ಕಾಳಜಿ ವಹಿಸಬೇಕು.



Click it and Unblock the Notifications
