ಅಧ್ಯಯನ ವರದಿ: ಉದ್ದಗಿನ ಜನರಿಗೆ ರಕ್ತ ಹೆಪ್ಪುಗಟ್ಟುವ ಅಪಾಯ ಹೆಚ್ಚಂತೆ!

By Hemanth
Subscribe to Boldsky

ಉದ್ದವಿರುವ ವ್ಯಕ್ತಿಗಳ ರಕ್ತನಾಳಗಳಲ್ಲಿ ರಕ್ತಹೆಪ್ಪುಗಟ್ಟುವ ಅಪಾಯದ ಪ್ರಮಾಣ ಹೆಚ್ಚಿದೆ ಎಂದು ಎರಡು ದಶಲಕ್ಷ ಒಡಹುಟ್ಟಿದವರ ಮೇಲೆ ನಡೆಸಿರುವಂತಹ ಅಧ್ಯಯನಿಂದ ತಿಳಿದುಬಂದಿದೆ. ಸಿರೆಯ ಥ್ರಂಬೋಬಾಂಬಲಿಸಂ ಎನ್ನುವ ರಕ್ತನಾಳದಲ್ಲಿ ರಕ್ತಹೆಪ್ಪುಗಟ್ಟುವ ಸಮಸ್ಯೆಯು ಎತ್ತರಕ್ಕೆ ಸಂಬಂಧಿಸಿದ್ದಾಗಿದೆ ಎಂದು ಸ್ವೀಡನ್‌ನ ಲುಂಡ್ ಯೂನಿವರ್ಸಿಟಿಯ ಅಧ್ಯಯನಗಳು ಹೇಳಿವೆ.

ಕುಳ್ಳಗಿರುವ ಜನರಿಗೆ ಹೋಲಿಸಿದರೆ ಎತ್ತರವಿರುವ ಜನರಲ್ಲಿ ರಕ್ತನಾಳದಲ್ಲಿ ರಕ್ತಹೆಪ್ಪುಗಟ್ಟುವ ಸಮಸ್ಯೆ ಹೆಚ್ಚಾಗಿ ಕಂಡುಬರುವುದು. ಐದು ಅಡಿ ಮೂರು ಇಂಚಿಗಿಂತಲೂ ಕಡಿಮೆ ಎತ್ತರ ಇರುವಂತಹ ವ್ಯಕ್ತಿಗಳಲ್ಲಿ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟುವ ಅಪಾಯವು, ಆರು ಅಡಿ ಎರಡು ಇಂಚು ಎತ್ತರ ಇರುವವರಿಗೆ ಹೋಲಿಸಿದರೆ ಶೇ.65ರಷ್ಟು ಕಡಿಮೆ ಇರುವುದು.

Increased Risk Of Blood Clots

ಮಹಿಳೆಯರಲ್ಲಿ ಐದು ಅಡಿ ಒಂದು ಇಂಚಿಗಿಂತ ಕಡಿಮೆ ಎತ್ತರ ಇರುವಂತಹವರಲ್ಲಿ ಮತ್ತು ಮೊದಲ ಸಲ ಗರ್ಭಧರಿಸುತ್ತಾ ಇರುವವರಲ್ಲಿ, ಆರು ಅಡಿ ಮತ್ತು ಅದಕ್ಕಿಂತ ಎತ್ತರ ಇರುವ ಮಹಿಳೆಯರಿಗೆ ಹೋಲಿಸಿದರೆ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟುವ ಅಪಾಯವು ಶೇ.69ರಷ್ಟು ಕಡಿಮೆಯಿದೆ ಎಂದು ಅಧ್ಯಯನಗಳು ಹೇಳಿವೆ. ಎತ್ತರದ ಬಗ್ಗೆ ನಾವು ಏನೂ ಮಾಡುವಂತಿಲ್ಲ.

ಎತ್ತರ ಇರುವ ಜನರ ಸಂಖ್ಯೆಯು ಹೆಚ್ಚಾಗುತ್ತಾ ಇದೆ. ಇದರಿಂದಾಗಿಯೇ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟುವ ಅಪಾಯವು ಹೆಚ್ಚಿದೆ ಎಂದು ಲುಂಡ್ ಯೂನಿವರ್ಸಿಟಿಯ ಸಹಾಯಕ ಪ್ರೊಪೆಸರ್ ಬೆಂಗ್ಟ್ ಝೊಲ್ಲರ್ ಹೇಳಿದ್ದಾರೆ. ಈ ಅಧ್ಯಯನ ವರದಿಯು ಜರ್ನಲ್ ಸರ್ಕ್ಯುಲೇಷನ್: ಕಾರ್ಡಿಯೋವಾಸ್ಕ್ಯೂಲರ್ ಜೆನೆಟಿಕ್ಸ್‌ನಲ್ಲಿ ಪ್ರಕಟವಾಗಿದೆ.

For Quick Alerts
ALLOW NOTIFICATIONS
For Daily Alerts

    English summary

    Tall People At Increased Risk Of Blood Clots: Study

    Tall people are at a higher risk of developing blood clots in veins compared to those who are shorter, according to a study of more than two million siblings. Researchers from Lund University in Sweden found that the risk of venous thromboembolism - a type of blood clot that starts in a vein - was associated with height. The study found that tall people were on higher risk as compared to shorter participants.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more