For Quick Alerts
ALLOW NOTIFICATIONS  
For Daily Alerts

ಮೊಣಗಂಟಿನ ನೋವನ್ನು ಒಂದೇ ವಾರದಲ್ಲಿ ಕಡಿಮೆಗೊಳಿಸುವ ಮನೆಮದ್ದುಗಳು

By Arshad
|

ನಮ್ಮ ದೇಹದ ತೂಕ ಹೆಚ್ಚಾಗಿ ಕಾಲುಗಳ ಎರಡು ಗಂಟುಗಳ ಮೇಲೆ ಬೀಳುತ್ತದೆ. ಪಾದ ಹಾಗೂ ಮೊಣಗಂಟು. ಆದರೆ ಮೊಣಗಂಟಿನ ಮೇಲೆ ಬಗ್ಗುವಾಗ ಹಾಗೂ ಏಳುವಾಗ ಹೆಚ್ಚೇ ಒತ್ತಡ ಬೀಳುವ ಕಾರಣ ಈ ಭಾಗ ಸದಾ ಅಪಾಯಕ್ಕೆದುರಾಗಿಯೇ ಇರುತ್ತದೆ. ಎಲ್ಲಿಯವರೆಗೆ ನಿಮಗೆ ಯಾರದೇ ಸಹಾಯವಿಲ್ಲದೇ ಏಳಲು ಸಾಧ್ಯವೋ ಅಲ್ಲಿಯವರೆಗೆ ಈ ಗಂಟುಗಳು ಆರೋಗ್ಯಕರವಾಗಿ ಎಂದು ತಿಳಿದುಕೊಳ್ಳಬಹುದು. ಯಾವಾಗ ಈ ಗಂಟಿನಲ್ಲಿ ಕೊಂಚವಾದರೂ ನೋವು ಎದುರಾಯಿತೋ, ಆಗ ಈ ಭಾಗದಲ್ಲಿ ಸವೆತ ಶುರುವಾಗಿದೆ ಹಾಗೂ ಮುಂದಿನ ದಿನಗಳಲ್ಲಿ ನಿತ್ಯದ ಚಟುವಟಿಕೆಗಳು ಕಷ್ಟಕರವಾಗಲಿವೆ ಎಂದು ತಿಳಿದುಕೊಳ್ಳಬೇಕು.

ಆದ್ದರಿಂದ ಈ ಬಗ್ಗೆ ಸದಾ ಎಚ್ಚರಿಕೆ ವಹಿಸಿ ಗಂಟುಗಳು ಆರೋಗ್ಯಕರವಾಗಿರುವಂತೆ ಹಾಗೂ ನೋವಿಲ್ಲದಂತೆ ನೋಡಿಕೊಳ್ಳುವುದು ತುಂಬಾ ಅಗತ್ಯ. ಅಮೇರಿಕಾದ ಶಿಕಾಗೋ ನಗರದಲ್ಲಿ ನಡೆದ 103ನೇ Scientific Assembly and Annual Meeting of Radiological Society of North America ಎಂಬ ಹೆಸರಿನ ಅಧಿವೇಶನದಲ್ಲಿ ಮೊಣಗಂಟಿನ ಭಾಗಗಳನ್ನು ಆರೋಗ್ಯಕರವಾಗಿ ಉಳಿಸಿಕೊಳ್ಳಲು ಹಾಗೂ ಸವೆತವನ್ನು ನಿಧಾನಗೊಳಿಸಲು ಉತ್ತಮ ಆಹಾರಕ್ರಮ, ಕಡಿಮೆ ತೂಕ ಹಾಗೂ ನಿಯಮಿತ ವ್ಯಾಯಾಮಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕೆಂದು ವಿಜ್ಞಾನಿಗಳು ಕರೆನೀಡಿದರು.

ನೋವಿಲ್ಲದಂತಿರಲು ಕೇವಲ ವ್ಯಾಯಾಮ ಮಾತ್ರ ಸಾಲದು ಎಂದು ಒಂದು ಸಂಶೋಧನೆ ತಿಳಿಸುತ್ತದೆ. ನಮ್ಮ ಮೊಣಗಂಟಿನಲ್ಲಿರುವ ಮೂಳೆಗಳ ಭಾಗ ಹಾಗೂ ಇವುಗಳನ್ನು ಚಲಿಸಲು ನೆರವಾಗುವ ಮೃದುವಾಗ ಭಾಗಗಳು ಸತತ ಚಲನೆಯಿಂದ ಸವೆಯುತ್ತವೆ. ಇದಕ್ಕೆ osteoarthritis ಎಂದು ಕರೆಯುತ್ತಾರೆ. ಅರವತ್ತು ವರ್ಷ ದಾಟಿದ ವ್ಯಕ್ತಿಗಳಲ್ಲಿ ಮೂರರಲ್ಲಿ ಒಂದು ಭಾಗದಷ್ಟು ಜನರಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ. ಈ ಸವೆತ ಹೀಗೇ ಮುಂದುವರೆಯುತ್ತಾ ನಿಲ್ಲಲೂ ಆಗದಷ್ಟು ಮಟ್ಟಿಗೆ ಮುಂದುವರೆದು ಬಳಿಕ ಮೊಣಕಾಲಿನ ಗಂಟನ್ನೇ ಬದಲಿಸಿಕೊಳ್ಳುವ ಶಸ್ತ್ರಚಿಕಿತ್ಸೆ ಅನಿವಾರ್ಯವಾಗುತ್ತದೆ.

"osteoarthritis ರೋಗಿಗಳ ಮೊಣಗಂಟುಗಳಲ್ಲಿರುವ ಮೃದುಭಾಗವಾದ ಕಾರ್ಟಿಲೇಜ್ ಪೂರ್ಣವಾಗಿ ಸವೆದ ಬಳಿಕ ಈ ತೊಂದರೆಯನ್ನು ಮತ್ತೆ ಮೊದಲಿನಂತಾಗಿಸಲು ಸಾಧ್ಯವಿಲ್ಲ" ಎಂದು ಕ್ಯಾಲಿಫೋರ್ನಿಯಾ-ಸ್ಯಾನ್ ಫ್ರಾನ್ಸಿಸ್ಕೋ ವಿಶ್ವವಿದ್ಯಾಲಯದ ಲೇಖಕರಾಗಿರುವ ಅಲೆಕ್ಸಾಂಡ್ರಾ ಜೆರ್ಸಿಂಗ್ ರವರು ತಿಳಿಸುತ್ತಾರೆ. ಈ ಸವೆತ ದೇಹದ ತೂಕವನ್ನು ನೇರವಾಗಿ ಅವಲಂಬಿಸಿದ್ದು ದೇಹದ ತೂಕ ಹೆಚ್ಚಿದ್ದಷ್ಟೂ ಸವೆತವೂ ಹೆಚ್ಚುತ್ತದೆ. ಆದ್ದರಿಂದ ತೂಕ ಇಳಿಸಿಕೊಳ್ಳುವ ಮೂಲಕ ಸವೆತವನ್ನೂ ಕಡಿಮೆ ಮಾಡಬಹುದು. ಆದರೆ ಯಾವ ವಿಧಾನದಲ್ಲಿ ತೂಕ ಇಳಿಸಬೇಕು ಎಂಬುದು ಇಲ್ಲಿ ಸ್ಪಷ್ಟಪಡಿಸಿಲ್ಲ. ಅಂದರೆ ತೂಕ ಇಳಿಸಬೇಕಾದರೆ ಮೊಣಕಾಲುಗಳ ಮೇಲೆ ಹೆಚ್ಚಿನ ಕೆಲಸ ನೀಡಬೇಕಾದುದು ಅನಿವಾರ್ಯವಾಗಿದ್ದರೆ ಇದು ಸವೆತವನ್ನು ಇನ್ನಷ್ಟು ಹೆಚ್ಚಿಸಬಹುದು.

ಈ ಬಗ್ಗೆ ನಡೆಸಿದ ಸಂಶೋಧನೆಯಲ್ಲಿ 380 ವ್ಯಕ್ತಿಗಳನ್ನು ಆಯ್ದುಕೊಂಡು ಸುಮಾರು ಎಂಟು ವರ್ಷಗಳಿಗೂ ಹೆಚ್ಚಿನ ಕಾಲ ಅವರ ಆರೋಗ್ಯದ ಅಂಕಿ ಅಂಶಗಳನ್ನು ಕಲೆಹಾಕಿ ಮೊಣಗಂಟಿನ ನೋವನ್ನು ಅಭ್ಯಸಿಸಲಾಯ್ತು. ಇವರೆಲ್ಲರಿಗೂ ಕಡಿಮೆ ಅಥವಾ ತೀವ್ರ ಪ್ರಮಾಣದ ಓಸ್ಟೆರೋ ಆರ್ಥಿರೈಟಿಸ್ ಕಾಯಿಲೆ ಇತ್ತು. ಈ ಎಂಟು ವರ್ಷಗಳ ಅವಧಿಯಲ್ಲಿ ಎಲ್ಲಾ ಮುನ್ನೂರೆಂಭತ್ತು ವ್ಯಕ್ತಿಗಳನ್ನು ಅವರ ವಯಸ್ಸು, ತೂಕ ಮೊದಲಾದವುಗಳನ್ನು ಆಧರಿಸಿ ಗುಂಪುಗಳನ್ನಾಗಿ ವಿಂಗಡಿಸಲಾಗಿತ್ತು. ಕೆಲವರಿಗೆ ಕೇವಲ ವ್ಯಾಯಾಮಗಳನ್ನು ನೀಡಿದರೆ ಕೆಲವರಿಗೆ ಆಹಾರಕ್ರಮದಲ್ಲಿ ಬದಲಾವಣೆ, ಕೆಲವರಿಗೆ ವ್ಯಾಯಮವಿಲ್ಲದೇ ಕೇವಲ ಆಹಾರದಲ್ಲಿ ಬದಲಾವಣೆ ಇತ್ಯಾದಿಗಳನ್ನು ಸಲಹೆ ಮಾಡಲಾಗಿತ್ತು.

ಮೊಣಕಾಲು ನೋವನ್ನು ನಿವಾರಿಸಲು 5 ಸಲಹೆಗಳು

ಇವರಲ್ಲಿ ವ್ಯಾಯಾಮ ಹಾಗೂ ಆಹಾರಕ್ರಮದಲ್ಲಿ ಬದಲಾವಣೆಯ ಮೂಲಕ ತೂಕವನ್ನು ಕಳೆದುಕೊಂಡವರಲ್ಲಿ ಉಳಿದ ಗುಂಪಿನವರಿಗಿಂತ ಸವೆತ ಕಡಿಮೆಯಾಗಿತ್ತು. ಆಹಾರಕ್ರಮ ಬದಲಿಸಿಕೊಳ್ಳದೇ ಕೇವಲ ವ್ಯಾಯಾಮದಿಂದ ತೂಕ ಕಳೆದುಕೊಂಡವರಲ್ಲಿಯೂ ಹೆಚ್ಚಿನ ವ್ಯತ್ಯಾಸ ಕಂಡುಬಂದಿರಲಿಲ್ಲ. ಬನ್ನಿ, ನಿಮ್ಮ ಮೊಣಗಂಟುಗಳು ಆರೋಗ್ಯಕರವಾಗಿರಬೇಕಾದರೆ ಯಾವ ಆಹಾರಗಳನ್ನು ನಿಯಮಿತವಾಗಿ ಸೇವಿಸಬೇಕು ಎಂಬುದನ್ನು ನೋಡೋಣ....

ಅರಿಶಿನ

ಅರಿಶಿನ

ಇದು ಕೇವಲ ಮಸಾಲೆ ಪದಾರ್ಥವಲ್ಲ, ಬದಲಿಗೆ ಪ್ರತಿ ಮನೆಯಲ್ಲಿಯೂ ಇರಲೇಬೇಕಾದ ಮನೆಮದ್ದಾಗಿದೆ. ಇದರಲ್ಲಿರುವ ಕುರ್ಕುಮಿನ್ ಎಂಬ ಪೋಷಕಾಂಶ ಅತ್ಯುತ್ತಮವದ ಉರಿಯೂತ ನಿವಾರಕವಾಗಿದ್ದು ಹಲವಾರು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತದೆ. ಮೊಣಗಂಟಿನ ಸವೆತಕ್ಕೂ ಇದು ಉತ್ತಮವಾಗಿದೆ. ನಿಮ್ಮ ನಿತ್ಯದ ಆಹಾರಗಳಲ್ಲಿ ಚಿಟಿಕೆಯಷ್ಟು ಅರಿಶಿನವನ್ನು ತಪ್ಪದೇ ಬೆರೆಸಿ ಸೇವಿಸುತ್ತಾ ಬಂದರೆ ಸಾಕು. ಒಂದು ವೇಳೆ ರಾತ್ರಿ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲಿಗೆ ಅರ್ಧ ಚಿಕ್ಕಚಮಚ ಅರಿಶಿನ ಬೆರೆಸಿ ಕುಡಿಯುವುದರಿಂದಲೂ ಹೆಚ್ಚಿನ ಲಾಭವಿದೆ.

ಶುಂಠಿ

ಶುಂಠಿ

ಹಸಿಶುಂಠಿಯಲ್ಲಿಯೂ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿದ್ದು ಉತ್ತಮವಾದ ಉರಿಯೂತ ನಿವಾರಕವೂ ಆಗಿದೆ. ನಿಮ್ಮ ನಿತ್ಯದ ಆಹಾರಗಳಲ್ಲಿ ಕೊಂಚ ಪ್ರಮಾಣದಲ್ಲಿ ಶುಂಠಿಯನ್ನು ಸೇಸಿಕೊಳ್ಳುವ ಮೂಲಕ ಮೊಣಗಂಟಿನ ನೋವನ್ನು ದೂರವಾಗಿಸಬಹುದು. ದಿನದಲ್ಲಿ ಎರಡರಿಂದ ಮೂರು ಕಪ್ ಶುಂಠಿ ಬೆರೆಸಿದ ಟೀ ಕುಡಿಯುವುದರಿಂದಲೂ ಹಾಗೂ ಒಂದು ವೇಳೆ ಮೊಣಗಂಟುಗಳಲ್ಲಿ ನೋವು ಪ್ರಾರಂಭವಾಗಿದ್ದರೆ ಈ ಭಾಗದ ಮೇಲೆ ಶುಂಠಿಯ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದಲೂ ನೋವು ಕಡಿಮೆಯಾಗುತ್ತದೆ. ಆದರೆ ಶುಂಠಿಯ ಪ್ರಮಾಣ ಹೆಚ್ಚಾಗಬಾರದು. ಹೆಚ್ಚಾದರೆ ಇದರ ಕೆಲವು ಅಡ್ಡಪರಿಣಾಮಗಳನ್ನು ಎದುರಿಸಬೇಕಾಗಿ ಬರಬಹುದು.

ಮೆಂತೆಕಾಳುಗಳು

ಮೆಂತೆಕಾಳುಗಳು

ಸುಮಾರು ಎರಡು ಚಿಕ್ಕಚಮಚದಷ್ಟು ಮೆಂತೆಕಾಳುಗಳನ್ನು ಕೊಂಚ ನೀರಿನಲ್ಲಿ ರಾತ್ರಿಯಿಡಿ ನೆನೆಸಿಡಿ. ಮರುದಿನ ಬೆಳಿಗ್ಗೆ ನೀರನ್ನು ಸಂಗ್ರಹಿಸಿ ಕುಡಿಯಿರಿ. ಇದರಿಂದ ಮೊಣಕಾಲುಗಳಿಗೆ ಹೆಚ್ಚಿನ ಶಾಖ ದೊರಕುತ್ತದೆ ಹಾಗೂ ನೋವನ್ನು ಕ್ಷಿಪ್ರವಾಗಿ ಕಡಿಮೆಗೊಳಿಸಲು ನೆರವಾಗುತ್ತದೆ. ಸಾಧ್ಯವಾದರೆ ನೀರು ಸಂಗ್ರಹಿಸಿದ ಬಳಿಕ ಉಳಿದ ಮೆಂತೆಕಾಳುಗಳನ್ನು ಅರೆದು ನೋವಿರುವ ಭಾಗಕ್ಕೆ ಹಚ್ಚಿಕೊಳ್ಳಬೇಕು.

ಎಳ್ಳು

ಎಳ್ಳು

ಎಳ್ಳಿನಲ್ಲಿನೂ ತಾಮ್ರದ ಸಹಿತ ಹಲವು ವಶ್ಯಕ ಖನಿಜ ಉತ್ತಮ ಪ್ರಮಾಣದದಲ್ಲಿವೆ. ಇದರೊಂದಿಗೆ ಸೆಸಮಾಲ್ ಎಂಬ ಪೋಷಕಾಂಶವೂ ಇದ್ದು ಇದರ ಆಂಟಿ ಆಕ್ಸಿಡೆಂಟ್ ಹಾಗೂ ಉರಿಯೂತ ನಿವಾರಕ ಗುಣ ಹಲವು ವಿಧದಲ್ಲಿ ನೋವನ್ನು ಕಡಿಮೆಗೊಳಿಸುತ್ತದೆ. ಆದ್ದರಿಂದ ನಿತ್ಯವೂ ಎಳ್ಳಿನ ಬೀಜಗಳನ್ನು ಆಹಾರದೊಂದಿಗೆ ಬೆರೆಸಿ ಸೇವಿಸುವ ಮೂಲಕ ಹಾಗೂ ಎಳ್ಳೆಣ್ಣೆಯಿಂದ ನಿತ್ಯವೂ ನೋವಿರುವ ಭಾಗವನ್ನು ಮಸಾಜ್ ಮಾಡಿಕೊಳ್ಳುವ ಮೂಲಕ ಮೊಣಕಾಲ ನೋವು ಹಾಗೂ ಸಂಧಿವಾತ ಬರದಂತೆ ತಡೆಯಬಹುದು.

ಈರುಳ್ಳಿ

ಈರುಳ್ಳಿ

ಈರುಳ್ಳಿಯೂ ಉತ್ತಮವಾದಾ ಉರಿಯೂತ ನಿವಾರಕವಾಗಿದೆ. ಇದರಲ್ಲಿರುವ ಫೋಟೋಕೆಮಿಕಲ್ಸ್ ಎಂಬ ಪೋಷಕಾಂಶಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಪ್ರಚೋದಿಸಿ ದೇಹದ ಹಲವು ಬಗೆಯ ಉರಿಯೂತದ ವಿರುದ್ಧ ಹೋರಾಡುವಂತೆ ಮಾಡುತ್ತದೆ. ಅಲ್ಲದೇ ಈರುಳ್ಳಿಯಲ್ಲಿರುವ ಗಂಧಕದ ಪ್ರಮಾಣ ದೇಹದ ಮೂಳೆ ಸಂಧುಗಳ ನೋವನ್ನು ಕಡಿಮೆ ಮಾಡಲೂ ನೆರವಾಗುತ್ತದೆ.

ಕರ್ಪೂರದ ಎಣ್ಣೆ

ಕರ್ಪೂರದ ಎಣ್ಣೆ

ಇದಕ್ಕಾಗಿ ಒಂದು ಕಪ್ ಕೊಬ್ಬರಿ ಎಣ್ಣೆಯನ್ನು ಕೊಂಚವೇ ಬಿಸಿ ಮಾಡಿ, ಅಂದರೆ ಬರೆ ಕರಗಿದರೆ ಸಾಕು, ಕುದಿ ಬರಬಾರದು, ಇದಕ್ಕೆ ಒಂದು ಚಿಕ್ಕಚಮಚ ಪುಡಿಮಾಡಿದ ಕರ್ಪೂರದ ಬಿಲ್ಲೆಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣ ತಣಿಯಲು ಬಿಟ್ಟು ಒಂದು ಚಿಕ್ಕ ಡಬ್ಬಿಯಲ್ಲಿ ಸಂಗ್ರಹಿಸಿ. ಮಂಡಿನೋವಿದ್ದರೆ ದಿನಕ್ಕೆರಡು ಬಾರಿ ಕೊಂಚ ಪ್ರಮಾಣವನ್ನು ನೋವಿರುವಲ್ಲಿ ಕೊಂಚ ಮಸಾಜ್ ಮೂಲಕ ಹಚ್ಚಿ. ನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.

ಓಮ

ಓಮ

ಪುಟ್ಟ ಜೀರಿಗೆಯಂತೆ ಕಾಣುವ ಓಮದ ಕಾಳುಗಳಲ್ಲಿರುವ ಅರಿವಳಿಕಾ ಮತ್ತು ಉರಿಯೂತ ನಿವಾರಕ ಗುಣಗಳು ಮಂಡಿನೋವಿನ ಶಮನಕ್ಕೂ ಉತ್ತಮ ಪರಿಹಾರ ನೀಡುತ್ತವೆ. ಉರಿಯೂತ ಅಥವಾ ಸಂಧಿವಾತದಿಂದಾಗಿ ಎದುರಾಗಿದ್ದ ಊತ, ಚರ್ಮ ಕೆಂಪಗಾಗಿರುವುದು ಮೊದಲಾದ ತೊಂದರೆಗಳೂ ಸುಲಭವಾಗಿ ಮತ್ತು ಶೀಘ್ರವಾಗಿ ಕಡಿಮೆಯಾಗುತ್ತದೆ. ಇದಕ್ಕಾಗಿ ಕೊಂಚ ಓಮದ ಕಾಳುಗಳನ್ನು ನೀರಿನೊಂದಿಗೆ ಬೆರೆಸಿ ಕಲ್ಲಿನಲ್ಲಿ ಅರೆದು (ಮಿಕ್ಸಿಯಲ್ಲಿ ಅರೆಯಬಾರದು, ಬಿಸಿಗೆ ಸುಟ್ಟುಹೋಗುತ್ತದೆ) ಈ ಲೇಪನವನ್ನು ನೋವಿದ್ದ ಮಂಡಿಗಳ ಮೇಲೆ ಹಚ್ಚಿದರೆ ಶೀಘ್ರವಾಗಿ ಗುಣವಾಗುತ್ತದೆ.

ಐಸ್ ಪ್ಯಾಕ್

ಐಸ್ ಪ್ಯಾಕ್

ಒಂದು ವೇಳೆ ನೋವು ಚಿಕ್ಕದಾಗಿದ್ದರೆ ಮತ್ತು ಇಂದೇ ಪ್ರಾರಂಭವಾಗಿದ್ದರೆ ಇದಕ್ಕೆ ಹೆಚ್ಚಿನ ಆರೈಕೆ ಬೇಕಾಗಿಲ್ಲ, ಕೇವಲ ಮಂಜುಗಡ್ಡೆಯ ಆರೈಕೆ ಸಾಕು. ನೋವಿರುವ ಮೊಣಗಂಟಿನ ಮೇಲೆ ಮತ್ತು ಪಕ್ಕದಲ್ಲಿ ಆವರಿಸುವಂತೆ ಕೊಂಚ ಮಂಜುಗಡ್ಡೆಯ ತುಂಡುಗಳನ್ನು ಒಂದು ಚೀಲದ ಮೂಲಕ ಇರಿಸಿ ಕೊಂಚ ಹೊತ್ತು ಬಿಟ್ಟು ತೆಗೆದರೆ ನೋವು ಕಡಿಮೆಯಾಗುವುದು...ಮಾತ್ರವಲ್ಲ, ಬಾವು ಕಡಿಮೆಯಾಗುತ್ತದೆ ಹಾಗೂ ಉರಿಯೂತವಾಗುವ ಸಾಧ್ಯತೆಯನ್ನೂ ಕಡಿಮೆಮಾಡುತ್ತದೆ. ವಿಶೇಷವಾಗಿ ಆಟದ ಸಮಯದಲ್ಲಿ ಎದುರಾಗುವ ನೋವಿಗೆ ಈ ವಿಧಾನ ಹೆಚ್ಚು ಸೂಕ್ತವಾಗಿದೆ.

 ಹರಳೆಣ್ಣೆ

ಹರಳೆಣ್ಣೆ

ಸಂಧಿವಾತಕ್ಕೆ ಹರಳೆಣ್ಣೆಯ ಮಸಾಜ್ ಬಹಳ ಪುರಾತನ ವಿಧಾನವಾಗಿದೆ. ಈ ವಿಧಾನವನ್ನು ಇನ್ನಷ್ಟು ಉತ್ತಮವಾಗಿಸಲು ಕೊಂಚ ಬಿಸಿನೀರಿನ ಶಾಖ ನೀಡಿದರೆ ಸಾಕು. ಹರಳೆಣ್ಣೆಯಲ್ಲಿರುವ ಉರಿಯೂತ ನಿವಾರಕ ಗುಣ ಗಂಟುಗಳ ನಡುವೆ ಉಂಟಾಗಿದ್ದ ಉರಿಯೂತವನ್ನು ನಿವಾರಿಸಲು ಮಾತ್ರವಲ್ಲದೇ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ನೈಸರ್ಗಿಕವಾದ ಪ್ರತಿಜೀವಕಗಳನ್ನು ಸೃಷ್ಟಿಸಿಕೊಳ್ಳಲು ನೆರವಾಗುತ್ತದೆ.

English summary

Secret To Have Healthy Pain-free Knees Revealed!

Having a healthy knees helps you stand upright without any support, run around and do your daily chores without any difficulty. But the moment you start having knee pain and your joints starts degenerating, it affects your mobility and your daily life severely. So what is the way out to keep your knees healthy and pain-free? A new study, presented at the 103rd Scientific Assembly and Annual Meeting of Radiological Society of North America in Chicago, suggests that you should focus on a combination of a good diet, weight loss and regular exercise to slow down the degeneration of knee cartilage.
X
Desktop Bottom Promotion