ಕೆಲವು ಕಾಯಿಲೆಗಳ ಸೂಚನೆಗಳನ್ನು ರೋಗಿಯ ಮುಖದಲ್ಲಿಯೇ ಸ್ಪಷ್ಟವಾಗಿ ಕಾಣಬಹುದು!

By: Arshad
Subscribe to Boldsky

ನಮ್ಮ ದೇಹದಲ್ಲಿ ಯಾವುದೇ ತೊಂದರೆ ಎದುರಾದರೂ ಇದರ ಪರಿಣಾಮವನ್ನು ಇತರ ಅಂಗಗಳಿಗಿಂತಲೂ ಸ್ಪಷ್ಟವಾಗಿ ನಮ್ಮ ಮುಖ ಪ್ರಕಟಿಸುತ್ತದೆ. ನಾವು ನಮ್ಮ ಮುಖವನ್ನು ಆಗಾಗ ನೋಡಿಕೊಳ್ಳುತ್ತಾ ಇರುವುದರಿಂದ ಮುಖದಲ್ಲಿ ಕಂಡುಬರುವ ಸೂಚನೆಯನ್ನು ಥಟ್ಟನೇ ಗಮನಿಸಬಹುದು.

ಸಾಮಾನ್ಯವಾಗಿ ಊಟ ಸರಿಯಾಗಿಲ್ಲದಿದ್ದರೆ, ಅಲರ್ಜಿ ಅಥವಾ ಅನುವಂಶೀಯ ಗುಣಗಳ ಪ್ರಭಾವ ಮುಖದ ಮೇಲೆ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತದೆ. ಒಂದು ವೇಳೆ ಹಿಂದಿನ ದಿನಗಳಲ್ಲಿ ಈ ಸೂಚನೆಗಳು ಕಾಣಿಸಿಕೊಳ್ಳದೇ ಇದ್ದರೆ ಈ ಸೂಚನೆಗಳು ಮುಂದೆಂದಾದರೂ ಕಾಣಬಹುದು, ಹಾಗೂ ಇವುಗಳ ಬಗ್ಗೆ ಗಮನಿಸುತ್ತಾ ಇರಬೇಕು.

ವಾಸ್ತವದಲ್ಲಿ ಈ ಸೂಚನೆಗಳು ಆರೋಗ್ಯದಲ್ಲಿ ಆಗಿರುವ ಏರುಪೇರನ್ನು ತೋರ್ಪಡಿಸುತ್ತವೆ. ಆದ್ದರಿಂದ ಈ ಸೂಚನೆಗಳ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗಿರುತ್ತದೆ. ಇಂದಿನ ಲೇಖನದಲ್ಲಿ ಈ ಬಗ್ಗೆ ಕೆಲವಾರು ಅಮೂಲ್ಯ ಮಾಹಿತಿಗಳನ್ನು ನೀಡಲಾಗಿದ್ದು ನಿಮ್ಮ ಆರೋಗ್ಯದ ಬಗ್ಗೆ ನಿಮ್ಮ ಮುಖ ಏನು ಹೇಳುತ್ತಿದೆ ಎಂಬುದನ್ನು ನೋಡೋಣ...

ಕಣ್ಣುರೆಪ್ಪೆಗಳ ಮೇಲೆ ಹಳದಿ ಚುಕ್ಕೆಗಳು

ಕಣ್ಣುರೆಪ್ಪೆಗಳ ಮೇಲೆ ಹಳದಿ ಚುಕ್ಕೆಗಳು

ಈ ಚುಕ್ಕೆಗಳು ಕೊಲೆಸ್ಟ್ರಾಲ್ ತುಂಬಿದ ಕೀವುಗುಳ್ಳೆಗಳಾಗಿದ್ದು ಇವುಗಳನ್ನು xanthelasmata ಎಂದು ಕರೆಯುತ್ತಾರೆ. ಇವು ಹೃದಯದ ತೊಂದರೆಯ ಸಾಧ್ಯತೆಯನ್ನು ಸ್ಪಷ್ಟವಾಗಿ ಸೂಚಿಸುತ್ತಿವೆ. ಯಾವುದೇ ವ್ಯಕ್ತಿಯ ರೆಪ್ಪೆಗಳಲ್ಲಿ ಈ ಚುಕ್ಕೆಗಳು 50% ಕ್ಕೂ ಹೆಚ್ಚಾಗಿದ್ದರೆ ಈ ವ್ಯಕ್ತಿಗೆ ಮುಂದಿನ ವರ್ಷಗಳಲ್ಲಿ ಹೃದಯಾಘಾತಕ್ಕೊಳಗಾಗುವ ಸಾಧ್ಯತೆ ಇತರರಿಗಿಂತಲೂ ಹೆಚ್ಚಿರುತ್ತದೆ.

ಮುಖದಲ್ಲಿ ಕಾಣುವ ಅಸಮಪಾರ್ಶ್ವತೆ

ಮುಖದಲ್ಲಿ ಕಾಣುವ ಅಸಮಪಾರ್ಶ್ವತೆ

ಇದು ಹೃದಯಾಘಾತದ ಪ್ರಥಮ ಸೂಚನೆಯಾಗಿರಬಹುದು. ಇದುವರೆಗೆ ನೀವು ನೋಡುತ್ತಾ ಬಂದಿರುವ ಮುಖ ಕೊಂಚ ಅಪರಿಚಿತವಾದಂತೆ ಅನ್ನಿಸುತ್ತದೆ. ಅಂದರೆ ಮುಖದ ಎಡಭಾಗ ಮತ್ತು ಬಲಭಾಗಕ್ಕೆ ಕೊಂಚ ವ್ಯತ್ಯಾಸವಿರುವುದನ್ನು ಗಮನಿಸಬಹುದು. ಅಲ್ಲದೇ ನಿಮಗೆ ಹಿಂದಿನಂತೆ ಪೂರ್ಣವಾಗಿ ನಗಲೂ ಸಾಧ್ಯವಾಗುವುದಿಲ್ಲ ಅಥವಾ ಮೊದಲಿನಷ್ಟು ಸ್ಪಷ್ಟವಾಗಿ ಮಾತುಗಳನ್ನು ಹೊರಡಿಸಲೂ ಸಾಧ್ಯವಾಗುವುದಿಲ್ಲ. ಈ ಸೂಚನೆ ಕಂಡ ತಕ್ಷಣ ವೈದ್ಯರ ನೆರವು ಪಡೆಯುವುದು ಅನಿವಾರ್ಯವಾಗಿದೆ.

ಒಣ, ಪರೆಯೇಳುವ ಚರ್ಮ ಅಥವಾ ತುಟಿಗಳು

ಒಣ, ಪರೆಯೇಳುವ ಚರ್ಮ ಅಥವಾ ತುಟಿಗಳು

ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ ಎಂಬುದನ್ನು ಈ ಸೂಚನೆ ಸೂಚಿಸುತ್ತದೆ. ಆದರೆ ಇದರೊಂದಿಗೆ ಇದು ಇನ್ನೊಂದು ಪ್ರಮುಖ ತೊಂದರೆಯನ್ನೂ ಪ್ರಕಟಿಸುತ್ತಿದ್ದಿರಬಹುದು. ಅದೆಂದರೆ ಬೆವರಿನ ಗ್ರಂಥಿಗಳು ಕ್ಷಮತೆ ಕಳೆದುಕೊಂಡಿರುವುದು, ಥೈರಾಯ್ಡ್ ಗ್ರಂಥಿಯ ಶಕ್ತಿ ಕುಂದಿರುವುದು ಅಥವಾ ಮಧುಮೇಹ ಆಗಮಿಸಿರುವ ಸೂಚನೆಗಳೂ ಆಗಿರಬಹುದು. ಈ ತೊಂದರೆಗಳ ಇರುವಿಕೆಯನ್ನು ಮುಖದ ಒಣಗುವಿಕೆಯಿಂದ ಗಮನಿಸಬಹುದಾಗಿದೆ.

ಚರ್ಮದ ಸಹಜವರ್ಣ ಬದಲಾಗುವುದು

ಚರ್ಮದ ಸಹಜವರ್ಣ ಬದಲಾಗುವುದು

ಚರ್ಮದ ಬಣ್ಣ ಪೇಲವವಾಗಲು ರಕ್ತಹೀನತೆ ಪ್ರಮುಖ ಕಾರಣವಾಗಿದೆ. ಒಂದು ವೇಳೆ ಈ ಪೇಲವತೆ ಹಳದಿ ಬಣ್ಣದ ರೂಪದಲ್ಲಿದ್ದರೆ ಇದು ಯಕೃತ್ ನ ಕಾಯಿಲೆಯನ್ನು ಸೂಚಿಸುತ್ತದೆ. ತುಟಿಗಳ ಬಣ್ಣ ಕೊಂಚ ನೀಲಿಯಾಗಿದ್ದರೆ ಅಥವಾ ಉಗುರುಗಳ ಬುಡದಲ್ಲಿಯೂ ನೀಲಿ ಬಣ್ಣ ಕಂಡುಬಂದರೆ ಇದು ಹೃದಯದ ಅಥವಾ ಶ್ವಾಸಕೋಶಗಳ ಕಾಯಿಲೆಯ ಸೂಚನೆಯಾಗಿದೆ.

ಗದ್ದ ಚೂಪಗಾಗುವುದು

ಗದ್ದ ಚೂಪಗಾಗುವುದು

ಒಂದು ವೇಳೆ ನಿಮಗೆ sleep apnoea ಅಥವಾ ನಿದ್ದೆಯಲ್ಲಿ ಉಸಿರಾಟ ತಡೆತಡೆದು ವೇಗವಾಗಿ ಆಗುತ್ತಿರುವ ತೊಂದರೆ ಇದ್ದರೆ ಗದ್ದ ಚೂಪಾಗುವ ಮೂಲಕ ಈ ತೊಂದರೆಯನ್ನು ಮುಖ ಪ್ರಕಟಿಸುತ್ತದೆ. ಈ ತೊಂದರೆ ಇದ್ದವರು ಸಾಮಾನ್ಯವಾಗಿ ದೊಡ್ಡದಾಗಿ ಗೊರಕೆ ಹೊಡೆಯುತ್ತಾರೆ ಹಾಗೂ ಬೆಳಿಗ್ಗೆದ್ದಾಗ ತಲೆ ಭಾರವಾದಮ್ತೆ ಹಾಗೂ ತಲೆನೋವು ಸಹಾ ಆವರಿಸುತ್ತದೆ. ತಕ್ಷಣವೇ ವೈದ್ಯರ ಸಲಹೆ ಪಡೆಯುವುದು ಅಗತ್ಯವಾಗಿದೆ.

ಮುಖದಲ್ಲಿ ಕೂದಲು ಕಾಣಿಸಿಕೊಳ್ಳುವುದು

ಮುಖದಲ್ಲಿ ಕೂದಲು ಕಾಣಿಸಿಕೊಳ್ಳುವುದು

ಈ ಸೂಚನೆ ಮಹಿಳೆಯರಿಗೆ ಸೀಮಿತವಾಗಿದೆ. ಮುಖದಲ್ಲಿ ಮೀಸೆ ಗಡ್ಡಗಳು ಕಾಣಿಸಿಕೊಂಡರೆ ಇದು ರಸದೂತದ ಅಸಮತೋಲನದ ಪ್ರಭಾವವಾಗಿದ್ದು ನಿಮ್ಮ ದೇಹದಲ್ಲಿ ಪುರುಷ ಹಾರ್ಮೋನುಗಳ ಪ್ರಮಾಣ ಹೆಚ್ಚಾಗಿರುವುದನ್ನು ಸೂಚಿಸುತ್ತದೆ.

ಚರ್ಮ ಕೆಂಪಗಾಗುವುದು ಅಥವಾ ಹೊಪ್ಪಳೆ ಕಾಣಿಸಿಕೊಳ್ಳುವುದು

ಚರ್ಮ ಕೆಂಪಗಾಗುವುದು ಅಥವಾ ಹೊಪ್ಪಳೆ ಕಾಣಿಸಿಕೊಳ್ಳುವುದು

ಒಂದು ವೇಳೆ ಜೀರ್ಣಕ್ರಿಯೆಯಲ್ಲಿ ಗಡಿಬಿಡಿಯಾದರೆ ಇದರ ಪರಿಣಾಮವನ್ನು ಮುಖದ ಚರ್ಮ ಸ್ಪಷ್ಟವಾಗಿ ಸೂಚಿಸುತ್ತದೆ. ಒಂದು ವೇಳೆ ಚರ್ಮದಲ್ಲಿ ಕೆಂಪು ದದ್ದುಗಳೆದ್ದು ತುರಿಕೆ ಮೂಡಿಸಿದ್ದರೆ ಇದು ಗೋಧಿಯಲ್ಲಿರುವ ಗ್ಲುಟೆನ್ ಅನ್ನು ವಿರೋಧಿಸುವ coeliac disease ಎಂಬ ಅನುವಂಶೀಯ ಕಾಯಿಲೆ ಇರುವ ಬಗ್ಗೆ ಸೂಚಿಸುತ್ತದೆ. ಒಂದು ವೇಳೆ ಮುಖದ ಕೆನ್ನೆಯ ಮೂಳೆಯ ಭಾಗದಲ್ಲಿ ಅಥವಾ ಮೂಗಿನ ಮೇಲ್ಭಾಗದ ನಟ್ಟನಡುವೆ ಚಿಟ್ಟೆಯಾಕಾರದ ಹೊಪ್ಪಳೆ ಎದ್ದಿದ್ದರೆ ಇದು lupus ಎಂಬ ಉರಿಯೂತದ ಪರಿಣಾಮವಾಗಿ ಎದುರಾಗುವ ಸಂಧಿವಾತದ ಸೂಚನೆಯಾಗಿದೆ.

ಕಣ್ಣುಗಳ ಕೆಳಭಾಗದಲ್ಲಿ ಚೀಲ ಉಂಟಾಗಿರುವುದು

ಕಣ್ಣುಗಳ ಕೆಳಭಾಗದಲ್ಲಿ ಚೀಲ ಉಂಟಾಗಿರುವುದು

ಒಂದು ವೇಳೆ ಕಣ್ಣುಗಳ ಕೆಳಭಾಗದಲ್ಲಿ ಕಪ್ಪು ವರ್ತುಲಗಳು ಕಂಡುಬಂದಿದ್ದು ಇಲ್ಲಿ ಒಳಗಿನಿಂದ ನೀರು ತುಂಬಿಕೊಂಡು ಚೀಲದಂತಾಗಿದ್ದರೆ ಇದಕ್ಕೆ ಥೈರಾಯ್ಡ್ ಗ್ರಂಥಿಯ ಕ್ಷಮತೆ ಕುಂದಿರುವುದು, ಕಣ್ಣೀರಿನ ಗ್ರಂಥಿಗಳು ಒಣಗಿರುವುದು ಅಥವಾ ಮೂತ್ರಕೋಶದಲ್ಲಿ ಉರಿಯೂತವುಂಟಾಗಿರುವುದನ್ನು ಸೂಚಿಸುತ್ತವೆ.

English summary

Signs Of Diseases That Are Shown On A Person's Face

These symptoms could actually be indicative of a particular health problem. Hence, it is important that you pay attention to these symptoms. In this article, we have listed some of the signs of diseases on face that you need to know about. Read further to know what your face says about your health.
Story first published: Sunday, September 10, 2017, 7:03 [IST]
Subscribe Newsletter