Latest Updates
-
ಗುಜರಾತ್ ಲಿವ್-ಇನ್ ಜೋಡಿಗಳೇ, ಈ ಹೊಸ ನಿಯಮ ಮಿಸ್ ಮಾಡ್ಬೇಡಿ! -
ಹಬ್ಬದ ಅಲಂಕಾರ: ಕಡಿಮೆ ಖರ್ಚಿನಲ್ಲಿ ನಿಮ್ಮ ಮನೆ ಕಂಗೊಳಿಸಲಿ ಹೀಗೆ! -
ಬಿಸಿಲಿನ ತಾಪಕ್ಕೆ ಸುಸ್ತಾದ್ರಾ? ಈ ಪಾನೀಯಗಳು ನಿಮ್ಮನ್ನು ಕಾಪಾಡುತ್ತವೆ -
ಬಿಸಿಗಾಳಿ ಕಾಟ: ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಕುತ್ತು! -
ಅನುಷ್ಕಾ ಶರ್ಮಾ ಫ್ಲೋರಲ್ ಲುಕ್: ಸ್ಟೇಡಿಯಂನಲ್ಲಿ ಮಿಂಚಲು ಹೀಗೆ ಮಾಡಿ -
ಬಿಸಿಲಿನಲ್ಲಿ ವ್ಯಾಯಾಮ: ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ! -
ಹೈರಾಕ್ಸ್ ಬೆಂಗಳೂರು: ಗೆಲುವಿಗಾಗಿ ಬೆಳಗಿನ ತಯಾರಿ ಹೀಗಿರಲಿ -
ಡೇಟಿಂಗ್ ಆ್ಯಪ್ ಬಳಕೆದಾರರೇ ಎಚ್ಚರ: ಈ ಕೆಫೆಗಳೇ ನಿಮ್ಮ ಜೇಬಿಗೆ ಕತ್ತರಿ! -
ದೆಹಲಿ-ಎನ್ಸಿಆರ್ ಬಿರುಗಾಳಿ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಹೀಗೆ ಮಾಡಿ -
AJIO ಮಿಡ್ನೈಟ್ ಮೇನಿಯಾ: ಸ್ನೀಕರ್ಸ್ ಮೇಲೆ ಭರ್ಜರಿ ಆಫರ್ ಪಡೆಯೋದು ಹೇಗೆ?
ಮನೆ ಮಂದಿಯ ಗೊರಕೆಯಿಂದ ನೀವು ದಣಿದಿದ್ದರೆ ಅವರಿಗೆ ಈ ಆರೈಕೆ ಮಾಡಿಸಿ...
ರಾತ್ರಿ ನೆಮ್ಮದಿಯ ನಿದ್ರೆಯನ್ನು ಮಾಡಿ, ಒಂದಿಷ್ಟು ಆಯಾಸದಿಂದ ಮುಕ್ತಿ ಹೊಂದಬೇಕು ಎನ್ನುವ ಬಯಕೆಯಲ್ಲಿ ಇದ್ದಿರುತ್ತೇವೆ. ಆದರೆ ಪಕ್ಕದಲ್ಲಿ ಮಲಗಿರುವವರ ಗೊರಕೆಯಿಂದಾಗಿ ರಾತ್ರಿ ಇಡೀ ಜಾಗರಣೆ ಮಾಡುವ ಪರಿಸ್ಥಿತಿ ಬಂದಿರುತ್ತದೆ. ಇದು ಕೆಲವೊಮ್ಮೆ ಹಾಸ್ಯದ ವಿಷಯ ಎನಿಸುವಂತಿರುತ್ತದೆಯಾದರೂ, ಗೊರಕೆಯಿಂದ ನಿದ್ರೆ ಹಾಳಾಗಿರುವಾಗ ಮೈ ಮೇಲೆ ದೆವ್ವ ಬಂದಷ್ಟು ಸಿಟ್ಟು ಬಂದಿರುತ್ತದೆ. ಗೊರಕೆ ಯಾಕೆ ಬರುತ್ತದೆ? ಎನ್ನುವ ಪ್ರಶ್ನೆ ಒಂದಲ್ಲಾ ಒಂದು ಬಾರಿ ನಮ್ಮನ್ನು ಕಾಡಿರುತ್ತದೆ. ಅದಕ್ಕೆ ಸರಿಯಾದ ಉತ್ತರ ಸಿಗದೆ ಸುಮ್ಮನಾಗಿ ಬಿಟ್ಟಿರುತ್ತೇವೆ.
ನಿದ್ರೆ ಮಾಡುವ ಸಂದರ್ಭದಲ್ಲಿ ಉಸಿರಾಟ ಕ್ರಿಯೆಯಲ್ಲಿ ಅಡೆತಡೆ ಉಂಟಾದರೆ ಅಥವಾ ಮೂಗಿನಿಂದ ಗಾಳಿ ಹೊರಗಡೆ ಹೋಗಲು ಸಾಧ್ಯವಾಗದ ಸಂದರ್ಭದಲ್ಲಿ ಬಾಯಿಂದ ಗಾಳಿ ಚಲಿಸುತ್ತದೆ. ಈ ಕ್ರಿಯೆ ಏರ್ಪಟ್ಟಾಗ ಗೊರಕೆಯ ಶಬ್ದ ಉಂಟಾಗುವುದು. ವಾಯು ಅಂಗೀಕಾರದಿಂದ ಉಂಟಾಗುವ ಗೊರಕೆಯು ಆಯಾಸ ಮತ್ತು ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಒಂದು ಅಂದಾಜಿನ ಪ್ರಕಾರ ಸುಮಾರು 70%ರಷ್ಟು ಜನರಿಗೆ ನಿದ್ರೆಯಲ್ಲಿ ಪ್ರತಿಬಂಧಕ ಉಸುರುಗಟ್ಟುವಿಕೆಯ ಸಮಸ್ಯೆ ಇದೆ. ಇದರಿಂದ ಹೃದಯ ರೋಗವನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ.
ದೊಡ್ಡ ತಲೆದಿಂಬನ್ನು ಬಳಸುವವರಿಗೆ, ನಿದ್ರೆ ಮಾತ್ರೆ ಸೇವನೆ ಮಾಡಿದರೆ, ಧೂಮಪಾನ ಮಾಡುವವರಿಗೆ ಮತ್ತು ಕೆಲವು ಔಷಧಗಳ ಸೇವನೆಯಿಂದ ಗಂಟಲಿನಲ್ಲಿ ಕಿರಿಕಿರಿ ಉಂಟಾಗುತ್ತದೆ. ಈ ಕಾರಣಗಳಿಂದಲೂ ಗೊರಕೆ ಉಂಟಾಗುವುದು. ದೇಹದಲ್ಲಿ ಅತಿಯಾದ ಕೊಬ್ಬಿನಂಶ ಇದ್ದರೂ ಈ ಸಮಸ್ಯೆ ಉಂಟಾಗುವುದು. ಇದರಿಂದ ಮುಕ್ತಿ ಹೊಂದಲು ಇರುವ ಸುಲಭ ಮಾರ್ಗಗಳು ಯಾವುದೆಂದು ತಿಳಿಯೋಣ ಬನ್ನಿ...

ಅರಿಶಿನ
ಗೊರಕೆಗೆ ಗಂಟಲ ಮೇಲ್ಭಾಗ ಮತ್ತು ಮೂಗಿನ ಹಿಂದೆ ಕಟ್ಟಿಕೊಂಡಿರುವ ಕಫ ಪ್ರಮುಖ ಕಾರಣವಾಗಿದೆ. ಇದನ್ನು ನಿವಾರಿಸಲು ಅರಿಶಿನ ಒಂದು ಉತ್ತಮ ಆಯ್ಕೆಯಾಗಿದೆ. ಇದಕ್ಕಾಗಿ ಒಂದು ಲೋಟ ಬಿಸಿಹಾಲಿನಲ್ಲಿ ಒಂದು ಚಿಕ್ಕಚಮಚ ಅರಿಶಿನ ಕದಡಿ ಕುಡಿದು ಮಲಗಿ. ನಿಧಾನವಾಗಿ ಮೂಗು ಕಟ್ಟಿಕೊಂಡಿದ್ದುದು ತೆರೆದಂತೆ ಗೊರಕೆಯೂ ಕಡಿಮೆಯಾಗುತ್ತಾ ಹೋಗುತ್ತದೆ.

ಜೇನು
ಜೇನು ಗಂಟಲ ಒಳಭಾಗದಲ್ಲಿ ಕಟ್ಟಿಕೊಂಡಿರುವ ಕಫವನ್ನು ನಿವಾರಿಸಲು ಮತ್ತು ಊತವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಇದು ಗೊರಕೆಯನ್ನು ಕಡಿಮೆಯಾಗಿಸಲು ಹೆಚ್ಚಿನ ನೆರವು ನೀಡುತ್ತದೆ. ಇದಕ್ಕಾಗಿ ಒಂದು ಲೋಟ ನೀರಿಗೆ ಒಂದು ದೊಡ್ಡಚಮಚ ಜೇನನ್ನು ಸೇರಿಸಿ ಮಲಗುವ ಮುನ್ನ ಕುಡಿಯಿರಿ.

ಮಲಗುವ ಭಂಗಿಯನ್ನು ಬದಲಿಸಿ
ಬೆನ್ನು ಅಡಿಭಾಗದಲ್ಲಿ ಬರುವಂತೆ ಮಲಗಿದರೆ ಗಂಟಲಿನ ಮಾಂಸಖಂಡಗಳು ವಿಶ್ರಾಂತಿಯನ್ನು ಮಾಡುತ್ತದೆ. ಜೊತೆಗೆ ನಿದ್ರಿಸುವಾಗ ಕಂಪಿಸುವ ಧ್ವನಿ ಮಾಡುವುದರ ಮೂಲಕ ಗಾಳಿಹೋಗುವ ದಾರಿಯಲ್ಲಿ ಅಡೆತಡೆ ಉಂಟಾಗುತ್ತದೆ. ಆಗ ಗೊರಕೆ ಉಂಟಾಗುವುದು. ಈ ಸಂದರ್ಭದಲ್ಲಿ ಒಂದು ಮಗ್ಗಲಲ್ಲಿ ಮಲಗಬೇಕು. ಆಗ ಗೊರಕೆ ನಿಲ್ಲುವುದು.

ಕ್ಯಾಮೋಮೈಲ್ ಹೂವು
ಕ್ಯಾಮೋಮೈಲ್ ಹೂವಿನ ಎಣ್ಣೆಯಲ್ಲಿ ಉರಿಯೂತ ನಿವಾರಕ ಗುಣಗಳಿರುವುದರಿಂದ ಗಂಟಲ ಹಿಂಭಾಗದ ಸ್ನಾಯುಗಳನ್ನು ಸಡಿಲಗೊಳಿಸಿ ನಿದ್ದೆಗೆ ಜಾರಲು ನೆರವಾಗುತ್ತದೆ. ಇದಕ್ಕಾಗಿ ಒಂದು ಲೋಟ ಬಿಸಿನೀರಿನಲ್ಲಿ ಕೆಲವು ಹನಿ ಕ್ಯಾಮೋಮೈಲ್ ಹೂವಿನ ಎಣ್ಣೆ ಮತ್ತು ಅಷ್ಟೇ ಪ್ರಮಾಣದ ಜೇನು ಸೇರಿಸಿ ರಾತ್ರಿ ಮಲಗುವ ಮುನ್ನ ಕುಡಿಯಿರಿ.

ದಿಂಬನ್ನು ಹಿಡಿದು ಮಲಗಿ
ಮಲಗುವಾಗ ನಿಮ್ಮ ತಲೆಯ ಕೆಳಗಿರುವ ದಿಂಬನ್ನು ಹಿಡಿದು ಮಲಗುವುದರಿಂದ ನಿಮ್ಮ ತಲೆಯು ಒಂದೇ ಮಾದರಿಯಲ್ಲಿರುತ್ತದೆ. ಉಸಿರಾಟ ಕ್ರಿಯೆಯಲ್ಲೂ ಅಡ್ಡಿ ಉಂಟಾಗದು ಗೊರಕೆಯೂ ಬರದು. ಇಲ್ಲವಾದರೆ ದೇಹವು ಒಂದೊಂದು ಮಾದರಿಯ ಬದಲಾವಣೆಯನ್ನು ಮಾಡುತ್ತಿದ್ದರೆ ಉಸಿರಾಟ ಕ್ರಿಯೆಯಲ್ಲಿ ವ್ಯತ್ಯಾಸ ಹೊಂದುತ್ತದೆ. ಜೊತೆಗೆ ಗೊರಕೆಯು ಆರಂಭವಾಗುವುದು.

ತೂಕ ಕಡಿಮೆಮಾಡಿಕೊಳ್ಳಿ
ಗಂಟಲ ಹಿಂಬದಿಯಲ್ಲಿರುವ ಗಾಳಿ ರವಾನೆಯಾಗುವ ಸ್ಥಳವು ಕಿರಿದಾಗುವುದರಿಂದ ಗೊರಕೆ ಉಂಟಾಗುವುದು. ಇದು ಕತ್ತಿನ ಭಾಗದಲ್ಲಿ ಅತಿಯಾದ ಬೊಜ್ಜಿರುವವರಲ್ಲಿ ಹೆಚ್ಚೆಂದು ಹೇಳಬಹುದು. ಹಾಗಾಗಿ ದೇಹದ ತೂಕವನ್ನು ಆದಷ್ಟು ಕಡಿಮೆ ಮಾಡಿಕೊಂಡರೆ ಗೊರಕೆಯಿಂದ ಮುಕ್ತಿ ಹೊಂದಬಹುದು.

ಏಲಕ್ಕಿ
ಏಲಕ್ಕಿಯ ಪರಿಮಳವನ್ನು ಹೀರುವುದರಿಂದ ಮೂಗಿನ ಹೊಳ್ಳೆ ಕಟ್ಟಿಕೊಂಡಿರುವುದು, ಉಸಿರಾಟವನ್ನು ಸರಾಗಗೊಳಿಸುವುದು ಸಾಧ್ಯವಾಗುತ್ತದೆ. ಇದಕ್ಕಾಗಿ ಅರ್ಧ ಚಿಕ್ಕ ಚಮಚ ಏಲಕ್ಕಿಯನ್ನು ಒಂದು ಲೋಟ ನೀರಿನಲ್ಲಿ ಚೆನ್ನಾಗಿ ಕುದಿಸಿ ತಣಿಸಿ ರಾತ್ರಿ ಮಲಗುವ ಮುನ್ನ ಗಟಗಟನೇ ಕುಡಿದು ಮಲಗಿ.

ಅರಿಶಿನ ಮತ್ತು ಹಾಲು
ಹಾಲು ಮತ್ತು ಅರಿಶಿನದಲ್ಲಿ ಪ್ರತಿಜೀವಕ ಮತ್ತು ಆಂಟಿಸೆಪ್ಟಿಕ್ ಗುಣ ಇರುವುದರಿಂದ ಇವು ಗೊರಕೆಯನ್ನು ತಗ್ಗಿಸುತ್ತದೆ. ನಿತ್ಯವು ಮಲಗುವ ಮುನ್ನ ಒಂದು ಕಪ್ ಹಾಲಿಗೆ 2 ಚಮಚ ಅರಿಶಿನ ಪುಟಿ ಸೇರಿಸಿ ಸವಿದರೆ ಕೊರಕೆಯಿಂದ ಮುಕ್ತಿ ಹೊಂದಬಹುದು.

ವ್ಯಾಯಾಮ ಮಾಡಿ
ಸೂಕ್ತ ರೀತಿಯ ವ್ಯಾಯಾಮ ಮಾಡುವುದರಿಂದ ನಾಲಿಗೆಯ ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತದೆ. ಇದರೊಟ್ಟಿಗೆ ದೇಹದ ಎಲ್ಲಾ ಅಂಗಾಂಗಗಳಿಗೂ ಯೋಗ್ಯ ರೀತಿಯಲ್ಲಿ ವ್ಯಾಯಾಮವಾಗಿ, ದೇಹವು ಸ್ವಲ್ಪ ಸಡಿಲವಾದ ಅನುಭವ ಆಗುವುದು. ಉಸಿರಾಟ ಕ್ರಿಯೆಯೂ ಸುಗಮವಾಗುವುದು. ಗೊರಕೆಯು ನಿಲ್ಲುವುದು.

ಮೂಗಿನ ಹೊಳ್ಳೆಯನ್ನು ಸ್ವಚ್ಛಗೊಳಿಸಿ
ಮೂಗಿನ ಮಾರ್ಗವನ್ನು ಸ್ವಚ್ಛವಾಗಿಡಲು ಪ್ರಯತ್ನಿಸಿ. ಹೀಗೆ ಮಾಡುವುದರಿಂದ ಬಾಯಲ್ಲಿ ಉಸಿರಾಡುವ ಬದಲು ಮೂಗಿನ ಮೂಲಕವೇ ಉಸಿರಾಡಲು ಅವಕಾಶವಿರುತ್ತದೆ. ಮಲಗುವ ಕೋಣೆಯಲ್ಲಿ ಧೂಳು, ಸಾಕು ಪ್ರಾಣಿಗಳ ವಾಸ ಇರದಂತೆ ನೋಡಿಕೊಳ್ಳಿ. ಆದಷ್ಟು ಮಲಗುವ ಹಾಸಿಗೆಯು ಸ್ವಚ್ಛವಾಗಿರುವಂತೆ ನೋಡಿಕೊಳ್ಳಿ. ಹೀಗೂ ಸಹ ಗೊರಕೆ ಬರುವುದನ್ನು ತಡೆಯಬಹುದು.



Click it and Unblock the Notifications











