For Quick Alerts
ALLOW NOTIFICATIONS  
For Daily Alerts

  ಇಪ್ಪತ್ತರ ಹರೆಯದಿಂದಲೇ ಅನುಸರಿಸಬೇಕಾದ ಆರೋಗ್ಯಕರ ಅಭ್ಯಾಸಗಳು

  By Arshad
  |

  ನಮ್ಮ ಇಂದಿನ ಆರೋಗ್ಯ ಹಿಂದಿನ ದಿನಗಳಲ್ಲಿ ನಾವು ಇರಿಸಿಕೊಂಡಿದ್ದ ಆರೋಗ್ಯವನ್ನು ಅವಲಂಬಿಸಿದೆ. ಜೀವನದ ಮುಂದಿನ ವರ್ಷಗಳಲ್ಲಿ ಆರೋಗ್ಯ ಚೆನ್ನಾಗಿರಬೇಕೆಂದರೆ ಇಂದಿನಿಂದಲೇ ಕೆಲವಾರು ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕಾಗಿರುವುದು ಇಷ್ಟವಾಗದಿದ್ದರೂ ಅನುಸರಿಸಲೇಬೇಕಾಗುತ್ತದೆ. ಕೆಲವು ಅಭ್ಯಾಸಗಳನ್ನು ನಿತ್ಯದ ಅಭ್ಯಾಸಗಳನ್ನಾಗಿಸುವ ಮೂಲಕ ಇದರ ಪರಿಣಾಮ ಮಧ್ಯವಯಸ್ಸು ದಾಟಿದ ಬಳಿಕ ಇದರ ಪರಿಣಾಮವನ್ನು ಪಡೆಯಬಹುದು ಹಾಗೂ ಇದಕ್ಕಾಗಿ ನಿಮಗೆ ನೀವೇ ಋಣಿಯಾಗಿರುತ್ತೀರಿ.

  ಸಾಮಾನ್ಯವಾಗಿ ನಾವೆಲ್ಲಾ ಹಣ ಅಥವಾ ಆಸ್ತಿ ಸಂಪಾದನೆಯೇ ಜೀವನದಲ್ಲಿ ಮುಖ್ಯ ಎಂದು ಕೊಂಡಿದ್ದು ಹಾಗೇ ನಡೆಯುತ್ತಿದ್ದೇವೆ. ಆದರೆ ಕೆಲವು ಅಭ್ಯಾಸಗಳನ್ನು ಅನುಸರಿಸುವಾಗ ಹಣಗಳಿಕೆಯ ಮೇಲೆ ಇದು ಪರಿಣಾಮ ಬೀರಬಹುದು ಎಂದೇ ಹೆಚ್ಚಿನವರು ಈ ಅಭ್ಯಾಸಗಳನ್ನು ನಿರ್ಲಕ್ಷಿಸಿಬಿಡುತ್ತಾರೆ. ಆದರೆ ಈ ಅಭ್ಯಾಸಗಳನ್ನು ಎಷ್ಟು ಚಿಕ್ಕ ವಯಸ್ಸಿನಿಂದ ತೊಡಗುತ್ತೀರೋ ಅಷ್ಟೂ ಒಳ್ಳೆಯದು. ಅದರಲ್ಲೂ ಇಪ್ಪತ್ತರ ಹರೆಯದಲ್ಲಿ ಪ್ರಾರಂಭಿಸಿದ ಅಭ್ಯಾಸಗಳು ಜೀವನಪರ್ಯಂತ ನಿಮ್ಮ ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲದೇ ಯಾವುದೇ ರೋಗ ರುಜಿನವಿಲ್ಲದೇ ದೀರ್ಘಾಯಸ್ಸನ್ನು ಪಡೆಯಲು ನೆರವಾಗುತ್ತದೆ.

  ಲವಲವಿಕೆಯ ಹೃದಯಕ್ಕಾಗಿ ಆರೋಗ್ಯಕರ ಆಹಾರಕ್ರಮ

  ಸಾಮಾನ್ಯವಾಗಿ ಹದಿಹರೆಯದಿಂದ ಇಪ್ಪತ್ತರ ಹರೆಯಕ್ಕೆ ಕಾಲಿಟ್ಟ ಯುವಜನತೆ ಅತ್ಯುತ್ತಮವಾದ ಆರೋಗ್ಯದಲ್ಲಿದ್ದು ಇವರು ಕಲ್ಲನ್ನೂ ತಿಂದು ಕರಗಿಸಿಕೊಳ್ಳುವ ಹಂಬಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಆದರೆ ಈ ಸಮಯದಲ್ಲಿ ಕೊಂಚ ತಾಳ್ಮೆವಹಿಸಿ ಜೀವನಶೈಲಿ ಹಾಗೂ ಆರೋಗ್ಯದ ಬಗ್ಗೆ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಆರೋಗ್ಯದಲ್ಲಿ ಗಮನಾರ್ಹ ಬದಲಾವಣೆ ಹಾಗೂ ವಯಸ್ಸಾಗುವ ಪ್ರಕ್ರಿಯೆಯನ್ನೂ ತಡವಾಗಿಸಬಹುದು. 

  ದೇಹದ ದಾರ್ಢ್ಯತೆಯನ್ನು ಸೂಕ್ತ ಮಟ್ಟದಲ್ಲಿ ಕಾಪಾಡುವುದು, ಮದ್ಯಪಾನ-ಧೂಮಪಾನ ರಹಿತ ಜೀವನ ಅಥವಾ ಅತ್ಯಂತ ಕನಿಷ್ಠ ಮಟ್ಟಕ್ಕಿಳಿಸುವುದು, ಆರೋಗ್ಯಕರ ಆಹಾರ ಕ್ರಮವನ್ನೇ ಅನುಸರಿಸುವುದು, ನಿಯಮಿತವಾದ ದೈಹಿಕ ಕಸರತ್ತು ಮೊದಲಾದವು ಆರೋಗ್ಯವನ್ನು ಕಾಪಾಡಿಕೊಂಡು ಬರಲು ಅಗತ್ಯವಾದ ಮೂಲಮಂತ್ರಗಳಾಗಿವೆ. ಇಂದಿನ ಲೇಖನದಲ್ಲಿ ಉತ್ತಮ ಆರೋಗ್ಯಕ್ಕಾಗಿ ಇಪ್ಪತ್ತನೆಯ ವಯಸ್ಸಿನಿಂದಲೇ ನಿತ್ಯದ ಆಚರಣೆಯಂತೆ ಅನುಸರಿಸಿಕೊಂಡು ಬರಬೇಕಾದ ಕೆಲವು ಅಭ್ಯಾಸಗಳ ಬಗ್ಗೆ ವಿವರಗ ನೀಡಲಾಗಿದೆ... 

  ನಿಮ್ಮ ದಿನದ ಪ್ರಥಮ ಆಹಾರ ಲಿಂಬೆ ಬೆರೆಸಿದ ನೀರು ಆಗಿರಲಿ

  ನಿಮ್ಮ ದಿನದ ಪ್ರಥಮ ಆಹಾರ ಲಿಂಬೆ ಬೆರೆಸಿದ ನೀರು ಆಗಿರಲಿ

  ನಿತ್ಯವೂ ಬೆಳಿಗ್ಗೆದ್ದ ತಕ್ಷಣ ಒಂದು ದೊಡ್ಡ ಲೋಟ ಉಗುರುಬೆಚ್ಚನೆಯ ನೀರಿಗೆ ಒಂದು ದೊಡ್ಡ ಲಿಂಬೆಯ ಅರ್ಧಭಾಗದ (ಚಿಕ್ಕದಾದರೆ ಇಡಿಯ ಲಿಂಬೆ) ರಸವನ್ನು ಹಿಂಡಿ ಚೆನ್ನಾಗಿ ಬೆರೆಸಿ ಕುಡಿಯಿರಿ. ಸಾಧ್ಯವಾದರೆ ಚಿಟಿಕೆಯಷ್ಟು ದಾಲ್ಚಿನಿ ಪುಡಿಯನ್ನೂ ಬೆರೆಸಬಹುದು. ಕನಿಷ್ಟ ಮುಕ್ಕಾಲು ಗಂಟೆ ಬೇರೇನನ್ನೂ ಸೇವಿಸಬಾರದು. ಬಳಿಕ ಉಪಾಹಾರ ಸೇವಿಸಿ. ಇದರಿಂದ ದೇಹದ ಜೀವರಾಸಾಯನಿಕ ಕ್ರಿಯೆಗಳು ಚುರುಕಾಗುತ್ತವೆ ಹಾಗೂ ಉಪಾಹಾರವನ್ನು ಸೂಕ್ತವಾಗಿ ಜೀರ್ಣಿಸಿಕೊಂಡು ದಿನದ ಚಟುವಟಿಕೆಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಲು ಸಾಧ್ಯವಾಗುತ್ತದೆ.

  ಲಘು ಆಹಾರಗಳನ್ನು ಕೊಂಡೊಯ್ಯಿರಿ

  ಲಘು ಆಹಾರಗಳನ್ನು ಕೊಂಡೊಯ್ಯಿರಿ

  ಬೆಳಗ್ಗಿನ ಉಪಾಹಾರದ ಬಳಿಕ ಮಧ್ಯಾಹ್ನದ ಊಟದ ನಡುವೆ ಕೆಲವೊಮ್ಮೆ ಹಸಿವಾಗುತ್ತದೆ. ಈ ಹಸಿವನ್ನು ತಣಿಸಲು ಅನಾರೋಗ್ಯಕರ ಆಹಾರ ಸೇವಿಸುವ ಬದಲು ಮನೆಯಿಂದಲೇ ಆರೋಗ್ಯಕರವಾದ ಲಘು ಉಪಾಹಾರವನ್ನು ಜೊತೆಯಲ್ಲಿಯೇ ತೆಗೆದುಕೊಂಡು ಹೋದರೆ ಇದು ಆ ಹಸಿವನ್ನು ತಣಿಸಲು ನೆರವಾಗುತ್ತದೆ. ಹಣ್ಣುಗಳು, ಒಣಫಲಗಳು ಅಥವಾ ಮೊಸರು ಇದಕ್ಕೆ ಉತ್ತಮ ಆಯ್ಕೆಯಾಗಿದೆ.

  ಹಲ್ಲುಗಳ ನಡುವೆ ಸ್ವಚ್ಛಗೊಳಿಸಲು ಫ್ಲಾಸ್ ಬಳಸಿ

  ಹಲ್ಲುಗಳ ನಡುವೆ ಸ್ವಚ್ಛಗೊಳಿಸಲು ಫ್ಲಾಸ್ ಬಳಸಿ

  ನಿಮ್ಮ ಹಲ್ಲುಗಳ ಆರೋಗ್ಯ ನಿಮ್ಮ ದೇಹದ ಆರೋಗ್ಯವನ್ನು ನೇರವಾಗಿ ಅವಲಂಬಿಸಿದೆ. ಹಲ್ಲಿನ ಆರೋಗ್ಯಕ್ಕೂ ಹೃದಯದ ತೊಂದರೆಗಳಿಗೂ ನಿಕಟ ಸಂಬಂಧವಿರುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಹಲ್ಲುಗಳ ನಡುವೆ ಸಿಲುಕಿಕೊಂಡ ಆಹಾರಕಣಗಳನ್ನು ಆಗಾಗ ತೆಳುವಾದ ದಾರ (ಫ್ಲಾಸ್) ಮೂಲಕ ನಿವಾರಿಸಿಕೊಂಡು ಹಲ್ಲುಗಳಲ್ಲಿ ಕುಳಿಗಳಾಗುವುದನ್ನು ತಡೆಯಬಹುದು.

  ಪ್ರತಿ ಊಟದ ಬಳಿಕ ಸೇಬು ಹಣ್ಣೊಂದನ್ನು ತಿನ್ನಿ

  ಪ್ರತಿ ಊಟದ ಬಳಿಕ ಸೇಬು ಹಣ್ಣೊಂದನ್ನು ತಿನ್ನಿ

  ಬಾಯಿಯ ಆರೋಗ್ಯ ಚೆನ್ನಾಗಿರಲು ಒಂದು ಸುಲಭ ಉಪಾಯವಿದೆ. ಅದೆಂದರೆ ಪ್ರತಿ ಊಟದ ಬಳಿಕ ಸೇಬು ಹಣ್ಣೊಂದನ್ನು ತಿನ್ನುವುದು. ಇದರಿಂದ ಬಾಯಿಯ ಒಳಭಾಗ ಸ್ವಚ್ಛಗೊಳ್ಳುವುದು ಮಾತ್ರವಲ್ಲ, ಹಲ್ಲುಗಳ ನಡುವೆ ಸಿಲುಕಿಕೊಂದಿದ್ದ ಆಹಾರಕಣಗಳೂ ನಿವಾರಣೆಯಾಗುತ್ತದೆ. ಒಸಡುಗಳಲ್ಲಿ ರಕ್ತಸಂಚಾರ ಉತ್ತಮಗೊಳ್ಳುವ ಮೂಲಕ ಹಲ್ಲುಗಳ ಬುಡ ದೃಢವಾಗುತ್ತದೆ ಹಾಗೂ ಬಾಯಿಯ ಒಳಭಾಗದ ಆಮ್ಲೀಯತೆ ಸಮತೋಲನದಲ್ಲಿರುತ್ತದೆ.

  ಬಿಸಿ-ತಣ್ಣನೆಯ ನೀರಿನ ಸ್ನಾನವನ್ನು ಪ್ರತಿದಿನ ಪಡೆಯಿರಿ

  ಬಿಸಿ-ತಣ್ಣನೆಯ ನೀರಿನ ಸ್ನಾನವನ್ನು ಪ್ರತಿದಿನ ಪಡೆಯಿರಿ

  ರಕ್ತನಾಳಗಳನ್ನು ದೃಢಪಡಿಸಲು ಒಂದು ಸುಲಭ ವಿಧಾನವೆಂದರೆ ಬಿಸಿ ತಣ್ಣನೆಯ ಸ್ನಾನ (Contrast Shower). ಅಂದರೆ ಸ್ನಾನವನ್ನು ಮೊದಲು ಕೊಂಚ ಬಿಸಿಯಾಗಿರುವ ನೀರಿನಿಂದ ಪ್ರಾರಂಭಿಸಿ ಕಡೆಯ ಭಾಗವನ್ನು ತಣ್ಣನೆಯ ನೀರಿನಿಂದ ಕೊನೆಗೊಳಿಸುವುದಾಗಿದೆ. ಬಿಸಿನೀರಿನಿಂದ ರಕ್ತನಾಳಗಳು ಹಿಗ್ಗಿ ರಕ್ತಸಂಚಾರ ಹೆಚ್ಚುತ್ತದೆ ಹಾಗೂ ತಣ್ಣೀರಿನಿಂದ ರಕ್ತನಾಳಗಳು ಕುಗ್ಗುತ್ತವೆ. ಹೀಗೆ ಹಿಗ್ಗಿ ಕುಗ್ಗುವ ರಕ್ತನಾಳಗಳು ಅತ್ಯುತ್ತಮ ಸೆಳೆತ ಹೊಂದಿರುವ ಕಾರಣ ಬಹಳ ವರ್ಷಗಳವರೆಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.

  ಮೇಜಿನ ಮೇಲೆ ಸದಾ ನೀರಿನ ಬಾಟಲಿಯೊಂದನ್ನಿರಿಸಿ

  ಮೇಜಿನ ಮೇಲೆ ಸದಾ ನೀರಿನ ಬಾಟಲಿಯೊಂದನ್ನಿರಿಸಿ

  ಹೆಚ್ಚಿನ ಜನರಿಗೆ ತಮಗೆ ನಿರ್ಜಲೀಕರಣದ ತೊಂದರೆ ಇದೆ ಎಂದೇ ಗೊತ್ತಿರುವುದಿಲ್ಲ. ಯಾವುದೇ ವಯಸ್ಸಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಆಗಾಗ ನೀರು ಕುಡಿಯುತ್ತಲೇ ಇರುವುದಾಗಿದೆ. ನಿಮ್ಮ ಮುಂದಿರುವ ಮೇಜಿನ ಮೇಲೆ ಕಣ್ಣಿಗೆ ಕಾಣುವಂತೆ ಒಂದು ನೀರಿನ ಬಾಟಲಿಯನ್ನಿರಿಸಿ ಆಗಾಗ ಕೊಂಚ ಕೊಂಚವಾಗಿ ಕುಡಿಯುತ್ತಾ ಬರುವ ಮೂಲಕ ಆರೋಗ್ಯವನ್ನು ಯಾವುದೇ ಹೆಚ್ಚಿನ ಶ್ರಮವಿಲ್ಲದೇ ಕಾಪಾಡಿಕೊಂಡು ಬರಬಹುದು.

  ಒಣಫಲಗಳನ್ನು ಸೇವಿಸಿ

  ಒಣಫಲಗಳನ್ನು ಸೇವಿಸಿ

  ಪ್ರತಿದಿನವೂ ಕನಿಷ್ಟ ಐವತ್ತು ಗ್ರಾಂಗಳಷ್ಟು ವಿವಿಧ ಒಣಫಲಗಳನ್ನು ಸೇವಿಸಿ. ಒಣಫಲಗಳಲ್ಲಿ ಕೊಬ್ಬಿನ ಆಮ್ಲ ಹಾಗೂ ಒಮೆಗಾ-3s ಎಂಬ ಪೋಷಕಾಂಶವಿದ್ದು ಇವುಗಳು ಹೃದಯ ಹಾಗೂ ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತವೆ. ಕೂದಲು ಹಾಗೂ ಉಗುರುಗಳ ದೃಢತೆಗೂ ನೆರವಾಗುತ್ತವೆ. ಇದರೊಂದಿಗೆ ಒಣಫಲಗಳಲ್ಲಿರುವ ಸೆಲೆನಿಯಂ, ಆಂಟಿ ಆಕ್ಸಿಡೆಂಟುಗಳು, ವಿಟಮಿನ್ ಇ, ಸಸ್ಯಜನಕ ಸ್ಟೆರಾಲ್, ಪೊಟ್ಯಾಶಿಯಂ, ಕ್ಯಾಲ್ಸಿಯಂ ಇತ್ಯಾದಿಗಳು ದೇಹದ ಆರೋಗ್ಯವನ್ನು ವೃದ್ದಿಸುತ್ತವೆ. ಇಪ್ಪತ್ತರ ಹರೆಯದಿಂದಲೇ ಅನುಸರಿಸಬೇಕಾದ ಈ ಅಭ್ಯಾಸ ಅತ್ಯುತ್ತಮವಾದ ಅಭ್ಯಾಸವಾಗಿದೆ.

  ಮಲಗುವಾಗ ಕಾಲುಚೀಲ ಧರಿಸಿ

  ಮಲಗುವಾಗ ಕಾಲುಚೀಲ ಧರಿಸಿ

  ಪ್ರತಿದಿನ ಮಲಗುವ ಮುನ್ನ ಪಾದಗಳಿಗೆ ಕೆಲವು ಹನಿ ಪುದಿನಾ ಎಣ್ಣೆಯನ್ನು ಬೆರೆಸಿದ ಕೊಂಚ ಕೊಬ್ಬರಿ ಎಣ್ಣೆಯನ್ನು ಸವರಿಕೊಂಡು ನಯವಾಗಿ ಮಸಾಜ್ ಮಾಡಿ ಎಣ್ಣೆಯನ್ನು ಪಾದಗಳು ಹೀರಿಕೊಳ್ಳುವಂತೆ ಮಾಡಿ. ಬಳಿಕ ಸ್ವಚ್ಛವಾದ ಕಾಲುಚೀಲ ಧರಿಸಿ ಮಲಗಿ. ಇದರಿಂದ ಪಾದಗಳ ಹಿಮ್ಮಡಿ ನಯವಾಗಿರುತ್ತದೆ ಹಾಗೂ ಸುಲಭವಾಗಿ ಹೊರಪದರವನ್ನು ನಿವಾರಿಸಲು ಸಾಧ್ಯವಾಗುತ್ತದೆ. ಪಾದಗಳ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಎದುರಾಗುವ ಹಲವಾರು ತೊಂದರೆಗಳಿಂದ ರಕ್ಷಣೆ ಪಡೆಯಬಹುದು.

  ಪ್ರತಿದಿನವೂ ಕೊಂಚ ಓದಿ

  ಪ್ರತಿದಿನವೂ ಕೊಂಚ ಓದಿ

  ಪ್ರತಿದಿನವೂ ಹೊಸ ವಿಷಯಗಳನ್ನು ಓದುತ್ತಾ ಹೋಗುವ ಮೂಲಕ ಸ್ಮರಣಶಕ್ತಿ ಹೆಚ್ಚುತ್ತದೆ, ತಾರ್ಕಿಕ ಆಲೋಚನೆ ಹಾಗೂ ಕಲ್ಪನಾಶಕ್ತಿ ಉತ್ತಮಗೊಳ್ಳುತ್ತದೆ. ಅಲ್ಲದೇ ನಿತ್ಯವೂ ಓದುವವರಿಗೆ ತಡವಯಸ್ಸಿನಲ್ಲಿ ಮರೆಗುಳಿತನ ಅಥವಾ ಆಲ್ಜೀಮರ್ಸ್ ಕಾಯಿಲೆಗೆ ಒಳಗಾಗುವ ಸಾಧ್ಯತೆ ಅತಿ ಕಡಿಮೆಯಾಗಿರುತ್ತದೆ.

   ಕ್ಯಾಮೋಮೈಲ್ ಡಿಕಾಕ್ಷನ್ ನಿಂದ ಮುಖ ಒರೆಸಿಕೊಳ್ಳಿ

  ಕ್ಯಾಮೋಮೈಲ್ ಡಿಕಾಕ್ಷನ್ ನಿಂದ ಮುಖ ಒರೆಸಿಕೊಳ್ಳಿ

  ಕ್ಯಾಮೋಮೈಲ್ ಹೂವಿನ ಟೀ ತಯಾರಿಸಿ ಈ ದ್ರವವನ್ನು ಫ್ರಿಜ್ಜಿನ ಐಸ್ ಟ್ರೇಯಲ್ಲಿರಿಸಿ ಮಂಜುಗಡ್ಡೆಯಾಗಿಸಿ. ಈ ಐಸ್ ತುಂಡುಗಳಿಂದ ನಿತ್ಯವೂ ಮುಖವನ್ನು ಒರೆಸಿಕೊಳ್ಳುವ ಮೂಲಕ ಚರ್ಮಕ್ಕೆ ಹೆಚ್ಚಿನ ಕಾಂತಿ ಹಾಗೂ ಸೆಳೆತವನ್ನು ನೀಡಬಹುದು. ಇದರಿಂದ ನೆರಿಗೆ ಮೂಡುವ ದಿನಗಳು ತಡವಾಗುತ್ತವೆ ಹಾಗೂ ಚರ್ಮದಡಿಯಲ್ಲಿ ಹೆಚ್ಚಿನ ನೀರು ಸಂಗ್ರಹವಾಗುವ ಮೂಲಕ ಚೀಲಗಳಂತೆ ತೋರುವ (oedema) ಸ್ಥಿತಿಯಿಂದ ರಕ್ಷಣೆ ದೊರಕುತ್ತದೆ. ಇಪ್ಪತ್ತರ ಹರೆಯದಲ್ಲಿಯೇ ಪ್ರಾರಂಭಿಸಬೇಕಾದ ಅಭ್ಯಾಸಗಳಲ್ಲಿ ಇದು ಅತಿಮುಖ್ಯವಾಗಿದೆ.

  English summary

  Simple Healthy Habits To Be Followed From Your 20s

  Most of the 20 year olds don't care much about their health. But the lifestyle and health decisions that we make now can have a dramatic effect on how well we'll age at a later period of time. Maintaining a lean body mass index, moderate alcohol consumption, not smoking, following a healthy diet and regular physical activity is what helps you stay healthy well into your middle age. In this article, we have listed some of the best healthy habits to start in your 20s. Read to know more about the healthy habits that you need to imbibe in your early 20s.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more