For Quick Alerts
ALLOW NOTIFICATIONS  
For Daily Alerts

ಅಧ್ಯಯನ ವರದಿ: ಬೆಳಗಿನ ಉಪವಾಸ ಪಿತ್ತಕೋಶದ ಕಲ್ಲಿಗೆ ಆಹ್ವಾನ

By Suhani B
|

ಬೆಳಗಿನ ಉಪಹಾರವನ್ನು ಬಿಟ್ಟುಬಿಡುವುದರಿಂದ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು, ಅದರಲ್ಲಿ ಪ್ರಮುಖವಾದದ್ದು ಶಕ್ತಿ ಮತ್ತು ನಿಶ್ಯಕ್ತಿಯ ಕೊರತೆ. ಒಂದು ಆಘಾತಕಾರಿ ಪ್ರಕರಣದಲ್ಲಿ ಇತ್ತೀಚೆಗೆ ಬಹಿರಂಗಗೊಂಡ ಪ್ರಕಾರ 8 ವರ್ಷಗಳಿಂದ ಉಪಹಾರ ಬಿಟ್ಟುಬಿಟ್ಟಿದ್ದ ಚೀನಾದ ಒಂದು ಮಹಿಳೆಯಲ್ಲಿ 200 ಪಿತ್ತಕೋಶದ ಕಲ್ಲು ಕಾಣಿಸಿಕೊಂಡಿತು.

45 ವರ್ಷ ವಯಸ್ಸಿನ MS ಚೆನ್ ಎಂದು ಗುರುತಿಸಲ್ಪಟ್ಟಿದ್ದ ಮಹಿಳೆ ಸುಮಾರು 10 ವರ್ಷಗಳ ಕಾಲ ಹೊಟ್ಟೆ ನೋವನ್ನು ಅನುಭವಿಸುತ್ತಿದ್ದಳು. ಅವಳು ತನ್ನ ತಪ್ಪು ತಿಳುವಳಿಕೆಯಿಂದಾಗಿ ಯಾವುದೇ ರೀತಿಯ ವೈದ್ಯಕೀಯ ಪರೀಕ್ಷೆಗೆ ಭಯ ಪಟ್ಟು ಆಸ್ಪತ್ರೆಗೆ ಸೇರಲಿಲ್ಲ ಎಂದು ಚೀನಾದ ಹೆಝೌ ಜಿಂಗ್ಜಿ ಆಸ್ಪತ್ರೆಯವರ ಪ್ರಕಟನೆ ತಿಳಿಸಿದೆ.

breakfast

ಅವಳಿಗೆ ತಡೆಯಲಾಗದ ನೋವು ಕಂಡಾಗ ಆಸ್ಪತ್ರೆಗೆ ಹೇಗಾದರೂ ಸೇರಿದಳು. ವೈದ್ಯಕೀಯ ಪರೀಕ್ಷೆಗಳ ನಂತರ ಅವಳಲ್ಲಿ ಅಸಂಖ್ಯಾತ ಪಿತ್ತ ಕೋಶದ ಕಲ್ಲುಗಳು ಕಂಡು ಬಂದವು. ವೈದ್ಯರ ಪ್ರಕಾರ ಕೆಲವು ಕಲ್ಲುಗಳು ಮೊಟ್ಟೆಗಳಂತೆ ದೊಡ್ಡದಾಗಿವೆ. ಪಿತ್ತಕೋಶ ಮತ್ತು ಪಿತ್ತರಸದ ಕಲ್ಲುಗಳನ್ನು ತೆಗೆದುಹಾಕಲು ವೈದ್ಯರು ಆರುವರೆ ಗಂಟೆಗಳ ಕಾಲ ಅವಳನ್ನು ಶಸ್ತ್ರಚಿಕಿತ್ಸೆಗೆ ಗುರಿಪಡಿಸಿದರು.

ಈ ಕಾರ್ಯಾ ಮಾಡಿದ ಶಸ್ತ್ರಚಿಕಿತ್ಸಕರಲ್ಲಿ ಒಬ್ಬರಾದ ಡಾ ಕ್ವಾನ್ವೀ ವೀ ಹೇಳಿದರು, ಪಿತ್ತ ಕೋಶದ ಕಲ್ಲುಗಳು ಬೆಳಗ್ಗಿನ ಉಪಾಹಾರವನ್ನು ಬಿಟ್ಟುಬಿಡುವ ಅಭ್ಯಾಸದಿಂದಾಗಿ ಉಂಟಾಗಬಹುದು. ಡಾ ಕ್ವಾನ್ವೀ ವೀ ಪ್ರಕಾರ ಯಾರಾದರೂ ಬೆಳಗ್ಗಿನ ಉಪಹಾರವನ್ನು ತಪ್ಪಿಸಿದರೆ ಅವರ ಪಿತ್ತಕೋಶವು ಕುಗ್ಗುವಿಕೆ ಅಥವಾ ವಿಸ್ತರಿಸುವಿಕೆಯಿಂದ ಇರುತ್ತದೆ ಇದರಿಂದಾಗಿ ಪಿತ್ತರಸ ನಿರ್ಮಾಣವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿರುತ್ತಾರೆ.

English summary

Skipping Breakfast Can Lead To Gallstones Formation

Skipping breakfast can lead to a number of health issues with the major one being lack of energy. However, a shocking case was revealed recently where a woman from China who skipped breakfast for 8 years had developed 200 gallstones. The woman who has been identified as 45 year old Ms Chen had gone to Guangji Hospital, Hezhou in China, with a history of stomach pain for about 10 long years. She did not go for medical examination as she feared of any kind of surgery.
Story first published: Friday, August 4, 2017, 19:43 [IST]
X
Desktop Bottom Promotion