ಬಾಳೆ ಹಣ್ಣು ಆರೋಗ್ಯಕ್ಕೆ ಒಳ್ಳೆಯದೇ, ಆದರೆ ಖಾಲಿ ಹೊಟ್ಟೆಗೆ ತಿನ್ನಬೇಡಿ!

By: Divya
Subscribe to Boldsky

ಬಾಳೆಯ ಹಣ್ಣು ಬಡವರ ಹಣ್ಣು ಎಂದೇ ಪ್ರಸಿದ್ಧ. ಹಾಗಂತ ಎಲ್ಲವನ್ನೂ ಕೊಡುವ ದೇವರಿಗೆ ಹಣ್ಣು-ಕಾಯಿ ಮಾಡಿಸುವಾಗಲೂ ಸಲೀಸಾಗಿ ಕೈಗೆಟಕುವುದೂ ಇದೇ ಎನ್ನಿ! ಇದರಲ್ಲಿ ನೂರಾರು ಪ್ರಭೇದಗಳಿದ್ದು, ಇತರ ಯಾವುದೇ ಹಣ್ಣುಗಳಲ್ಲಿ ಇಷ್ಟು ಪ್ರಭೇದಗಳಿಲ್ಲ. ಬೆರಳುದ್ದದ ಪುಟ್ಟ ಬಾಳೆಯಿಂದ ಆರಂಭಿಸಿ, ಮಾರುದ್ದದ ಚುಕ್ಕಿ ಬಾಳೆಯ ವರೆಗೂ ಇದರ ವೈವಿಧ್ಯ ವೈಶಾಲ್ಯ. ಬೆರಳಿನಷ್ಟೆ ದಪ್ಪದ್ದಿದೆ, ಮುಷ್ಟಿಗೆ ಎಟುಕದಷ್ಟು ತೋರದ್ದಿದೆ.

ಎಲ್ಲಾ ಕಾಲದಲ್ಲೂ ಜನ ಸಾಮಾನ್ಯರ ಕೈಗೆಟಕುವ ದರದಲ್ಲಿ ಸಿಗುವ ಹಣ್ಣು ಬಾಳೆ ಹಣ್ಣು. ತಿನ್ನಲು ಸುಲಭ ಹಾಗೂ ವೇಗವಾಗಿ ಜೀರ್ಣವಾಗುವ ಈ ಹಣ್ಣು ಮಲಬದ್ಧತೆ, ಖಿನ್ನತೆ, ಎದೆಯುರಿಯನ್ನು ಕಡಿಮೆ ಮಾಡುತ್ತದೆ. ಕಬ್ಬಿಣಾಂಶ ಹೆಚ್ಚಿರುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ದೇಹವನ್ನು ಸಮತೋಲನದಲ್ಲಿರುವಂತೆ ಮಾಡಿ, ರಕ್ತದೊತ್ತಡ ಮತ್ತು ಆಯಾಸವನ್ನು ನಿಯಂತ್ರಿಸುವ ಶಕ್ತಿ ಈ ಹಣ್ಣಿನಲ್ಲಿದೆ.

ಸರ್ವ ರೋಗಕ್ಕೂ ದಿವ್ಯೌಷಧ ಕೆಂಪು ಬಾಳೆಹಣ್ಣು

ಪೊಟ್ಯಾಶಿಯಮ್, ಫೈಬರ್ ಮತ್ತು ಮೆಗ್ನೇಶಿಯಂ ಅಧಿಕ ಪ್ರಮಾಣದಲ್ಲಿ ಹೊಂದಿದೆ. ಹೀಗಿದ್ದರೂ ಈ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕಾ ಅಥವಾ ಊಟದ ನಂತರ ತಿನ್ನಬೇಕಾ? ಎನ್ನುವ ವಿಚಾರದಲ್ಲಿ ಇನ್ನೂ ಗೊಂದಲಗಳಿವೆ. ಆಯುರ್ವೇದದಲ್ಲಿ ಒಂದು ಬಗೆಯ ಮಾಹಿತಿ ಇದ್ದರೆ, ಇಂಗ್ಲಿಷ್ ಔಷಧ ಪದ್ಧತಿಯೇ ಬೇರೆಯ ವಿಚಾರವನ್ನು ಹೇಳುತ್ತದೆ. ಈ ವಿಷಯದ ಬಗ್ಗೆ ಇನ್ನಷ್ಟು ಮಾಹಿತಿ ಬೇಕಾದರೆ ಮುಂದೆ ಓದಿ.....

ತಜ್ಞರ ಪ್ರಕಾರ

ತಜ್ಞರ ಪ್ರಕಾರ

ಯುಕೆಯ ಮೈಕ್ರೋಬಯೋಟೆಕ್ ನ್ಯೂಟ್ರಿಶಿಸ್ಟ್ ಡಾ. ಶಿಲ್ಪಾ ಅರೋರಾ ಅವರು ಹೇಳುವ ಪ್ರಕಾರ ಬಾಳೆ ಹಣ್ಣು ಪೊಟ್ಯಾಸಿಯಮ್, ಫೈಬರ್ ಮತ್ತು ಮೆಗ್ನೀಸಿಯಮ್‍ಗಳನ್ನು ಅಧಿಕವಾಗಿ ಒಳಗೊಂಡಿದೆ. ಹಾಗಾಗಿ ಇದು ಹಸಿವಿನ ನೋವನ್ನು ಕಡಿಮೆ ಮಾಡುತ್ತದೆ. ಪ್ರತಿನಿತ್ಯ ಒಂದು ಬಾಳೆ ಹಣ್ಣನ್ನು ತಿನ್ನಬೇಕು. ಇದು ದೇಹಕ್ಕೆ ಬೇಕಾದ ಶೇ. 25ರಷ್ಟು ಸಕ್ಕರೆಯನ್ನು ಒದಗಿಸುತ್ತದೆ. ದಿನದ ಚಟುವಟಿಕೆಗೆ ಶಕ್ತಿಯನ್ನು ಒದಗಿಸುತ್ತದೆ. ಇದು ವಿಟಮಿನ್ ಬಿ6 ಮತ್ತು ವಿಟಮಿನ್ ಬಿಯನ್ನು ಒಳಗೊಂಡಿದೆ.

ಕೆಲವು ಮೂಲಗಳು ಹೇಳುವಂತೆ

ಕೆಲವು ಮೂಲಗಳು ಹೇಳುವಂತೆ

ಬಾಳೆಹಣ್ಣು ನಿದ್ರಾ ಹೀನತೆ, ಕರುಳಿನ ಸಮಸ್ಯೆಯನ್ನು ಹುಟ್ಟಿಸುತ್ತದೆ. ಆರೋಗ್ಯ ತಜ್ಞರ ಪ್ರಕಾರ "ಬಾಳೆ ಹಣ್ಣಿನಲ್ಲಿ ಆಮ್ಲೀಯ ಗುಣ ಹೆಚ್ಚಾಗಿದೆ. ಇದರಲ್ಲಿರುವ ಹೆಚ್ಚಿನ ಮೆಗ್ನೀಸಿಯಮ್ ಅಂಶ ರಕ್ತದಲ್ಲಿನ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್‍ಗಳ ನಡುವಿನ ಅಸಮತೋಲನವನ್ನು ಹೆಚ್ಚಿಸುವುದು. ಅಲ್ಲದೆ ಹೃದಯದ ರಕ್ತನಾಳ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವುದು. ಬಾಳೆ ಹಣ್ಣನ್ನು ತಿನ್ನಬಹುದು ಆದರೆ ಖಾಲಿ ಹೊಟ್ಟೆಯಲ್ಲಿ ತಿನ್ನಬಾರದು ಎಂದಿದ್ದಾರೆ'.

ಆಯುರ್ವೇದದ ಪ್ರಕಾರ

ಆಯುರ್ವೇದದ ಪ್ರಕಾರ

ಆಯುರ್ವೇದ ತಜ್ಞರ ಪ್ರಕಾರ ಖಾಲಿ ಹೊಟ್ಟೆಯಲ್ಲಿ ಬಾಳೆ ಹಣ್ಣನ್ನು ತಿನ್ನಬಾರದು. ಇತ್ತೀಚಿನ ದಿನದಲ್ಲಿ ಹಣ್ಣುಗಳನ್ನು ರಾಸಾಯನಿಕ ಬಳಕೆಯಿಂದ ಕೃತಕ ಹಣ್ಣುಗಳನ್ನಾಗಿ ಪರಿವರ್ತಿಸುತ್ತಾರೆ. ಹಾಗಾಗಿ ಯಾವ ಹಣ್ಣಾದರೂ ಹಸಿದ ಹೊಟ್ಟೆಯಲ್ಲಿ ತಿಂದರೆ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇತರ ಆಹಾರದ ಜೊತೆಗೆ ಹಣ್ಣನ್ನು ಸೇರಿಸಿ ಸೇವಿಸಿದರೆ ಉತ್ತಮ ಎಂದು ಅಭಿಪ್ರಾಯಿಸಿದ್ದಾರೆ.

ದಿನಕ್ಕೆರಡು ಬಾಳೆಹಣ್ಣು ಸೇವಿಸಿ, ವೈದ್ಯರಿಂದ ದೂರವಿರಿ!

ಯಾವಾಗ ತಿನ್ನಬೇಕು?

ಯಾವಾಗ ತಿನ್ನಬೇಕು?

ಅಧಿಕ ಪೋಷಕಾಂಶವನ್ನು ಬಾಳೆ ಹಣ್ಣು ಹೊಂದಿರುವುದರಿಂದ ಇದನ್ನು ಬೆಳಗ್ಗೆ ತಿನ್ನಬಹುದು. ಆದರೆ ಬೇರೆ ಆಹಾರ ಪದಾರ್ಥಗಳೊಂದಿಗೆ ಸೇರಿಸಿ ಸವಿಯಬೇಕು. ಆಗ ಆರೋಗ್ಯ ಹೆಚ್ಚುವುದು. ಹೆಚ್ಚು ಶಕ್ತಿಯು ದೊರೆಯುವುದು.

ಬೆಳಗ್ಗೆ ತಿಂಡಿಯೊಂದಿಗೆ ಬಾಳೆ ಹಣ್ಣು

ಬೆಳಗ್ಗೆ ತಿಂಡಿಯೊಂದಿಗೆ ಬಾಳೆ ಹಣ್ಣು

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆ ಹಣ್ಣನ್ನು ತಿನ್ನುವ ಬದಲು ಬಾಳೆ ಹಣ್ಣಿನ ರೊಟ್ಟಿ, ದೋಸೆಗೆ ಬಾಳೆ ಹಣ್ಣಿನ ರಸಾಯನ ಸೇರಿದಂತೆ ವಿವಿಧ ಬಗೆಯಲ್ಲಿ ಸೇವಿಸಬಹುದು.

ಸೇಬು ಬಾಳೆಹಣ್ಣಿನ ಮಿಲ್ಕ್ ಶೇಕ್

ಸೇಬು ಬಾಳೆಹಣ್ಣಿನ ಮಿಲ್ಕ್ ಶೇಕ್

ಸೇಬು ಮತ್ತು ಬಾಳೆಹಣ್ಣನ್ನು ಹಾಲಿನೊಂದಿಗೆ ಸೇರಿಸಿ ಸಕ್ಕರೆಯನ್ನು ಬೆರೆಸಿ ಮಿಕ್ಸಿ ಜಾರ್‌ನಲ್ಲಿ ಮೆತ್ತಗೆ ಮತ್ತು ಕ್ರೀಂನಂತೆ ಆಗುವವರೆಗೂ ರುಬ್ಬಬೇಕು.

* ತಣ್ಣಗಿರುವ ಮಿಲ್ಕ್ ಶೇಕನ್ನು ನೀವು ಬಯಸುವುದಾದರೆ ಐಸ್ ಕ್ಯೂಬ್ ಗಳನ್ನು ಸೇರಿಸಿ ರುಬ್ಬಬಹುದು.

* ಈ ಮಿಶ್ರಣವನ್ನು ಲೋಟಕ್ಕೆ ಬಗ್ಗಿಸಿ ಅದರ ಮೇಲೆ ಕತ್ತರಿಸಿದ ಸ್ಟ್ರಾಬೆರಿ ಅಥವಾ ಬಾಳೆಹಣ್ಣನ್ನು ಹಾಕಿದರೆ ಸೇಬು ಮತ್ತು ಬಾಳೆಹಣ್ಣಿನ ಮಿಲ್ಕ್ ಶೇಕ್ ಕುಡಿಯಲು ಸಿದ್ಧವಾಗಿರುತ್ತೆ.

ಚಾಕೊಲೇಟ್ ಬನಾನಾ ಸ್ಮೂಥಿ

ಚಾಕೊಲೇಟ್ ಬನಾನಾ ಸ್ಮೂಥಿ

ಸ್ವಲ್ಪ ಬಾಳೆ ಹಣ್ಣು, ಕೋಕೋ ಪೌಡರ್ ಸೇರಿಸಿ ಒಂದು ಸ್ಮೂಥಿಯನ್ನು ತಯಾರಿಸಬೇಕು. ಇದನ್ನು ಬೆಳಗ್ಗೆಯ ಉಪಹಾರಕ್ಕೆ ಸವಿದರೆ ಉತ್ತಮ ಪರಿಣಾಮ ಪಡೆಯಬಹುದು.

ದಣಿವು ನಿವಾರಿಸುವ ಬಾಳೆಹಣ್ಣಿನ ಸ್ಮೂತಿ ರೆಸಿಪಿ

English summary

Should We or Shouldn't We Eat Bananas on an Empty Stomach?

"Bananas are acidic in nature and have high amounts of potassium. They are good to start off with in the morning but not on an empty stomach. You should team it with soaked dry fruits, apples and other fruits to minimalise the acidic content in the body." The high magnesium content can cause imbalance between calcium and magnesium in the blood, which may further have an adverse effect on the cardiovascular system.
Subscribe Newsletter