For Quick Alerts
ALLOW NOTIFICATIONS  
For Daily Alerts

ನೋಡಿ, ಈ ಸಮಸ್ಯೆ ಇರುವವರು, ಆದಷ್ಟು ಬಾಳೆಹಣ್ಣಿನಿಂದ ದೂರವಿರಿ..

By Hemanth
|

ಬಾಳೆಹಣ್ಣು ಎನ್ನುವುದು ವಿಶ್ವದ ಯಾವ ಮೂಲೆಗೆ ಹೋದರು ನಿಮಗೆ ಸಿಗುವುದು. ಹಲವಾರು ರೀತಿಯ ಪೋಷಕಾಂಶಗಳನ್ನು ಒಳಗೊಂಡಿರುವ ಬಾಳೆಹಣ್ಣನ್ನು ವಿವಿಧ ದೇಶಗಳಲ್ಲಿ ಬೆಳೆಯುವರು. ಮಾತ್ರವಲ್ಲದೆ, ಬೆಳೆಯದೆ ಇರುವ ದೇಶಗಳಲ್ಲಿ ಆಮದು ಕೂಡ ಮಾಡಿಕೊಳ್ಳುವರು. ಬಾಳೆಹಣ್ಣಿನಿಂದ ಆರೋಗ್ಯಕ್ಕೆ ಆಗುವಂತಹ ಲಾಭವೇ ಇದಕ್ಕೆ ಕಾರಣ. ಬಾಳೆಹಣ್ಣನ್ನು ತುಂಬಾ ಆರೋಗ್ಯಕಾರಿ ಆಹಾರವೆಂದು ಪರಿಗಣಿಸಲಾಗಿದೆ.

ದಿನಕ್ಕೆರಡು ಬಾಳೆಹಣ್ಣು ಸೇವಿಸಿ, ವೈದ್ಯರಿಂದ ದೂರವಿರಿ!

ಇದರಲ್ಲಿರುವಂತಹ ಪೊಟಾಶಿಯಂ, ಮೆಗ್ನಿಶಿಯಂ ಮತ್ತು ವಿಟಮಿನ್ ಬಿ ದೇಹಕ್ಕೆ ತುಂಬಾ ಒಳ್ಳೆಯದು. ಆದರೆ ಅಮೃತ ಕೂಡ ವಿಷವಾಗಬಲ್ಲದು ಎನ್ನುತ್ತಾರಲ್ಲ, ಅದೇ ರೀತಿ ಬಾಳೆಹಣ್ಣನ್ನು ಇತಿಮಿತಿಯಲ್ಲಿ ತಿನ್ನಬೇಕು ಮತ್ತು ಕೆಲವೊಂದು ಸಮಸ್ಯೆ ಇರುವವರು ಬಾಳೆಹಣ್ಣು ಸೇವಿಸಲೇಬಾರದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಅವರ ಪ್ರಕಾರ ದಿನಕ್ಕೆ 2-3 ಬಾಳೆಹಣ್ಣು ತಿಂದರೆ ಸಾಕು. ಯಾವೆಲ್ಲಾ ಸಮಸ್ಯೆ ಇರುವವರು ಬಾಳೆಹಣ್ಣು ಸೇವಿಸಬಾರದು ಎಂದು ತಿಳಿಯಿರಿ...

ಬೊಜ್ಜು ಅಥವಾ ಹೆಚ್ಚು ತೂಕ ಹೊಂದಿರುವವರು

ಬೊಜ್ಜು ಅಥವಾ ಹೆಚ್ಚು ತೂಕ ಹೊಂದಿರುವವರು

ಬಾಳೆಹಣ್ಣಿನಲ್ಲಿ ಇರುವ ಅಧಿಕ ಕಾರ್ಬ್ರೋಹೈಡ್ರೇಟ್ಸ್, ಕ್ಯಾಲರಿ ಮತ್ತು ಸಕ್ಕರೆಯಂಶವು ಕೊಬ್ಬನ್ನು ಹೆಚ್ಚಿಸಿ ಬೊಜ್ಜು ಇರುವವರ ಪರಿಸ್ಥಿತಿ ಮತ್ತಷ್ಟು ಕೆಡಿಸಬಹುದು.

ಹೈಪರ್ಕಲೆಮಿಯಾ

ಹೈಪರ್ಕಲೆಮಿಯಾ

ಬಾಳೆಹಣ್ಣಿನಲ್ಲಿ ಇರುವಂತಹ ಪೊಟಾಶಿಯಂ ಹೃದಯದ ಸಂಬಂಧಿಸಿದ ಸಮಸ್ಯೆಗಳ ಅಪಾಯ ಹೆಚ್ಚಿಸಿ ಆತಂಕ ಉಂಟು ಮಾಡುವುದು.

ಮೈಗ್ರೇನ್

ಮೈಗ್ರೇನ್

ಬಾಳೆಹಣ್ಣಿನಲ್ಲಿ ಇರುವಂತಹ ಥೈಮೇನ್ ತಲೆನೋವು ಹೆಚ್ಚು ಮಾಡಿ ನಿಮ್ಮ ನರವ್ಯವಸ್ಥೆಗೆ ಹಾನಿ ಉಂಟು ಮಾಡಬಹುದು... ಹಾಗಾಗಿಮೈಗ್ರೇನ್ ಸಮಸ್ಯೆ ಇರುವವರು, ಬಾಳೆ ಹಣ್ಣಿನಿಂದ ದೂರವಿರಿ

ಮಧುಮೇಹ

ಮಧುಮೇಹ

ಬಾಳೆಹಣ್ಣಿನಲ್ಲಿ ಇರುವಂತಹ ಕಾರ್ಬ್ರ್ಸ್ ಮತ್ತು ಸಕ್ಕರೆಯಂಶವು ಸಕ್ಕರೆ ಮಟ್ಟವನ್ನು ಹೆಚ್ಚು ಮಾಡಿ ಅಸಮತೋಲನ ಉಂಟು ಮಾಡಬಹುದು.

ಅಲರ್ಜಿ

ಅಲರ್ಜಿ

ಕೆಲವು ಮಂದಿಗೆ ಬಾಳೆಹಣ್ಣು ತಿನ್ನುವುದರಿಂದ ಅಲರ್ಜಿ ಉಂಟಾಗುತ್ತದೆ. ಊತ, ದೇಹ ಕೆಂಪಾಗುವುದು ಇತ್ಯಾದಿ ಅಲರ್ಜಿ ಉಂಟಾಗಬಹುದು.

ಕಿಡ್ನಿ

ಕಿಡ್ನಿ

ಬಾಳೆಹಣ್ಣಿನಲ್ಲಿ ಇರುವ ಪೊಟಾಶಿಯಂ ಕಿಡ್ನಿಯ ಮೇಲೆ ಭಾರ ಹಾಕುವುದರಿಂದ ಸಮಸ್ಯೆ ಉಂಟಾಗಬಹುದು.

English summary

These 6 Kinds Of People Eating Bananas Can Be Injurious To Health

Bananas are one of the healthiest foods, with potassium, magnesium and Vitamin B. But eating too many or if you have one of these conditions could turn out to be harmful. Dietician at AIIMS Rekha Paul Shah, says normally eating 2 -3 bananas a day is enough. Here are the 7 conditions in which one should not eat bananas.
X
Desktop Bottom Promotion