ಸೈಲೆಂಟ್ ಆಗಿ ಕಾಡುವ 'ಕಿಡ್ನಿ ಕ್ಯಾನ್ಸರ್‌'!! ಇದರ ಲಕ್ಷಣಗಳೇನು?

By: Deepu
Subscribe to Boldsky

ಯಾವುದೇ ರೀತಿಯ ಕ್ಯಾನ್ಸರ್ ಆದರೂ ಅದು ತುಂಬಾ ಅಪಾಯಕಾರಿ. ಕ್ಯಾನ್ಸರ್ ಅನ್ನು ಮೊದಲ ಹಂತದಲ್ಲೇ ಪತ್ತೆ ಹಚ್ಚಿದರೆ ಅದಕ್ಕೆ ಚಿಕಿತ್ಸೆ ನೀಡಬಹುದು. ಆದರೆ ಕೆಲವೊಂದು ರೀತಿಯ ಕ್ಯಾನ್ಸರ್ ಅಂತಿಮ ಹಂತದ ತನಕ ಸುಳಿವು ಬಿಟ್ಟುಕೊಡುವುದಿಲ್ಲ. ಇದರಿಂದ ಅದನ್ನು ಪತ್ತೆ ಹಚ್ಚುವುದು ಕಷ್ಟಕರ. ಇತ್ತೀಚೆಗೆ ಬಾಲಿವುಡ್ ನಟರಾದ ಟಾಮ್ ಅಲ್ಟರ್ ಅವರು ಚರ್ಮದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದರು. ಚರ್ಮ, ಸ್ತನ ಮತ್ತು ಜನನಾಂಗದ ಕ್ಯಾನ್ಸರ್ ಹೆಚ್ಚಿನವರಿಗೆ ತಿಳಿದಿದೆ. ಅದೇ ರೀತಿಯಾಗಿ ಕಿಡ್ನಿಯ ಕ್ಯಾನ್ಸರ್ ಕೂಡ ತುಂಬಾ ಅಪಾಯಕಾರಿ.

ಕಿಡ್ನಿ ಕಲ್ಲುಗಳನ್ನು ದೇಹದಿಂದ ಹೊರಹಾಕುವ ಸೂಪರ್ ಮನೆಮದ್ದುಗಳು

ಕಿಡ್ನಿ ಕ್ಯಾನ್ಸರ್ ಮೂತ್ರಪಿಂಡದ ಜೀವಕೋಶ ಕಾರ್ಸಿನೋಮ ಅಥವಾ ಆರ್ ಸಿಸಿಯನ್ನು ಸೂಚಿಸುವುದು. ಇದರಿಂದಾಗಿ ಶೇ.85ರಷ್ಟು ಕಿಡ್ನಿ ಕ್ಯಾನ್ಸರ್ ಬರುವುದು. ಆರ್ ಸಿಸಿಯು ಮೂತ್ರಪಿಂಡದ ನಾಳಗಳ ಒಳಪದರದಲ್ಲಿ ಗಡ್ಡೆಗಳನ್ನು ಉಂಟುಮಾಡುವುದು. ಮನುಷ್ಯರಲ್ಲಿ ಇರುವಂತಹ ಎರಡು ಕಿಡ್ನಿಗಳು ರಕ್ತದಲ್ಲಿನ ಕಲ್ಮಶ ಮತ್ತು ವಿಷ ಹೊರಹಾಕುವುದಲ್ಲದೆ, ರಕ್ತದಲ್ಲಿನ ರಾಸಾಯನಿಕ ಸಂಯೋಜನೆಯ ಸಮತೋಲನ ಕಾಪಾಡುವುದು. ಆಹಾರ ಜೀರ್ಣವಾಗುವಂತಹ ಹಾರ್ಮೋನುಗಳನ್ನು ಕಿಡ್ನಿ ಬಿಡುಗಡೆ ಮಾಡುವುದು.

ಕಿಡ್ನಿ ಕಲ್ಲುಗಳ ನಿವಾರಣೆಗೆ ಇಲ್ಲಿದೆ ಸೂಕ್ತ ಪರಿಹಾರ

ಇದು ಮೂಳೆಮಜ್ಜೆಯು ಕೆಂಪುರಕ್ತದ ಕಣ ಉತ್ಪಾದಿಸಲು ಉತ್ತೇಜಿಸುವುದು. ಕಿಡ್ನಿ ಕ್ಯಾನ್ಸರ್ ನ ಲಕ್ಷಣಗಳು ಮೂತ್ರನಾಳ ಅಥವಾ ಸೊಂಟದಲ್ಲಿ ಕಾಣಿಸಿಕೊಳ್ಳಬಹುದು. ಕಿಡ್ನಿಯ ಕ್ಯಾನ್ಸರ್ ಅಂತಿಮ ಹಂತಕ್ಕೆ ಬರುವ ತನಕ ಅಥವಾ ಗಡ್ಡೆ ಬೆಳೆಯುವ ತನಕ ನಿಮಗೆ ಅದರ ಲಕ್ಷಣ ಕಾಣಸಿಗದು. ಸಾಮಾನ್ಯ ಪರೀಕ್ಷೆ ವೇಳೆ ಇದು ಆಕಸ್ಮಿಕವಾಗಿ ಕಂಡುಬರಬಹುದು. ಕಿಡ್ನಿಯ ಕ್ಯಾನ್ಸರ್‌ನ ಲಕ್ಷಣಗಳು ಯಾವುದು ಎಂದು ಈ ಲೇಖನ ಮೂಲಕ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ.....

ಮೂತ್ರದಲ್ಲಿ ರಕ್ತ

ಮೂತ್ರದಲ್ಲಿ ರಕ್ತ

ಆರ್ ಸಿಸಿ ತುಂಬಾ ಬೆಳೆದಿರುವುದರ ಪ್ರಮುಖ ಲಕ್ಷಣ ಇದಾಗಿದೆ. ಇಂತಹ ಸಮಯದಲ್ಲಿ ತಕ್ಷಣ ವೈದ್ಯರ ನೆರವು ಪಡೆಯಿರಿ.

ಬೆನ್ನು/ದೇಹದ ಒಂದು ಭಾಗ ನೋವು

ಬೆನ್ನು/ದೇಹದ ಒಂದು ಭಾಗ ನೋವು

ಬೆನ್ನು ಅಥವಾ ದೇಹದ ಒಂದು ಬದಿಯಲ್ಲಿ ನೋವು ಅಥವಾ ಒತ್ತಡವು ಕಿಡ್ನಿ ಕ್ಯಾನ್ಸರ್‌ನ ಲಕ್ಷಣ. ಕಿಡ್ನಿಯ ದ್ರವ್ಯರಾಶಿಯು ದೊಡ್ಡದಾಗಿ ಅದು ಒತ್ತಡ ಹೇರಿದಾಗ ನೋವು ಕಾಣಿಸಿಕೊಳ್ಳುವುದು.

ನಿಶ್ಯಕ್ತಿ

ನಿಶ್ಯಕ್ತಿ

ಆಗಾಗ ಆಯಾಸವಾಗುವುದು ಅಥವಾ ನಿಶ್ಯಕ್ತಿಯು ಕಿಡ್ನಿ ಕ್ಯಾನ್ಸರ್‌ನ ಪ್ರಮುಖ ಲಕ್ಷಣ. ನಿಮ್ಮ ನಿಶ್ಯಕ್ತಿಗೆ ಕಾರಣವೇನೆಂದು ತಿಳಿದುಕೊಳ್ಳಲು ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆದರೆ ಒಳ್ಳೆಯದು.

ತೂಕ ಇಳಿಕೆ

ತೂಕ ಇಳಿಕೆ

ಚಯಾಪಚಾಯ ಹಾಗೂ ಜೀರ್ಣಕ್ರಿಯೆಯಲ್ಲಿ ಕಿಡ್ನಿಯು ತುಂಬಾ ಪ್ರಮುಖ ಪಾತ್ರ ನಿರ್ವಹಿಸುವುದು. ಕಿಡ್ನಿಗೆ ಯಾವುದೇ ರೀತಿಯ ತೊಂದರೆಯಾಗಿದ್ದರೆ ಆಹಾರ ವಿಘಟನೆ ಮತ್ತು ಆಹಾರದಲ್ಲಿನ ಪೋಷಕಾಂಶಗಳನ್ನು ಹೀರಿಕೊಳ್ಳಲು ಕಿಡ್ನಿಗೆ ಕಷ್ಟವಾಗಬಹುದು. ತೂಕ ಕಡಿಮೆಯಾಗುವುದು ಕಿಡ್ನಿ ಕ್ಯಾನ್ಸರ್ ನ ಪ್ರಮುಖ ಲಕ್ಷಣಗಳಲ್ಲಿ ಒಂದು.

ರಕ್ತಕ್ಕೆ ಸಂಬಂಧಿಸಿದ ಸಮಸ್ಯೆ

ರಕ್ತಕ್ಕೆ ಸಂಬಂಧಿಸಿದ ಸಮಸ್ಯೆ

ಕಿಡ್ನಿ ಗಡ್ಡೆಯಿಂದಾಗಿ ರಕ್ತಹೀನತೆ, ವಿದ್ಯುದ್ವಿಚ್ಛೇದ ಅಥವಾ ಕ್ಯಾಲ್ಸಿಯಂನ ಅಸಮತೋಲನ ಅಥವಾ ರಕ್ತಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇಂತಹ ಪರಿಸ್ಥಿತಿಯಲ್ಲಿ ವೈದ್ಯಕೀಯ ನೆರವು ಅತೀ ಅಗತ್ಯ.

 ರೋಗನಿರ್ಣಯ

ರೋಗನಿರ್ಣಯ

ವೈದ್ಯರಿಗೆ ಕಿಡ್ನಿ ಕ್ಯಾನ್ಸರ್ ಇರುವ ಬಗ್ಗೆ ತಿಳಿದುಬಂದರೆ, ನೆಫ್ರಿಕ್ಟೊಮಿ ಎನ್ನುವ ವಿಧಾನದ ಮೂಲಕ ಹಾನಿಗೊಳಗಾದ ಜೀವಕೋಶವನ್ನು ತೆಗೆಯುವರು. ಕ್ಯಾನ್ಸರ್ ಉಂಟಾದ ಜೀವಕೋಶಗಳನ್ನು ಮಾತ್ರ ತೆಗೆಯಲಾಗುವುದು ಮತ್ತು ಸಾಮಾನ್ಯ ಜೀವಕೋಶಗಳು ಹಾಗೆ ಇರುವುದು. ಕಿಡ್ನಿ ಕ್ಯಾನ್ಸರ್ ಅನ್ನು ಪತ್ತೆ ಹಚ್ಚುವುದು ವೈದ್ಯರಿಗೆ ಕೂಡ ತುಂಬಾ ಕಷ್ಟಕರ. ಇದರಿಂದ ನಿಯಮಿತವಾಗಿ ದೇಹದ ಪರೀಕ್ಷೆ ಹಾಗೂ ಸ್ಕ್ಯಾನ್ ಮಾಡಿಕೊಂಡರೆ ಕಿಡ್ನಿ ಕ್ಯಾನ್ಸರ್ ನ್ನು ಬೇಗನೆ ಪತ್ತೆ ಹಚ್ಚಬಹುದು.

English summary

Subtle Signs Of Kidney Cancer That You Need To Know

Kidney cancer doesn't get much of an attention unlike those of breast, skin, or prostate cancer. Kidney cancer refers to renal cell carcinoma or RCC. This makes up about 85% of all kidney cancer. RCC throws up as a tumour in the lining of one of the kidney tubules. Humans have two kidneys, which filter the blood of waste and toxins. Kidneys also balance the chemical composition of the blood and also manage its heath and urine production.
Subscribe Newsletter