ಮಹಿಳೆಯರೇ ಶ್! ಗುಪ್ತಾಂಗದ ಸೋಂಕಿನ ಬಗ್ಗೆ ಎಚ್ಚರವಿರಲಿ!

By: Arshad
Subscribe to Boldsky

ಶಿಲೀಂಧ್ರದ ಸೋಂಕು ಪ್ರಥಮ ಬಾರಿಗೆ ಉಂಟಾದಾಗಲೇ ಇದು ಎಷ್ಟು ಕಿರಿಕಿರಿಯುಂಟು ಮಾಡುತ್ತದೆ ಎಂದು ಎಲ್ಲರಿಗೂ ಗೊತ್ತಾಗಿರುತ್ತದೆ. ಆದರೆ ಎಷ್ಟೇ ಸ್ವಚ್ಛತೆಗೆ ಆದ್ಯತೆ ನೀಡಿದರೂ ಮತ್ತೆ ಮತ್ತೆ ಮರುಕಳಿಸುವುದು ಮಾತ್ರ ಚಿಂತೆಗೆ ಕಾರಣವಾಗಿದೆ. ಒಂದು ವೇಳೆ ನಿಮಗೂ ಈ ಸೋಂಕು ಆಗಾಗ ಮರುಕಳಿಸುತ್ತಾ ಇದ್ದರೆ ಈ ಲೇಖನ ನಿಮಗೆ ಅತ್ಯಂತ ಮಹತ್ವದ್ದಾಗಿದೆ. ಆರೋಗ್ಯ ವಿಭಾಗ ನೀಡಿರುವ ಮಾಹಿತಿಯ ಪ್ರಕಾರ 75% ರಷ್ಟು ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ ಕನಿಷ್ಟ ಒಂದು ಬಾರಿಯಾದರೂ ಈ ಸೋಂಕಿಗೆ ಒಳಗಾಗಿರುತ್ತಾರೆ.

40%-45%ರಷ್ಟು ಮಹಿಳೆಯರು ಎರಡಕ್ಕಿಂತ ಹೆಚ್ಚು ಬಾರಿ ಈ ಸೋಂಕಿಗೆ ಒಳಗಾಗಿರುತ್ತಾರೆ. 5% ರಷ್ಟು ಮಹಿಳೆಯರಿಗೆ ಈ ಸೋಂಕು ಸತತವಾಗಿ ಕಾಡುತ್ತದೆ. ಈ ಸ್ಥಿತಿ ಅಹಿತಕರವಾಗಿದ್ದು ಭಾರೀ ಮುಜುಗರಕ್ಕೂ ಕಾರಣವಾಗಬಹುದು. ವೈದ್ಯಕೀಯ ಭಾಷೆಯಲ್ಲಿ ಈ ತೊಂದರೆಯನ್ನು vulvovaginal candidiasis (RVCC) ಎಂದು ಕರೆಯುತ್ತಾರೆ. 

ಅನಿಯಮಿತವಾದ ಯೋನಿ ಸ್ರವಿಸುವಿಕೆಗೆ ಕಾರಣವಾಗುವ 10 ಬಗೆಯ ಜೀವನ ಶೈಲಿಗಳು

ಈ ತೊಂದರೆ ಎದುರಾದರೆ ಗುಪ್ತಾಂಗದ ಭಾಗದಲ್ಲಿ ಭಾರೀ ತುರಿಕೆ, ನಂಜು ತುಂಬಿಕೊಂಡು ಒಣದಾಗಿರುವುದು ಹಾಗೂ ಸಮಾಗಮದ ಸಮಯದಲ್ಲಿ ಭಾರೀ ನೋವು ಹಾಗೂ ಒಣಗಿರುವಂತೆ ಅನ್ನಿಸುವುದು ಈ ತೊಂದರೆಯ ಪ್ರಮುಖ ಲಕ್ಷಣಗಳಾಗಿವೆ. ಒಂದು ವೇಳೆ ಗುಪ್ತಾಂಗದ ಸ್ರಾವ ಮೊಸರಿನಂತಿದ್ದು ಗಾಢವಾಗಿದ್ದರೆ ಈ ಸೋಂಕು ತಗಲಿರುವ ಸಾಧ್ಯತೆ ಹೆಚ್ಚು. ಈ ಸೋಂಕಿಗೆ ಕೆಲವಾರು ಕಾರಣಗಳಿವೆ. ಹೆಚ್ಚಿನ ಸಂದರ್ಭಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡದಿರುವುದು ಪ್ರಮುಖ ಕಾರಣವಾಗಿದೆ. ಅರಿವೇ ಇಲ್ಲದೆ ನಿಮ್ಮ ಯಾವುದೋ ಅಭ್ಯಾಸ ಈ ಸತತವಾಗಿ ಆವರಿಸುವ ಸೋಂಕಿಗೆ ಕಾರಣವಾಗಬಹುದು. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೋಡೋಣ...

ಸಮಾಗಮ (ವಿಶೇಷವಾಗಿ ಹೊಸ ಸಂಗಾತಿಯೊಂದಿಗೆ)

ಸಮಾಗಮ (ವಿಶೇಷವಾಗಿ ಹೊಸ ಸಂಗಾತಿಯೊಂದಿಗೆ)

ಹೊಸ ಸಂಗಾತಿಯೊಂದಿಗಿನ ಸಮಾಗಮ ಶಿಲೀಂಧ್ರದ ಸೋಂಕಿಗೆ ಪ್ರಮುಖ ಕಾರಣವಾಗಿದೆ. ಪ್ರತಿ ಮಹಿಳೆಯರ ಗುಪ್ತಾಂಗದಲ್ಲಿ ಸೂಕ್ಷ್ಮ ಬ್ಯಾಕ್ಟೀರಿಯಾಗಳಿದ್ದು ಇವು ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತವೆ. ಆದರೆ ಹೊಸ ಸಂಗಾತಿಯೊಂದಿಗಿನ ಸಮಾಗಮ ಈ ಬ್ಯಾಕ್ಟೀರಿಯಾಗಳ ಸಮತೋಲನ (vaginal flora) ಏರುಪೇರಾಗುತ್ತದೆ. ಯಾವಾಗ ಈ ಸಮತೋಲನ ಏರುಪೇರಾಯಿತೋ, ಆಗ ಶಿಲೀಂಧ್ರದ ಸೋಂಕು ಆವರಿಸುವ ಸಾಧ್ಯತೆ ಹೆಚ್ಚು.

ಗುಪ್ತಾಂಗದ ಒಳಭಾಗವನ್ನು ಸ್ವಚ್ಛಗೊಳಿಸುವುದು

ಗುಪ್ತಾಂಗದ ಒಳಭಾಗವನ್ನು ಸ್ವಚ್ಛಗೊಳಿಸುವುದು

ಮಹಿಳೆಯ ಗುಪ್ತಾಂಗಕ್ಕೆ ವಿಶೇಷ ಶಕ್ತಿಯಿದೆ. ಅಂದರೆ ತನ್ನನ್ನು ತಾನೇ ಸ್ವಚ್ಛಗೊಳಿಸುವ ಕ್ಷಮತೆ. ಆದ್ದರಿಂದ ನಿಸರ್ಗದ ಈ ಕೆಲಸವನ್ನು ತನ್ನಿಂತಾನೇ ಮಾಡಲು ಬಿಡುವುದೇ ಉತ್ತಮ. ಬದಲಿಗೆ ಬಲವಂತವಾಗಿ ನೀರಿನಿಂದ ಗುಪ್ತಾಂಗದ ಒಳಭಾಗವನ್ನು ಸ್ವಚ್ಛಗೊಳಿಸಲು ಯತ್ನಿಸಿದರೆ (douching) ಇದು ಶಿಲೀಂಧ್ರದ ಸೋಂಕಿಗೆ ಕಾರಣವಾಗಬಹುದು. ಸತತವಾಗಿ ಶಿಲೀಂಧ್ರದ ಸೋಂಕಿಗೆ ಈ ಕ್ರಿಯೆ ಪ್ರಮುಖ ಕಾರಣವಾಗಿದೆ.

ಮಹಿಳೆಯರ ಜನನಾಂಗ ಸಮಸ್ಯೆಗೆ ಸೂಕ್ತ ಸಲಹೆಗಳು

ಆಂಟಿ ಬಯೋಟಿಕ್‌ಗಳು

ಆಂಟಿ ಬಯೋಟಿಕ್‌ಗಳು

ಯಾವುದೋ ತೊಂದರೆಗೆ ನೀಡಲಾಗುವ ಆಂಟಿ ಬಯೋಟಿಕ್ ಔಷಧಿಗಳು ಗುಪ್ತಾಂಗದಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲಬಹುದು ಹಾಗೂ ಈ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಅಡ್ಡಿಯೂ ಆಗಬಹುದು. ಆದ್ದರಿಂದ ನಿಮಗೆ ಆಂಟಿ ಬಯೋಟಿಕ್ ಔಷಧಿಗಳನ್ನು ನೀಡಿದ ವೈದ್ಯರಿಗೆ ಈ ಬಗ್ಗೆ ಸ್ಪಷ್ಟವಾಗಿ ತಿಳಿಸುವುದು ಅಗತ್ಯ. ಮುಂದಿನ ಕ್ರಮವನ್ನು ವೈದ್ಯರೇ ನಿರ್ಧರಿಸುತ್ತಾರೆ.

ಬಿಗಿಯಾದ ನೈಲಾನ್ ಒಳ ಉಡುಪುಗಳು

ಬಿಗಿಯಾದ ನೈಲಾನ್ ಒಳ ಉಡುಪುಗಳು

ಸಿಂಥೆಟಿಕ್ ಅಥವಾ ನೈಲಾನ್ ನಿಂದ ತಯಾರಾದ ಬಿಗಿಯಾದ ಒಳ ಉಡುಪುಗಳನ್ನು ತೊಡುವ ಮೂಲಕ ಹೆಚ್ಚು ಬೆವರಲು ಕಾರಣವಾಗುತ್ತದೆ. ಇದು ಬಾಕ್ಟೀರಿಯಾಗಳು ಅಪಾರ ಸಂಖ್ಯೆಯಲ್ಲಿ ವೃದ್ಧಿಯಾಗಲು ಕಾರಣವಾಗುತ್ತದೆ. ಆದ್ದರಿಂದ ಒಳ ಉಡುಪುಗಳು ಹತ್ತಿಯಿಂದ ತಯಾರಾದ ಹಾಗೂ ಅತಿ ಬಿಗಿಯಾಗಿರದೇ ಶರೀರಕ್ಕೆ ಸೂಕ್ತವಾದ ಅಳತೆಯದ್ದನ್ನೇ ಧರಿಸಬೇಕು. ಇವುಗಳ ಮೂಲಕ ಗಾಳಿ ಸರಾಗವಾಗಿ ಆಡುವ ಮೂಲಕ ಸೋಂಕು ಉಂಟಾಗದಂತೆ ಕಾಪಾಡಬಹುದು.

ಮಧುಮೇಹ

ಮಧುಮೇಹ

ಒಂದು ವೇಳೆ ನೀವು ಮಧುಮೇಹಿಯಾಗಿದ್ದರೆ ನಿಮ್ಮ ರಕ್ತದ ಸಕ್ಕರೆಯ ಮಟ್ಟವೂ ಗುಪ್ತಾಂಗದಲ್ಲಿ ಸೋಂಕು ಉಂಟಾಗಲು ಕಾರಣವಾಗಬಹುದು. ಸಕ್ಕರೆ ಹೆಚ್ಚಿರುವ ಸ್ಥಳಗಳಲ್ಲಿ ಶಿಲೀಂಧ್ರದ ಬೆಳವಣಿಗೆ ಅತಿ ಶೀಘ್ರವಾಗಿ ಆಗುತ್ತದೆ. ವಿಶೇಷವಾಗಿ ಒಂದು ವೇಳೆ ನೀವು ಟೈಪ್-2 ಮಧುಮೇಹದ ರೋಗಿಯಾಗಿದ್ದರೆ ನಿಮಗೆ ಶಿಲೀಂಧ್ರದ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚು.

ಗರ್ಭ ನಿರೋಧಕ ಗುಳಿಗೆಗಳು

ಗರ್ಭ ನಿರೋಧಕ ಗುಳಿಗೆಗಳು

ಗರ್ಭನಿರೋಧಕವಾಗಿ ಬಳಸಲಾಗುವ ಗುಳಿಗೆ, ಜೆಲ್, ಫೋಮ್ ಹಾಗೂ ಕ್ರೀಮುಗಳು, ಕಾಂಡೋಮುಗಳ ಮೇಲೆ ಸವರಲಾಗುವ ದ್ರವ ಮೊದಲಾದವು ಯೋನಿಯಲ್ಲಿರುವ ಆರೋಗ್ಯಕರ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತವೆ. ಈಗ ಶಿಲೀಂಧ್ರದ ಸೋಂಕು ಎದುರಾಗುವ ಸಾಧ್ಯತೆ ಹೆಚ್ಚುತ್ತದೆ. ವಿಶೇಷವಾಗಿ ಈಸ್ಟ್ರೋಜೆನ್ ಅಂಶವಿರುವ ಗರ್ಭನಿರೋಧಕ ಗುಳಿಗೆಗಳ ಸೇವನೆಯೂ ಶಿಲೀಂಧ್ರದ ಸೋಂಕು ಹೆಚ್ಚಿಸುವ ಸಾಧ್ಯತೆ ಹೆಚ್ಚುತ್ತದೆ.

ರೋಗ ನಿರೋಧಕ ಶಕ್ತಿ ಕುಂದುವುದು

ರೋಗ ನಿರೋಧಕ ಶಕ್ತಿ ಕುಂದುವುದು

ದೇಹವನ್ನು ಹಲವಾರು ಕಾಯಿಲೆಗಳಿಂದ ರೋಗ ನಿರೋಧಕ ಶಕ್ತಿ ಸತತವಾಗಿ ರಕ್ಷಿಸುತ್ತದೆ. ಇದರಲ್ಲಿ ಶಿಲೀಂಧ್ರದ ಸೋಂಕು ಸಹಾ ಒಂದು. ಆದ್ದರಿಂದ ರೋಗ ನಿರೋಧಕ ಶಕ್ತಿ ಉತ್ತಮವಗಿರುವಂತೆ ಜೀವನಕ್ರಮವನ್ನು ಅಳವಡಿಸಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಅಗತ್ಯವಾಗಿದೆ.

ತಪ್ಪಾದ ಚಿಕಿತ್ಸಾ ಕ್ರಮ

ತಪ್ಪಾದ ಚಿಕಿತ್ಸಾ ಕ್ರಮ

ಕೆಲವೊಮ್ಮೆ ಈ ಸೋಂಕಿಗೆ ಆಯ್ಕೆ ಮಾಡಲಾದ ಚಿಕಿತ್ಸಾ ಕ್ರಮ ತಪ್ಪಾಗಿದ್ದು ಸೋಂಕು ಕಡಿಮೆಯಾಗುವ ಬದಲು ಉಲ್ಬಣಗೊಳ್ಳಬಹುದು. ಒಂದು ವೇಳೆ ಶಿಲೀಂಧ್ರ ಈ ಚಿಕಿತ್ಸೆಗೆ ಬಳಸಲಾದ ಔಷಧಿಗೆ ಬಗ್ಗುವುದರ ಬದಲಾಗಿ ಹೆಚ್ಚು ಬೆಳೆಯುವ ಕ್ಷಮತೆಯನ್ನು ಬೆಳೆಸಿಕೊಂಡರೆ ಸೋಂಕು ಅತಿಯಾಗಿ ಹೆಚ್ಚುತ್ತದೆ. ಈಗ ಈ ಸೋಂಕಿಗೆ ಚಿಕಿತ್ಸೆ ನೀಡುವುದು ಕಷ್ಟಕರ ಹಾಗೂ ಒಂದು ವೇಳೆ ಕಡಿಮೆಯಾದರೂ ಮತ್ತೆ ಮರುಕಳಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಅನಾರೋಗ್ಯಕರ ಆಹಾರ ಸೇವನೆ (ಹೆಚ್ಚು ಸಕ್ಕರೆ ಸೇವನೆ ಸಹಿತ)

ಅನಾರೋಗ್ಯಕರ ಆಹಾರ ಸೇವನೆ (ಹೆಚ್ಚು ಸಕ್ಕರೆ ಸೇವನೆ ಸಹಿತ)

ಒಂದು ವೇಳೆ ನಿಮ್ಮ ಆಹಾರಾಭ್ಯಾಸ ಅನಾರೋಗ್ಯಕರವಾಗಿದ್ದು ದಿನವಿಡೀ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆಯಿಂದ ಕೂಡಿದ ಪದಾರ್ಥಗಳನ್ನು ಸೇವಿಸುತ್ತಿದ್ದರೆ ನಿಮಗೆ ಶಿಲೀಂಧ್ರದ ಸೋಂಕು ಸತತವಾಗಿ ಕಾಡುವ ಸಾಧ್ಯತೆ ಹೆಚ್ಚು.

ಮಾನಸಿಕ ಒತ್ತಡ, ಕಡಿಮೆಯಾದ ನಿದ್ದೆ

ಮಾನಸಿಕ ಒತ್ತಡ, ಕಡಿಮೆಯಾದ ನಿದ್ದೆ

ಒಂದು ವೇಳೆ ನಿಮಗೆ ಭಾರೀ ಮಾನಸಿಕ ಒತ್ತಡವಿದ್ದು ನಿದ್ದೆ ಸಹಾ ಕಡಿಮೆಯಾಗಿದ್ದರೆ ನಿಮಗೆ ಶಿಲೀಂಧ್ರದ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಆದ್ದರಿಂದ ಮಾನಸಿಕ ಒತ್ತಡಗಳಿಗೆ ಒಳಗಾಗದಂತೆ ಹಾಗೂ ಉತ್ತಮವಾದ ನಿದ್ದೆಯನ್ನು ಪಡೆಯುವ ಮೂಲಕ ಆರೋಗ್ಯ ಉತ್ತಮಗೊಳಿಸುವ ಜೊತೆಗೇ ಸೋಂಕು ಆವರಿಸುವ ಸಾಧ್ಯತೆಯನ್ನೂ ಕಡಿಮೆಗೊಳಿಸಬಹುದು.

ವ್ಯಾಯಾಮದ ಬಳಿಕ ಒಳ ಉಡುಪನ್ನು ಬದಲಿಸದಿರುವುದು

ವ್ಯಾಯಾಮದ ಬಳಿಕ ಒಳ ಉಡುಪನ್ನು ಬದಲಿಸದಿರುವುದು

ವ್ಯಾಯಾಮದ ಸಮಯದಲ್ಲಿ ಇತರ ಸಮಯಕ್ಕಿಂತಲೂ ಕೊಂಚ ಹೆಚ್ಚಿಗೇ ದ್ರವ ಸೋರುತ್ತದೆ. ಇದು ಒಳ ಉಡುಪಿನಲ್ಲಿ ಹೀರಲ್ಪಡುತ್ತದೆ. ಅಲ್ಲದೇ ವ್ಯಾಯಾಮದ ಕಾರಣ ಚರ್ಮದಲ್ಲಿ ಮೂಡಿರುವ ಬೆವರು ಸಹಾ ಉಡುಪಿನಲ್ಲಿ ಹೀರಲ್ಪಡುತ್ತದೆ. ಆದ್ದರಿಂದ ವ್ಯಾಯಾಮದ ಬಳಿಕ ಸ್ನಾನ ಮಾಡಿ ಸ್ವಚ್ಛವಾದ ಹೊಸ ಉಡುಪುಗಳನ್ನು ತೊಡಬೇಕು.

ಬಿಗಿ ತುಂಡುಡುಗೆಗಳನ್ನು ಹೆಚ್ಚು ಧರಿಸುವುದು

ಬಿಗಿ ತುಂಡುಡುಗೆಗಳನ್ನು ಹೆಚ್ಚು ಧರಿಸುವುದು

ಕೆಲವರಿಗೆ ದೇಹವನ್ನು ಬಿಗಿಯಾಗಿ ಹಿಡಿದಿರುವ ತುಂಡು ಉಡುಗೆಗಳೇ ಇಷ್ಟ. ಆದರೆ ಈ ಬಿಗಿತನ ಅತಿ ಸೂಕ್ಷವಾದ ಗುಪ್ತಾಂಗದ ಮೇಲೆ ಹೆಚ್ಚಿನ ಒತ್ತಡ ಹೇರಿ ನಡೆಯುವಾಗ ತಿಕ್ಕಾಟ ಅಥವಾ ಘರ್ಷಣೆಗೆ ಕಾರಣವಾಗುತ್ತದೆ. ಇದರಿಂದ ಸೂಕ್ಷ್ಮ ಚರ್ಮ ಹೆಚ್ಚು ಸವೆದು ಸೋಂಕು ತಗುಲಲು ಕಾರಣವಾಗುತ್ತದೆ. ಆದ್ದರಿಂದ ಅನಿವಾರ್ಯವಲ್ಲದೇ ತುಂಡುಡುಗೆ ಅಥವಾ ಬಿಗಿಯಾದ ಉಡುಗೆಗಳನ್ನು ತೊಡುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ.

ಬಿಗಿ ತುಂಡುಡುಗೆಗಳನ್ನು ಹೆಚ್ಚು ಧರಿಸುವುದು

ಬಿಗಿ ತುಂಡುಡುಗೆಗಳನ್ನು ಹೆಚ್ಚು ಧರಿಸುವುದು

ನಿಮ್ಮ ಒಳ ಉಡುಪುಗಳು ಅತಿ ಸಡಿಲವಾಗಿಯೂ ಇರಬಾರದು ಅಥವಾ ಅತಿ ಬಿಗಿಯಾಗಿಯೂ ಇರಬಾರದು. ಬಿಗಿಯಾಗಿದ್ದರೆ ಗಾಳಿಯಾಡಲು ಅವಕಾಶವಿಲ್ಲದೇ ಹೆಚ್ಚಿನ ಬೆವರುವಿಕೆಗೆ ಕಾರಣವಾಗುತ್ತದೆ. ಇದು ನೇರವಾಗಿ ಸೋಂಕಿಗೆ ಕಾರಣವಾಗುತ್ತದೆ.

ಸೂಕ್ತವಲ್ಲದ ಡಿಟರ್ಜೆಂಟ್‌ಗಳನ್ನು ಒಗೆಯಲು ಬಳಸುವುದು

ಸೂಕ್ತವಲ್ಲದ ಡಿಟರ್ಜೆಂಟ್‌ಗಳನ್ನು ಒಗೆಯಲು ಬಳಸುವುದು

ಒಳ ಉಡುಪುಗಳು ಇತರ ಬಟ್ಟೆಗಳಿಗಿಂತ ಮೃದುವಾಗಿದ್ದು ಇತರ ಬಟ್ಟೆಗಳಿಗೆ ಉಪಯೋಗಿಸುವ ಡಿಟರ್ಜೆಂಟುಗಳು ಇವುಗಳಿಗೆ ಹಾನಿಯುಂಟು ಮಾಡಬಹುದು. ಅಲ್ಲದೇ ಹೀಗೆ ಒಗೆದ ಉಡುಪುಗಳು ಕ್ರಮೇಣ ಒರಟಾಗುತ್ತಾ ಗಟ್ಟಿಯಾಗತೊಡಗುತ್ತವೆ. ಈ ಉಡುಪುಗಳನ್ನು ಧರಿಸುವ ಮೂಲಕ ಸೂಕ್ಷ್ಮ ಚರ್ಮ ಹೆಚ್ಚು ಘಾಸಿಗೊಳಗಾಗುತ್ತದೆ. ಆದ್ದರಿಂದ ಒಳ ಉಡುಪುಗಳನ್ನು ಪ್ರತ್ಯೇಕವಾಗಿ, ಇವುಗಳಿಗೆ ಸೂಕ್ತವಾಗಿರುವ ಡಿಟರ್ಜೆಂಟ್ ಪೌಡರ್ ಬಳಸಿ ಒಗೆಯಬೇಕು.

ಶಿಲೀಂಧ್ರದ ಸೋಂಕು ತಗಲದೇ ಇರಲು ಕೆಲವು ಆರೋಗ್ಯಕರ ಅಭ್ಯಾಸಗಳು ಇಂತಿವೆ

ಶಿಲೀಂಧ್ರದ ಸೋಂಕು ತಗಲದೇ ಇರಲು ಕೆಲವು ಆರೋಗ್ಯಕರ ಅಭ್ಯಾಸಗಳು ಇಂತಿವೆ

* ರಾತ್ರಿ ಮಲಗುವಾಗ ಒಳ ಉಡುಪು ಧರಿಸಬೇಡಿ

* ಗುಪ್ತಾಂಗಗಳನ್ನು ಸ್ವಚ್ಛಗೊಳಿಸಲು ಸೋಪಿನ ಬದಲು ಇದಕ್ಕಾಗಿಯೇ ಇಂದು ದೊರಕುತ್ತಿರುವ ದ್ರಾವಣವನ್ನು ಬಳಸಿ. ಕೊಂಚ ದುಬಾರಿಯಾದರೂ ಸರಿ, ಇವು ಹೆಚ್ಚಿನ ರಕ್ಷಣೆ ನೀಡುತ್ತವೆ.

* ದಿನದಲ್ಲಿ ಕೆಲ ಹೊತ್ತಾದರೂ ಕಾಲುಗಳನ್ನು ಅಗಲಿಸುವ ವ್ಯಾಯಾಮಗಳನ್ನು ಮಾಡಿ.

* ಸಾರ್ವಜನಿಕವಾಗಿ ಮೊಣಕಾಲುಗಳನ್ನು ಜೋಡಿಸಿ ಕುಳಿತುಕೊಳ್ಳುವ ಅನಿವಾರ್ಯತೆ ಇದ್ದ ಹೊರತು ಮನೆಯಲ್ಲಿ ಆರಾಮವಾಗಿ ಕುಳಿತುಕೊಳ್ಳುವ ಸಮಯದಲ್ಲಿ ಕಾಲುಗಳನ್ನು ಅಗಲಿಸಿಯೇ ಕುಳಿತುಕೊಳ್ಳಿ.

* ಸದಾ ಪರ್ಸ್ ನಲ್ಲಿ ಕೆಲವು ಟಿಶ್ಯೂ ಕಾಗದಗಳನ್ನು ಇರಿಸಿಕೊಳ್ಳಿ. ಸಾರ್ವಜನಿಕ ಶೌಚಾಲಯವನ್ನು ಬಳಸಿದ ಬಳಿಕ ಒಣಗಿಸಿಕೊಳ್ಳಲು ಇವು ನೆರವಾಗುತ್ತವೆ.

* ಮಾಸಿಕ ದಿನಗಳ ಸ್ರಾವವನ್ನು ಹೆಚ್ಚು ಸಮರ್ಪಕವಾಗಿ ನಿಭಾಯಿಸಲು ಸಾಂಪ್ರಾದಾಯಿಕ ಪ್ಯಾಡ್ ಬದಲಿಗೆ ಹೊಸದಾಗಿ ಬರುತ್ತಿರುವ ಟ್ಯಾಂಪೋನ್ ಗಳನ್ನು ಬಳಸಲು ಪ್ರಾರಂಭಿಸಿ.

English summary

Reasons why you get yeast infections over and over again

A yeast infection is bad enough if it occurs for the first time. But what if it keeps coming again and again. If you suffer from recurrent yeast infection, then you need to know why this is happening to you.About 75% of women will have at least one infection in their life and 40%-45% will have two or more. About 5% of women suffer from recurrent yeast infections. This situation can be frustrating and uncomfortable.
Subscribe Newsletter