For Quick Alerts
ALLOW NOTIFICATIONS  
For Daily Alerts

ದಿನನಿತ್ಯ ಲಿಂಬೆ ಚಹಾ ಕುಡಿದರೆ, ಆರೋಗ್ಯಕ್ಕೆ ದುಪ್ಪಟ್ಟು ಲಾಭ

By Hemanth
|

ಚಹಾ ಕುಡಿಯುವ ಅಭ್ಯಾಸವು ಪ್ರತಿಯೊಬ್ಬರಿಗೂ ಇರುತ್ತದೆ. ಒಬ್ಬೊಬ್ಬರು ಒಂದೊಂದು ಬಗೆಯ ಚಹಾ ಸೇವನೆ ಮಾಡುವರು. ಇಂದಿನ ದಿನಗಳಲ್ಲಿ ಚಹಾದ ಬಗ್ಗೆ ತಾತ್ಸಾರ ಭಾವನೆ ಬಂದಿರುವ ಕಾರಣದಿಂದಾಗಿ ವಿವಿಧ ರೀತಿಯ ವಿಶೇಷ ಚಹಾಗಳು ಮಾರುಕಟ್ಟೆಗೆ ಬರುತ್ತಾ ಇದೆ. ಗ್ರೀನ್ ಟೀ ಇಂದು ಹೆಚ್ಚು ಜನಪ್ರಿಯವಾಗಿದೆ. ಆದರೆ ನಿಯಮಿತವಾಗಿ ಲಿಂಬೆ ಚಹಾ ಕುಡಿಯುವವರು ಹಲವಾರು ರೀತಿಯ ಆರೋಗ್ಯ ಲಾಭ ಪಡೆದುಕೊಳ್ಳುವರು.

ಲಿಂಬೆ ಚಹಾವು ದೇಹವನ್ನು ಒಳಗಿಂದಲೇ ಶುದ್ಧೀಕರಿಸಿ ದೇಹಕ್ಕೆ ಶಕ್ತಿ ಒದಗಿಸುವುದು. ಲಿಂಬೆ ಚಹಾವು ಬ್ಲ್ಯಾಕ್ ಟೀಯಂತೆ ಸರಳವಾಗಿರುವುದು. ಆದರೆ ಇದಕ್ಕೆ ಲಿಂಬೆ ಸೇರಿಸಲಾಗುವುದು. ಇದರಿಂದ ಹೊಸ ಸ್ವಾದ ಸಿಗುವುದು. ಲಿಂಬೆ ಚಹಾವೆಂದರೆ ಸಾಮಾನ್ಯ ಚಹಾಗೆ ಲಿಂಬೆರಸ ಹಾಗೂ ಸಕ್ಕರೆ ಹಾಕುವುದು. ಹಾಲು ಹಾಕುವುದಿಲ್ಲ.

ಇದಕ್ಕೆ ಹೆಚ್ಚು ಸ್ವಾದ ಬರಲು ಸರಿಯಾದ ಪ್ರಮಾಣದಲ್ಲಿ ಲಿಂಬೆ ಸೇರಿಸಿಕೊಳ್ಳಬೇಕು. ಇದು ತುಂಬಾ ಆರೋಗ್ಯಕಾರಿ ಮತ್ತು ಮಾರುಕಟ್ಟೆಯಲ್ಲಿರುವ ತಂಪು ಪಾನೀಯಕ್ಕಿಂತ ಇದು ತುಂಬಾ ಒಳ್ಳೆಯದು. ಲಿಂಬೆ ಚಹಾದಿಂದ ದೇಹಕ್ಕೆ ಹಲವಾರು ರೀತಿಯ ಲಾಭಗಳು ಇವೆ. ಇದರಿಂದ ಆಗುವ ಕೆಲವೊಂದು ಲಾಭಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ. ಇದನ್ನು ಓದಿದ ಬಳಿಕ ನೀವು ಸಾಮಾನ್ಯ ಚಹಾ ಬಿಟ್ಟು ಲಿಂಬೆ ಚಹಾ ಕುಡಿಯುವುದು ಗ್ಯಾರಂಟಿ...

ದೇಹದ ವಿಷಕಾರಿಯನ್ನು ಹೊರಹಾಕುತ್ತದೆ...

ದೇಹದ ವಿಷಕಾರಿಯನ್ನು ಹೊರಹಾಕುತ್ತದೆ...

ವಿಷವನ್ನು ಹೊರಹಾಕುವ ಲಿಂಬೆಯು ದೇಹವನ್ನು ಶುದ್ಧೀಕರಿಸುವುದು. ವಿಷದಿಂದಾಗಿ ವಿವಿಧ ರೀತಿಯ ಕಾಯಿಲೆಗಳು ಹಾಗೂ ಸೋಂಕು ಬರಬಹುದು. ಲಿಂಬೆಯು ಅದ್ಭುತವಾಗಿ ಶುದ್ಧೀಕರಿಸಿ ಕಾಯಿಲೆ ಹಾಗೂ ಸೋಂಕನ್ನು ತಡೆಗಟ್ಟುವುದು.

ಶೀತ ಹಾಗೂ ಜ್ವರಕ್ಕೆ ಚಿಕಿತ್ಸೆ

ಶೀತ ಹಾಗೂ ಜ್ವರಕ್ಕೆ ಚಿಕಿತ್ಸೆ

ಲೆಮನ್ ಟೀಯಿಂದ ಶೀತ ಹಾಗೂ ಜ್ವರದ ಲಕ್ಷಣಗಳು ದೂರವಾಗುವುದು. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಚಳಿಗಾಲದಲ್ಲಿ ದೇಹವು ಬಿಸಿಯಾಗಿರುವಂತೆ ಮಾಡುವುದು.

ಮಾನಸಿಕ ಪ್ರಯೋಜನಗಳು

ಮಾನಸಿಕ ಪ್ರಯೋಜನಗಳು

ಲಿಂಬೆ ಚಹಾವು ದೇಹದಲ್ಲಿರುವ ವಿಷ ತೆಗೆದುಹಾಕುವ ಕಾರಣದಿಂದ ದೇಹಕ್ಕೆ ಶಕ್ತಿ ಬರುವುದು, ಮನಸ್ಸು ಪ್ರಫುಲ್ಲಿತವಾಗುವುದು ಮತ್ತು ಮಾನಸಿಕ ಸ್ಪಷ್ಟತೆಯು ಸುಧಾರಣೆಯಾಗುವುದು. ಇದು ಲಿಂಬೆ ಚಹಾ ಕುಡಿಯುವ ಅದ್ಭುತ ಲಾಭಗಳು.

ಹೃದಯಕ್ಕೆ ಬಹಳ ಒಳ್ಳೆಯದು...

ಹೃದಯಕ್ಕೆ ಬಹಳ ಒಳ್ಳೆಯದು...

ಲಿಂಬೆ ಚಹಾದಲ್ಲಿ ಫ್ಲಾವನಾಯ್ಡ್ ಗಳು ಸಮೃದ್ಧವಾಗಿದೆ. ಇದು ಉರಿಯುತ ಕಡಿಮೆ ಮಾಡಿ ಅಪಧಮನಿಗಳಲ್ಲಿ ರಕ್ತವು ಹೆಪ್ಪುಗಟ್ಟದಂತೆ ತಡೆಯುವುದು. ಹೃದಯಾಘಾತ ತಡೆಯಲು ಲಿಂಬೆ ಚಹಾವು ಅತ್ಯುತ್ತಮ ವಿಧಾನವಾಗಿದೆ.

 ನೈಸರ್ಗಿಕ ನಂಜುನಿರೋಧಕ

ನೈಸರ್ಗಿಕ ನಂಜುನಿರೋಧಕ

ಲಿಂಬೆಯನ್ನು ನೈಸರ್ಗಿಕ ನಂಜುನಿರೋಧಕವೆಂದು ಕರೆಯಲಾಗುವುದುಉ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ವೈರಲ್ ವಿರೋಧಿ ಗುಣಗಳು ಇವೆ. ನಿಯಮಿತವಾಗಿ ಸೇವನೆ ಮಾಡಿದರೆ ಅದರಿಂದ ಸೋಂಕು ಮತ್ತು ಕಾಯಿಲೆ ಕಡಿಮೆಯಾಗುವುದು. ಲಿಂಬೆ ಚಹಾ ಕುಡಿಯುವುದರ ಮತ್ತೊಂದು ಅತ್ಯುತ್ತಮ ಲಾಭ ಇದಾಗಿದೆ.

ಜೀರ್ಣಕ್ರಿಯೆ ಆರೋಗ್ಯಕ್ಕೆ

ಜೀರ್ಣಕ್ರಿಯೆ ಆರೋಗ್ಯಕ್ಕೆ

ಲಿಂಬೆ ಚಹಾವು ಜೀರ್ಣಕ್ರಿಯೆ ವ್ಯವಸ್ಥೆಯು ಸರಿಯಾಗಿರುವಂತೆ ನೋಡಿಕೊಳ್ಳುವುದು. ಇದರಲ್ಲಿ ಶಮನಕಾರಿ ಗುಣಗಳು ಇವೆ. ದೇಹದಲ್ಲಿರುವ ವಿಷ ಹಾಗೂ ಕಲ್ಮಶವನ್ನು ಇದು ಹೊರಹಾಕುವುದು. ಇದರಲ್ಲಿ ಇರುವಂತಹ ಸಿಟ್ರಿಕ್ ಆಮ್ಲವು ಜೀರ್ಣಕ್ರಿಯೆಗೆ ನೆರವಾಗಿ ಕಿಡ್ನಿ ಕಲ್ಲು ತೆಗೆದುಹಾಕುವುದು.

ಇನ್ಸುಲಿನ್ ಚಟುವಟಿಕೆ ಸುಧಾರಣೆ

ಇನ್ಸುಲಿನ್ ಚಟುವಟಿಕೆ ಸುಧಾರಣೆ

ಗ್ಲೂಕೋಸ್‌ನ್ನು ಸಕ್ಕರೆಯಾಗಿಸಿ ಬಳಿಕ ಶಕ್ತಿಯನ್ನಾಗಿ ಮಾಡಲು ದೇಹದಲ್ಲಿ ಇನ್ಸುಲಿನ್ ಅಗತ್ಯವಿದೆ. ಲಿಂಬೆ ಚಹಾವು ದೇಹದಲ್ಲಿನ ಇನ್ಸುಲಿನ್ ಚಟುವಟಿಕೆ ಹೆಚ್ಚು ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಅಧ್ಯಯನಗಳು ಹೇಳಿವೆ.

ಕ್ಯಾನ್ಸರ್ ವಿರೋಧಿ ಗುಣಗಳು

ಕ್ಯಾನ್ಸರ್ ವಿರೋಧಿ ಗುಣಗಳು

ಲಿಂಬೆ ಚಹಾದಲ್ಲಿ ಆ್ಯಂಟಿಆಕ್ಸಿಡೆಂಟ್ ಗುಣಗಳು ಸಮೃದ್ಧವಾಗಿದೆ. ಈ ಚಹಾದಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಫಾಲಿಫಿನಾಲ್ ಗಳು ಮತ್ತು ವಿಟಮಿನ್ ಸಿ ಲಭ್ಯವಿದೆ. ಇದು ಆರೋಗ್ಯಕಾರಿ ಕೋಶಗಳು ಹಾನಿಗೊಳಗಾಗುವುದನ್ನು ತಡೆದು ಕ್ಯಾನ್ಸರ್ ಕೋಶಗಳು ಬೆಳವಣಿಗೆಯಾಗದಂತೆ ತಡೆಯುವುದು.

English summary

reasons why-you-should-drink-lemon-tea-every-day

Are you one of those who drinks lemon tea regularly? Then, you're seriously gaining a host of health benefits. Lemon tea is known to cleanse your body from within and also refreshes and energizes you. Lemon tea is nothing but a tea as simple as black tea, but it's just that lemon is added to this to get that unique flavour. Lemon tea just contains hot tea with lemon juice and sugar.
Story first published: Monday, September 18, 2017, 19:16 [IST]
X
Desktop Bottom Promotion