ಅರಿಶಿನದ ಜೊತೆ ಕರಿಮೆಣಸು ಬೆರೆತರೆ ಅದರ ಶಕ್ತಿಯೇ ಬೇರೆ...

By: Divya pandith
Subscribe to Boldsky

ಅರಿಶಿನ ಮತ್ತು ಕರಿಮೆಣಸು (ಕಾಳು ಮೆಣಸು) ಎರಡು ಔಷಧೀಯ ಕ್ಷೇತ್ರದಲ್ಲಿ ತನ್ನದೇ ಆದ ಶ್ರೇಷ್ಠತೆಯನ್ನು ಪಡೆದುಕೊಂಡಿವೆ. ಇದರಲ್ಲಿರುವ ರೋಗ ನಿರೋಧಕ ಶಕ್ತಿಯಿಂದ ಅನೇಕ ಕಾಯಿಲೆಗಳನ್ನು ಗುಣಪಡಿಸಬಹುದು. ಇತ್ತೀಚೆಗೆ ಸಾಮಾನ್ಯ ಕಾಯಿಲೆಯಲ್ಲಿ ಒಂದಾದಂತಹ ಕ್ಯಾನ್ಸರ್‌ಗಳನ್ನು ಸಹ ಶಮನಗೊಳಿಸುವ ಶಕ್ತಿಯನ್ನು ಇವು ಪಡೆದುಕೊಂಡಿವೆ. ಅಲ್ಲದೆ ಚಿಕ್ಕಪುಟ್ಟ ನೆಗಡಿ, ಕೆಮ್ಮು, ಉರಿಯೂತ, ಗ್ಯಾಸ್ ಮತ್ತು ತ್ವಚೆಯ ಆರೈಕೆಗೆ ಗಮನಾರ್ಹ ಔಷಧೀಯ ವಸ್ತು.

ಲಿಂಬೆ, ಉಪ್ಪು, ಕರಿಮೆಣಸು-ಈ ತ್ರಿಮೂರ್ತಿಗಳಿಗೆ ನಮ್ಮದೊಂದು ಸಲಾಂ!

ಅರಿಶಿನ ಮತ್ತು ಕಾಳು ಮೆಣಸು ಎರಡನ್ನು ಸೇರಿಸಿದ ಔಷಧವು ಹೆಚ್ಚು ಶಕ್ತಿಯುತವಾಗಿರುತ್ತದೆ. ಕಾಳು ಮೆಣಸಿನಲ್ಲಿರುವ ಪೈಪರಿನ್ ಅಥವಾ ಪೈಪರೈನ್ ಮತ್ತು ಅರಿಶಿನದ ಒಳಗಿರುವ ರಾಸಾಯನಿಕ ಸಂಯುಕ್ತ ಸೇರಿದಾಗ ಅದ್ಭುತವಾದ ಶಕ್ತಿ ಬಿಡುಗಡೆಯಾಗುತ್ತದೆ. ಇವುಗಳ ಸಂಯುಕ್ತದಿಂದ ಆಹಾರವೂ ಅದ್ಭುತ ರುಚಿಯಿಂದ ಕೂಡಿರುತ್ತವೆ, ಹಾಗೂ ಆರೋಗ್ಯವೂ ಸುಧಾರಣೆಯಾಗುತ್ತದೆ. ಹಾಗಾಗಿ ದಿನನಿತ್ಯದ ಅಡುಗೆಯಲ್ಲಿ ನಿಯಮಿತವಾಗಿ ಇವುಗಳನ್ನು ಬಳಸಿಕೊಂಡಾಗ ಸಾಹಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆದು ಕೊಳ್ಳಬಹುದು....

ಜೈವಿಕ ಲಭ್ಯತೆ ಕಡಿಮೆ

ಜೈವಿಕ ಲಭ್ಯತೆ ಕಡಿಮೆ

ಅರಿಶಿನದಿಂದ ಆಹಾರವೂ ವೇಗವಾಗಿ ಚಯಾಪಚಯಗೊಳ್ಳುತ್ತದೆ. ಹಾಗೆಯೇ ದೇಹದಿಂದಲೂ ಹೊರಹಾಕಲು ಸಹಾಯ ಮಾಡುತ್ತದೆ. ದೇಹಕ್ಕೆ ಅನೇಕ ಆರೋಗ್ಯಕರ ಶಕ್ತಿಯನ್ನು ನೀಡುತ್ತದೆ. ಆದರೂ ಜೈವಿಕ ಲಭ್ಯತೆಯ ವಿಚಾರವಾಗಿ ತೆಗೆದುಕೊಂಡರೆ ಸ್ವಲ್ಪ ಕಡಿಮೆ ಎಂದು ಹೇಳಬಹುದು. ಆಹಾರದಲ್ಲಿ ಅರಿಶಿನದ ಪ್ರಮಾಣ ಹೆಚ್ಚಿದ್ದರೂ ಸಹ ದೇಹಕ್ಕೆ ಸಂಪೂರ್ಣ ಪ್ರಯೋಜನ ಸಿಗುವುದಿಲ್ಲ.

ಅರಿಶಿನದ ಸಹಾಯಕ್ಕೆ ಕಾಳುಮೆಣಸು

ಅರಿಶಿನದ ಸಹಾಯಕ್ಕೆ ಕಾಳುಮೆಣಸು

ಕಾಳುಮೆಣಸು ಮೆಟಬೊಲೈಸಿಂಗ್ ಕರ್ಕ್ಯುಮಿನ್‌ನಿಂದ ಯಕೃತ್‍ನ್ನು ನಿಧಾನಗೊಳಿಸುತ್ತದೆ. ಹೊಟ್ಟೆಯಲ್ಲಿ ಕರ್ಕ್ಯುಮಿನ್‌ ಉಳಿದುಕೊಳ್ಳುವ ಸಮಯವನ್ನು ಹೆಚ್ಚಿಸುವ ಮೂಲಕ ಚಯಾಪಚಯ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ. ತ್ವರಿತವಾಗಿ ಚಯಾಪಚಯಗೊಳ್ಳುವ ಕಿಣ್ವಗಳನ್ನು ತಡೆಯುತ್ತದೆ. ಅಲ್ಲದೆ ಆರೋಗ್ಯಕರ ಅಂಶವನ್ನು ದೇಹ ಸಂಪೂರ್ಣವಾಗಿ ಹೀರಿಕೊಳ್ಳುವಂತೆ ಮಾಡುತ್ತದೆ.

ನರಗಳ ರಕ್ಷಣೆ ಮಾಡುವುದು

ನರಗಳ ರಕ್ಷಣೆ ಮಾಡುವುದು

ಅರಿಶಿನವು ಒತ್ತಡವನ್ನು ಕಡಿಮೆ ಮಾಡುವ ಮೂಲಕ ನರಗಳ ಆರೋಗ್ಯವನ್ನು ಕಾಪಾಡುವುದು. ಅರಿಶಿನದಲ್ಲಿರುವ ಪಾಲಿಫೀನಾಲ್ ಕಕ್ರ್ಯುಮಿನ್ ಗುಣವೇ ಸಹಾಯ ಮಾಡುವುದು. ಆದರೆ ಇದರಲ್ಲಿರುವ ಕಳಪೆ ಮಟ್ಟದ ಜೈವಿಕ ಲಭ್ಯತೆಯಿಂದ ಅರಿಶಿನ ಸಂಪೂರ್ಣವಾಗಿ ಕಾರ್ಯನಿರ್ವಹಿಸದು. ಅರಿಶಿನದ ಜೊತೆಗೆ ಕರಿಮೆಣಸನ್ನು ಸೇರಿಸಿದಾಗ ನ್ಯೂರೊಟಾಕ್ಸಿನ್ ಮತ್ತು 3-ನೈಟ್ರೋಪ್ರೋಪಿಯಾನಿಕ್ ಆಮ್ಲ ಉತ್ಪತ್ತಿಯಾಗುವುದು. ಇವು ನರಗಳ ಮೇಲೆ ಉಂಟಾಗುವ ಹಾನಿಕಾರಕ ಜೀವಾಣುಗಳ ಪರಿಣಾಮವನ್ನು ತಡೆಯುತ್ತವೆ ಎಂದು ಹೇಳಲಾಗುತ್ತದೆ.

ಮೂಳೆಗಳ ಆರೋಗ್ಯ ಕಾಪಾಡುವುದು

ಮೂಳೆಗಳ ಆರೋಗ್ಯ ಕಾಪಾಡುವುದು

ಕೆಲವೊಮ್ಮೆ ಮೂಳೆಯಲ್ಲಿರುವ ಅಂಗಾಂಶಗಳು ಒಡೆಯುತ್ತವೆ. ಅಲ್ಲದೆ ಅದರಲ್ಲಿರುವ ಖನಿಜ ಮತ್ತು ಕ್ಯಾಲ್ಸಿಯಂಗಳು ರಕ್ತಕ್ಕೆ ಸೇರಿಕೊಳ್ಳುತ್ತವೆ. ಇದರಿಂದ ಆಸ್ಟಿಯೊಪೊರೋಸಿಸ್ ನಂತಹ ಸಮಸ್ಯೆ ಉಂಟಾಗುವುದು. ಜರ್ನಲ್ ಆಫ್ ಎಂಡೋಡಾಂಟಿಕ್ಸ್‍ನಲ್ಲಿ ಪ್ರಕಟವಾದ ಅಧ್ಯಯನಗಳ ಪ್ರಕಾರ ಮೆಣಸಿನಕಾಳು ಮಿಶ್ರಿತ ಅರಿಶಿನ ಬಳಕೆಯಿಂದ ಮೂಳೆ ಸಂಬಂಧಿ ಕಾಯಿಲೆಗಳು ಗುಣಮುಖವಾಗುತ್ತದೆ ಎಂದು ತಿಳಿಸಿದೆ.

English summary

reasons why you should always have turmeric with black pepper

Turmeric and black pepper are two accomplished giants that are great on their own. Turmeric has numerous antimicrobial and anti-inflammatory properties.
Subscribe Newsletter