ಕುಳಿತುಕೊಂಡು ದೀರ್ಘ ಕಾಲ ಟಿವಿ ವೀಕ್ಷಿಸಿದರೆ, ಆರೋಗ್ಯಕ್ಕೆ ಅಪಾಯ!

By: manu
Subscribe to Boldsky

ಈಗಿನ ಕಾಲದಲ್ಲಿ ಕಂಪ್ಯೂಟರ್ ಮುಂದೆ ಕುಳಿತುಕೊಂಡೇ ಮಾಡುವಂತಹ ಕೆಲಸಗಳು ಹೆಚ್ಚಾಗಿರುವುದು. ಇನ್ನು ಕೆಲವರು ಅಂಗಡಿ ಹಾಗೂ ಹೋಟೆಲ್ ನ ಕ್ಯಾಶ್ ಕೌಂಟರ್ ನಲ್ಲಿ ದಿನಗಟ್ಟಲೆ ಕುಳಿತುಕೊಳ್ಳುವರು. ಟಿವಿ ಮುಂದೆ ಕುಳಿತುಕೊಂಡು ದೀರ್ಘ ಸಮಯ ಕಳೆಯುವವರು ಇದ್ದಾರೆ. ಯಾವುದೇ ಚಟುವಟಿಕೆ ಇಲ್ಲದೆ ದೀರ್ಘಕಾಲ ತನಕ ಕುಳಿತುಕೊಂಡೇ ಇರುವುದು ತುಂಬಾ ದೊಡ್ಡ ಸಮಸ್ಯೆಯಾಗುವುದು ಎಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರವಾಗಿದೆ. ಇದನ್ನು ಅಧ್ಯಯನವೊಂದು ಕೂಡ ಈಗ ದೃಢಪಡಿಸಿದೆ.

ದೀರ್ಘಕಾಲದ ತನಕ ಕುಳಿತುಕೊಂಡೇ ಇರುವುದರಿಂದ ಮುಂದೆ ಇದು ಚಲನಶೀಲತೆ ಮೇಲೆ ಪರಿಣಾಮ ಬೀರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ದೀರ್ಘಕಾಲ ತನಕ ಕುಳಿತುಕೊಂಡೇ ಇರುವುದು ಮತ್ತು ಟಿವಿ ವೀಕ್ಷಿಸುವುದುರಿಂದ ವಯಸ್ಸಾಗುತ್ತಾ ಇರುವಂತೆ ನಡೆಯಲು ಸಮಸ್ಯೆಯಾಗುವ ಸಾಧ್ಯತೆಯು ಮೂರು ಪಟ್ಟು ಇದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ.

ಈ ಅಧ್ಯಯನಕ್ಕೆ 50ರಿಂದ 71ರ ಹರೆಯದ ಆರೋಗ್ಯವಂತ ಜನರನ್ನು ಸುಮಾರು 10 ವರ್ಷಗಳ ಕಾಲ ಗಮನಹರಿಸಲಾಯಿತು. ದೀರ್ಘಕಾಲ ತನಕ ಕುಳಿತುಕೊಂಡು ಇರುವುದು ಮತ್ತು ಟಿವಿ ವೀಕ್ಷಿಸುವುದರಿಂದ ವಯಸ್ಸಾಗುತ್ತಾ ಇರುವಂತೆ ದೈಹಿಕ ಚಟುವಟಿಕೆಯು ಕುಂದುವುದು ಎಂದು ಅಧ್ಯಯನದಿಂದ ತಿಳಿದುಬಂದಿದೆ.

Watching Television

ಐದು ಗಂಟೆ ಅಥವಾ ಅದಕ್ಕಿಂತ ಹೆಚ್ಚಿನ ಸಮಯ ಟಿವಿ ವೀಕ್ಷಿಸುವವರಿಗೆ ಇಂತಹ ಸಮಸ್ಯೆ ಕಾಡುವ ಸಾಧ್ಯತೆ ಶೇ. 65ರಷ್ಟಿರುತ್ತದೆ ಎಂದು ಅಧ್ಯಯನಗಳು ಹೇಳಿವೆ. ಎರಡು ಗಂಟೆಗಿಂತ ಕಡಿಮೆ ಟಿವಿ ವೀಕ್ಷಿಸಿದವರಿಗೆ ಇಂತಹ ಸಮಸ್ಯೆಯಾಗದು ಎಂದು ಹೇಳಿರುವ ಅಧ್ಯಯನಗಳು ದೈಹಿಕ ಚಟುವಟಿಕೆ ಏನೇ ಆಗಿದ್ದರೂ ಇದು ಪರಿಣಾಮ ಬೀರುವುದು ಎಂದಿದೆ.

ವಾರದಲ್ಲಿ ಮೂರು ಗಂಟೆ ಟಿವಿ ನೋಡಿಕೊಂಡು ತುಂಬಾ ಕಡಿಮೆ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳು ಕೂಡ ವಯಸ್ಸಾಗುತ್ತಾ ಇರುವಂತೆ ನಡೆಯಲು ಕಷ್ಟಪಡುವಂತಹ ಸಮಸ್ಯೆ ಎದುರಿಸಲಿದ್ದಾರೆ ಎಂದು ಅಧ್ಯಯನಗಳು ತಿಳಿಸಿವೆ. ಸಂಜೆ ವೇಳೆಗೆ ದೀರ್ಘ ಕಾಲದ ತನಕ ಕುಳಿತುಕೊಂಡು ಟಿವಿ ವೀಕ್ಷಣೆ ಮಾಡುವುದು ವಯಸ್ಸಾಗುವಂತಹ ಇರುವಂತಹ ಜನರು ಮಾಡುತ್ತಿರುವ ಅತ್ಯಂತ ಅಪಾಯಕಾರಿ ಕೆಲಸ ಎಂದು ವಾಷಿಂಗ್ಟನ್ ಡಿಸಿಯ ಜಾರ್ಜ್ ವಾಷಿಂಗ್ಟನ್ ಯೂನಿವರ್ಸಿಟಿಯ ಪ್ರೊಫೆಸರ್ ಲೊರೆಟ್ರಾ ಡಿಪಿಯಟ್ರೊ ತಿಳಿಸಿದ್ದಾರೆ.

ದೈಹಿಕ ಚಟುವಟಿಕೆ ಕುಗ್ಗುತ್ತಿರುವ ಆರೋಗ್ಯ ಸಮಸ್ಯೆಯನ್ನು ಇಂಗ್ಲೆಂಡ್ ಎದುರಿಸುತ್ತಿದೆ ಎಂದು ಇಂಗ್ಲೆಂಡಿನ ಸಾರ್ವಜನಿಕ ಆರೋಗ್ಯ ಇಲಾಖೆಯು ಘೋಷಿಸಿದೆ. ಇದರ ಬಳಿಕ ಈ ಅಧ್ಯಯನ ವರದಿ ಪ್ರಕಟವಾಗಿದೆ. ಇಂಗ್ಲೆಂಡಿನಲ್ಲಿ ಜನರು ತಿಂಗಳಿಗೆ ಹತ್ತು ನಿಮಿಷ ನಡೆಯಲು ವಿಫಲವಾಗುತ್ತಾ ಇದ್ದಾರೆ ಎಂದು ಅಧ್ಯಯನವೊಂದು ಹೇಳಿದೆ.

ವಯಸ್ಸಾಗುತ್ತಾ ಇರುವಂತೆ ನಮ್ಮ ಸ್ನಾಯುಗಳ ಬಳಕೆ ತುಂಬಾ ಕಡಿಮೆಯಾಗುವುದು. ಇದರಿಂದ ಅದರ ಗುಣಮಟ್ಟ ಹಾಗೂ ಪ್ರಮಾಣ ಕುಗ್ಗುತ್ತಾ ಹೋಗುವುದು ಎಂದು ಬ್ರಿಟಿಷ್ ಸೊಸೈಟಿ ಫಾರ್ ರಿಸರ್ಚ್ ಆನ್ ಏಜಿಂಗ್ ನ ಟ್ರಸ್ಟಿ ಮತ್ತು ಆಸ್ಟನ್ ಯೂನಿವರ್ಸಿಟಿಯ ಡಾ. ಜೇಮ್ಸ್ ಬ್ರೌನ್ ಹೇಳಿದ್ದಾರೆ.

English summary

Sitting & Watching Television For Long Can Cause This Problem

Sitting down for long periods increases your chances of mobility problems later in life, claim scientists. Prolonged periods of sitting and watching television causes a THREE-FOLD increased risk of developing a walking difficulty in later life, a new study has shown. The study, which followed a group of healthy people between the ages of 50 and 71 for 10 years, found that prolonged sitting was particularly harmful when combined with low levels of physical activity.
Subscribe Newsletter