ಅಧ್ಯಯನ ವರದಿ: ಬ್ರಾ ಧರಿಸುವುದರಿಂದ ಕೂಡ ಮಹಿಳೆಯರಿಗೆ ತೊಂದರೆ ಇದೆ!

By: Deepu
Subscribe to Boldsky

ಮಹಿಳೆಯರ ಸೌಂದರ್ಯ ಎದ್ದು ಕಾಣುವಂತೆ ಮಾಡುವ ಅವರ ದೇಹದ ಪ್ರಮುಖ ಅಂಗವಾಗಿರುವ ಸ್ತನಗಳ ಬೆಳವಣಿಗೆ ಸಣ್ಣ ವಯಸ್ಸಿನಲ್ಲೇ ಆರಂಭವಾಗುತ್ತದೆ. ಆದರೆ ಈಗಿನ ಕಾಲದಲ್ಲಿ ಹೆಚ್ಚಾಗಿ ಮಹಿಳೆಯರು ಬ್ರಾ ಧರಿಸುವ ಕಾರಣದಿಂದ ಸ್ತನಗಳ ಬೆಳವಣಿಗೆ ಸರಿಯಾಗಿ ಆಗುತ್ತಿಲ್ಲವೆನ್ನಲಾಗಿದೆ.

ಇತ್ತೀಚಿನ ಅಧ್ಯಯನವೊಂದರ ಪ್ರಕಾರ ವಿಜ್ಞಾನಿಗಳು ಕಂಡುಕೊಂಡಿರುವ ವಿಚಾರವೆಂದರೆ ಬ್ರಾ ಧರಿಸದೆ ಇದ್ದರೆ ಅದು ಸ್ತನಗಳ ಬೆಳವಣಿಗೆ ಮತ್ತು ಅಂಗಾಂಶಗಳಿಗೆ ನೆರವಾಗುವುದು. ಸಣ್ಣ ವಯಸ್ಸಿನಲ್ಲೇ ಬ್ರಾ ಧರಿಸಲು ಆರಂಭಿಸುವ ಕಾರಣದಿಂದ ಅದು ಎದೆಗೆ ಯಾವುದೇ ನೆರವು ನೀಡುವುದಿಲ್ಲ. ಇದರಿಂದ ಬೆನ್ನು ನೋವು ಬರಬಹುದು ಮತ್ತು ಸ್ತನವು ಕುಗ್ಗಬಹುದು.

ದಿನನಿತ್ಯ ಬ್ರಾ ಧರಿಸಿದರೆ, ಅಪಾಯ ಬೆನ್ನೇರಿ ಕಾಡಲಿದೆ ಎಚ್ಚರ!

ಬ್ರಾ ಧರಿಸದರೆ ಇರುವಂತಹವರು ಸೂಕ್ಷ್ಮ ಸ್ತನಗಳನ್ನು ಹೊಂದಿರುವರು ಎಂದು ಅಧ್ಯಯನಗಳು ಹೇಳಿವೆ. ಬ್ರಾ ಧರಿಸುವುದರಿಂದ ರಕ್ತಸಂಚಾರಕ್ಕೆ ತೊಂದರೆಯಾಗುವುದು ಮತ್ತು ಸ್ತನದ ಬೆಳವಣಿಗೆ ತಡೆಯುವುದು. ಬ್ರಾ ಧರಿಸದೆ ಇರುವಂತಹ ಹದಿಹರೆಯದ ಮಹಿಳೆಯರಲ್ಲಿ ಕಾಲಜನ್ ಉತ್ಪತ್ತಿ ಮತ್ತು ಸ್ಥಿತಿಸ್ಥಾಪಕತ್ವವು ಹೆಚ್ಚಾಗುವುದು. ಇದರಿಂದ ಸ್ತನದ ಬೆಳವಣಿಗೆಯು ಉತ್ತಮ ರೀತಿಯಲ್ಲಿ ಆಗುವುದು. ಬ್ರಾ ಧರಿಸದೆ ಇರಲು ಹಲವಾರು ರೀತಿಯ ಕಾರಣಗಳು ನಿಮ್ಮ ಮುಂದಿದೆ. ಇದನ್ನು ತಿಳಿದುಕೊಳ್ಳಲು ಮುಂದೆ ಓದುತ್ತಾ ಸಾಗಿ...

ಬ್ರಾ ಉತ್ತಮ ಸ್ತನ ರೂಪವನ್ನು ಹಿಡಿದಿಡಿವುದು

ಬ್ರಾ ಉತ್ತಮ ಸ್ತನ ರೂಪವನ್ನು ಹಿಡಿದಿಡಿವುದು

ಯಾವಾಗಲೂ ಬ್ರಾ ಧರಿಸುವ ಕಾರಣದಿಂದ ಸ್ತನದ ಸ್ನಾಯುಗಳು ದುರ್ಬಲವಾಗಬಹುದು ಮತ್ತು ಸ್ತನವು ಕುಗ್ಗಬಹುದು. ಬ್ರಾ ಧರಿಸುವುದರಿಂದ ನೈಸರ್ಗಿಕ ಬೆಂಬಲದ ಕ್ರಿಯೆಗಳು ನಿಲ್ಲುವುದು. ಸ್ತನಗಳು ತೆಳ್ಳಗಿನ ಸ್ಥಿತಿಸ್ಥಾಪಕ ಚರ್ಮದಿಂದ ಆವರಿಸಿದೆ ಮತ್ತು ಇದಕ್ಕೆ ಅಸ್ಥಿರಜ್ಜುಗಳು ಬೆಂಬಲವಾಗಿದೆ. ಯಾವಾಗಲೂ ಬ್ರಾ ಧರಿಸುವ ಕಾರಣದಿಂದ ಅಸ್ಥಿರಜ್ಜುಗಳು ಸರಿಯಾಗಿ ಕಾರ್ಯನಿರ್ವಹಿಸದೆ ತೊಂದರೆಯಾಗಬಹುದು. ಯಾವಾಗಲೂ ಬ್ರಾ ಧರಿಸುವುದರಿಂದ ಹೀಗೆ ಆಗುವುದು.

ಬೆನಿಗ್ನ್ ಫೈಬ್ರೋಸಿಸ್ಟಿಕ್ ಲ್ಯಾಂಪ್ಸ್ ಮತ್ತು ಬ್ರಾ ಮಧ್ಯೆ ಸಂಪರ್ಕ

ಬೆನಿಗ್ನ್ ಫೈಬ್ರೋಸಿಸ್ಟಿಕ್ ಲ್ಯಾಂಪ್ಸ್ ಮತ್ತು ಬ್ರಾ ಮಧ್ಯೆ ಸಂಪರ್ಕ

ಬ್ರಾ ಮತ್ತು ಬೆನ್ನಿಗ್ನ್ ಫೈಬ್ರೋಸಿಸ್ಟಿಕ್ ಎನ್ನುವ ಸಮಸ್ಯೆ ಮಧ್ಯೆ ಸಾಮಾನ್ಯ ಸಂಬಂಧವಿದೆ ಎನ್ನುವುದು ಅಧ್ಯಯನಗಳಿಂದ ತಿಳಿದುಬಂದಿದೆ. ಬೆನಿಗ್ನ್ ಫೈಬ್ರೋಸಿಸ್ಟಿಕ್ ಲ್ಯಾಂಪ್ಸ್ ಕಂಡುಬಂದ ಶೇ.90ರಷ್ಟು ಮಹಿಳೆಯರು ಬ್ರಾ ಧರಿಸುವುದನ್ನು ನಿಲ್ಲಿಸಿದ ಬಳಿಕ ಸಮಸ್ಯೆ ಸುಧಾರಣೆಯಾಗಿದೆ.

ಮಹಿಳೆಯರೇ ಬ್ರಾ ಕೊಳ್ಳುವಾಗ ಮತ್ತು ಧರಿಸುವಾಗ ಇರಲಿ ಎಚ್ಚರ!

ಬ್ರಾ ಪಟ್ಟಿಗಳಿಂದ ಬೆನ್ನು ಮತ್ತು ಭುಜ ನೋವು

ಬ್ರಾ ಪಟ್ಟಿಗಳಿಂದ ಬೆನ್ನು ಮತ್ತು ಭುಜ ನೋವು

ಅಧ್ಯಯನಗಳಿಗಾಗಿ ಮಹಿಳೆಯರಿಗೆ ಬ್ರಾ ಧರಿಸುವುದನ್ನು ನಿಲ್ಲಿಸಲು ಸೂಚಿಸಲಾಯಿತು ಮತ್ತು ಅವರ ಸ್ನಾಯುಗಳನ್ನು ವಿಶ್ಲೇಷಿಸಲಾಗಿದೆ. ಶೇ.79ರಷ್ಟು ಮಹಿಳೆಯರು ತಮ್ಮ ಸ್ನಾಯುಗಳಲ್ಲಿ ಧನಾತ್ಮಕ ಅನುಭವ ಪಡೆದಿದ್ದಾರೆ.

ಬ್ರಾ ಧರಿಸದೆ ಇರುವುದು ನೈಸರ್ಗಿಕ ಮಸಾಜ್

ಬ್ರಾ ಧರಿಸದೆ ಇರುವುದು ನೈಸರ್ಗಿಕ ಮಸಾಜ್

ಬ್ರಾ ಧರಿಸದೆ ಇದ್ದರೆ ನೀವು ನಡೆಯುವಾಗ ಸ್ತನಗಳಿಗೆ ನೈಸರ್ಗಿಕ ಮಸಾಜ್ ಸಿಗುವುದು. ಇದರಿಂದ ಸ್ನಾಯುಗಳ ಒತ್ತಡವು ಕಡಿಮೆಯಾಗಿ ರಕ್ತಸಂಚಾರವು ಸರಿಯಾಗಿ ಆಗುವುದು. ಇದು ಎಲ್ಲಾ ರೀತಿಯ ಉರಿಯೂತ ಕಡಿಮೆ ಮಾಡುವುದು.

ಸ್ತನಗಳಿಗೆ ಶಕ್ತಿ ನೀಡುವುದು

ಸ್ತನಗಳಿಗೆ ಶಕ್ತಿ ನೀಡುವುದು

ಎದೆಯು ಗುರುತ್ವದೊಂದಿಗೆ ಹೋರಾಟ ನಡೆಸುತ್ತಾ ಇರುವಾಗ ಎದೆಯ ಸ್ನಾಯುಗಳು ಕಠಿಣವಾಗಿ ಕೆಲಸ ಮಾಡುವುದು ಮತ್ತು ಇದರಿಂದ ಸ್ತನಗಳಿಗೆ ಶಕ್ತಿ ಸಿಗುವುದು. ಇದರಿಂದ ಸ್ತನಗಳ ಗಾತ್ರವು ಹೆಚ್ಚುವುದು. ಬ್ರಾ ಧರಿಸದೆ ಇರಲು ಇದು ಪ್ರಮುಖ ಕಾರಣವಾಗಿದೆ.

ಆರೋಗ್ಯಕರ ಕೋಶಗಳಿಗೆ ಉತ್ತೇಜನ

ಆರೋಗ್ಯಕರ ಕೋಶಗಳಿಗೆ ಉತ್ತೇಜನ

ಬ್ರಾ ಧರಿಸುವುದರಿಂದ ಸ್ತನಗಳಲ್ಲಿ ಆರೋಗ್ಯಕರ ಕೋಶಗಳು ಬೆಳೆಯಲು ಅಡ್ಡಿಯಾಗುವುದು ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಆರೋಗ್ಯಕರ ಸ್ತನದ ಕೋಶಗಳು ಅತೀ ಅಗತ್ಯ. ಇದರಿಂದ ಸ್ತನದ ಕ್ಯಾನ್ಸರ್ ಬರುವುದು ತಪ್ಪುತ್ತದೆ.

English summary

Reasons why you must ditch the bras for healthier breasts

Scientists have recently found out that going braless helps promote more tone and also supports the breast tissue. Wearing a bra from a young age does not help support the chest, it may at times cause back pain and also cause breast sagging. Research has suggested that women who did not wear bras had perkier breasts. Bras are known to hamper the blood circulation and also reduce the breast tone overtime.
Subscribe Newsletter