For Quick Alerts
ALLOW NOTIFICATIONS  
For Daily Alerts

ಮಹಿಳೆಯರೇ ಎಚ್ಚರ!! ನಾಚಿಕೆ-ಸಂಕೋಚ ಪಟ್ಟರೆ ಸಮಸ್ಯೆ ಜಾಸ್ತಿಯಾಗಬಹುದು!!

ಮಹಿಳೆಯರ ಯೋನಿಯ ಸೋಂಕು ಉಂಟಾದರೆ ಇದರ ಪರಿಣಾಮವಾಗಿ ತುರಿಕೆ, ಕೆಟ್ಟ ವಾಸನೆ, ಬಿಳಿಸೆರಗು ಇತರ ತೊಂದರೆಗಳು ಎದುರಾಗುತ್ತವೆ. ಸಾರ್ವಜನಿಕವಾಗಿ ಇದಕ್ಕೆ ಶಮನ ನೀಡಲು ಸಾಧ್ಯವಾಗದೇ ಮುಜುಗರ ಎದುರಿಸಬೇಕಾಗುತ್ತದೆ.

By Deepak M
|

ಮಹಿಳೆಯರ ದೇಹದಲ್ಲಿ ಅತ್ಯಂತ ಸೂಕ್ಷ್ಮ ಮತ್ತು ಪ್ರಧಾನ ಭಾಗ ಯೋನಿ. ಯೋನಿಯ ಮಹಿಳೆಯರ ಜನನಾಂಗದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿರುತ್ತದೆ. ಈ ಯೋನಿಯ ಆರೋಗ್ಯವು ಮಹಿಳೆಯರ ಆರೋಗ್ಯದಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತದೆ ಎಂಬುದು ಸತ್ಯ. ಯೋನಿಯು ಬ್ಯಾಕ್ಟೀರಿಯಾ ಮತ್ತು ಸೋಂಕುಗಳಿಗೆ ತುತ್ತಾಗುವ ಅಪಾಯವನ್ನು ಯಾವಾಗಲೂ ಎದುರಿಸುತ್ತಿರುತ್ತದೆ. ಅನಿಯಮಿತವಾದ ಯೋನಿ ಸ್ರವಿಸುವಿಕೆಗೆ ಕಾರಣವಾಗುವ 10 ಬಗೆಯ ಜೀವನ ಶೈಲಿಗಳು

ಲೈಂಗಿಕ ಕ್ರಿಯೆ, ಮಕ್ಕಳ ಜನನ ಹಾಗು ದೇಹದ ಆರೋಗ್ಯ ಇವೆಲ್ಲದಕ್ಕೂ ಯೋನಿಯ ಆರೋಗ್ಯಕ್ಕೂ ಅವಿನಾಭಾವ ಸಂಬಂಧವಿರುತ್ತದೆ. ಹಾಗಾಗಿ ಯೋನಿಯನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳುವುದು ಹೇಗೆಂದು ನಿಮಗೆ ತಿಳಿಸಲು ನಾವು ಈ ಲೇಖನವನ್ನು ನಿಮಗೆ ನೀಡುತ್ತಿದ್ದೇವೆ. ಮಹಿಳೆಯರೇ ಶ್! ಗುಪ್ತಾಂಗದ ಸೋಂಕಿನ ಬಗ್ಗೆ ಎಚ್ಚರವಿರಲಿ!

ಯೋನಿಯ ಆರೋಗ್ಯದಲ್ಲಿ ಏನೋ ಏರುಪೇರಾಗಿದೆ ಎಂಬ ಅನುಮಾನ ನಿಮ್ಮನ್ನು ಕಾಡಿದಲ್ಲಿ ಸಂಕೋಚ ಮತ್ತು ನಾಚಿಕೆಪಡದೆ ನಿಮ್ಮ ಸ್ತ್ರೀ ರೋಗ ತಜ್ಞರನ್ನು ಸಂಪರ್ಕಿಸಿ. ಅವರಿಂದ ಸಲಹೆ ಮತ್ತು ಚಿಕಿತ್ಸೆ ಪಡೆಯಿರಿ. ಬನ್ನಿ ಈ ಅಂಕಣದಲ್ಲಿ ನಿಮಗಾಗಿ ಕೆಲವೊಂದು ಸಲಹೆಗಳನ್ನು ನಾವು ನೀಡಿದ್ದೇವೆ ಮುಂದೆ ಓದಿ....

ಉರಿ ಮತ್ತು ತುರಿಕೆ

ಉರಿ ಮತ್ತು ತುರಿಕೆ

ಒಂದೇ ಸಮನೆ ಉರಿ ಮತ್ತು ತುರಿಕೆ ಕಾಣಿಸಿಕೊಳ್ಳುವುದು ಸಹ ಅನಾರೋಗ್ಯಕರ ಯೋನಿಯ ಸಂಕೇತ. ಇದು ಲೈಂಗಿಕ ಆರೋಗ್ಯದ ಮೇಲೆ ಸಹ ಪ್ರಭಾವ ಬೀರುತ್ತದೆ.

ಒಣಗುವಿಕೆ

ಒಣಗುವಿಕೆ

ಅನಾರೋಗ್ಯಕರ ಯೋನಿಯ ಮೊದಲ ಚಿಹ್ನೆ ಇದು. ಆತಂಕ, ಔಷಧಿ ಸೇವನೆ, ಹಾರ್ಮೋನ್‌ಗಳ ಬದಲಾವಣೆ ಮತ್ತು ತುರಿಕೆ ಇದಕ್ಕೆ ಮುಖ್ಯ ಕಾರಣವಾಗಿರುತ್ತದೆ.

ಸಂಭೋಗದ ಸಮಯದಲ್ಲಿ ಅಥವಾ ನಂತರ ರಕ್ತ ಸ್ರಾವ

ಸಂಭೋಗದ ಸಮಯದಲ್ಲಿ ಅಥವಾ ನಂತರ ರಕ್ತ ಸ್ರಾವ

ಇದು ತೀರಾ ಗಂಭೀರ ಸಮಸ್ಯೆ ಹಾಗು ಇದಕ್ಕೆ ವೈದ್ಯಕೀಯ ನೆರವು ಬೇಕಾಗುತ್ತದೆ. ಇದು ಯೋನಿ ಹರಿದ, ಸೋಂಕಿನಿಂದ ಕೂಡಿದ, ಒಣಗುವಿಕೆ ಅಥವಾ ಲೈಂಗಿಕವಾಗಿ ಹರಡುವ ರೋಗಗಳ ಸಂಕೇತವಾಗಿರಬಹುದು. ಅನಾರೋಗ್ಯಕರ ಯೋನಿಯ ಈ ಸೂಚನೆಯನ್ನು ಕಡೆಗಣಿಸಬೇಡಿ.

ಗುಳ್ಳೆಗಳು ಅಥವಾ ಬೊಬ್ಬೆಗಳು

ಗುಳ್ಳೆಗಳು ಅಥವಾ ಬೊಬ್ಬೆಗಳು

ಯೋನಿಯ ಹೊರಭಾಗದಲ್ಲಿ ಗುಳ್ಳೆ ಅಥವಾ ಬೊಬ್ಬೆಗಳು ಸಹ ಅನಾರೋಗ್ಯಕರ ಯೋನಿಯ ಸಂಕೇತ. ಕೆಲವೊಮ್ಮೆ ಕ್ಯಾನ್ಸರ್‌ಕಾರಕ ಬೊಬ್ಬೆಗಳು ಸಹ ಕಾಣಿಸಿಕೊಳ್ಳಬಹುದು. ಅವುಗಳು ಸಣ್ಣ ಮಚ್ಚೆಯಂತೆ ಆರಂಭವಾಗಿ ಬಣ್ಣ ಬದಲಿಸುತ್ತಾ ಸಾಗುತ್ತವೆ. ಇದು ಅನಾರೋಗ್ಯಕರ ಯೋನಿಯ ಅತಿ ದೊಡ್ಡ ಸೂಚನೆಯಾಗಿರುತ್ತದೆ.

ದುರ್ಗಂಧದಿಂದ ಕೂಡಿದ ಸ್ರವಿಸುವಿಕೆ

ದುರ್ಗಂಧದಿಂದ ಕೂಡಿದ ಸ್ರವಿಸುವಿಕೆ

ದುರ್ಗಂಧದಿಂದ ಕೂಡಿದ ಸ್ರವಿಸುವಿಕೆ ಯೋನಿಯಿಂದ ಬರುತ್ತಿದ್ದಲಿ ಅದು ಸೋಂಕಿನ ಸಂಕೇತವಾಗಿರುತ್ತದೆ. ಅಪಾಯಕಾರಿ ಬ್ಯಾಕ್ಟೀರಿಯಾ ಮಿತಿ ಮೀರಿದಾಗ ಬ್ಯಾಕ್ಟೀರಿಯಲ್ ವ್ಯಜಿನೊಸಿಸ್‌ಗೆ ಕಾರಣವಾಗುತ್ತದೆ. ಯೋನಿಯ ದುರ್ವಾಸನೆ ಸಮಸ್ಯೆ ನಿವಾರಣೆಗೆ ಮನೆಮದ್ದುಗಳು

ಅಸಾಮಾನ್ಯ ರಕ್ತಸ್ರಾವ

ಅಸಾಮಾನ್ಯ ರಕ್ತಸ್ರಾವ

ಇದು ಮುಟ್ಟಾದಾಗ ಕಂಡು ಬರುತ್ತದೆ. ಮಿತಿ ಮೀರಿದಾಗ ತಪ್ಪದೆ ವೈದ್ಯರನ್ನು ಸಂಪರ್ಕಿಸಿ. ವಾರಾನುಗಟ್ಟಲೆ ಮುಟ್ಟು ನಿಲ್ಲದಿರುವುದು ಅಪಾಯಕಾರಿ.

ವ್ಯಜಿನಲ್ ಅಟ್ರೊಪಿ

ವ್ಯಜಿನಲ್ ಅಟ್ರೊಪಿ

ಇದು ಯೋನಿ ಒಣಗಿದಾಗ ಮತ್ತು ಉರಿಯೂತಕ್ಕೆ ತುತ್ತಾದಾಗ ಕಾಣಿಸಿಕೊಳ್ಳುತ್ತದೆ. ಆಗ ದೇಹ ಕಡಿಮೆ ಪ್ರಮಾಣದ ಈಸ್ಟ್ರೊಜೆನ್ ಅನ್ನು ಉತ್ಪಾದನೆ ಮಾಡುತ್ತದೆ.

ಮೂತ್ರ ವಿಸರ್ಜನೆ ಮಾಡುವಾಗ ನೋವಾಗುವಿಕೆ

ಮೂತ್ರ ವಿಸರ್ಜನೆ ಮಾಡುವಾಗ ನೋವಾಗುವಿಕೆ

ಮೂತ್ರ ವಿಸರ್ಜನೆ ಮಾಡುವಾಗ ನೋವಾಗುವಿಕೆ ಮೂತ್ರ ನಾಳದ ಸೋಂಕಿನ ಲಕ್ಷಣವಾಗಿರುತ್ತದೆ. ಇದು ಸಹ ಬ್ಯಾಕ್ಟೀರಿಯಲ್ ವ್ಯಜಿನೊಸಿಸ್ ಸಂಕೇತ. ಇದು ಯೋನಿಯ ಅನಾರೋಗ್ಯವನ್ನು ಸಾರಿ ಹೇಳುತ್ತದೆ.

 ಸ್ರವಿಸುವಿಕೆ ಹೆಚ್ಚು ಮತ್ತು ಬಣ್ಣ ಬದಲಾಗುವಿಕೆ

ಸ್ರವಿಸುವಿಕೆ ಹೆಚ್ಚು ಮತ್ತು ಬಣ್ಣ ಬದಲಾಗುವಿಕೆ

ಯೋನಿಯ ಸ್ರವಿಸುವಿಕೆ ಹೆಚ್ಚು ಮತ್ತು ಬಣ್ಣ ಬದಲಾಗುವಿಕೆ ಕಂಡು ಬಂದರೆ ಸಹ ಅದು ಅನಾರೋಗ್ಯಕಾರಿ ಯೋನಿಯ ಸಂಕೇತ. ಕೆಂಪು ಅಥವಾ ಕಂದು ಬಣ್ಣದ ಸ್ರವಿಸುವಿಕೆ ಜೊತೆಗೆ ದುರ್ಗಂಧ ಕಂಡು ಬಂದರೆ ತಪ್ಪದೆ ವೈದ್ಯರನ್ನು ಭೇಟೀ ಮಾಡಿ.

English summary

Signs Of Unhealthy Vagina That You Should Be Aware Of

A healthy vagina is known to produce a discharge, through which it takes off all the bacteria and dead cells along with it.This keeps the vagina infection-free and safe. Discharges are also known to lubricate the vagina and prevent dryness. But, an unhealthy vagina can affect the libido and fertility. Prolonged vaginal distress can lead to vaginal yeast infections such as genital and vulvovaginal candidiasis.
X
Desktop Bottom Promotion