For Quick Alerts
ALLOW NOTIFICATIONS  
For Daily Alerts

ಕಾಡುವ ಗಂಟಲಿನ ಕಿರಿಕಿರಿ-ಇದಕ್ಕೆಲ್ಲಾ ಮನೆಮದ್ದೇ ಸರಿ....

By Arshad
|

ಗಂಟಲಲ್ಲಿ ಕಿರಿಕಿರಿಯುಂಟಾಗಲು ಕೆಲವಾರು ಕಾರಣಗಳಿದ್ದು ಬಹುತೇಕ ಇದು ಬರಬಾರದ ಸಮಯದಲ್ಲಿಯೇ ಆವರಿಸಿ ಭಾರೀ ಮುಜುಗರ ತಂದೊಡ್ಡುತ್ತದೆ. ಒಮ್ಮೆ ಪ್ರಾರಂಭವಾದರೆ ಇಡಿಯ ದಿನ ಗುರು ಗುರು ಎನ್ನುತ್ತಾ ದಿನದ ನೆಮ್ಮದಿಯನ್ನೆಲ್ಲಾ ಕಸಿದು ಬಿಡುತ್ತದೆ. ವಿಶೇಷವಾಗಿ ಆಹಾರವನ್ನು ನುಂಗುವ ಸಮಯದಲ್ಲಿ ನೋವನ್ನೂ ನೀಡುತ್ತದೆ. ಗಂಟಲ ಕಿರಿಕಿರಿಗೆ ಗಂಟಲ ಒಳಭಾಗದಲ್ಲಿ ಉಂಟಾಗಿರುವ ಉರಿಯೂತವೇ ಪ್ರಮುಖ ಕಾರಣವಾಗಿದೆ.

ಅಲ್ಲದೇ ಅಂಟಿಕೊಂಡಿರುವ ಕಫ ಗಟ್ಟಿಯಾಗಿದ್ದು ಇದನ್ನು ನಿವಾರಿಸುವಯತ್ನವೇ ನಿಜವಾದ ಕಿರಿಕಿರಿಯಾಗಿದೆ. ಈ ಕಫಕ್ಕೆ ಕೆಲವಾರು ಕಾರಣಗಳಿದ್ದರೂ ಪ್ರಮುಖ ಕಾರಣ ವೈರಸ್ಸುಗಳಾಗಿವೆ. ಇವನ್ನು ಕೊಲ್ಲುವ ಯತ್ನದಲ್ಲಿ ನಮ್ಮ ರಕ್ತದ ಬಿಳಿರಕ್ತಕಣಗಳು ಸತ್ತು ಅಂಟಿನಂತಾಗಿ ವೈರಸ್ಸುಗಳನ್ನು ಹಿಡಿದಿಟ್ಟುಕೊಂಡಿರುವುದೇ ಕಫ.

ವೈರಸ್ಸುಗಳ ಹೊರತಾಗಿ ಗಂಟಲ ಒಳಗಣ ತೇವಭಾಗದಲ್ಲಿ ಅಂಟಿಕೊಳ್ಳುವ ಧೂಳು, ಹೊಗೆ, ತೇವಾಂಶ ಹಾಗೂ ಅಲರ್ಜಿಕಾರಕ ಕಣ, ಶೀತಲ ಮತ್ತು ಒಣ ಹವೆ, ಧೂಮಪಾನ, ಫ್ಲೂ ಜ್ವರ ಮೊದಲಾದವೂ ಕಫವುಂಟಾಗಲು ಕಾರಣವಾಗುತ್ತವೆ. ಗಂಟಲ ಕಿರಿಕಿರಿ ನಿವಾರಿಸಬೇಕೆಂದರೆ ಈ ಕಫವನ್ನು ಸಡಿಲಿಸಬೇಕಾಗುತ್ತದೆ. ಈ ಕೆಲಸವನ್ನು ಮಾಡಲು ಕೆಲವು ಸುಲಭ ಮನೆಮದ್ದುಗಳಿವೆ. ಇವೆಲ್ಲವೂ ನಿಮ್ಮ ಆಡುಗೆ ಮನೆಯಲ್ಲಿ ಸದಾ ಲಭ್ಯವಿರುವ ಸಾಮಾಗ್ರಿಗಳೇ ಆಗಿದ್ದು ಅತಿ ಕಡಿಮೆ ಸಮಯದಲ್ಲಿ ಕಫವನ್ನು ಸಡಿಲಿಸಿ ಅಥವಾ ಕರಗಿಸಿ ಕಿರಿಕಿರಿ ನಿವಾರಣೆಯಾಗಲು ಸಹಕರಿಸುತ್ತವೆ....

ಉಗುರುಬೆಚ್ಚಗಿನ ಉಪ್ಪುನೀರಿನಿಂದ ಗಳಗಳಿಸಿ

ಉಗುರುಬೆಚ್ಚಗಿನ ಉಪ್ಪುನೀರಿನಿಂದ ಗಳಗಳಿಸಿ

ಗಂಟಲ ಒಳಭಾಗದಲ್ಲಿ ಕಫ ಗಟ್ಟಿಯಾಗಿದ್ದು ಉರಿಯೂತವೂ ಕಾಣಿಸಿಕೊಂಡರೆ ಈ ಭಾಗ ಊದಿಕೊಳ್ಳುತ್ತದೆ. ಇದಕ್ಕೆ ಸುಲಭವಾದ ಮತ್ತು ತಕ್ಕ ಪರಿಹಾರವೆಂದರೆ ಉಪ್ಪುನೀರಿನಿಂದ ಗಳಗಳ ಮಾಡುವುದು. ಇದರಿಂದ ಕಫ ಕರಗಿ ಹೋಗುವ ಮೂಲಕ ಉರಿಯೂತ ನಿವಾರಣೆಯಾಗುತ್ತದೆ. ಇದಕ್ಕಾಗಿ ಒಂದು ಕಪ್ ಉಗುರುಬೆಚ್ಚನೆಯ ನೀರು ಹಾಗೂ ಒಂದು ಚಿಕ್ಕ ಚಮಚ ಉಪ್ಪು ಸಾಕು. ಈ ನೀರಿನಿಂದ ದಿನದಲ್ಲಿ ಹಲವಾರು ಬಾರಿ ಗಳಗಳ ಮಾಡುತ್ತಾ ಇದ್ದರೆ ಸಾಕು.

ಹಸಿ ಬೆಳ್ಳುಳ್ಳಿ

ಹಸಿ ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿರುವ ನೈಸರ್ಗಿಕ ಪೋಷಕಾಂಶಗಳು ಗಂಟಲ ಉರಿಯೂತವನ್ನು ಕಡಿಮೆಗೊಳಿಸುವ ಗುಣ ಹೊಂದಿವೆ. ಇದರಲ್ಲಿರುವ ಆಲಿಸಿನ್ ಎಂಬ ಪೋಷಕಾಂಶ ಗಂಟಲ ಒಳಭಾಗದಲ್ಲಿ ಆಶ್ರಯ ಪಡೆದು ಸೋಂಕು ಹರಡಿ ನೋವು ಉಂಟುಮಾಡುತ್ತಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಸಕ್ಷಮವಾಗಿದೆ. ಇದಕ್ಕಾಗಿ ಒಂದು ಬೆಳ್ಳುಳ್ಳಿಯ ಎಸಳನ್ನು ಸಿಪ್ಪೆ ಸುಲಿದು ಕೊಂಚವೇ ಜಜ್ಜಿ ಮಾತ್ರೆಯಂತೆ ನುಂಗಿಬಿಡಬೇಕು.

ಹಬೆಯನ್ನು ಉಸಿರಾಡಿ

ಹಬೆಯನ್ನು ಉಸಿರಾಡಿ

ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ ಇನ್ನೂ ಹಬೆಯಾಡುತ್ತಿರುವಂತೆಯೇ ಇದರ ಮೇಲೆ ಮುಖವಿರಿಸಿ ದಪ್ಪ ಟವೆಲ್ಲಿನಿಂದ ಪಾತ್ರೆಯನ್ನು ಆವರಿಸಿ ಹಬೆಯನ್ನು ಮೂಗಿನಿಂದ ಉಸಿರಾಡಿ. ಇನ್ನೂ ಉತ್ತಮ ಪರಿಣಾಮ ಪಡೆಯಲು ಈ ನೀರಿಗೆ ಒಂದೆರಡು ತೊಟ್ಟು ನೀಲಗಿರಿ ಎಣ್ಣೆಯನ್ನು ಹಾಕಿ ಈ ಹಬೆಯನ್ನು ಕೆಲವಾರು ನಿಮಿಷಗಳವರೆಗೆ ಉಸಿರಾಡಿ.

ಕೇಯ್ನ್ ಮೆಣಸನ್ನು ಬಳಸಿ

ಕೇಯ್ನ್ ಮೆಣಸನ್ನು ಬಳಸಿ

ಕೊಂಚ ಖಾರವಾದ ಕೇಯ್ನ್ ಮೆಣಸಿನಲ್ಲಿ ಗಂಟಲ ಬೇನೆಯನ್ನು ಕಡಿಮೆಗೊಳಿಸುವ ಗುಣವಿದೆ. ಇದಕ್ಕಾಗಿ ½ ಚಿಕ್ಕ ಚಮಚ ಕೇಯ್ನ್ ಮೆಣಸಿನ ಪುಡಿ (red pepper) ಯನ್ನು ಒಂದು ಕಪ್ ಕುದಿಯುತ್ತಿರುವ ನೀರಿಗೆ ಬೆರೆಸಿ ಇದಕ್ಕೆ ಒಂದು ಚಿಕ್ಕ ಚಮಚ ಜೇನು ಬೆರೆಸಿ ಕಲಕಿ. ಈ ನೀರನ್ನು ನಿಧಾನವಾಗಿ ಇಡಿಯ ದಿನ ಕೊಂಚಕೊಂಚವಾಗಿ ಸೇವಿಸುತ್ತಾ ಇರಿ. ಗಂಟಲ ಕಿರಿಕಿರಿ ಹೆಚ್ಚಾಗಿದ್ದರೆ ಈ ವಿಧಾನ ಅತ್ಯಂತ ಸೂಕ್ತವಾಗಿದೆ.

ದಾಳಿಂಬೆ ಹಣ್ಣನ್ನು ಸೇವಿಸಿ

ದಾಳಿಂಬೆ ಹಣ್ಣನ್ನು ಸೇವಿಸಿ

ಒಂದು ದಾಳಿಂಬೆಯ ಕಾಳುಗಳಿಂದ ಹಿಂಡಿ ತೆಗೆದ ರಸ ಹಾಗೂ ಸುಮಾರು ಮೂರರಿಂದ ನಾಲ್ಕು ಕಪ್ ನೀರನ್ನು ಇದಕ್ಕೆ ಬೆರೆಸಿ ಒಂದು ಬಾಟಲಿಯಲ್ಲಿ ಸಂಗ್ರಹಿಸಿ. ಈ ನೀರನ್ನು ಇಡಿಯ ದಿನ ಕೊಂಚಕೊಂಚವಾಗಿ ಕುಡಿಯುತ್ತಾ ಖಾಲಿ ಮಾಡಿ. ಗಂಟಲ ಕಿರಿಕಿರಿ ನಿವಾರಿಸಲು ಇದೂ ಒಂದು ಉತ್ತಮ ವಿಧಾನವಾಗಿದೆ.

ಹಸಿಶುಂಠಿ ಬಳಸಿ

ಹಸಿಶುಂಠಿ ಬಳಸಿ

ಬಿಸಿನೀರಿಗೆ ಕೊಂಚ ಹಸಿಶುಂಠಿಯನ್ನು ಹಾಕಿ ಕುದಿಸಿ ಸೋಸಿ ತಯಾರಿಸಿದ ಟೀ ದಿನಕ್ಕೆರಡು ಕಪ್ ನಂತೆ ಕುಡಿಯಿರಿ. ಗಂಟಲ ಬೇನೆಗೆ ತಕ್ಷಣದ ಪರಿಹಾರ ನೀಡಲು ಈ ವಿಧಾನ ಉತ್ತಮವಾಗಿದೆ. ಒಂದು ವೇಳೆ ಕಫ ಗಟ್ಟಿಯಾಗಿದ್ದಂತೆ ಅನ್ನಿಸಿದರೆ ಈ ಟೀ ಯಲ್ಲಿ ಒಂದು ಚಮಚ ಜೇನು ಬೆರೆಸಿ ಕುಡಿಯಿರಿ.

ಲವಂಗ

ಲವಂಗ

ಎರಡು ಲವಂಗವನ್ನು ಬಾಯಿಗೆ ಹಾಕಿಕೊಂಡು ಅದು ಮೆತ್ತಗೆ ಆಗುವ ತನಕ ಜಗಿಯುತ್ತಾ ಇರಿ. ಜಗಿದ ಬಳಿಕ ಇದನ್ನು ನುಂಗಿ. ಗಂಟಲು ನೋವಿಗೆ ಇದು ತುಂಬಾ ಪರಿಣಾಮಕಾರಿ.

ಮೆಂತೆಯ ನೀರು

ಮೆಂತೆಯ ನೀರು

ಒಂದು ಲೀಟರ್ ನೀರಿಗೆ ಎರಡು ದೊಡ್ಡಚಮಚ ಮೆಂತೆಕಾಳುಗಳನ್ನು ಹಾಕಿ ಚಿಕ್ಕ ಉರಿಯಲ್ಲಿ ಕುದಿಸಿ. ನೀರು ಕುದಿಯುತ್ತಿದ್ದಂತೆಯೇ ನೀರಿನ ಬಣ್ಣವನ್ನು ಗಮನಿಸಿ. ಯಾವಾಗ ನೀರಿನಲ್ಲಿ ಮೆಂತೆ ಬಣ್ಣ ಬಿಡತೊಡಗುತ್ತದೆಯೋ ಆಗ ತಕ್ಷಣ ಉರಿ ಆರಿಸಿ ನೀರನ್ನು ಹಾಗೇ ತಣಿಯಲು ಬಿಡಿ. ಈ ನೀರಿನಿಂದ ಬಾಯಿಯನ್ನು ದಿನಕ್ಕೆ ಎರಡು ಬಾರಿ ಅಥವಾ ಮೂರು ಬಾರಿ ಮುಕ್ಕಳಿಸುತ್ತಿರಿ. ವಿಶೇಷವಾಗಿ ಮುಖ ಮೇಲೆತ್ತಿ ಗಂಟಲಿಗೆ ಗಳಗಳ ಮಾಡಿದರೆ ಗಂಟಲ ಬೇನೆ ಶೀಘ್ರವಾಗಿ ಕಡಿಮೆಯಾಗುತ್ತದೆ.

ಗಂಟಲ ಕಿರಿಕಿರಿ ಇದ್ದಾಗ ಇವುಗಳಿಂದ ದೂರವಿರಿ

ಗಂಟಲ ಕಿರಿಕಿರಿ ಇದ್ದಾಗ ಇವುಗಳಿಂದ ದೂರವಿರಿ

* ಹಾಲು ಬೆರೆಸಿದ ಅಥವಾ ಹಾಲಿನಿಂದ ತಯಾರಿಸಿದ ಉತ್ಪನ್ನಗಳನ್ನು ಸೇವಿಸದಿರಿ. ಏಕೆಂದರೆ ಹಾಲು ಕುಡಿದಾಗ ಹಾಲಿನ ಕಣಗಳು ಗಂಟಲಿಗೆ ಅಂಟಿಕೊಂಡು ಕಫವನ್ನು ಇನ್ನಷ್ಟು ಹೆಚ್ಚಿಸುತ್ತದೆ.

* ತಣ್ಣೀರು ಕುಡಿಯದಿರಿ. ಗಂಟಲು ತಣ್ಣಗಾದಷ್ಟೂ ಕಫ ಇನ್ನಷ್ಟು ಗಟ್ಟಿಯಾಗುತ್ತದೆ. ಸಾಧ್ಯವಾದಷ್ಟು ಬಿಸಿನೀರನ್ನೇ ಕುಡಿಯಿರಿ.

* ಧೂಮಪಾನ, ಪರ್ಯಾಯ ಧೂಮಪಾನ, ಏಸಿಯ ಹವೆ ಮೊದಲಾದವು ಕಫವನ್ನು ಇನ್ನಷ್ಟು ಹೆಚ್ಚಿಸುತ್ತವೆ.

* ಎಣ್ಣೆಯಿಂದ ಕರಿದ, ಹುರಿದ ಪದಾರ್ಥಗಳು ಕಫವನ್ನು ಹೆಚ್ಚಿಸುತ್ತವೆ

* ದಿನಕ್ಕೆ ಎರಡು ಬಾರಿಯಾದರೂ ನಾಲಿಗೆಯನ್ನು ಸ್ವಚ್ಛಗೊಳಿಸುವ ಉಪಕರಣದಿಂದ (ಟಂಗ್ ಕ್ಲೀನರ್) ಬಳಸಿ ಸಾಧ್ಯವಾದಷ್ಟು ತಳಭಾಗವನ್ನು ಕೆರೆದು ಸ್ವಚ್ಛಗೊಳಿಸುತ್ತಿರಿ.

* ಬಾಯಿಯನ್ನು ಒಣಗಲು ಬಿಡಬೇಡಿ. ಒಣಗಿದ್ದಷ್ಟೂ ಕಫ ಹೆಚ್ಚಾಗುತ್ತದೆ. ಆದ್ದರಿಂದ ಗಂಟೆಗೊಂದಾದರೂ ಲೋಟ ಬಿಸಿನೀರನ್ನು ಹೀರುತ್ತಿರಿ.

* ಮೂಗು ಸೋರುತ್ತಿದ್ದರೆ ಸರ್ವಥಾ ಒಳಗೆಳೆದುಕೊಳ್ಳಬಾರದು, ಹೊರತೆಗೆದು ನಿವಾರಿಸಬೇಕು.

English summary

Remedies For Sore Throat That Actually Provide Instant Relief

These simple home remedies for sore throat that we have mentioned here will help you get rid of sore throat as fast as it came. Just make use of these simple kitchen ingredients that do work as the best natural remedies for sore throat...
X
Desktop Bottom Promotion