For Quick Alerts
ALLOW NOTIFICATIONS  
For Daily Alerts

  ರಾತ್ರಿ ನಿದ್ದೆಯಲ್ಲಿ ಹಲವಾರು ಬಾರಿ ಎಚ್ಚರವಾಗುತ್ತಿದೆಯೇ? ಇಲ್ಲಿದೆ ಕಾರಣಗಳು

  By Arshad
  |

  ಒಂದು ವೇಳೆ ರಾತ್ರಿಯ ವೇಳೆಯಲ್ಲಿ ನಿಮಗೆ ನಿದ್ದೆಯಲ್ಲಿ ಕೆಲವಾರು ಬಾರಿ ಎಚ್ಚರಾಗುತ್ತಾ ಇದ್ದರೆ ನಿಮಗೆ ಅಗತ್ಯವಿರುವ ಕನಿಷ್ಠ ಪ್ರಮಾಣದ ಏಳರಿಂದ ಎಂಟು ಗಂಟೆಗಳ ಗಾಢ ನಿದ್ದೆ ಲಭಿಸಲಿಕ್ಕೆ ಸಾಧ್ಯವಿಲ್ಲ. ಈ ಸ್ಥಿತಿಯನ್ನು ಮಧ್ಯಮ ಗತಿಯ ನಿದ್ರಾರಾಹಿತ್ಯ ಅಥವಾ middle insomnia ಎಂದು ಕರೆಯುತ್ತಾರೆ. ಈ ಅವಧಿಯಲ್ಲಿ ನೀವು ಗಾಢ ನಿದ್ದೆಗೆ ಜಾರದೇ ಅರೆ ನಿದ್ರಾವಸ್ಥೆಯಲ್ಲಿದ್ದು ನಡುನಡುವೆ ಪೂರ್ಣವಾಗಿ ಎಚ್ಚರಾಗುತ್ತಾ ಗಾಢನಿದ್ದೆಯಿಂದ ವಂಚಿತರಾಗುತ್ತಿದ್ದೀರಿ.

  ಹಲವರಿಗೆ ಈ ಪರಿ ಬೆಳಗ್ಗಿನ ಜಾವದಲ್ಲಿ ಹೆಚ್ಚಾಗಿ ಕಾಡುತ್ತದೆ. ಒಂದು ವೇಳೆ ಮಧ್ಯರಾತ್ರಿಯ ವೇಳೆ ನಿಮಗೆ ಎಚ್ಚರಾಗಿ ಮತ್ತೊಮ್ಮೆ ನಿದ್ದೆ ಆವರಿಸಲು ಅರ್ಧ ಗಂಟೆಗೂ ಹೆಚ್ಚು ಕಾಲ ತೆಗೆದುಕೊಂಡರೆ ಇದು ತೀವ್ರ ಗತಿಯ ನಿದ್ರಾರಾಹಿತ್ಯ ಎಂದು ಪರಿಗಣಿಸಲ್ಪಡುತ್ತದೆ ಹಾಗೂ ಇದು ಗಂಭೀರವಾದ ತೊಂದರೆಯಾಗಿದೆ. 

  ಸರಿಯಾಗಿ ನಿದ್ದೆ ಬರುತ್ತಿಲ್ಲವೇ? ಕಾರಣ ತಿಳಿದುಕೊಳ್ಳಿ

  ನಿದ್ರಾರಾಹಿತ್ಯದಿಂದ ಬಳಲುವ ವ್ಯಕ್ತಿಗಳಿಗೆ ನಿದ್ದೆಯಿಂದ ಎಚ್ಚರಾಗುವುದು ಮಾತ್ರವಲ್ಲ ಮತ್ತೆ ನಿದ್ದೆಗೆ ಜಾರುವುದೂ ಕಷ್ಟಕರವಾಗಿರುತ್ತದೆ. ಇವರಿಗೆ ನಿದ್ದೆಯಲ್ಲಿ ಹಲವಾರು ಬಾರಿ ಎಚ್ಚರಾಗುತ್ತಾ ಇರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಇದಕ್ಕೆ ಕಾರಣಗಳ ಬಗ್ಗೆ ಈ ವ್ಯಕ್ತಿಗಳಿಗೆ ಅರಿವೇ ಇರುವುದಿಲ್ಲ. ಒಂದು ವೇಳೆ ನಿಮಗೂ ಈ ತೊಂದರೆ ಇದ್ದು ರಾತ್ರಿ ಕನಿಷ್ಠ ಒಂದು ಬಾರಿಯಾದರೂ ಎಚ್ಚರಾಗಿ ಮತ್ತೆ ನಿದ್ದೆಹೋಗಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದ್ದಲ್ಲಿ ಇದಕ್ಕೆ ಕೆಳಗೆ ವಿವರಿಸಿದ ಕಾರಣಗಳಿರಬಹುದು.... 

  ನಿದ್ದೆಯಲ್ಲಿ ಉಸಿರುಗಟ್ಟುವಿಕೆ (Sleep Apnoea)

  ನಿದ್ದೆಯಲ್ಲಿ ಉಸಿರುಗಟ್ಟುವಿಕೆ (Sleep Apnoea)

  ಇದೊಂದು ಸ್ಥಿತಿಯ ಕಾಯಿಲೆಯಾಗಿದ್ದು ಎಚ್ಚರಿರುವ ಸಮಯದಲ್ಲಿ ಇರುವ ಸುಳಿವನ್ನೇ ಕೊಡದೇ ನಿದ್ದೆಗೆ ಜಾರಿದಾಗ ಮಾತ್ರವೇ ಪ್ರಕಟವಾಗುವ ಕಾಯಿಲೆಯಾಗಿದೆ. ಈ ಕಾಯಿಲೆಯ ಲಕ್ಷಣಗಳೆಂದರೆ ನಿದ್ದೆಗೆ ಜಾರಿದ ಬಳಿಕ ಉಸಿರಾಟ ನಿಧಾನವಾಗಿ ಕಷ್ಟಕರವಾಗುತ್ತಾ ಒಂದು ಹಂತದಲ್ಲಿ ಸಾಧ್ಯವೇ ಇಲ್ಲದಂತಾಗುವುದು. ಆಗ ಅನಿವಾರ್ಯವಾಗಿ ಮೆದುಳು ನಮ್ಮನ್ನು ಎಚ್ಚರಿಸಿ ಬಲವಂತವಾಗಿ ದೀರ್ಘ ಉಸಿರಾಟ ನಡೆಸಲು ಸೂಚನೆ ನೀಡುತ್ತದೆ. ಪರಿಣಾಮವಾಗಿ ನಿದ್ದೆಯಿಂದ ಎಚ್ಚರಾಗುತ್ತದೆ. ಇದಕ್ಕೆ

  ಪ್ರಮುಖ ಕಾರಣ ಸ್ಥೂಲಕಾಯ ಹಾಗೂ ಟಾನ್ಸಿಲ್ ಗಳ ಗಾತ್ರ ಹೆಚ್ಚಾಗಿರುವುದಾಗಿದೆ.

   ಅಜೀರ್ಣ

  ಅಜೀರ್ಣ

  ಅಜೀರ್ಣತೆಯಿಂದಲೂ ನಿಮಗೆ ನಡುರಾತ್ರಿಯಲ್ಲಿ ಎಚ್ಚರಾಗಬಹುದು. ವಿಶೇಷವಾಗಿ ರಾತ್ರಿ ಮಲಗುವ ಮುನ್ನ ದೊಡ್ಡ ಪ್ರಮಾಣದ ಊಟವನ್ನು ಮಾಡಿದರೆ ಅಥವಾ ಮಲಗುವ ಮುನ್ನ ಕೆಂಪು ವೈನ್ ಸೇವಿಸಿದ್ದರೆ ಈ ಸ್ಥಿತಿ ಕಾಡುವ ಸಾಧ್ಯತೆ ಹೆಚ್ಚು. ಒಂದು ವೇಳೆ ಇದೇ ಕಾರಣ ಎಂದು ಖಚಿತವಾದರೆ ನಿಮ್ಮ ಈ ಅಭ್ಯಾಸಗಳನ್ನು ಬದಲಿಸಿಕೊಳ್ಳಬೇಕು. ರಾತ್ರಿ ಮಿತಾಹಾರ ಹಾಗೂ ಊಟದ ಬಳಿಕ ಕೊಂಚ ಹೊತ್ತು ನಡೆದಾಡಿ ಮಲಗುವ ಮುನ್ನ ಪಾದಗಳನ್ನು ತಣ್ಣೀರಿನಲ್ಲಿ ತೊಳೆದುಕೊಳ್ಳಬೇಕು.

  ಮಾನಸಿಕ ಒತ್ತಡ

  ಮಾನಸಿಕ ಒತ್ತಡ

  ಮಾನಸಿಕ ಒತ್ತಡದಿಂದ ದಿನದ ವೇಳೆಯ ಹೊರತಾಗಿ ರಾತ್ರಿಯ ನಿದ್ದೆಗೂ ಭಂಗ ಬರುತ್ತದೆ. ಒಂದು ವೇಳೆ ನಿಮಗೆ ಇಡಿಯ ದಿನ ಒತ್ತಡವಿದ್ದು ರಾತ್ರಿಯ ವೇಳೆಯೂ ಈ ಒತ್ತಡ ಕಡಿಮೆಯಾಗದಿದ್ದರೆ ನಿದ್ದೆಯನ್ನು ಕೆಡಿಸುವುದು ಖಂಡಿತ. ಆದ್ದರಿಂದ ರಾತ್ರಿ ಮಲಗುವ ಮುನ್ನ ಕೆಲವು ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡುವ ವ್ಯಾಯಾಮಗಳನ್ನು ಹಾಗೂ ಮನಸ್ಸನ್ನು ನಿರಾಳಗೊಳಿಸುವ ಇತರ ವಿಧಾನ ಅಂದರೆ ಸಂಗೀತ, ಧ್ಯಾನ ಮೊದಲಾದ ಕ್ರಮಗಳನ್ನು ಅನುಸರಿಸಬೇಕು.

  ಪ್ರಖರ ಬೆಳಕು

  ಪ್ರಖರ ಬೆಳಕು

  ಸಾಮಾನ್ಯವಾಗಿ ನಮ್ಮ ಮೆದುಳು ರಾತ್ರಿ ನಿದ್ರಿಸಲು ಕತ್ತಲಿನ ವಾತಾವರಣವನ್ನೇ ಬಯಸುತ್ತದೆ. ಆದರೆ ಕೋಣೆಯಲ್ಲಿ ಯಾರಾದರೂ ರಾತ್ರಿಯ ವೇಳೆ ಬೆಳಕು ಹರಿಸಿದರೆ ಇದು ನಿದ್ದೆಯಿಂದ ಎಚ್ಚರಾಗಲು ಕಾರಣವರಬಹುದು. ಕೆಲವು ಸಂದರ್ಭಗಳಲ್ಲಿ ತೆರೆದ ಕಿಟಕಿಯಿಂದ ಆಗಾಗ ಹಾದುಹೋಗುವ ವಾಹನಗಳ ಬೆಳಕು ಸಹಾ ಕೋಣೆಯೊಳಗೆ ಪ್ರಖರವಾಗಿ ಬರುತ್ತಿದ್ದರೆ ಈ ಕಾರಣಕ್ಕೂ ಎಚ್ಚರಾಗಬಹುದು. ಆದ್ದರಿಂದ ನಿಮ್ಮ ನಿದ್ದೆಗೆ ಸೂಕ್ತವಾದ ವಾತಾವರಣವಿರುವಂತೆ ಬೆಳಕಿನ ವ್ಯವಸ್ಥೆಯನ್ನು ಸರಿಪಡಿಸಬೇಕು.

  ಸದ್ದುಗದ್ದಲ

  ಸದ್ದುಗದ್ದಲ

  ನಡುನಡುವೆ ಯಾವುದಾದರೂ ಒಂದು ಸದ್ದು ಬಂದರೆ ಇದು ಸಹಾ ನಿದ್ದೆಯಿಂದ ಎಚ್ಚರಾಗಲು ಕಾರಣವಾಗಬಹುದು. ಕೆಲವು ಸಂದರ್ಭಗಳಲ್ಲಿ ನೀವಿರುವ ಸ್ಥಳಕ್ಕೆ ಹೊಸದಾದ ಸದ್ದುಗಳು ಎದುರಾದರೆ ಅಥವಾ ಸದ್ದುಗದ್ದಲವಿರುವ ಹೊಸ ಸ್ಥಳಕ್ಕೆ ಹೋದಾಗಲೂ ಕೆಲದಿನಗಳವರೆಗೆ ಈ ಸದ್ದುಗಳಿಗೆ ಹೊಂದಿಕೊಳ್ಳುವವರೆಗೂ ನಿದ್ದೆ ಭಂಗವಾಗುವುದು ಅನಿವಾರ್ಯವಾಗುತ್ತದೆ.

  ತಾಪಮಾನ

  ತಾಪಮಾನ

  ನಿದ್ದೆಯ ಸಮಯದಲ್ಲಿ ನಮ್ಮ ದೇಹದ ತಾಪಮಾನ ಕೊಂಚ ಕಡಿಮೆಯಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ನಮ್ಮ ದೇಹದ ಎಲ್ಲಾ ಐಚ್ಛಿಕ ಕಾರ್ಯಗಳು ನಿಂತುಹೋಗುವುದರಿಂದ ದೇಹವನ್ನು ಅಷ್ಟು ಬೆಚ್ಚಗಾಗಿರಿಸುವ ಅಗತ್ಯವಿಲ್ಲದ ಕಾರಣ ದೇಹ ತಾಪಮಾನವನ್ನು ಕೊಂಚವೇ ತಗ್ಗಿಸುತ್ತದೆ. ಆದರೆ ಕೋಣೆಯನ್ನು ದೇಹಕ್ಕೆ ಹಿತಕರವಾದ ತಾಪಮಾನಕ್ಕಿಂತ ಕೊಂಚವೇ ಹೆಚ್ಚು ಅಥವಾ ತಣ್ಣಗಿದ್ದರೂ ಈ ತಾಪಮಾನದ ವ್ಯತ್ಯಾಸವನ್ನು ದೇಹ ಗುರುತಿಸಿ ಇದಕ್ಕೆ ತಕ್ಕನಾದ ಬದಲಾವಣೆಗಳನ್ನು

  ಮಾಡಲು ಕೆಲವು ವ್ಯವಸ್ಥೆಗಳನ್ನು ಎಚ್ಚರಿಸಬೇಕಾಗುತ್ತದೆ. ಉದಾಹರಣೆಗೆ ಬಿಸಿಯಾಗಿದ್ದಾಗ ಬೆವರುವುದು, ತಣ್ಣಗಿದ್ದಾಗ ನಡುಗುವುದು. ಇದರಿಂದಲೂ ನಿದ್ದೆಯಿಂದ ಎಚ್ಚರಾಗುತ್ತದೆ.

  ನಿಮ್ಮ ಪಕ್ಕ ಪವಡಿಸಿರುವ ವ್ಯಕ್ತಿ

  ನಿಮ್ಮ ಪಕ್ಕ ಪವಡಿಸಿರುವ ವ್ಯಕ್ತಿ

  ನಿಮ್ಮ ನಿದ್ದೆಗೆ ನಿಮ್ಮ ಪಕ್ಕ ಪವಡಿಸಿರುವ ಅಥವಾ ನೀವಿರುವ ಕೋಣೆಯಲ್ಲಿ ಪವಡಿಸಿರುವ ಇನ್ನೋರ್ವ ವ್ಯಕ್ತಿಯ ಚಟುವಟಿಕೆಗಳೂ ಭಂಗ ತರಬಹುದು. ಗೊರಕೆ, ನಡುನಡುವೆ ಶೌಚಾಲಯಕ್ಕಾಗಿ ಏಳುವುದು, ಎದ್ದು ಪ್ರಖರ ವಿದ್ಯುದ್ದೀಪ ಹಚ್ಚುವುದು, ಧೂಮಪಾನ ಮಾಡುವುದು, ನಿಮ್ಮ ದೇಹವನ್ನು ಸ್ಪರ್ಷಿಸುವುದು ಮೊದಲಾದ ಯಾವುದೇ ಚಟುವಟಿಕೆಯಿಂದ ನಿಮ್ಮ ನಿದ್ದೆಗೂ ಭಂಗ ಬರಬಹುದು. ಆದ್ದರಿಂದ ಇದೇ ನಿಮ್ಮ ನಿದ್ದೆಗೆ ಭಂಗ ಬರುವ ಕಾರಣವಾಗಿದ್ದರೆ ನೀವೊಬ್ಬರೇ ಕೋಣೆಯಲ್ಲಿ

  ಪವಡಿಸುವ ವ್ಯವಸ್ಥೆ ಮಾಡಿಕೊಳ್ಳುವುದು ಅನಿವಾರ್ಯ.

  ರಾತ್ರಿ ಮಲಗುವ ಮುನ್ನ ಹೆಚ್ಚು ನೀರು ಕುಡಿದಿರುವುದು

  ರಾತ್ರಿ ಮಲಗುವ ಮುನ್ನ ಹೆಚ್ಚು ನೀರು ಕುಡಿದಿರುವುದು

  ರಾತ್ರಿ ಹೊತ್ತು ಮೂತ್ರವಿಸರ್ಜನೆಗಾಗಿ ಕೆಲವಾರು ಬಾರಿ ಎಚ್ಚರಾಗುತ್ತದೆ. ಹೀಗಾಗಬಾರದು ಎಂದರೆ ರಾತ್ರಿ ಮಲಗುವ ಅರ್ಧ ಘಂಟೆಗೂ ಮುನ್ನ ಸಾಕಷ್ಟು ನೀರು ಕುಡಿದಿರಬೇಕು ಹಾಗೂ ಮಲಗುವ ಮುನ್ನ ಮೂತ್ರ ವಿಸರ್ಜನೆ ಪೂರೈಸಿಯೇ ಮಲಗಬೇಕು.

  ಮಲಗಿದ್ದಲ್ಲಿ ಫೋನ್ ಬಳಸುವುದು

  ಮಲಗಿದ್ದಲ್ಲಿ ಫೋನ್ ಬಳಸುವುದು

  ರಾತ್ರಿ ಮಲಗಿದ ಬಳಿಕ ನಮ್ಮ ಮೆದುಳು ನಿದ್ದೆಗೆ ಅವಶ್ಯವಾದ ಮೆಲಟೋನಿನ್ ಎಂಬ ರಸದೂತವನ್ನು ಬಿಡುಗಡೆ ಮಾಡುತ್ತದೆ. ನಿದ್ದೆ ಬರಬೇಕಾದರೆ ಇದು ಅವಶ್ಯ. ಆದರೆ ಈ ಸಮಯದಲ್ಲಿ ಮೊಬೈಲ್ ಪರದೆಯ ಪ್ರಖರ ಬೆಳಕನ್ನು ನೋಡುವ ಹಾಗೂ ಮೆದುಳನ್ನು ಇದರಲ್ಲಿರುವ ಮಾಹಿತಿ ಪಡೆಯಲು ಹೆಚ್ಚು ಕೇಂದ್ರೀಕರಿಸುವ ಮೂಲಕ ಮೆದುಳಿಗೆ ಈಗ ಅನಿವಾರ್ಯವಾಗಿ ಮೆಲಟೋನಿನ್ ಉತ್ಪಾದನೆಯನ್ನು ನಿಲ್ಲಿಸಬೇಕಾಗಿ ಬರುತ್ತದೆ. ಪರಿಣಾಮವಾಗಿ ಬರಬೇಕಾಗಿದ್ದ ನಿದ್ದೆ ಬರದೇ ಹಾರಿಹೋಗುತ್ತದೆ. ಇದು ನಿದ್ದೆ ಬರದೇ ಇರಲು ಪ್ರಮುಖ ಕಾರಣವಾಗಿದೆ.

  ನಿದ್ದೆಗೂ ಮುನ್ನ ಸೇವಿಸುವ ಮದ್ಯ

  ನಿದ್ದೆಗೂ ಮುನ್ನ ಸೇವಿಸುವ ಮದ್ಯ

  ಕೆಲವರಿಗೆ ನಿದ್ದೆಗೂ ಮುನ್ನ ಕೊಂಚ ಮದ್ಯ ಸೇವಿಸಿಯೇ ಪವಡಿಸುವ ಅಭ್ಯಾಸವಿರುತ್ತದೆ. ಆದರೆ ಇದು ನಿದ್ದೆಯನ್ನು ಭಂಗಗೊಳಿಸಲು ಪ್ರಮುಖ ಕಾರಣವಾಗಿದೆ. ಏಕೆಂದರೆ ಮದ್ಯದ ಅಮಲಿನಿಂದ ಆವರಿಸುವ ಮತ್ತು ಹಾಗೂ ನಿದ್ದೆಯ ಮಿಳಿತದಿಂದ ನಿದ್ದೆ ಆವರಿಸುತ್ತದಾದರೂ ಅಮಲು ಇಳಿಯಲು ಕೆಲವೇ ಗಂಟೆಗಳು ಬೇಕಾಗಿರುವ ಕಾರಣ ನಡುರಾತ್ರಿಯಲ್ಲಿ ಎಚ್ಚರಾಗುತ್ತದೆ. ಆದ್ದರಿಂದ ನಿದ್ದೆಗೆ ಮುನ್ನ ಮಾತ್ರವಲ್ಲ, ಯಾವುದೇ ಸಮಯದಲ್ಲಿ ಮದ್ಯಪಾನ ಬೇಡವೇ ಬೇಡ.

   

  English summary

  Reasons Why You Can't Stop Waking Up In The Middle Of The Night

  People with insomnia not only have trouble in falling asleep, but also tend to have more awakening episodes in the night. The common reason for this can be some underlying condition that you may not know of. In this article, we have mentioned the main reasons on why do you keep waking up at night. Read to know the reasons for waking up at night.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more