ಹೊಟ್ಟೆ ನೋವು ನಿರ್ಲಕ್ಷಿಸಬೇಡಿ! ಇದರ ಹಿಂದಿದೆ ಭಯಾನಕ ಸಮಸ್ಯೆ!

By: manu
Subscribe to Boldsky

ಊಟ ರುಚಿಯಾಗಿದ್ದರೆ ನಾವೆಲ್ಲರೂ ಕೊಂಚ ಹೆಚ್ಚೇ ಹೊಟ್ಟೆಗೆ ಇಳಿಸುತ್ತೇವೆ. ಪರಿಣಾಮವಾಗಿ ಒಂದಲ್ಲಾ ಒಂದು ತೊಂದರೆ ಕಂಡುಬಂದೇ ಬರುತ್ತದೆ. ಈ ಸೂಚನೆಗಳನ್ನು ಸಾಮಾನ್ಯವಾಗಿ ನಾವೆಲ್ಲಾ ಅಲಕ್ಷಿಸಿಬಿಡುತ್ತೇವೆ. ಊಟ ಹೆಚ್ಚಾಯಿತಲ್ಲಾ, ಹಾಗಾಗಿ ಹೊಟ್ಟೆಯಲ್ಲಿ ಉರಿ ಶುರುವಾಗಿದೆ, ಕೊಂಚ ಶುಂಠಿ ನೀರು ಕುಡಿದರೆ ಸರಿಯಾಗುತ್ತದೆ ಎಂದೇ ನಾವೆಲ್ಲಾ ತೀರ್ಮಾನಿಸಿಬಿಡುತ್ತೇವೆ.

ಆದರೆ ನಾವು ಅಲಕ್ಷಿಸುವ ಈ ಸೂಚನೆಗಳು ಸಾಮಾನ್ಯವಾಗಿ ದೊಡ್ಡ ತೊಂದರೆಯ ಮುನ್ಸೂಚನೆಯಾಗಿರಬಹುದು. ಒಂದು ವೇಳೆ ವಿವರಿಸಲು ಸಾಧ್ಯವಾಗದಂತಹ ಹೊಟ್ಟೆನೋವು ಥಟ್ಟನೇ ಎದುರಾಗಿ ಹೊಟ್ಟೆ ಕಿವುಚಿದಂತಾದರೆ ತಕ್ಷಣ ಕರುಳು ತಜ್ಞ (gastroenterologist) ರನ್ನು ಭೇಟಿಯಾಗಿ ಪರೀಕ್ಷೆಗೊಳಪಡಬೇಕು. ಸಾಮಾನ್ಯವಾಗಿ ನಮ್ಮ ದೇಹದ ಯಾವುದೋ ಒಂದು ಅಂಗ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲದಿದ್ದರೆ ಬೇರೊಂದು ಅಂಗ ಇದರ ಬಗ್ಗೆ ಸೂಚನೆ ನೀಡುತ್ತದೆ. ಅಪ್ಪಟ ಉದಾಹರಣೆ ಎಂದರೆ ಕಾಮಾಲೆ ರೋಗದಲ್ಲಿ ಯಕೃತ್ ಕಾಯಿಲೆಗೆ ಒಳಗಾಗಿದ್ದರೆ ಕಣ್ಣುಗಳು ಹಳದಿಯಾಗುತ್ತವೆ. 

ಯಮಯಾತನೆ ನೀಡುವ ಹೊಟ್ಟೆ ನೋವಿನ ಸಮಸ್ಯೆಗೆ ಪರಿಹಾರವೇನು?

ಕೆಲವೊಮ್ಮೆ ದೇಹದ ಒಂದು ಅಂಗದ ಸೂಚನೆ ಪುಟ್ಟದು, ಅಲಕ್ಷಿಸುವಂತೆ ಅನ್ನಿಸಿದರೂ ಇದಕ್ಕೆ ಮೂಲವಾದ ಇನ್ನೊಂದು ಅಂಗದ ತೊಂದರೆ ದೊಡ್ಡದೇ ಇರಬಹುದು. ಇದೇ ಕಾರಣಕ್ಕೆ ವೈದ್ಯರು ರೋಗಿ ನೀಡುವ ಅತಿ ಚಿಕ್ಕ ವಿವರವನ್ನೂ ಸೂಕ್ಷ್ಮವಾಗಿ ಪರಿಗಣಿಸಿ ರೋಗಿ ಸಾಮಾನ್ಯವಾಗಿ ಅಲಕ್ಷಿಸಿರುವ ಸೂಚನೆಗಳನ್ನು ಪ್ರಶ್ನೆಗಳ ಮೂಲಕ ಕೆದಕುತ್ತಾರೆ. ಹೊಟ್ಟೆನೋವು ಸಹಾ ಇಂತಹದ್ದೇ ಒಂದು ಸೂಚನೆಯಾಗಿದ್ದು ಕೆಲವಾರು ಅಂಗಗಳು ಕಾಯಿಲೆಗೆ ಒಳಗಾಗಿರುವುದನ್ನು ಸೂಚಿಸುತ್ತದೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯೋಣ......

ಎದೆಯುರಿ

ಎದೆಯುರಿ

ಒಂದು ವೇಳೆ ಯಾವುದೇ ಸಕಾರಣವಿಲ್ಲದೇ ಹೊಟ್ಟೆಯ ಮೇಲ್ಭಾಗದಲ್ಲಿ ಉರಿಯಾದಂತೆ ಅನ್ನಿಸಿದರೆ ತಕ್ಷಣವೇ ವೈದ್ಯರನ್ನು ಕಾಣಬೇಕು. ವಿಶೇಷವಾಗಿ ಇದರೊಂದಿಗೆ ತೂಕದಲ್ಲಿ ಇಳಿಕೆ, ಗಂಟಲಿನಲ್ಲಿ ಏನೋ ಸಿಕ್ಕಿಕೊಂಡಂತೆ ಅನ್ನಿಸಿವುದು, ಮಲವಿಸರ್ಜನೆಯ ವೇಳೆಯಲ್ಲಿ ರಕ್ತಸ್ರಾವ ಮೊದಲಾದವು ಪ್ರಮುಖ ತೊಂದರೆಯ ಮುನ್ಸೂಚನೆಯಾಗಿರುತ್ತವೆ.

ಹೊಟ್ಟೆಯ ನಡುಭಾಗದಲ್ಲಿ ನೋವು

ಹೊಟ್ಟೆಯ ನಡುಭಾಗದಲ್ಲಿ ನೋವು

ಕರುಳುವಾಲ ಅಥವಾ ಅಪೆಂಡಿಕ್ಸ್ ತೊಂದರೆ ಇರುವವರಿಗೆ ಈ ನೋವು ಆಗಾಗ ಕಾಡುತ್ತಿರುತ್ತದೆ. ಈ ನೋವು ಹೊಕ್ಕುಳ ಹತ್ತಿರ ಹೆಚ್ಚಾಗಿರುತ್ತದೆ. ಪಿತ್ತಕೋಶದಲ್ಲಿ ತೊಂದರೆ ಇದ್ದರೆ ಹೊಟ್ಟೆಯ ನಡುಭಾಗದ ಕೊಂಚ ಮೇಲೆ ನೋವಾಗುತ್ತದೆ. ಈ ನೋವು ಬೆನ್ನಿನ ಬಳಿಯೂ ಕಾಣಿಸಿಕೊಳ್ಳಬಹುದು.

ಅಪ್ಪಿತಪ್ಪಿಯೂ ಹೊಟ್ಟೆ ನೋವನ್ನು ನಿರ್ಲಕ್ಷಿಸಬೇಡಿ

ಮಲಬದ್ಧತೆ

ಮಲಬದ್ಧತೆ

ಕೆಲವೊಮ್ಮೆ ಮಲಬದ್ಧತೆ ಆಹಾರದಲ್ಲಿ ನಾರಿನ ಕೊರತೆಯ ಹೊರತಾಗಿಯೂ ಬೇರೆ ಕಾರಣಗಳಿಂದಾಗಿ ಎದುರಾಗಿರಬಹುದು. ಥೈರಾಯ್ಡ್ ಗ್ರಂಥಿಯ ತೊಂದರೆ, ಕರುಳಿನ ಒಳಭಾಗದಲ್ಲಿ ಗೀರುಗಳಾಗಿರುವುದು, ಗಂಟುಗಳಾಗಿರುವುದು, IBS ಅಥವಾ ಸಣ್ಣ ಕರುಳಿನಲ್ಲಿ ಉರಿ, ಕೆಲವು ಔಷಧಿಗಳ ಅಡ್ಡಪರಿಣಾಮಗಳಿಂದಾಗಿಯೂ ಮಲಬದ್ಧತೆ ಎದುರಾಗಿರಬಹುದು.

ಅತಿಸಾರ

ಅತಿಸಾರ

ಅತಿಸಾರದ ಮೂಲಕ ದೇಹದಲ್ಲಿ ಅತಿ ಹೆಚ್ಚು ನೀರಿನ ಕೊರತೆಯುಂಟಾಗುತ್ತದೆ. ಒಂದು ವೇಳೆ ಈ ಕೆಳಗಿನವುಗಳಲ್ಲಿ ಯಾವುದೊಂದು ಕಂಡುಬಂದರೂ ತಕ್ಷಣ ವೈದ್ಯರನ್ನು ಕಾಣುವುದು ಅನಿವಾರ್ಯವಾಗಿದೆ: ಎರಡು ದಿನಕ್ಕೂ ಹೆಚ್ಚು ಕಾಲ ಕಾಡುವ ಅತಿಸಾರ, 102 ಡಿಗ್ರಿ ಫ್ಯಾರನ್ ಹೈಟ್ ಗಿಂತಲೂ ಕೊಂಚ ಹೆಚ್ಚು ಜ್ವರ, ಆಗಾಗ ವಾಂತಿಯಾಗುವುದು, ಒಂದು ದಿನದ ಅವಧಿಯಲ್ಲಿ ಆರು ಬಾರಿ ಅಥವಾ ಇದಕ್ಕೂ ಹೆಚ್ಚು ಬಾರಿ ಶೌಚಾಲಯಕ್ಕೆ ಹೋಗಬೇಕಾಗಿ ಬಂದರೆ, ಮಲದ್ವಾರದವಲ್ಲಿ ಅಥವಾ ಕೆಳಹೊಟ್ಟೆಯಲ್ಲಿ ನೋವು ಕಂಡುಬಂದರೆ ಇತ್ಯಾದಿ.

ನಿಯಂತ್ರಣಕ್ಕೆ ಬರದ ಹೊಟ್ಟೆಯುಬ್ಬರಿಕೆ ಹಾಗೂ ವಾಯುಪ್ರಕೋಪ

ನಿಯಂತ್ರಣಕ್ಕೆ ಬರದ ಹೊಟ್ಟೆಯುಬ್ಬರಿಕೆ ಹಾಗೂ ವಾಯುಪ್ರಕೋಪ

ಒಂದು ವೇಳೆ ಈ ತೊಂದರೆಗಳಿಂದ ನಿಮ್ಮ ನಿತ್ಯದ ಕೆಲಸಗಳೇ ಬಾಧೆಗೊಳಗಾದರೆ ತಕ್ಷಣ ಕರುಳುತಜ್ಞರನ್ನು ಭೇಟಿಯಾಗಬೇಕು. ಇದು IBS ಅಥವಾ ಸಣ್ಣ ಕರುಳಿನಲ್ಲಿ ಉರಿಯ ಸೂಚನೆಯಾಗಿರಬಹುದು.

 ಕಾಳಜಿಯ ಅಗತ್ಯವಿರುವ ಇತರ ಸೂಚನೆಗಳು

ಕಾಳಜಿಯ ಅಗತ್ಯವಿರುವ ಇತರ ಸೂಚನೆಗಳು

ಒಂದು ವೇಳೆ ಹೊಟ್ಟೆನೋವಿನ ಜೊತೆಗೇ ಕೊಂಚ ಜ್ವರವೂ ಇದ್ದರೆ ಇದಕ್ಕೆ ಚಿಕ್ಕ ಕರುಳಿನ ಒಳಗಿನ ಉರಿಯೂತ ಅಥವಾ Crohn's disease, ದೊಡ್ಡ ಕರುಳಿನ ಒಳಗಿನ ಉರಿಯೂತ ಅಥವಾ ulcerative colitis, ಕರುಳು ಹುಣ್ಣು, ಖಿನ್ನತೆ, ಗ್ಲುಟೆನ್ ನಿರೋಧಿಸುವ ಗುಣದ ಮೂಲಕ ಎದುರಾಗುವ coeliac disease ಮೊದಲಾದವು ಕಾರಣವಾಗಿರಬಹುದು. ಇದರೊಂದಿಗೆ ವಾಂತಿ, ಹಸಿವಿಲ್ಲದಿರುವುದು ಮೊದಲಾದವು ಕಂಡುಬಂದರೆ ತಕ್ಷಣ ವೈದ್ಯರನ್ನು ಕಾಣವುದು ಅಗತ್ಯವಾಗಿದೆ.

English summary

stomach problems that could signal serious health issues

Sometimes, a symptom in one part of the body maybe the sign of a problem in another part. Even seemingly unrelated symptoms that could be minor on their own could be a sign of a more serious medical condition. In this article, we have listed some of the stomach problems that signal serious health issues. Read further to find out more.
Subscribe Newsletter