Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಆರೋಗ್ಯವೇ ಭಾಗ್ಯ ನಾಣ್ಣುಡಿ ಮರೆತು, ಕೊರಗಬೇಡಿ!
ಪ್ರತಿಯೊಬ್ಬರೂ ತಮ್ಮ ಜೀವನೋಪಾಯಕ್ಕಾಗಿ ಒಂದಲ್ಲಾ ಒಂದು ವೃತ್ತಿಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಕಂಪೆನಿ, ಆಫೀಸ್ ಮತ್ತು ಇತರ ವಹಿವಾಟುಗಳಲ್ಲಿ ನಿರಂತರವಾಗಿ 8 ರಿಂದ 10 ಗಂಟೆ ಕೆಲಸ ಮಾಡುತ್ತಾರೆ. ತಮ್ಮ ಸುಖ ಜೀವನಕ್ಕಾಗಿ ಕೆಲಸ ಮಾಡುತ್ತೇನೆಂದು ತಿಳಿದು ಆರೋಗ್ಯದ ಕಡೆ ಗಮನ ಕೊಡದೆ ತಮ್ಮ ಜೀವನಶೈಲಿಯ ನಡೆಯಲ್ಲಿ ಆರೋಗ್ಯದ ಬಗ್ಗೆ ಗಮನ ಹರಿಸಿದೆ ಆಫೀಸಿನಲ್ಲಿ ತಾನು ಕುಳಿತ ಸೀಟಿನಲ್ಲಿ ಆರಾಮದಾಯಕವಾಗಿ ಕುಳಿತುಕೊಂಡು ಹೊತ್ತು ಗೊತ್ತಿಲ್ಲದೆ ಜಂಕ್ ಫುಡ್, ಪಾನೀಯವನ್ನು ಸೇವಿಸಿ ತಮ್ಮ ಆರೋಗ್ಯಕ್ಕೆ ಕೆಡುಕನ್ನು ತಂದುಕೊಳ‍್ಳುತ್ತಾರೆ.
ಈ ರೀತಿಯ ಸೇವನೆಯಿಂದ ನಮ್ಮ ಬಾಯಿಗೆ ಬಲು ರುಚಿಯಾದರೂ ಆರೋಗ್ಯಕ್ಕೆ ಹಾನಿಕಾರ. ಅದಕ್ಕಾಗಿ ಸತ್ವಯುತ ಆಹಾರ ಊಟ, ತಿಂಡಿ ಒಣಹಣ‍್ಣುಗಳನ್ನು ಸೇವನೆ ಮಾಡುತ್ತಾ ಬಂದಲ್ಲಿ ದೀರ್ಘ ಆಯುರ್ ಆರೋಗ್ಯವನ್ನು ಪಡೆಯುವ ಕನಸು ಕಾಣಬಹುದು.
ಓದುಗರೇ, ಈ ರೀತಿ ತಮ್ಮ ಆಫೀಸಿನ ಬಿಡುವಿನ ಸಂದರ್ಭದಲ್ಲಿ ಒಳ‍್ಳೆಯ ವಿಟಮಿನ್‌ಯುಕ್ತ ಆಹಾರವನ್ನು ಸೇವಿಸಿ ಮಾರುಕಟ್ಟೆಯಲ್ಲಿ ಲಭಿಸುವಂತಹ ಲಘು ಆಹಾರದಿಂದ ದೂರವಿರಿ. ಅದಕ್ಕಾಗಿ ಕೆಲವೊಂದು ಸಲಹೆಗಳು ಈ ಕೆಳಗಿನಂತಿವೆ....

ಮನೆಯಲ್ಲೇ ತಯಾರಿಸಿದ ಆಹಾರವನ್ನು ಕೊಂಡುಹೋಗಿ
ಪ್ರತಿದಿನ ಆಫೀಸಿಗೆ ಹೋಗುವಾಗ ಮನೆಯಲ್ಲೇ ತಯಾರಿಸಿದ ಲಘು ಆಹಾರವನ್ನು ಜೊತೆಯಲ್ಲೇ ಕೊಂಡೊಯ್ಯಲು ಮರೆಯದಿರಿ. ಇದರಿಂದ ಸಮಯ ಹಾಗೂ ಹಣಕಾಸಿನ ಉಳಿತಾಯ ಹಾಗೂ ವಿಟಮಿನ್ ಯುಕ್ತ ಆಹಾರ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಒಳ‍್ಳೆಯದು

ಬಿಸಿ ಮಾಡಿದ ನೀರನ್ನು ಬಾಟಲಿಯಲ್ಲಿ ತೆಗೆದುಕೊಂಡು ಹೋಗುವುದು
ನೀರು ಪ್ರತಿಯೊಂದು ಜೀವಿಗೂ ಅವಶ್ಯಕ. ನೀರಿನ ಸೇವನೆಯಿಂದ ಪ್ರತಿಯೊಂದು ಜೀವಿಗೂ ಆರೋಗ್ಯದಾಯಕವಾಗಿರಬಹುದು. ಬಾಯಾರಿದಾಗ ಅಥವಾ ಕೆಲಸದ ಒತ್ತಡದಿಂದ ಸರಿಯಾಗಿ ನೀರಿನ ಸೇವನೆ ಮಾಡದೆ ಇರುವುದರಿಂದ ಮಲಬದ್ಧತೆ, ಮೂತ್ರಪಿಂಡ ರೋಗ ಸಂಬಂಧಿಗಳಾದ ಉರಿ ಮೂತ್ರ, ಮೂತ್ರ ಕೋಶ ಕಲ್ಲು, ಬೆವರು ವಾಸನೆ, ಬೆವರುಸಾಲೆ ಮತ್ತು ಶರೀರದಲ್ಲಿ ನೀರಿನಾಂಶ ಕಡಿಮೆಯಾಗಿ ನಿಶ್ಯಕ್ತಿ ಬರುವ ಸಾಧ್ಯತೆ ಹೆಚ್ಚಿವೆ. ಆದ ಕಾರಣ ಬಿಸಿ ಮಾಡಿದ ಶುದ್ಧ ನೀರನ್ನು ಮನೆಯಿಂದಲೇ ತೆಗೆದುಕೊಂಡು ಹೋಗಲು ಸುಲಭವಾಗುವಂತಹ ಚಿಕ್ಕ ಬಾಟಲ್ ಗಳಲ್ಲಿ ತೆಗೆದುಕೊಂಡು ಹೋಗಿ ನಾವು ಕುಳಿತುಕೊಳ‍್ಳುವ ಸ್ಥಳದಲ್ಲಿ ಇಟ್ಟುಕೊಳ‍್ಳುವುದು ಒಳ‍್ಳೆಯದು.

ಆರೋಗ್ಯದಾಯಕ ಒಣಹಣ‍್ಣುಗಳ ಸೇವನೆ
ಶುದ್ಧ ಹಣ‍್ಣುಗಳಾದ ಬಾಳೆಹಣ‍್ಣು, ಮೂಸಂಬಿ, ಸೇಬು ಇತ್ಯಾದಿ ಮತ್ತು ಒಣ ಹಣ‍್ಣುಗಳಾದ ಗೋಡಂಬಿ, ಖರ್ಜೂರ, ಬಾದಾಮಿ, ನೆಲಕಡಲೆ ಇತ್ಯಾದಿಗಳನ್ನು ಸಣ‍್ಣ ಡಬ್ಬ ಅಥವಾ ಚೀಲದಲ್ಲಿ ಮನೆಯಿಂದಲೇ ತೆಗೆದುಕೊಂಡು ಹೋಗುವುದರಿಂದ ಉಪ್ಪು ಮಿಶ್ರಿತ ಅಥವಾ ಕ್ಯಾಂಟಿನ್ ನಲ್ಲಿ ದೊರೆಯುವ ಎಣ‍್ಣೆ ತಿಂಡಿಗಳಿಂದ ಬಲು ಉತ್ತಮದಾಯಕ ಮತ್ತು ಜೀರ್ಣಕ್ರೀಯೆಗೂ ಒಳ‍್ಳೆಯದು.

ಹಣ‍್ಣುಗಳು ಮತ್ತು ಹಾಲು
ಹಣ‍್ಣುಗಳು ಮತ್ತು ಹಾಲು ಸೇವನೆಯಿಂದ ನಮ್ಮ ಶರೀರಕ್ಕೆ ಬೇಕಾದ ಜೀವಸತ್ವಗಳ ಕೊರತೆ ಉಂಟಾಗದೆ ಆರೋಗ್ಯವನ್ನು ಕಾಪಾಡಲು ಒಳ‍್ಳೆಯದು. ಅನವಶ್ಯಕ ಆಹಾರದಿಂದ ದೂರವುಳಿದು ಒಳ‍್ಳೆಯ ಹಣ‍್ಣು ಆಹಾರ ಸೇವನೆ ಬುದ್ಧಿವಂತರ ಆಯ್ಕೆ.

ಓಟ್ ಮೀಲ್
ಹಣ‍್ಣುಗಳ ಮಿಶ್ರಿತದೊಂದಿಗೆ ಓಟ್ಸ್ ಮತ್ತು ಬೀಜಗಳು ಉತ್ತಮ ಆಯ್ಕೆ. ಇದರ ಸೇವನೆಯಿಂದ ತೂಕ ಮತ್ತು ಕೊಲೆಸ್ಟ್ರಾಲ್ ಮತ್ತು ಶರೀರದ ತೂಕವನ್ನು ನಿಯಂತ್ರಿಸುತ್ತದೆ. ಕೆಲಸದ ಸಮಯದ ಮಧ್ಯದಲ್ಲಿ ನಮಗೆ ಕೂಡಲೆ ತಯಾರಿಸಿ ಸ್ವೀಕರಿಸಲು ಕಷ್ಟದಾಯಕವಲ್ಲ.

ಜಂಕ್ ಫುಡ್‌ಗೆ ಗುಡ್ ಬೈ
ಜಂಕ್ ಫುಡ್ ನನ್ನು ತಿನ್ನುವುದಕ್ಕಿಂತ ಮೊದಲು ಎರಡು ಸಲ ಯೋಚನೆ ಮಾಡಿ ಸೇವಿಸಿರಿ. ಇದರ ಸೇವನೆಯಿಂದ ಆಗುವ ದುಷ್ಪರಿಣಾಮಗಳು ಅಷ್ಟಿಷ್ಟಲ್ಲ ಮೊದಲನೆಯದಾಗಿ,
ಬೊಜ್ಜು
ಹೃದಯ ಸಂಬಂಧಿ ಕಾಯಿಲೆಗಳು
ಹಲ್ಲಿನ ತೊಂದರೆಗಳು
ಮಾನಸಿಕ ಕಾಯಿಲೆಗಳು ಇತ್ಯಾದಿಗಳಿಗೆ ಗುರಿಯಾಗುತ್ತೇವೆ
ಈ ಜೀವನ ದೇವರ ಕಾಣಿಕೆ. ‘ಆರೋಗ್ಯವೇ ಭಾಗ್ಯ' ಎಂಬ ನಾಣ್ಣುಡಿಯಂತೆ ಶುದ್ಧ ಮನಸ್ಸು ಶುದ್ಧ ಆರೋಗ್ಯ ನಮ್ಮ ಜೀವನದ ಗುರಿಯಾಗಲು ಅನಾರೋಗ್ಯಕರ ಆಹಾರವನ್ನು ತ್ಯಜಿಸಿ, ಶುದ್ಧ ಆಹಾರ ಸೇವನೆಯತ್ತ ನಡೆಯೋಣ ಅಲ್ಲವೇ?



Click it and Unblock the Notifications