ಈರುಳ್ಳಿಯನ್ನು ಅಡ್ಡಲಾಗಿ ಕತ್ತರಿಸಿ ಅಂಗೈಗೆ ಹಚ್ಚಿಕೊಂಡರೆ, ಹತ್ತಾರು ಲಾಭ!

Posted By: Arshad
Subscribe to Boldsky

ಸದಾ ಆರೋಗ್ಯವಂತರಾಗಿರಲು ನಮ್ಮ ಸುತ್ತಮುತ್ತಲಿರುವ ಬ್ಯಾಕ್ಟೀರಿಯಾ-ವೈರಸ್ಸುಗಳು ಬಿಡುವುದೇ ಇಲ್ಲ. ನಮ್ಮ ರೋಗ ನಿರೋಧಕ ಶಕ್ತಿ ಯಾವಾಗ ಕುಂದುತ್ತದೆಯೋ ನೋಡುತ್ತಾ ಅವಕಾಶ ಸಿಕ್ಕಿದ ತಕ್ಷಣ ಧಾಳಿ ಎಸಗುತ್ತವೆ. ಸಾಮಾನ್ಯವಾಗಿ ಕಾಡುವ ಈ ರೋಗಗಳನ್ನು ಸರಿಯಾದ ಕ್ರಮ ಅನುಸರಿಸಿದರೆ ಒಂದು ಪೈಸೆ ಔಷಧಿಗಾಗಿ ವ್ಯಯಿಸದೇ ಶೀಘ್ರವಾಗಿ ನಿಗ್ರಹಿಸಬಹುದು.

ಔಷಧಿಗಳ ಬದಲಿಗೆ ನಿಮ್ಮ ಅಡುಗೆ ಮನೆಯಲ್ಲಿರುವ ಸಾಮಾನ್ಯವಾದ ಸಾಮಾಗ್ರಿಗಳೇ ಸಾಕು. ಪ್ರತಿ ಮನೆಯಲ್ಲಿಯೂ ಸದಾ ಕಾಲ ಇರುವ ತರಕಾರಿ ಎಂದರೆ ಈರುಳ್ಳಿ. ಅಗ್ಗವೂ, ಹೆಚ್ಚಿನ ಅಡುಗೆಗಳಿಗೆ ಅನಿವಾರ್ಯವೂ ಆದ ಈರುಳ್ಳಿ ಕೇವಲ ಅಡುಗೆಯ ರುಚಿ ಹೆಚ್ಚಿಸಲು ಮಾತ್ರವಲ್ಲ, ಕೆಲವಾರು ಕಾಯಿಲೆಗಳಿಗೆ ಸಮರ್ಥ ಔಷಧಿಯಾಗಿಯೂ ಬಳಸಲ್ಪಡುವ ಮೂಲಕ ವೈದ್ಯರ ಬಳಿ ಓಡುವ ಅಗತ್ಯತೆಯೇ ಇಲ್ಲವಾಗುತ್ತದೆ.

ಈರುಳ್ಳಿ ಸಿಪ್ಪೆಯನ್ನು ಇನ್ನು ಅಪ್ಪಿತಪ್ಪಿಯೂ ಕಸದ ಬುಟ್ಟಿಗೆ ಬಿಸಾಡಬೇಡಿ!!

ಇಲ್ಲಿ ಈರುಳ್ಳಿಯನ್ನು ಔಷಧಿಯ ರೂಪದಲ್ಲಿ ಸೇವಿಸುವ ಮೂಲಕ ಪಡೆಯುವ ಬಗ್ಗೆ ವಿವರಿಸುತ್ತಿಲ್ಲ, ಬದಲಿಗೆ ಹಸಿ ಈರುಳ್ಳಿಯನ್ನು ಅಡ್ಡಲಾಗಿ ಕತ್ತರಿಸಿ ಹಸ್ತದ ಹಿಂಭಾಗಕ್ಕೆ ಹಚ್ಚಿಕೊಳ್ಳುವ ಮೂಲಕ ಪಡೆಯಬಹುದಾದ ಪ್ರಯೋಜನಗಳ ಬಗ್ಗೆ ವಿವರಿಸುತ್ತಿದ್ದೇವೆ. ಈ ವಿಧಾನದಿಂದ ಶೀತ, ಕಿವಿನೋವು, ಮೈಯಲ್ಲಿ ತುರಿಕೆ ಮೊದಲಾದ ಕೆಲವಾರು ತೊಂದರೆಗಳಿಂದ ಪರಿಹಾರ ದೊರಕುತ್ತದೆ. ಈರುಳ್ಳಿಯಲ್ಲಿರುವ ಕ್ವೆರ್ಸೆಟಿನ್ ಎಂಬ ಆಂಟಿ ಆಕ್ಸಿಡೆಂಟ್ ಅತ್ಯಂತ ಪ್ರಬಲವಾಗಿದ್ದು ಹಲವಾರು ಕಾಯಿಲೆಗಳಿಗೆ ಔಷಧಿಯಂತೆ ಕೆಲಸ ಮಾಡುತ್ತದೆ. ಮುಂದಿನ ಬಾರಿ ಅಡುಗೆಗಾಗಿ ಈರುಳ್ಳಿಯನ್ನು ಕತ್ತರಿಸಿದಾಗ ಅರ್ಧ ಈರುಳ್ಳಿಯನ್ನು ಪ್ರತ್ಯೇಕವಾಗಿರಿಸಲು ಮರೆಯದಿರಿ. ಈ ಈರುಳ್ಳಿಯನ್ನು ಹೇಗೆ ಬಳಸಬೇಕು ಎಂಬುದನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ....

ಉತ್ತಮ ಈರುಳ್ಳಿಯ ಆಯ್ಕೆ

ಉತ್ತಮ ಈರುಳ್ಳಿಯ ಆಯ್ಕೆ

ಹಳದಿ ಹಾಗೂ ಬಿಳಿ ಅಥವಾ ನಸುಗಂದು ಬಣ್ಣದ ಸಿಪ್ಪೆಯ ಈರುಳ್ಳಿ ಉತ್ತಮ. ಈರುಳ್ಳಿಯನ್ನು ವಿವಿಧ ತೊಂದರೆಗಳಿಗೆ ಹೇಗೆ ಬಳಸಬಹುದು ಎಂಬುದನ್ನು ಈಗ ನೋಡೋಣ:

ಸುಟ್ಟ ಗಾಯಕ್ಕೆ/ಗಾಯದ ಕಲೆ ಉಳಿಯದಂತೆ ನೋಡಲು

ಸುಟ್ಟ ಗಾಯಕ್ಕೆ/ಗಾಯದ ಕಲೆ ಉಳಿಯದಂತೆ ನೋಡಲು

ಅಡುಗೆಯ ಸಮಯದಲ್ಲಿ ಚಿಕ್ಕ ಪುಟ್ಟ ಸುಟ್ಟ ಗಾಯಗಳಾದರೆ ತಕ್ಷಣ ಈರುಳ್ಳಿಯ ಹಸಿ ಭಾಗವನ್ನು ಸುಟ್ಟ ಭಾಗಕ್ಕೆ ಹಚ್ಚುವಂತೆ ಒತ್ತಿಕೊಳ್ಳಿ. ಇದರಲ್ಲಿರುವ ಪ್ರತಿಜೀವಕ ಗುಣ ಚರ್ಮಕ್ಕೆ ಸೋಂಕು ಉಂಟಾಗುವುದನ್ನು ರಕ್ಷಿಸುತ್ತದೆ ಹಾಗೂ ಶೀಘ್ರವೇ ಹೊಸ ಚರ್ಮ ಬೆಳೆಯಲು ನೆರವಾಗುತ್ತದೆ. ಸುಟ್ಟ ಗಾಯ ಮಾಗುವವರೆಗೂ ನಿಯಮಿತವಾಗಿ ಈರುಳ್ಳಿಯನ್ನು ಹಚ್ಚುತ್ತಾ ಬರುವ ಮೂಲಕ ಈ ಭಾಗದ ಹೊಸಚರ್ಮದಲ್ಲಿ ಕಲೆ ಇಲ್ಲದಂತಾಗಲು ನೆರವಾಗುತ್ತದೆ.

ಕಣ್ಣಲ್ಲಿ ನೀರು ತರಿಸಿದರೂ ಆರೋಗ್ಯಕ್ಕೆ ಒಳ್ಳೆಯದು ಈರುಳ್ಳಿ

ತುರಿಕೆಯನ್ನು ಇಲ್ಲವಾಗಿಸುತ್ತದೆ

ತುರಿಕೆಯನ್ನು ಇಲ್ಲವಾಗಿಸುತ್ತದೆ

ಒಂದು ವೇಳೆ ಸೊಳ್ಳೆ ಅಥವಾ ಇನ್ನಾವುದಾದರೊಂದು ಕೀಟ ಕಡಿದರೆ ಎದುರಾಗುವ ಭಾರೀ ಉರಿಯಿಂದ ಪಾರಾಗಲು ಈರುಳ್ಳಿಯ ತೇವಭಾಗವನ್ನು ತುರಿಕೆಯಾಗುತ್ತಿರುವ ಭಾಗದ ಮೇಲೆ ಒರೆಸಿಕೊಳ್ಳಿ. ಈರುಳ್ಳಿ ರಸದಲ್ಲಿರುವ ಗಂಧಕ ಈ ಉರಿಯನ್ನು ಶಮನಗೊಳಿಸುತ್ತದೆ ಹಾಗೂ ತುರಿಕೆಯೂ ಇಲ್ಲವಾಗುತ್ತದೆ. ಈರುಳ್ಳಿಯ ಪ್ರಯೋಜನಗಳಲ್ಲಿ ಇದು ಅತ್ಯುತ್ತಮವಾಗಿದೆ.

ಕಿವಿನೋವು ಕಡಿಮೆಗೊಳಿಸುತ್ತದೆ

ಕಿವಿನೋವು ಕಡಿಮೆಗೊಳಿಸುತ್ತದೆ

ಕಿವಿನೋವಿದ್ದರೆ ಒಂದು ಈರುಳ್ಳಿಯನ್ನು ಇಡಿಯಾಗಿ ನೀರಿನಲ್ಲಿ ಸುಮಾರು ಹದಿನೈದು ನಿಮಿಷ ಕಾಲ ಬೇಯಿಸಿ. ಬಳಿಕ ಸಿಪ್ಪೆಯನ್ನು ನಿವಾರಿಸಿ ಜಜ್ಜಿ ಹಿಂಡಿ ರಸವನ್ನು ಸಂಗ್ರಹಿಸಿ. ಈ ರಸವನ್ನು ನೋವಿರುವ ಕಿವಿಯೊಳಗೆ ಕೆಲವು ತೊಟ್ಟು ಬಿಟ್ಟುಕೊಳ್ಳುವ ಮೂಲಕ ಸೋರುವ ಕಿವಿ ನಿಲ್ಲುತ್ತದೆ.

ಕಟ್ಟಿದ ಮೂಗು ತರೆಯುತ್ತದೆ

ಕಟ್ಟಿದ ಮೂಗು ತರೆಯುತ್ತದೆ

ಒಂದು ವೇಳೆ ಸೈನಸ್ ಅಥವಾ ಕುಹರದ ಸೋಂಕಿನಿಂದ ಮೂಗು ಕಟ್ಟಿಕೊಂಡಿದ್ದರೆ ಒಂದು ಮಧ್ಯಮ ಗಾತ್ರದ ಈರುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿ ಇದರ ವಾಸನೆಯನ್ನು ಕಣ್ಣುಮುಚ್ಚಿಕೊಂಡು ದೀರ್ಘಶ್ವಾಸದ ಮೂಲಕ ಒಳಗೆಳೆದುಕೊಳ್ಳಿ. ಇದರಿಂದ ಕಟ್ಟಿರುವ ಮೂಗು ತಕ್ಷಣ ತೆರೆಯುತ್ತದೆ.

ಫ್ಲೂ/ಶೀತದಿಂದ ರಕ್ಷಿಸುತ್ತದೆ

ಫ್ಲೂ/ಶೀತದಿಂದ ರಕ್ಷಿಸುತ್ತದೆ

ಒಂದು ವೇಳೆ ಫ್ಲೂ ಜ್ವರ ಹಾಗೂ ಶೀತ ಆವರಿಸಿದ್ದರೆ ಈರುಳ್ಳಿ ಅತಿ ಶೀಘ್ರವಾಗಿ ಶಮನ ನೀಡುತ್ತದೆ. ಇದಕ್ಕಾಗಿ ಒಂದು ಈರುಳ್ಳಿಯನ್ನು ಉದ್ದಕ್ಕೆ ಅರ್ಧ ಕತ್ತರಿಸಿ ನೀವು ಮಲಗುವ ಮುನ್ನ ತಲೆದಿಂಬಿನ ಬಳಿ ತಟ್ಟೆಯೊಂದರಲ್ಲಿ ಇರಿಸಿ. ಈರುಳ್ಳಿಯ ಪರಿಮಳವನ್ನು ರಾತ್ರಿ ನಿದ್ದೆಯಲ್ಲಿ ಆಘ್ರಾಣಿಸುವ ಮೂಲಕ ಮರುದಿನ ಬೆಳಿಗ್ಗೆದ್ದಾಗ ಶೀತ ಫ್ಲೂ ಜ್ವರ ಕಡಿಮೆಯಾಗುತ್ತದೆ.

ಸಾಮಾನ್ಯ ಜ್ವರ

ಸಾಮಾನ್ಯ ಜ್ವರ

ಒಂದು ವೇಳೆ ಸಾಮಾನ್ಯ ಜ್ವರ ಆವರಿಸಿದರೆ ಈರುಳ್ಳಿಯನ್ನು ಅಡ್ಡಲಾಗಿ ಕತ್ತರಿಸಿ ಕೆಲವು ಬಿಲ್ಲೆಗಳನ್ನು ಕಾಲುಚೀಲದಲ್ಲಿ ಪಾದದ ಉದ್ದಕ್ಕೂ ಆವರಿಸುವಂತೆ ಇರಿಸಿ ಈ ಕಾಲುಚೀಲಗಳನ್ನು ಧರಿಸಿ ಮಲಗಿ. ಇದರಿಂದ ಹಲವಾರು ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು. ಜ್ವರ ಶೀಘ್ರವೇ ಕಡಿಮೆಯಾಗುತ್ತದೆ ಹಾಗೂ ಆರೋಗ್ಯವೂ ಉತ್ತಮಗೊಳ್ಳುತ್ತದೆ.

ಗಂಟಲ ಬೇನೆ

ಗಂಟಲ ಬೇನೆ

ಈರುಳ್ಳಿಯ ಸಿಪ್ಪೆಯನ್ನು ಸಂಗ್ರಹಿಸಿ ಕೊಂಚ ನೀರಿನಲ್ಲಿ ಕುದಿಸಿ. ಈ ನೀರನ್ನು ಕುಡಿಯುವ ಮೂಲಕ ಗಂಟಲ ಒಳಭಾಗದಲ್ಲಿ ಆವರಿಸಿರುವ ಸೋಂಕು ಇಲ್ಲವಾಗುತ್ತದೆ ಹಾಗೂ ಗಂಟಲ ಕಿರಿಕಿರಿ ಹಾಗೂ ನೋವು ಇಲ್ಲವಾಗುತ್ತದೆ.

ಸಿಬುರು

ಸಿಬುರು

ಒಂದು ವೇಳೆ ಚರ್ಮದಲ್ಲಿ ತುರಿಕೆಯುಂಟಾಗಿ ಚರ್ಮ ಪಕಳೆಯಂತೆ ಏಳುತ್ತಿದ್ದರೆ ಈ ಭಾಗದ ಮೇಲೆ ಹಸಿ ಈರುಳ್ಳಿಯನ್ನು ಅಡ್ಡಲಾಗಿ ಕತ್ತರಿಸಿದ ಬಿಲ್ಲೆಗಳನ್ನು ಇರಿಸಿ ಬಟ್ಟೆಯ ಪಟ್ಟಿಯೊಂದನ್ನು ಕಟ್ಟಿ ಸುಮಾರು ಒಂದು ಗಂಟೆ ಇರಿಸಿ. ಒಂದು ಗಂಟೆಯ ಬಳಿಕ ಪಟ್ಟಿ ಬಿಚ್ಚಿದಾಗ ಈ ಪಕಳೆ ಸಡಿಲವಾಗಿ ಈರುಳ್ಳಿಯೊಂದಿಗೆ ಎದ್ದು ಬರುತ್ತದೆ ಹಾಗೂ ಆರೋಗ್ಯಕರ ಹೊಸ ಚರ್ಮ ಬೆಳೆಯುತ್ತದೆ.

ಚರ್ಮದಲ್ಲಿ ಕಲೆಗಳು

ಚರ್ಮದಲ್ಲಿ ಕಲೆಗಳು

ಚರ್ಮದಲ್ಲಿ ಕಪ್ಪು ಕಲೆಗಳಿದ್ದರೆ ಈ ಭಾಗದ ಮೇಲೆ ಈರುಳ್ಳಿ ರಸವನ್ನು ಅರಿಶಿನದೊಂದಿಗೆ ಬೆರೆಸಿದ ಲೇಪನವನ್ನು ಹಚ್ಚಿ. ಮುಖದ ಚರ್ಮದ ಸಹಿತ ದೇಹದ ಯಾವುದೇ ಭಾಗದಲ್ಲಿ ಇರುವ ಕಲೆಗಳು ನಿಧಾನವಾಗಿ ಮಾಯವಾಗುತ್ತಾ ಸಹಜವರ್ಣ ಪಡೆಯಲು ನೆರವಾಗುತ್ತದೆ.

ಮಾಸಿಕ ದಿನಗಳ ನೋವು

ಮಾಸಿಕ ದಿನಗಳ ನೋವು

ಮಹಿಳೆಯರ ಮಾಸಿಕ ದಿನಗಳಲ್ಲಿ ಅನುಭವಿಸುವ ನೋವನ್ನು ಕಡಿಮೆ ಮಾಡಲು ಈರುಳ್ಳಿ ಉತ್ತಮ ಆಯ್ಕೆಯಾಗಿದೆ. ನಿಮ್ಮ ಮಾಸಿಕ ದಿನಗಳು ಪ್ರಾರಂಭವಾಗುವ ಒಂದು ಅಥವಾ ಎರಡು ದಿನಗಳ ಹಿಂದೆ ದಿನಕ್ಕೆ ಎರಡು ಅಥವಾ ಮೂರು ಹಸಿ ಈರುಳ್ಳಿಯನ್ನು ತಿನ್ನುವ ಮೂಲಕ ಮುಂದಿನ ದಿನಗಳಲ್ಲಿ ಅತಿ ಕಡಿಮೆ ನೋವು ಎದುರಾಗುತ್ತದೆ.

ಇದಪ್ಪಾ ಈರುಳ್ಳಿಯ ಜಬರ್ದಸ್ತ್ ಪವರ್! ತಪ್ಪದೇ ಓದಿ...

For Quick Alerts
ALLOW NOTIFICATIONS
For Daily Alerts

    English summary

    Rub Onion On Hand To Treat These Ailments; Also Check The Other Ways

    We are stressing on the health benefits of rubbing a raw onion on the back of your hand! This method can be used to cure several issues like fighting cold, earaches, itchiness and what not. Onion contains quercetin that is a super-powerful antioxidant, which can help cure several health disorders. When you use onion for cooking, don't forget to keep aside a piece of it to rub on the back of your hands or other affected areas.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more