For Quick Alerts
ALLOW NOTIFICATIONS  
For Daily Alerts

ನಿತ್ಯ ನಾಲ್ಕು ಬಾದಾಮಿ ಸೇವಿಸಿದರೆ ಸಾಕು, ಯಾವ ಕಾಯಿಲೆಯೂ ಬರುವುದಿಲ್ಲ!

By Manu
|

ಒಣಫಲಗಳನ್ನು ಊಟದ ಬಳಿಕ ಕೆಲವನ್ನಾದರೂ ತಿನ್ನುವುದು ಉತ್ತಮ ಎಂದು ಹಿರಿಯರು ಹೇಳಿರುವುದನ್ನು ನೀವು ಕೇಳಿಯೇ ಇರುತ್ತೀರಿ. ಒಣಫಲಗಳ ಪೋಷಕಾಂಶಗಳು ಅವು ಹಸಿಯಾಗಿದ್ದಾಗ ಗರಿಷ್ಠವಾಗಿದ್ದರೂ ಇವು ಎಲ್ಲೆಡೆ ಸುಲಭವಾಗಿ ಸಿಗದ ಕಾರಣ ಒಣಗಿಸಿ ಕೆಡದಂತೆ ಸಂರಕ್ಷಿಸಿಡಬಹುದಾದುದರಿಂದ ಒಣರೂಪದಲ್ಲಿಯೇ ಹೆಚ್ಚು ಜನಪ್ರಿಯವಾಗಿವೆ.

ಪ್ರಸ್ತುತ ಲಭ್ಯವಿರುವ ಒಣಫಲಗಳಲ್ಲಿಯೇ ಅತ್ಯಂತ ಆರೋಗ್ಯಕರ ಮತ್ತು ಅತಿ ಹೆಚ್ಚಿನ ಪೌಷ್ಟಿಕಾಂಶವುಳ್ಳ ಹಾಗೂ ಹಲವಾರು ರೀತಿಯಲ್ಲಿ ಆರೋಗ್ಯಕ್ಕೆ ಉತ್ತಮವಾದ ಒಣಫಲವೆಂದರೆ ಬಾದಾಮಿ. ಈ ಫಲವನ್ನೂ ನೆನೆಸಿಟ್ಟು ಮೆದುವಾದ ಬಳಿಕ ಸೇವಿಸಿದರೆ ಇದರ ಗುಣಗಳು ಇನ್ನಷ್ಟು ಹೆಚ್ಚುತ್ತವೆ.

ನೆನೆಸಿಟ್ಟ ಬಾದಾಮಿ ಬೀಜದ ಚಮತ್ಕಾರಕ್ಕೆ ಬೆರಗಾಗಲೇಬೇಕು!

ಅಲ್ಲದೆ ಸಾಕಷ್ಟು ಆರೋಗ್ಯಕರ ವಿಟಮಿನ್‌ಗಳನ್ನು ಒಳಗೊಂಡಿರುವ ಬಾದಾಮಿಯಲ್ಲಿ ವಿಟಮಿನ್ ಇ, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಂ ಸಮೃದ್ಧವಾಗಿದೆ. ಸಮೃದ್ಧವಾದ ನಾರಿನಂಶವನ್ನು ಒಳಗೊಂಡಿರುವ ಇದರಲ್ಲಿ ನೈಸರ್ಗಿಕವಾಗಿ ಸಕ್ಕರೆ ಅಂಶವು ಕಡಿಮೆ ಪ್ರಮಾಣದಲ್ಲಿದೆ. ಇದು ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಿಸದೆ ದೇಹದ ಆರೋಗ್ಯವನ್ನು ರಕ್ಷಿಸುತ್ತದೆ. ಬನ್ನಿ ನಿತ್ಯವು ಇದರ ಸೇವನೆ ಮಾಡಿದರೆ ಯಾವೆಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ...

ಹೃದಯಗಳ ರೋಗಗಳ ನಿಯಂತ್ರಣ

ಹೃದಯಗಳ ರೋಗಗಳ ನಿಯಂತ್ರಣ

ಬಾದಾಮಿಯಲ್ಲಿ ಉತ್ತಮ ಪ್ರಮಾಣದ ಅಸಂತುಲಿತ ಕೊಬ್ಬು, ಪ್ರೋಟೀನು ಮತ್ತು ಪೊಟ್ಯಾಶಿಯಂ ಇದ್ದು ಇವು ಹೃದಯಕ್ಕೆ ಉತ್ತಮವಾಗಿವೆ. ಅಲ್ಲದೇ ಇದರಲ್ಲಿರುವ ವಿಟಮಿನ್ ಇ ಹೃದಯದ ಕಾಯಿಲೆಗಳನ್ನು ದೂರವಿರಿಸುತ್ತದೆ ಹಾಗೂ ಮೆಗ್ನೀಶಿಯಂ ಹೃದಯಸ್ತಂಭನದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.

ಕೇಶಗಳ ಆರೈಕೆ

ಕೇಶಗಳ ಆರೈಕೆ

ಕೂದಲ ಬೆಳವಣಿಗೆಗೆ ಸಹಾಯವಾಗುವ ವಿಟಮಿನ್ ಹಾಗೂ ಖನಿಜವನ್ನು ಬಾದಾಮಿ ಒಳಗೊಂಡಿದೆ. ಇದರಲ್ಲಿರುವ ಮೆಗ್ನೀಸಿಯಮ್ ಮತ್ತು ಸತುವು ಕೂದಲ ಬೆಳವಣಿಗೆಗೆ ಸಹಾಯ ಮಾಡಿದರೆ, ವಿಟಮಿನ್ ಬಿ ಕೂದಲ ಹೊಳಪು ಹಾಗೂ ಆವಿಷ್ಯವನ್ನು ಹೆಚ್ಚಿಸುತ್ತದೆ.

ಬಾದಾಮಿ ಎಣ್ಣೆ: ಸ್ವಲ್ಪ ದುಬಾರಿ, ಆದರೆ ಕೂದಲಿಗೆ ಒಳ್ಳೆಯದು...

ಸುಕ್ಕುಗಳ ನಿವಾರಣೆ

ಸುಕ್ಕುಗಳ ನಿವಾರಣೆ

ಬಾದಾಮಿ ಉತ್ತಮ ಪ್ರಮಾಣದ ಮ್ಯಾಂಗ್ನೀಸ್‍ಅನ್ನು ಒಳಗೊಂಡಿದೆ. ಇದರಲ್ಲಿ ಉತ್ತಮ ರೀತಿಯಲ್ಲಿ ವಿಟಮಿನ್ ಇ ಇರುವುದರಿಂದ ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ. ಜೊತೆಗೆ ತ್ವಚೆಯ ಮೇಲಿರುವ ಸುಕ್ಕನ್ನು ನಿವಾರಿಸುತ್ತದೆ.

ಆರೋಗ್ಯಕರ ಬ್ಯಾಕ್ಟೀರಿಯಗಳ ಉತ್ಪಾದನೆ

ಆರೋಗ್ಯಕರ ಬ್ಯಾಕ್ಟೀರಿಯಗಳ ಉತ್ಪಾದನೆ

ಕರುಳಿನ ಆರೋಗ್ಯಕ್ಕೆ ಪೂರಕವಾಗುವ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯಲ್ಲಿ ಉಂಟಾಗುವ ಚಿಕ್ಕ ಅಸಮತೋಲನವು ಹೊಟ್ಟೆ ನೋವು, ಕೆಟ್ಟ ಉಸಿರಾಟ ಮತ್ತು ಅಜೀರ್ಣವನ್ನು ಉಂಟುಮಾಡುತ್ತದೆ. ನಿತ್ಯ ಬಾದಾಮಿ ಸೇವನೆಯಿಂದ ಈ ಬಗೆಯ ತೊಂದರೆಗಳಿಂದ ಪಾರಾಗಬಹುದು.

ತೂಕದಲ್ಲಿ ಇಳಿಕೆ

ತೂಕದಲ್ಲಿ ಇಳಿಕೆ

ಬಾದಾಮಿ ದೇಹದಲ್ಲಿರುವ ಕಾರ್ಬೋಹೈಡ್ರೇಟ್ ಪ್ರಮಾಣವನ್ನು ಕಡಿಮೆಮಾಡುತ್ತದೆ. ಚಯಾಪಚಯ ಕ್ರಿಯೆಯನ್ನು ಸಾಮಾನ್ಯಗೊಳಿಸಿ ತೂಕ ಇಳಿಕೆಗೆ ಸಹಾಯ ಮಾಡುವುದು.

ಮಿದುಳಿನ ಆರೋಗ್ಯ ಕಾಪಾಡುವುದು

ಮಿದುಳಿನ ಆರೋಗ್ಯ ಕಾಪಾಡುವುದು

ಬಾದಾಮಿಯಲ್ಲಿರುವ ವಿಟಮಿನ್ ಇ ನೆನೆಪಿನ ಶಕ್ತಿಯನ್ನು ಹೆಚ್ಚಿಸಿ, ಮೆದುಳಿನ ಆರೋಗ್ಯವನ್ನು ಕಾಪಾಡುತ್ತದೆ. ಮಿದುಳು ಸಂಬಂಧಿ ಕಾಯಿಲೆಯನ್ನು ನಿವಾರಿಸುವುದು. ಮಿದುಳಿನ ಆಯಷ್ಯವನ್ನು ದೀರ್ಘಕಾಲದವರೆಗೆ ತಡೆಯುತ್ತದೆ.

ಕ್ಯಾನ್ಸರ್ ವಿರುದ್ಧ ರಕ್ಷಣೆ

ಕ್ಯಾನ್ಸರ್ ವಿರುದ್ಧ ರಕ್ಷಣೆ

ಬಾದಾಮಿ ಕಾಳುಗಳಲ್ಲಿರುವ ಫ್ಲೊವೊನಾಯ್ಡ್‌ಗಳು ಹಾಗೂ ವಿಟಮಿನ್ E ಯು ಇ೦ತಹ ಕ್ಯಾನ್ಸರ್ ರೋಗಗಳು ತಲೆ ಎತ್ತದ೦ತೆ ನೋಡಿಕೊಳ್ಳುತ್ತವೆ. ಕ್ಯಾನ್ಸರ್‌ನ ಸ೦ಭವನೀಯತೆಯನ್ನು ಕಡಿಮೆ ಮಾಡುವುದರ ಮೂಲಕ ಬಾದಾಮಿ ಬೀಜಗಳು ವ್ಯಕ್ತಿಯೋರ್ವನ ಆಯುರ್ಮಾನವನ್ನು ಹೆಚ್ಚಿಸಬಲ್ಲವು.

ಪಿತ್ತಗಳ ನಿವಾರಣೆ

ಪಿತ್ತಗಳ ನಿವಾರಣೆ

ಬಾದಾಮಿಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುವುದಲ್ಲದೆ, ಉತ್ತಮ ನಾರಿನಂಶವನ್ನು ಒಳಗೊಂಡಿದೆ. ಇದನ್ನು ನಿತ್ಯವೂ ಸೇವಿಸುವುದರಿಂದ ಪಿತ್ತಗಳ ನಿವಾರಣೆಯಾಗುವುದು. ಬೇಡದ ಕೊಬ್ಬಿನಂಶವನ್ನು ಕಡಿಮೆ ಮಾಡುವುದು.

ಮೆದುಳಿಗೂ ಉತ್ತಮವಾಗಿದೆ

ಮೆದುಳಿಗೂ ಉತ್ತಮವಾಗಿದೆ

ಬಾದಾಮಿಗಳಲ್ಲಿ ಪೋಷಕಾಂಶಗಳ ಭಂಡಾರವೇ ಇರುವ ಕಾರಣ ಇದು ಮೆದುಳಿನ ಕ್ಷಮತೆ ಹೆಚ್ಚಿಸಲು ನೆರವಾಗುತ್ತವೆ. ಇದರಲ್ಲಿರುವ ರೈಬೋಫ್ಲೇವಿನ್ ಮತ್ತು ಎಲ್-ಕಾರ್ನೈಟ್ ಎಂಬ ಪೋಷಕಾಂಶಗಳು ಮೆದುಳಿನ ಕ್ಷಮತೆ ಹೆಚ್ಚಿಸಲು ನೆರವಾಗುತ್ತವೆ.

English summary

See What Happens To Your Body If You Eat Four Almonds Every day

If it's healthy, then it isn't tasty. This is a common belief that most of us have. Well, there are almonds to prove us wrong. These are loaded with vitamins and other elements that give our body the required amount of nutrients and make us healthy. Natural, unsalted almonds are a tasty and nutritious snack that are chocked with health benefits.
Story first published: Tuesday, August 1, 2017, 19:57 [IST]
X
Desktop Bottom Promotion