ಪುರುಷರ-ಮಹಿಳೆಯರ ಲೈಂಗಿಕ ಸಾಮರ್ಥ್ಯ ಹೆಚ್ಚಿಸುವ ನೈಸರ್ಗಿಕ ಜ್ಯೂಸ್‌ಗಳು

By Arshad
Subscribe to Boldsky

ವಯಸ್ಸಿನೊಂದಿಗೇ ನಮ್ಮ ದೇಹ ಹಲವಾರು ಬದಲಾವಣೆಗಳನ್ನು ಪಡೆಯುತ್ತಾ ಹೋಗುತ್ತದೆ. ಈ ಬದಲಾವಣೆಗಳಲ್ಲಿ ಕೆಲವು ಕ್ಷಮತೆಗಳು (ಉದಾಹರಣೆಗೆ ರೋಗ ನಿರೋಧಕ ವ್ಯವಸ್ಥೆ) ಉತ್ತಮಗೊಂಡರೆ ಇನ್ನೂ ಕೆಲವು ಕ್ಷಮತೆಗಳು (ಉದಾಹರಣೆಗೆ ಸ್ನಾಯುಗಳ ಬಲ, ಲೈಂಗಿಕ ಶಕ್ತಿ) ಮೊದಲಾದವು ಉಡುಗುತ್ತಾ ಹೋಗುತ್ತವೆ. ಇದರಲ್ಲಿ ಪ್ರಮುಖವಾದ ಇನ್ನೊಂದು ಶಕ್ತಿ ಎಂದರೆ ಲೈಂಗಿಕ ಶಕ್ತಿ ಉಡುಗುವುದು. ಪುರುಷರಲ್ಲಿ ನಿಮಿರು ದೌರ್ಬಲ್ಯತನ ಎದುರಾದರೆ ಮಹಿಳೆಯರಲ್ಲಿ ದ್ರವಿಸುವ ಕ್ಷಮತೆ ಉಡುಗುತ್ತದೆ. ಆದರೆ ಇದು ಲೈಂಗಿಕ ಜೀವನದ ಕೊನೆ ಎಂದು ಸರ್ವಥಾ ಅಂದುಕೊಳ್ಳಬಾರದು.

ಮಿಲನಕ್ಕೂ ಮುನ್ನ, ಅಪ್ಪಿತಪ್ಪಿಯೂ ಇಂತಹ ಆಹಾರಗಳನ್ನು ಸೇವಿಸಬೇಡಿ

ಉತ್ತಮ ಜೀವನಕ್ರಮವನ್ನು ಅನುಸರಿಸುವ ಮೂಲಕ ಜೀವಮಾನವಿಡೀ ಉತ್ತಮ ಲೈಂಗಿಕ ಜೀವನವನ್ನೂ ಅನುಭವಿಸಬಹುದು ಹಾಗೂ ಉತ್ತಮ ಆರೋಗ್ಯಕ್ಕೆ ಇದು ಅನಿವಾರ್ಯ ಸಹಾ! ಸೂಕ್ತ ವ್ಯಾಯಾಮ, ಸರಿಯಾದ ಆಹಾರಕ್ರಮಗಳಿಂದ ಒಟ್ಟಾರೆ ಆರೋಗ್ಯದ ಜೊತೆಗೇ ಲೈಂಗಿನ ಆರೋಗ್ಯವನ್ನೂ ಬಹುಕಾಲ ಉಳಿಸಿಕೊಳ್ಳಬಹುದು. ಲೈಂಗಿಕ ಆರೋಗ್ಯವನ್ನು ಬಹುಕಾಲ ಉತ್ತಮವಾಗಿ ಉಳಿಸಿಕೊಳ್ಳಲು ನಿಸರ್ಗ ಕೆಲವಾರು ಆಹಾರಗಳನ್ನು ನೀಡಿದ್ದು ಈ ಆಹಾರಗಳನ್ನು ಸಾಂದ್ರೀಕರಿಸಿ ಸೇವಿಸುವ ಮೂಲಕ ಉಡುಗುತ್ತಿರುವ ಲೈಂಗಿಕ ಶಕ್ತಿಯನ್ನು ಮತ್ತೊಮ್ಮೆ ಹಿಂಪಡೆದುಕೊಳ್ಳಲು ಹಾಗೂ ಬಹುಕಾಲ ಉಳಿಸಿಕೊಳ್ಳಲು ಸಾಧ್ಯ. ಬನ್ನಿ, ಈ ಸಾಮರ್ಥ್ಯವನ್ನು ಹೆಚ್ಚಿಸುವ ಜ್ಯೂಸ್ ಗಳ ಬಗ್ಗೆ ಅರಿಯೋಣ... 

ಲೋಳೆಸರದ ಜ್ಯೂಸ್

ಲೋಳೆಸರದ ಜ್ಯೂಸ್

ಕೆಲವು ಅಧ್ಯಯನಗಳ ಪ್ರಕಾರ ಲೋಳೆಸರ ಅಥವಾ ಆಲೋವೆರಾದ ತಿರುಳಿನಿಂದ ಸಂಗ್ರಹಿಸಿದ ರಸದ ಸೇವನೆಯಿಂದ ಪುರುಷರಲ್ಲಿ ಟೆಸ್ಟ್ರೋಸ್ಟೆರಾನ್ ಎಂಬ ರಸದೂತ ಹೆಚ್ಚು ಉತ್ಪಾದನೆಯಾಗುತ್ತದೆ. ಈ ರಸದೂತ ಕಾಮಶಕ್ತಿಗೆ ನೇರವಾಗಿ ಸಂಬಂಧಿಸಿದ ರಸದೂತವಾಗಿದ್ದು ಪುರುಷರಲ್ಲಿ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಹಾಗೂ ನಿಮಿರುದೌರ್ಬಲ್ಯವನ್ನೂ ನಿವಾರಿಸುತ್ತದೆ. ಕೇವಲ ಲೈಂಗಿಕ ಶಕ್ತಿಗೆ ಮಾತ್ರವಲ್ಲ, ಈ ಜ್ಯೂಸ್ ನ ನಿಯಮಿತ ಸೇವನೆಯಿಂದ ಒಟ್ಟಾರೆ ಆರೋಗ್ಯವೂ ಉತ್ತಮಗೊಳ್ಳುತ್ತದೆ.

ದಾಳಿಂಬೆಹಣ್ಣಿನ ಜ್ಯೂಸ್

ದಾಳಿಂಬೆಹಣ್ಣಿನ ಜ್ಯೂಸ್

ಇನ್ನೊಂದು ಅಧ್ಯಯನದ ಪ್ರಕಾರ ದಾಳಿಂಬೆ ಹಣ್ಣುಗಳ ಕಾಳುಗಳನ್ನು ಹಿಂಡಿ ಬೀಜ ನಿವಾರಿಸಿದ ರಸವನ್ನು ನೇರವಾಗಿ ಕುಡಿಯುವ ಮೂಲಕ ನಿಮಿರು ದೌರ್ಬಲ್ಯ ಕಡಿಮೆಯಾಗುತ್ತದೆ. ಸಾಂದ್ರೀಕರಿಸಿದ ರಸದಲ್ಲಿ ಹೆಚ್ಚಿನ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ರಕ್ತಪರಿಚಲನೆಯನ್ನು ಹೆಚ್ಚಿಸುತ್ತವೆ. ಅಷ್ಟೇ ಅಲ್ಲ, ಈ ಹಣ್ಣಿನ ರಸದ ಸೇವನೆಯಿಂದ ಹೃದಯದ ತೊಂದರೆಗಳ ಸಾಧ್ಯತೆಯೂ ಕಡಿಮೆಯಾಗುತ್ತದೆ.

ದಾಳಿಂಬೆ ಹಣ್ಣು ಕೂಡ ಒಳ್ಳೆಯದು...

ದಾಳಿಂಬೆ ಹಣ್ಣು ಕೂಡ ಒಳ್ಳೆಯದು...

ದಾಳಿಂಬೆಯಲ್ಲಿ ಹಲವಾರು ಆರೋಗ್ಯಕರವಾದ ಪ್ರಯೋಜನಗಳು ಲಭ್ಯವಿರುತ್ತವೆ. ಇದು ಸಹ ಸ್ವಾಭಾವಿಕವಾದ ವಯಾಗ್ರದಂತೆ ಕಾರ್ಯನಿರ್ವಹಿಸುತ್ತವೆ. ದಾಳಿಂಬೆಗಳು ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಗಮಗೊಳಿಸುತ್ತದೆ ಮತ್ತು ಜನನಾಂಗದತ್ತ ರಕ್ತ ಪರಿಚಲನೆಯನ್ನು ಅಧಿಕಗೊಳಿಸುತ್ತದೆ. ಇದು ಇಬ್ಬರ ಸಮಾಗಮದ ಉತ್ತುಂಗ ಕಾಲದಲ್ಲಿ ಭಾರಿ ನೆರವನ್ನು ನೀಡುವ ಹಣ್ಣಾಗಿದೆ.

ಹಾಲು

ಹಾಲು

ನವವಿವಾಹಿತರಿಗೆ ಪ್ರಸ್ತದ ಸಮಯದಲ್ಲಿ ಏಕೆ ಹಾಲನ್ನು ಕುಡಿಸಲಾಗುತ್ತದೆ ಗೊತ್ತೇ? ಹಾಲಿನಲ್ಲಿರುವ ಪೋಷಕಾಂಶಗಳು ಕೇವಲ ಆರೋಗ್ಯವರ್ಧಕ ಮಾತ್ರವಲ್ಲ, ಲೈಂಗಿಕ ಶಕ್ತಿವರ್ಧಕವೂ ಆಗಿದೆ. ಇದು ಪುರುಷರಿಗೂ ಮಹಿಳೆಯರಿಗೂ ಸಮಾನವಾಗಿ ಉಪಯುಕ್ತವಾಗಿ ಹೆಚ್ಚಿನ ಶಕ್ತಿ ಹಾಗೂ ಸಾಮರ್ಥ್ಯವನ್ನು ನೀಡುತ್ತದೆ. ಅಲ್ಲದೇ ಇದರಲ್ಲಿರುವ ಕೆಲವು ಪೋಷಕಾಂಶಗಳು ಕ್ಷಿಪ್ರ ಸಮಯದಲ್ಲಿಯೇ ರಕ್ತವನ್ನು ಸೇರುವ ಮೂಲಕ ಅಗತ್ಯವಿರುವ ಶಕ್ತಿಯನ್ನು ಕೂಡಲೇ ಪಡೆಯಲು ಸಾಧ್ಯವಾಗುತ್ತದೆ. ಆದರೆ ನಿಮ್ಮ ದೇಹ ಹಾಲಿನಲ್ಲಿರುವ ಲ್ಯಾಕ್ಟೋಸ್ ಗೆ ಅಲರ್ಜಿಕಾರಕವಲ್ಲ ಎಂಬುದನ್ನು ಮಾತ್ರ ಖಚಿತಪಡಿಸಿಕೊಳ್ಳಿ. ಉಳಿದಂತೆ ಮಧುರ ಕ್ಷಣಗಳಿಗೆ ಕೊಂಚ ಮುನ್ನ ಸೇವಿಸುವ ಒಂದು ಲೋಟ ಹಾಲು ಅದ್ಭುತ ಪರಿಣಾಮವನ್ನು ನೀಡುತ್ತದೆ.

ಬಾಳೆಹಣ್ಣಿನ ರಾಸಾಯನ

ಬಾಳೆಹಣ್ಣಿನ ರಾಸಾಯನ

ಬಾಳೆಹಣ್ಣಿನಲ್ಲಿರುವ ಬ್ರೋಮಿಲೈನ್ ಎಂಬ ಕಿಣ್ವ ಲೈಂಗಿಕ ಶಕ್ತಿಯನ್ನು ಹಾಗೂ ಸಾಮರ್ಥ್ಯವನ್ನು ಹೆಚ್ಚಿಸುವ ಕ್ಷಮತೆ ಪಡೆದಿದೆ. ನಿತ್ಯವೂ ಒಂದು ಲೋಟ ಬಾಳೆಹಣ್ಣಿನ ತಿರುಳನ್ನು ಗೊಟಾಯಿಸಿ ತಯಾರಿಸಿದ ಜ್ಯೂಸ್ ಅಥವಾ ರಾಸಾಯನವನ್ನು ಸೇವಿಸುವ ಮೂಲಕ ಈ ಹಣ್ಣಿನಲ್ಲಿರುವ ಪೋಷಕಾಂಶಗಳು, ವಿಟಮಿನ್ನುಗಳು ದೇಹಕ್ಕೆ ಶಕ್ತಿ ದೊರಕುತ್ತದೆ. ಅಂತೆಯೇ ಲೈಂಗಿಕ ಶಕ್ತಿ ಹೆಚ್ಚಿಸಲೂ ನೆರವಾಗುತ್ತದೆ.

ರಾತ್ರಿ ಮಲಗುವ ಮುನ್ನ ಒಂದೊಂದು ಬಾಳೆ ಹಣ್ಣು ಸೇವಿಸಿ

ರಾತ್ರಿ ಮಲಗುವ ಮುನ್ನ ಒಂದೊಂದು ಬಾಳೆ ಹಣ್ಣು ಸೇವಿಸಿ

ಬಾಳೆಹಣ್ಣು ಬಾಳೆಹಣ್ಣಿನಲ್ಲಿ ಪೊಟಾಶಿಯಂ ಪ್ರಮಾಣ ಸಮೃದ್ಧವಾಗಿರುತ್ತದೆ. ಇದು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡವನ್ನು ನಿವಾರಿಸುತದೆ. ಎರಡು ಬಾಳೆಹಣ್ಣನ್ನು ಪ್ರತಿದಿನ ಸೇವಿಸಿದರೆ ಶಿಶ್ನದ ಆರೋಗ್ಯ ಸುಧಾರಿಸುತ್ತದೆ ಮತ್ತು ಲೈಂಗಿಕ ಕ್ರಿಯೆಯಲ್ಲಿ ಮತ್ತಷ್ಟು ಆನಂದ ದೊರೆಯುತ್ತದೆ.

ಕಲ್ಲಗಂಡಿ ಹಣ್ಣಿನ ಜ್ಯೂಸ್

ಕಲ್ಲಗಂಡಿ ಹಣ್ಣಿನ ಜ್ಯೂಸ್

ಕಲ್ಲಂಗಡಿ ಹಣ್ಣಿನ ಬಹುತೇಕ ಭಾಗ ನೀರೇ ಆಗಿದ್ದರೂ ಇದಲ್ಲಿರುವ ಎಲ್-ಸಿಟ್ರುಲೈನ್ ಎಂಬ ಪೋಷಕಾಂಶ ಲೈಂಗಿಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ. ಕಲ್ಲಂಗಡಿಯನ್ನು ಸೇವಿಸಿದ ಬಳಿಕ ಈ ಪೋಷಕಾಂಶ ನಮ್ಮ ಜೀರ್ಣಾಂಗಗಳಲ್ಲಿ ಜೀರ್ಣರಸಗಳ ಪ್ರಭಾವದ ಮೂಲಕ ಎಲ್-ಆರ್ಜಿನೈನ್ ಎಂಬ ಪೋಷಕಾಂಶವಾಗಿ ಬದಲಾಗುತ್ತದೆ. ಈ ಪೋಷಕಾಂಶ ರಕ್ತಕ್ಕೆ ಸೇರಿದ ಬಳಿಕ ಇದು ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಉತ್ಪತ್ತಿಗೆ ಪ್ರಚೋದಿಸುತ್ತದೆ. ಇದು ವಿಶೇಷವಾಗಿ ಪುರುಷರ ಜನನಾಂಗಗಳಿಗೆ ಹೆಚ್ಚಿನ ರಕ್ತಪರಿಚಲನೆಯನ್ನು ಹೆಚ್ಚಿಸಿ ಉದ್ರೇಕತೆಯನ್ನು ಹೆಚ್ಚಿಸುತ್ತದೆ. ಪರಿಣಾಮವಾಗಿ ಲೈಂಗಿಕ ಸಾಮರ್ಥ್ಯವೂ ಹೆಚ್ಚುತ್ತದೆ.

ಬೀಟ್ರೂಟ್ ರಸ

ಬೀಟ್ರೂಟ್ ರಸ

ಬೀಟ್ರೂಟ್ ರಸ ಒಟ್ಟಾರೆ ಆರೋಗ್ಯಕ್ಕೂ ಉತ್ತಮ ಹಾಗೂ ಲೈಂಗಿಕ ಶಕ್ತಿ ಹೆಚ್ಚಿಸಲೂ ನೆರವಾಗುತ್ತದೆ. ಈ ತರಕಾರಿಯ ಜ್ಯೂಸ್ ಅನ್ನು ನಿತ್ಯವೂ ಕುಡಿಯುವ ಮೂಲಕ ಉತ್ತಮ ಲೈಂಗಿಕ ಜೀವನವನ್ನು ಬಹುಕಾಲ ಅನುಭವಿಸಬಹುದು. ಇದಕ್ಕಾಗಿ ನಿತ್ಯವೂ ಒಂದು ಲೋಟ ಬೀಟ್ರೂಟ್ ರಸವನ್ನು ಕುಡಿಯುತ್ತಾ ಹೋಗಬೇಕಾಗುತ್ತದೆ. ಇದರಲ್ಲಿರುವ ಪೋಷಕಾಂಶಗಳು ರಕ್ತನಾಳಗಳನ್ನು ಸಡಿಲಿಸಿ ಹೆಚ್ಚಿನ ಪ್ರಮಾಣದ ರಕ್ತಸಂಚಾರ ಸಾಗಲು, ವಿಶೇಷವಾಗಿ ಜನನಾಂಗಗಳಿಗೆ ಹೆಚ್ಚಿನ ರಕ್ತಪರಿಚಲನೆ ದೊರಕಲು ನೆರವಾಗುತ್ತದೆ. ಪರಿಣಾಮವಾಗಿ ನಿಮಿರುತನ ಹಾಗೂ ಲೈಂಗಿಕ ಸಾಮರ್ಥ್ಯವೂ ಹೆಚ್ಚುತ್ತದೆ. ವಿಶೇಷವಾಗಿ ನಡುವಯಸ್ಸು ದಾಟಿದ ದಂಪತಿಗಳಿಗೆ ಈ ಜ್ಯೂಸ್ ವರದಾನವಾಗಿದೆ.

ದಿನಕ್ಕೆ ಎರಡು ಅಥವಾ ಮೂರು ಕಪ್ ಕಾಫಿ ಸೇವಿಸಿ!

ದಿನಕ್ಕೆ ಎರಡು ಅಥವಾ ಮೂರು ಕಪ್ ಕಾಫಿ ಸೇವಿಸಿ!

ಕಾಫಿ ಒಂದು ಅಧ್ಯಯನದ ಪ್ರಕಾರ ಯಾರು ಒಂದು ದಿನಕ್ಕೆ ಎರಡು ಅಥವಾ ಮೂರು ಕಪ್ ಸೇವಿಸುತ್ತಾರೋ ಅವರಿಗೆ ನಿಮಿರುವಿಕೆಯ ದೋಷ ಬರುವ ಸಾಧ್ಯತೆಯು ಕಾಫಿ ಸೇವಿಸದೆ ಇರುವ ಪುರುಷರಿಗೆ ಹೋಲಿಸಿದರೆ ಕಡಿಮೆ ಇರುತ್ತದೆಯಂತೆ. ಕಾಫಿಯಲ್ಲಿರುವ ಉದ್ದೀಪನಕಾರಕಗಳು ಶಿಶ್ನಕ್ಕೆ ರಕ್ತ ಸಂಚಾರವನ್ನು ಹೆಚ್ಚಿಸುತ್ತವೆಯಂತೆ ಹಾಗು ಆ ಮೂಲಕ ಶಿಶ್ನವನ್ನು ಸದೃಢವಾಗಿ ಇರಿಸುತ್ತವೆಯಂತೆ.

ಹಾಲಿಗೆ ಕೇಸರಿ ಹಾಕಿ ಸೇವಿಸಿ...

ಹಾಲಿಗೆ ಕೇಸರಿ ಹಾಕಿ ಸೇವಿಸಿ...

ಹಾಲಿನಲ್ಲಿ ಮಿಶ್ರಣ ಮಾಡಿದ ಕೇಸರಿ ಸೇವಿಸುವ ಮೂಲಕ ಪುರುಷರಲ್ಲಿ ಕಾಮೋತ್ತೇಜನ ಸಾಕಷ್ಟು ಮಟ್ಟಿಗೆ ಹೆಚ್ಚುತ್ತದೆ. ರಾತ್ರಿ ಮಲಗುವ ಮುನ್ನ ಕುಡಿದರೆ ಕಾಮಾಸಕ್ತಿ ಹೆಚ್ಚಿಸುವ ರಸದೂತಗಳು ಹೆಚ್ಚು ಬಿಡುಗಡೆಯಾಗುತ್ತವೆ ಹಾಗೂ ದಾಂಪತ್ಯ ಸುಖಕರವಾಗುತ್ತದೆ.

ಟೊಮೇಟೊ ಜ್ಯೂಸ್

ಟೊಮೇಟೊ ಜ್ಯೂಸ್

ಟೊಮೇಟೊ ಜ್ಯೂಸ್ ಸೇವಿಸುವ ಪುರುಷರಲ್ಲಿ ವೀರ್ಯದ ಗುಣಮಟ್ಟವು ಉತ್ತಮವಾಗಿರುತ್ತದೆ ಹಾಗು ಇವರಲ್ಲಿ ಪ್ರೋಸ್ಟೇಟ್ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ ಇರುತ್ತದೆ ಎಂದು ತಿಳಿದು ಬಂದಿದೆ. ಇದಕ್ಕೆ ಟೊಮಾಟೊದಲ್ಲಿರುವ "ಲೈಕೊಪೀನ್" ಎಂಬ ಆಂಟಿಆಕ್ಸಿಡೆಂಟ್ ಕಾರಣ. ಇದು ಪುರುಷರ ಜನನಾಂಗದ ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ದೇಹದಲ್ಲಿರುವ ಟಾಕ್ಸಿನ್‌ಗಳನ್ನು ಸಹ ನಿವಾರಿಸುತ್ತದೆ.

For Quick Alerts
ALLOW NOTIFICATIONS
For Daily Alerts

    English summary

    These drinks will boost your sexual stamina

    In women, one of the main changes observed is the vaginal dryness. This doesn’t mean that your sexual power has reached the end. You can have an active sex life through out your life by following healthy lifestyle. Exercise and right type of food will help you keep going. You will be able to last longer by including some drinks in your daily diet plan. These additions will make your love sessions last longer. So, here is a list of drinks that will boost your sexual stamina.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more