For Quick Alerts
ALLOW NOTIFICATIONS  
For Daily Alerts

ದಿನಕ್ಕೆ ಒಂದೇ ಒಂದು ಬಾಳೆಹಣ್ಣು ತಿಂದರೆ ಸಾಕು, ಖಂಡಿತ ಆರೋಗ್ಯವಾಗಿರುವಿರಿ

By Deepu
|

ದಿನಕ್ಕೊಂದು ಸೇಬು ತಿನ್ನುವುದರಿಂದ ವೈದ್ಯರನ್ನು ದೂರವಿರಿಸಬಹುದು ಎಂಬುದೊಂದು ಆಂಗ್ಲ ಗಾದೆ. ಆದರೆ ಭಾರತೀಯರ ಮಟ್ಟಿಗೆ ದಿನಕ್ಕೊಂದು ಬಾಳೆಹಣ್ಣು ತಿನ್ನುವ ಮೂಲಕ ವೈದ್ಯರನ್ನು ದೂರವಿಡುವುದು ಮಾತ್ರವಲ್ಲ, ಇನ್ನೂ ಹೆಚ್ಚಿನದನ್ನು ಪಡೆಯಬಹುದು. ನಿಸರ್ಗ ಪ್ರತಿ ಹಣ್ಣು ತರಕಾರಿಯಲ್ಲಿಯೂ ಪ್ರತ್ಯೇಕವಾದ ಪೋಷಕಾಂಶಗಳನ್ನು ನೀಡಿದೆ.

ಆದರೆ ನಮ್ಮ ಆರೋಗ್ಯಕ್ಕೆ ಪೂರಕವಾಗುವಂತಹ ಬಹುತೇಕ ಎಲ್ಲವನ್ನೂ ಕೆಲವು ಹಣ್ಣು ತರಕಾರಿಗಳಲ್ಲಿ ಮಾತ್ರ ಇರಿಸಿದೆ. ಬಾಳೆಹಣ್ಣು ಇಂತಹ ಒಂದು ಹಣ್ಣಾಗಿದ್ದು ಇದರಲ್ಲಿ ಉತ್ತಮ ಪ್ರಮಾಣದ ವಿಟಮಿನ್ನುಗಳು, ಪೊಟ್ಯಾಶಿಯಂ, ಕರಗುವ ನಾರು ಮತ್ತು ನೈಸರ್ಗಿಕ ಸಕ್ಕರೆ ಇದೆ.

ಇದರಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಇಲ್ಲದೇ ಇರುವ ಕಾರಣ ಇದು ಯಾರು ಬೇಕಾದರೂ ತಿನ್ನಬಹುದಾದ ಆಹಾರವಾಗಿದೆ. ವಿಶೇಷವಾಗಿ ಇದರಲ್ಲಿರುವ ಹೆಚ್ಚಿನ ಮೆಗ್ನೇಶಿಯಂ ಪ್ರಮಾಣದ ಕಾರಣದಿಂದ ಮಗ್ನೇಶಿಯಂ ಮಾರಕವಾದ ಕೆಲವು ಮಧುಮೇಹ ರೋಗಿಗಳು ತಿನ್ನಕೂಡದು ಎಂದು ವೈದ್ಯರು ಅಪ್ಪಣೆ ನೀಡುವವರೆಗೂ ಉಳಿದವರೆಲ್ಲರೂ ಯಾವುದೇ ಅನುಮಾನ ಅಳುಕಿಲ್ಲದೇ ನಿತ್ಯವೂ ತಿನ್ನಲೇಬೇಕಾದ ಹಣ್ಣಾಗಿದೆ. ಬನ್ನಿ, ಇದನ್ನು ನಿತ್ಯವೂ ತಿನ್ನುವುದರಿಂದ ಇನ್ನೂ ಯಾವ ಪ್ರಯೋಜನಗಳಿವೆ ಎಂಬುದನ್ನು ಮುಂದೆ ಓದಿ...

 ಖಿನ್ನತೆಯನ್ನು ಕಡಿಮೆಗೊಳಿಸುತ್ತದೆ

ಖಿನ್ನತೆಯನ್ನು ಕಡಿಮೆಗೊಳಿಸುತ್ತದೆ

ಬಾಳೆಹಣ್ಣಿನಲ್ಲಿರುವ ಪೋಷಕಾಂಶಗಳಲ್ಲಿ ಟ್ರಿಪ್ಟೋಫಾನ್ (tryptophan) ಸಹಾ ಒಂದು. ಇದು ರಕ್ತದಲ್ಲಿ ಸೇರಿದ ಬಳಿಕ ರಾಸಾಯನಿಕ ಪ್ರತಿಕ್ರಿಯೆಗೊಂಡು ಸೆರೋಟೋನಿನ್ ಎಂಬ ರಸದೂತವಾಗಿ ಮಾರ್ಪಾಡು ಹೊಂದುತ್ತದೆ. ಈ ಸೆರೋಟೋನಿನ್ ಒಂದು ನ್ಯೂರೋಟ್ರಾನ್ಸ್ ಮಿಟರ್ (ಮೆದುಳನ್ನು ಶಾಂತಗೊಳಿಸುವ ರಸದೂತ) ಆಗಿದ್ದು ಮನಸ್ಸನ್ನು ಶಾಂತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ಖಿನ್ನತೆಗೆ ಒಳಗಾಗಿದ್ದ ಮನ ಪ್ರಶಾಂತಗೊಂಡು ಮತ್ತೆ ಸಹಜಸ್ಥಿತಿಗೆ ಬರಲು ಸಹಕರಿಸುತ್ತದೆ.

ರಕ್ತದೊತ್ತಡ ಕಡಿಮೆಗೊಳಿಸಲು ನೆರವಾಗುತ್ತದೆ

ರಕ್ತದೊತ್ತಡ ಕಡಿಮೆಗೊಳಿಸಲು ನೆರವಾಗುತ್ತದೆ

ಬಾಳೆಹಣ್ಣಿನಲ್ಲಿ ಅತಿಕಡಿಮೆ ಉಪ್ಪು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಶಿಯಂ ಇದೆ. ಈ ಪ್ರಮಾಣವನ್ನು FDA(Food and Drug administration) ಇಲಾಖೆ ಅಂಗೀಕರಿಸಿದ್ದು ರಕ್ತದೊತ್ತಡ ಕಡಿಮೆಗೊಳಿಸುವಲ್ಲಿ ನೆರವಾಗುತ್ತದೆ ಹಾಗೂ ತನ್ಮೂಲಕ ಹೃದಯ ಸ್ತಂಭನೆಯ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ.

ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ

ನಮ್ಮ ಜೀರ್ಣರಸದಲ್ಲಿರುವ ಅಂಶಗಳಲ್ಲಿ ಪೆಕ್ಟಿನ್ ಸಹಾ ಒಂದು. ಇದು ಬಾಳೆಹಣ್ಣಿನಲ್ಲಿ ಉತ್ತಮ ಪ್ರಮಾಣದಲ್ಲಿರುವ ಕಾರಣ ಜೀರ್ಣಕ್ರಿಯೆ ಸುಲಭಗೊಳ್ಳುತ್ತದೆ. ಹೆಚ್ಚುವರಿ ಪೆಕ್ಟಿನ್ ಆಹಾರದಲ್ಲಿನ ವಿಷಕಾರಿ ವಸ್ತುಗಳನ್ನು ಒಡೆದು ತ್ಯಾಜ್ಯರೂಪದಲ್ಲಿ ದೇಹದಿಂದ ಹೊರಹಾಕಲು ಸಹಕಾರಿಯಾಗಿದೆ. ಜೊತೆಗೇ ದೇಹ ಅರಗಿಸಿಕೊಳ್ಳಲಾರದ ಖನಿಜಗಳನ್ನು ನಿವಾರಿಸಲೂ ಬಳಕೆಯಾಗುತ್ತದೆ.

ಆಹಾರದ ಇತರ ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ

ಆಹಾರದ ಇತರ ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ

ಬಾಳೆಹಣ್ಣಿನಲ್ಲಿರುವ ಕರಗುವ ನಾರು ಹೊಟ್ಟೆಯಲ್ಲಿ ಕರಗಿ ಜೀರ್ಣಕ್ರಿಯೆಗೆ ಅವಶ್ಯವಿರುವ ಕೆಲವು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ನೆರವಾಗುತ್ತದೆ. prebiotic ಎಂದು ಕರೆಯಲಾಗುವ ಈ ವಿದ್ಯಮಾನದಿಂದ ಇತರ ಆಹಾರಗಳ ಮೂಲಕ ಲಭ್ಯವಾದ, ಸುಲಭವಾಗಿ ಜೀರ್ಣವಾಗದ ಆಹಾರವನ್ನು ಈ ಬ್ಯಾಕ್ಟೀರಿಯಾಗಳು ಜೀರ್ಣಿಸಲು ನೆರವಾಗುತ್ತದೆ. ಅಲ್ಲದೇ ಜೀರ್ಣಕ್ರಿಯೆಗೆ ನೆರವಾಗುವ ಇತರ ಎಂಜೈಮು(enzymes)ಗಳನ್ನು ಉತ್ಪಾದಿಸುತ್ತದೆ. ಈ ಎಂಜೈಮುಗಳು ಹೆಚ್ಚಿನ ಪ್ರೋಟೀನ್ ಯುಕ್ತ ಆಹಾರ (ಉದಾಹರಣೆಗೆ ಮಾಂಸ) ಗಳನ್ನು ಜೀರ್ಣಿಸಿಕೊಳ್ಳಲು ಅಗತ್ಯವಾಗಿವೆ.

ಅಲ್ಸರ್ ರೋಗಿಗಳು ತಿನ್ನಬಹುದಾದ ಏಕೈಕ ಆಹಾರ

ಅಲ್ಸರ್ ರೋಗಿಗಳು ತಿನ್ನಬಹುದಾದ ಏಕೈಕ ಆಹಾರ

ಕರುಳುಗಳ ಒಳಗೆ ಹುಣ್ಣು ಅಥವಾ ಅಲ್ಸರ್ ಆಗಿರುವ ರೋಗಿಗಳಿಗೆ ಬಾಳೆಹಣ್ಣು ಬಿಟ್ಟರೆ ಬೇರೆ ಯಾವ ಆಹಾರವನ್ನೂ ನೀಡುವಂತಿಲ್ಲ. ಏಕೆಂದರೆ ಬಾಳೆಹಣ್ಣು ಮಾತ್ರ ಕರುಳುಗಳಲ್ಲಿ ಹಾಯುವಾಗ ಹುಣ್ಣುಗಳಿಗೆ ಘಾಸಿಯುಂಟುಮಾದುವುದಿಲ್ಲ. ಬದಲಿಗೆ ಬಾಳೆಹಣ್ಣು ಈ ಹುಣ್ಣುಗಳನ್ನು ಸವರಿಕೊಂಡು ಹೋದ ಬಳಿಕ ಒಂದು ಪದರವನ್ನು ನಿರ್ಮಿಸಿ ಜಠರದ ಆಮ್ಲೀಯ ರಸಗಳೂ ಹುಣ್ಣುಗಳ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳುತ್ತದೆ.

ಧೂಮಪಾನ ತ್ಯಜಿಸಲು ನೆರವಾಗುತ್ತದೆ

ಧೂಮಪಾನ ತ್ಯಜಿಸಲು ನೆರವಾಗುತ್ತದೆ

ಬಾಳೆಹಣ್ಣಿನಲ್ಲಿರುವ ಬಿ-ವಿಟಮಿನ್, ಪೊಟ್ಯಾಶಿಯಂಗಳು ಧೂಮಪಾನ ತ್ಯಜಿಸುತ್ತಿರುವವರ ರಕ್ತದಲ್ಲಿ ನಿಕೋಟಿನ್ ಇಲ್ಲದೇ ದೇಹ ಎದುರಿಸುವ ವ್ಯಾಕುಲತೆಯನ್ನು ಕಡಿಮೆಗೊಳಿಸಿ ಮತ್ತೆ ಧೂಮಪಾನದತ್ತ ಮನ ಹೊರಳಿಸುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ. ಪರಿಣಾಮವಾಗಿ ಧೂಮಪಾನದ ಚಟದಿಂದ ಬೇಗನೇ ಮುಕ್ತಿ ಪಡೆಯಬಹುದು.

ಮಲಬದ್ಧತೆಯಿಂದ ರಕ್ಷಿಸುತ್ತದೆ

ಮಲಬದ್ಧತೆಯಿಂದ ರಕ್ಷಿಸುತ್ತದೆ

ಬಾಳೆಹಣ್ಣಿನಲ್ಲಿರುವ ಕರಗದ ನಾರು ಜಠರದಲ್ಲಿ ಮತ್ತು ಕರುಳುಗಳಲ್ಲಿ ಜೀರ್ಣವಾಗದೇ ತ್ಯಾಜ್ಯಗಳನ್ನು ಸುಲಭವಾಗಿ ಹೊರಹಾಕಲು ನೆರವಾಗುತ್ತದೆ. ಇದರಿಂದ ಮಲಬದ್ಧತೆಯಾಗುವುದರಿಂದ ರಕ್ಷಣೆ ಪಡೆದಂತಾಗುತ್ತದೆ. ರಾತ್ರಿ ಊಟದ ಬಳಿಕ ತಿನ್ನುವ ಒಂದು ಬಾಳೆಹಣ್ಣು ಮರುದಿನದ ವಿಸರ್ಜನೆಯನ್ನು ಸುಲಭಗೊಳಿಸುತ್ತದೆ.

ಕಣ್ಣುಗಳ ಆರೋಗ್ಯ ಉತ್ತಮಗೊಳ್ಳುತ್ತದೆ

ಕಣ್ಣುಗಳ ಆರೋಗ್ಯ ಉತ್ತಮಗೊಳ್ಳುತ್ತದೆ

ಕಣ್ಣುಗಳ ಆರೋಗ್ಯಕ್ಕೆ ವಿಟಮಿನ್ ಎ ಅತಿ ಅಗತ್ಯವಾಗಿದ್ದು ಬಾಳೆಹಣ್ಣಿನಲ್ಲಿ ಈ ಪೋಷಕಾಂಶ ಉತ್ತಮ ಪ್ರಮಾಣದಲ್ಲಿದೆ. ವಿಶೇಷವಾಗಿ ಕಣ್ಣಿನ ಪಾಪೆ ಮತ್ತು ಮಸೂರ (cornea) ದ ಆರೋಗ್ಯಕ್ಕೆ ವಿಟಮಿನ್ ಎ ಅಗತ್ಯವಾಗಿದ್ದು ನಿತ್ಯವೂ ಬಾಳೆಹಣ್ಣೊಂದನ್ನು ಸೇವಿಸುವ ಮೂಲಕ ಕಣ್ಣುಗಳ ಆರೋಗ್ಯ ಉತ್ತಮವಾಗಿರಿಸಿಕೊಳ್ಳಬಹುದು.

ಅಧಿಕ ರಕ್ತದೊತ್ತಡ

ಅಧಿಕ ರಕ್ತದೊತ್ತಡ

ಬಾಳೆಹಣ್ಣಿನಲ್ಲಿ ಅತಿ ಹೆಚ್ಚಿನ ಪೊಟ್ಯಾಶಿಯಂ ಮತ್ತು ಅತಿ ಕಡಿಮೆ ಸೋಡಿಯಂ ಲವಣಗಳಿವೆ. ಇದು ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ತನ್ಮೂಲಕ ಹೃದಯದ ಮೇಲಿನ ಭಾರವನ್ನು ಕಡಿಮೆಗೊಳಿಸಿ ಸ್ತಂಭನದ ಸಾಧ್ಯತೆಯನ್ನೂ ಕಡಿಮೆಗೊಳಿಸುತ್ತದೆ.

ಎದೆಯುರಿ

ಎದೆಯುರಿ

ಜಠರದಲ್ಲಿ ಆಮ್ಲೀಯತೆ ಹೆಚ್ಚಾಗಿ ಅನ್ನನಾಳದ ಮೂಲಕ ಹೊರಬರಲು ಯತ್ನಿಸುವಾಗ ಉಂಟಾಗುವ ಉರಿಯನ್ನು ಶಮನಗೊಳಿಸಲು ತಕ್ಷಣ ಒಂದೆರಡು ಬಾಳೆಹಣ್ಣು ತಿನ್ನುವುದು ಉತ್ತಮ.

ಪೌಷ್ಟಿಕಾಂಶಗಳ ಆಗರ

ಪೌಷ್ಟಿಕಾಂಶಗಳ ಆಗರ

ಸಾಮಾನ್ಯವಾಗಿ ಬಾಳೆಹಣ್ಣು ನಮ್ಮ ಹಿತ್ತಲಲ್ಲೇ ಬೆಳೆಯುವುದರಿಂದ ನಮಗೆ ಅದರ ಮೌಲ್ಯ ತಿಳಿದಿರದು. ಅದಕ್ಕೇ, ಬಾಳೆ ಹಣ್ಣಿನ ವೈಶಿಷ್ಟ್ಯ ತಿಳಿಸುವುದೇ ಈ ಬರೆಹದ ಉದ್ದೇಶ!! ಬಾಳೆ ಹಣ್ಣಿನಲ್ಲಿ ಸಕ್ಕರೆ, ನಾರಿನಂಶ, ಬಿ6 ವಿಟಮಿನ್, ಪೊಟ್ಯಾಶಿಯಂ ಮತ್ತು ಮೆಗ್ನೇಶಿಯಂ ಮುಂತಾದ ಖನಿಜಾಂಶಗಳೂ ಸೇರಿಕೊಂಡಿದೆ. ಒಂದು ಸಾಮಾನ್ಯ ಬಾಳೆಯ ಹಣ್ಣಿನಲ್ಲಿ 105 ಕ್ಯಾಲೋರಿಗಳಿದ್ದು, ವ್ಯಾಯಾಮದ ಅನಂತರದ ಆಯಾಸವನ್ನು ಪರಿಹರಿಸುವ ತಕ್ಷಣದ ಸಂಪೂರ್ಣ ಆಹಾರವಿದು.ಬೆವರಿದ ನಿಮ್ಮ ಶರೀರಕ್ಕೆ ತೇವಾಂಶವನ್ನು ಮರುಪೂರಣ ಗೊಳಿಸುವ ಶಕ್ತಿ ಇದಕ್ಕಿದೆ. ಆದ್ದರಿಂದಲೇ ಬೇಧಿ ಕಾಡಿದಾಗ ಇದು ನಿಮಗೆ ಮರು ಚೈತನ್ಯ ನೀಡುವುದು. ಹಾಗಂತ ಮಲಬದ್ಧತೆಗೂ ಇದು

ಸೂಕ್ತ ಪರಿಹಾರವಾಗಬಲ್ಲದು.

ಎರಡು ಬಾಳೆಹಣ್ಣು ತಿಂದರೆ ವ್ಯಾಯಾಮ ಸುಲಭ

ಎರಡು ಬಾಳೆಹಣ್ಣು ತಿಂದರೆ ವ್ಯಾಯಾಮ ಸುಲಭ

ನಿತ್ಯವೂ ವ್ಯಾಯಾಮ ಮಾಡುವವರು ವ್ಯಾಯಾಮ ಪ್ರಾರಂಭಿಸುವ ಸುಮಾರು ಇಪ್ಪತ್ತು ನಿಮಿಷಕ್ಕೂ ಮುನ್ನ ಎರಡು ಬಾಳೆಹಣ್ಣು ತಿಂದರೆ ವ್ಯಾಯಾಮದ ಅವಧಿಯಲ್ಲಿ ಅತಿ ಕಡಿಮೆ ಆಯಾಸ ಅನುಭವಿಸುತ್ತಾರೆ. ಬಾಳೆಹಣ್ಣಿನಲ್ಲಿರುವ ಸಕ್ಕರೆ ರಕ್ತದಲ್ಲಿ ನಿಧಾನವಾಗಿ ಮಿಳಿತಗೊಂಡು ಸೂಕ್ತ ಪ್ರಮಾಣದಲ್ಲಿ ಸ್ನಾಯುಗಳಿಗೆ ಪೂರೈಸುವುದೇ ಇದಕ್ಕೆ ಕಾರಣ.

ವಿವಿಧ ರೋಗಗಳಿಗೆ ರಾಮಬಾಣವಾಗಿದೆ

ವಿವಿಧ ರೋಗಗಳಿಗೆ ರಾಮಬಾಣವಾಗಿದೆ

ಬಾಳೆಹಣ್ಣುಗಳು ವಿವಿಧ ರೋಗಗಳಿಗೆ ಉತ್ತಮ ಆರೈಕೆ ನೀಡುತ್ತದೆ. ಕೀಟಗಳು ಕಚ್ಚಿ ದದ್ದು, ತುರಿಕೆ, ಉರಿ ಉಂಟಾದಾಗ ಬಾಳೆಹಣ್ಣನ್ನು ಸವರುವುದರಿಂದ ಕೆಲವು

ನಿಮಿಷಗಳಲ್ಲಿಯೇ ಶಮನವಾಗುತ್ತದೆ. ಟೈಪ್-2 ವಿಧದ ಮಧುಮೇಹವನ್ನು ನಿಯಂತ್ರಿಸುತ್ತದೆ, ತೂಕ ಕಡಿಮೆಗೊಳಿಸುವ ಯತ್ನಗಳಿಗೆ ಸಹಕಾರ ನೀಡುತ್ತದೆ ಹಾಗೂ ನರಮಂಡಲದ ಸುವ್ಯವಸ್ಥೆ ಕಾಪಾಡಲು ನೆರವಾಗುತ್ತದೆ. ಇದರಲ್ಲಿರುವ ವಿಟಮಿನ್ B-6 ರಕ್ತದಲ್ಲಿ ಬಿಳಿರಕ್ತಕಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲು ನೆರವಾಗಿ ರೋಗನಿರೋಧಕ ಶಕ್ತಿ ಉತ್ತಮಗೊಳ್ಳಲು ಸಹಕರಿಸುತ್ತದೆ. ಉತ್ತಮ ಪ್ರಮಾಣದಲ್ಲಿರುವ ಕಬ್ಬಿಣದ ಅಂಶ ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಪೋಷಣೆ ನೀಡುತ್ತದೆ.

ಹೊಟ್ಟೆಯಲ್ಲಿ ಆಮ್ಲೀಯತೆಯಾಗುವುದರಿಂದ ರಕ್ಷಿಸುತ್ತದೆ

ಹೊಟ್ಟೆಯಲ್ಲಿ ಆಮ್ಲೀಯತೆಯಾಗುವುದರಿಂದ ರಕ್ಷಿಸುತ್ತದೆ

ಬಾಳೆಹಣ್ಣು ಜಠರದಲ್ಲಿ ಕರಗಿದ ಬಳಿಕ ಹೊಟ್ಟೆಯಲ್ಲಿ ವಾಯು ಉತ್ಪನ್ನವಾಗುವ ಪ್ರಮಾಣವನ್ನು ತಗ್ಗಿಸಿ ಹುಳಿತೇಗು, ಹೊಟ್ಟೆಯುರಿ, ಎದೆಯುರಿ, gastroesophageal reflux disease (GERD) ಎಂಬ ಅನ್ನನಾಳದ ಉರಿಯ ತೊಂದರೆಯಿಂದ ರಕ್ಷಿಸುತ್ತದೆ.

ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ನೆರವಾಗುತ್ತದೆ!

ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಲು ನೆರವಾಗುತ್ತದೆ!

ಬಾಳೆಹಣ್ಣಿನಲ್ಲಿ ಉತ್ತಮ ಪ್ರಮಾಣದಲ್ಲಿರುವ ಪೊಟ್ಯಾಶಿಯಂ ಮೆದುಳನ್ನು ಚುರುಕಾಗಿಸಲು ನೆರವಾಗುವುದರಿಂದ ಕಲಿಯುವಿಕೆಯ ಕ್ಷಮತೆ ಹೆಚ್ಚುತ್ತದೆ. ಪರಿಣಾಮವಾಗಿ ಉತ್ತಮ ಅಂಕಗಳಿಸಲು, ಪಾಲಕ, ಅಧ್ಯಾಪಕರ ಮೆಚ್ಚುಗೆ ಪಡೆಯಲು ಸಾಧ್ಯವಾಗುತ್ತದೆ.

ಗರ್ಭಾವಸ್ಥೆಯ ವಾಕರಿಕೆಯಿಂದ ರಕ್ಷಿಸುತ್ತದೆ

ಗರ್ಭಾವಸ್ಥೆಯ ವಾಕರಿಕೆಯಿಂದ ರಕ್ಷಿಸುತ್ತದೆ

ಗರ್ಭಿಣಿಯರಿಗೆ ಪ್ರಥಮ ಮೂರು ತಿಂಗಳ ಅವಧಿಯಲ್ಲಿ ವಾಂತಿ ಮತ್ತು ವಾಕರಿಕೆ ಸಹಜ. ಇದನ್ನು ಕಡಿಮೆಗೊಳಿಸಲು ಎರಡು ಹೊತ್ತಿನ ಆಹಾರ ಸೇವನೆಯ ನಡುವಣ ಸಮಯಲ್ಲಿ ಒಂದು ಬಾಳೆಹಣ್ಣು ತಿಂದರೆ ವಾಕರಿಕೆಗೆ ಕಾರಣವಾಗುವ ಕಣಗಳನ್ನು ನಿವಾರಿಸಿ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಸೂಕ್ತಪ್ರಮಾಣದಲ್ಲಿರುವಂತೆ ನೋಡಿಕೊಂಡು ವಾಂತಿ ಮತ್ತು ವಾಕರಿಕೆಯಿಂದ ರಕ್ಷಿಸುತ್ತದೆ.

ಮೂತ್ರದ ಮೂಲಕ ಕ್ಯಾಲ್ಸಿಯಂ ಸೋರಿಹೋಗುವುದನ್ನು ತಪ್ಪಿಸಬಹುದು

ಮೂತ್ರದ ಮೂಲಕ ಕ್ಯಾಲ್ಸಿಯಂ ಸೋರಿಹೋಗುವುದನ್ನು ತಪ್ಪಿಸಬಹುದು

ಆಹಾರದ ಮೂಲಕ ಲಭ್ಯವಾಗುವ ಕ್ಯಾಲ್ಸಿಯಂ ಮೂಳೆಗಳು ಹೀರಿಕೊಳ್ಳುವಂತಾಗಲು ಬಾಳೆಹಣ್ಣು ಸಹಕರಿಸುತ್ತದೆ. ಮೂಳೆಗಳು ಗಟ್ಟಿಗೊಳ್ಳಲು ಜೇನು ಸೇರಿಸಿದ ಹಾಲು ಮತ್ತು ಬಾಳೆಹಣ್ಣನ್ನು ರಾತ್ರಿ ಮಲಗುವ ಮುನ್ನ ಸೇವಿಸುವುದರಿಂದ ಕ್ಯಾಲ್ಸಿಯಂ ಸೋರಿಹೋಗುವುದನ್ನು ತಪ್ಪಿಸಿ ಮೂಳೆಗಳ ದೃಢತೆ ಹೆಚ್ಚಿಸಬಹುದು.

English summary

Surprising Health Benefits Of Eating one Banana A Day!

The banana is one of the few fruits which contains all kinds of nutrients. It is rich in vitamins, potassium, fibre and natural sugar. It is fat and cholesterol free.Hence, this is the reason why bananas should be included in your everyday diet.
X
Desktop Bottom Promotion