For Quick Alerts
ALLOW NOTIFICATIONS  
For Daily Alerts

ರಾತ್ರಿವೇಳೆ ಹೆಚ್ಚು ಬೆವರುವುದೇ? ಕೂಡಲೇ ವೈದ್ಯರನ್ನು ಭೇಟಿ ಮಾಡಿ!

By Divya
|

ಸಾಮಾನ್ಯ ಪ್ರಮಾಣದಲ್ಲಿ ಬೆವರುವುದು ದೇಹಕ್ಕೆ ಅತ್ಯಗತ್ಯವಾದ ಒಂದು ಪ್ರಕ್ರಿಯೆ. ಬೆವರುವಿಕೆಯಿಂದ ದೇಹದ ತಾಪವನ್ನು ನಿಯಂತ್ರಿಸಬಹುದು. ಅಲ್ಲದೆ ದೇಹಕ್ಕೆ ಅನಗತ್ಯವಾದ ನೀರಿನಂಶವನ್ನು ಹೊರಹಾಕುವ ಪ್ರಕ್ರಿಯೆ. ದೈಹಿಕವಾಗಿ ಹೆಚ್ಚು ಶ್ರಮಪಟ್ಟಾಗ ಮತ್ತು ವಾತಾವರಣದಲ್ಲಿ ಉಷ್ಣತೆಯ ಪ್ರಮಾಣ ಹೆಚ್ಚಾದಾಗ ದೇಹವು ಅತಿಯಾಗಿ ಬೆವರುವುದು. ಇದು ಯಾವುದೇ ಬಗೆಯ ಅನಾರೋಗ್ಯದ ಲಕ್ಷಣವಲ್ಲ.

ಸಾಮಾನ್ಯ ಮಟ್ಟಕ್ಕಿಂತ ಹೆಚ್ಚು ಬೆವರುವುದು ಅನಾರೋಗ್ಯದ ಪ್ರಾಥಮಿಕ ಲಕ್ಷಣ ಎನ್ನಬಹುದು. ಕೆಲವರಿಗೆ ಸಾಮಾನ್ಯವಾಗಿ ರಾತ್ರಿವೇಳೆಯಲ್ಲಿ ಮಾತ್ರ ಬೆವರುವುದು. ಈ ಪರಿಯು ಮಹಿಳೆಯರಲ್ಲಿ ಹೆಚ್ಚು ಎಂದು ಅಂದಾಜಿಸಲಾಗಿದೆ. ಸರಿ ಸುಮಾರು 70 ರಿಂದ 80 ರಷ್ಟು ಮಹಿಳೆಯರಿಗೆ ಮುಟ್ಟು ನಿಲ್ಲುವ ಸಂದರ್ಭದಲ್ಲಿ ರಾತ್ರಿ ಬೆವರುವುದು. ಇದು ಬರೇ ಮಹಿಳೆಯರಿಗಷ್ಟೇ ಸೀಮಿತವಾಗಿಲ್ಲ.= ಪುರುಷರಲ್ಲೂ ಈ ಲಕ್ಷಣ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.

ನಿದ್ದೆಯಲ್ಲಿಯೂ ಬೆವರುವ ಸಮಸ್ಯೆಯೇ? ಕಾರಣ ತಿಳಿದುಕೊಳ್ಳಿ

ಸಾಮಾನ್ಯ ತಾಪಮಾನದಲ್ಲೂ ರಾತ್ರಿವೇಳೆ ಬೆವರುವುದು ಅಪಾಯಕಾರಿ ಲಕ್ಷಣ. ಹಾರ್ಮೋನ್‍ಗಳ ವ್ಯತ್ಯಾಸ, ನರಗಳ ಸಮಸ್ಯೆ, ಮತ್ತು ಹೈಪೊಗ್ಲಿಸಿಮಿಯಾ ಸೇರಿದಂತೆ ಅನೇಕ ತೊಂದರೆಗಳಿಂದ ಈ ಸಮಸ್ಯೆ ಕಾಣಿಸಿಕೊಳ್ಳುವುದು. ಜೊತೆಗೆ ಅಪಾಯಕಾರಿ ರೋಗಕ್ಕೆ ಮಣೆ ಹಾಕುವ ಸಾಧ್ಯತೆಗಳಿರುತ್ತದೆ. ಈ ವಿಚಾರವಾಗಿ ಇನ್ನಷ್ಟು ಅರಿಯಲು ಮುಂದೆ ಓದಿ...

ಸೋಂಕುಗಳ ಕೆಲಸ

ಸೋಂಕುಗಳ ಕೆಲಸ

ರಾತ್ರಿವೇಳೆ ಬೆವರುವುದು ದೇಹವು ಸೋಂಕುಗಳ ವಿರುದ್ಧ ಹೋರಾಡುವ ಪರಿಯಾಗಿದೆ. ನ್ಯುಮೋನಿಯಾ, ಮಲೇರಿಯಾ ಮತ್ತು ಶ್ವಾಸಕೋಶದ ಸೋಂಕಿನ ವಿರುದ್ಧ ದೇಹವು ಹೋರಾಡುವ ಕ್ರಿಯೆಯಿಂದ ರಾತ್ರಿವೇಳೆ ಹೆಚ್ಚು ಬೆವರುವುದು. ಇದು ಅನಾರೋಗ್ಯದ ಲಕ್ಷಣವೆಂದೇ ಹೇಳಬಹುದು. ಹೀಗೆ ಬೆವರುವಾಗ ಜ್ವರ ಇದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕು. ಸಮಸ್ಯೆಯ ಕುರಿತು ವೈದ್ಯರ ಸಲಹೆ ಪಡೆಯುವುದು ಸೂಕ್ತ.

ಋತುಬಂಧದ ವೇಳೆ

ಋತುಬಂಧದ ವೇಳೆ

70ಕ್ಕೂ ಹೆಚ್ಚು ಮಹಿಳೆಯರಿಗೆ ಋತುಬಂಧ(ಮೆನೋಪಾಸ್) ಸಂದರ್ಭದಲ್ಲಿ ರಾತ್ರಿವೇಳೆ ಹೆಚ್ಚಾಗಿ ಬೆವರುವುದು. ಶೇ. 35ರಷ್ಟು ಮಹಿಳೆಯರಿಗೆ ತೀವ್ರತರವಾದ ಬೆವರುವಿಕೆ ಇರುತ್ತದೆ. ಇದಕ್ಕೆ ಹಾರ್ಮೋನ್‍ಗಳ ವ್ಯತ್ಯಾಸವೇ ಕಾರಣ. ಇದನ್ನು ಸರಿ ಪಡಿಸಿಕೊಳ್ಳಲು ವೈದ್ಯರ ಸಲಹೆ ಪಡೆಯಿರಿ.

ಕ್ಯಾನ್ಸರ್

ಕ್ಯಾನ್ಸರ್

ಯಕೃತ್, ಮೂಳೆ ಮತ್ತು ರಕ್ತ ಕ್ಯಾನ್ಸರ್‍ಗಳ ಪ್ರಾಥಮಿಕ ಲಕ್ಷಣವು ರಾತ್ರಿವೇಳೆ ಬೆವರುವುದಾಗಿದೆ. ಮೂತ್ರ ಕೋಶಗಳಲ್ಲಿ ಬೆಳೆಯುವ ಗಡ್ಡೆಯಿಂದಲೂ ರಾತ್ರಿವೇಳೆ ಬೆವರುವುದು. ಕ್ಯಾನ್ಸರ್ ಲಕ್ಷಣ ವಿದ್ದರೆ ದೇಹದ ತೂಕ ಇಳಿಯುವುದು ಮತ್ತು ಪದೇ ಪದೇ ಜ್ವರ ಮರುಕಳಿಸುತ್ತಲೇ ಇರುತ್ತದೆ. ಈ ಸಮಸ್ಯೆಗಳು ಕಾಣಿಸಿಕೊಂಡಾಗ ತಪ್ಪದೆ ವೈದ್ಯರ ಭೇಟಿ ನೀಡಬೇಕು.

ಅತಿಯಾದ ವ್ಯಾಯಾಮ

ಅತಿಯಾದ ವ್ಯಾಯಾಮ

ಆರೋಗ್ಯವಾಗಿರುವ ವ್ಯಕ್ತಿಗಳಲ್ಲೂ ರಾತ್ರಿ ಬೆವರಬಹುದು. ಅತಿಯಾದ ವ್ಯಾಯಾಮ ಮತ್ತು ಅತಿಯಾದ ದೈಹಿಕ ಶ್ರಮದಿಂದ ರಾತ್ರಿ ಬೆವರುತ್ತಾರೆ. ಅಂತಹವರು ಭಯಪಡುವ ಅಗತ್ಯವಿರುವುದಿಲ್ಲ. ಆದಷ್ಟು ಹೆಚ್ಚು ನೀರನ್ನು ಕುಡಿಯುತ್ತಿರಬೇಕಷ್ಟೆ.

ಹೈಪಿಫಿಡೋಸಿಸ್ ಕಾರಣ

ಹೈಪಿಫಿಡೋಸಿಸ್ ಕಾರಣ

ಸಾಮಾನ್ಯವಾಗಿ ಪ್ರೌಢಾವಸ್ಥೆಯಲ್ಲಿರುವಾಗ ರಾತ್ರಿ ಬೆವರುವಿಕೆಯು ಉಂಟಾಗುವುದು. ಕೆಲವೊಮ್ಮೆ ಹೈಪಿಫಿಡೋಸಿಸ್‍ನಿಂದ ರಾತ್ರಿವೇಳೆ ಬೆವರುವಿಕೆ ಉಂಟಾಗುವುದು. ಇದಕ್ಕಾಗಿ ವೈದ್ಯರ ಸಲಹೆ ಮತ್ತು ಪರೀಕ್ಷೆಗೆ ಒಳಗಾಗಬೇಕಾಗುವುದು.

ಹಾರ್ಮೋನ್‍ಗಳ ವ್ಯತ್ಯಾಸ

ಹಾರ್ಮೋನ್‍ಗಳ ವ್ಯತ್ಯಾಸ

ಫಿಯೋಕ್ರೋಮೊಸೈಟೋಮಾ ಮತ್ತು ಕಾರ್ಸಿನಾಯ್ಡ್ ಸಿಂಡ್ರೋಮ್ ನಂತಹ ಹಾರ್ಮೋನ್ ವ್ಯತ್ಯಾಸದಿಂದ ರಾತ್ರಿವೇಳೆ ಬೆವರುವುದು. ಈಸ್ಟ್ರೋಜೆನ್ ಹೈಪೋಥಾಲಮಸ್ ಮೇಲೆ ಪರಿಣಾಮ ಬೀರುವುದು. ಆಗ ರಾತ್ರಿವೇಳೆ ಬೆವರುವಿಕೆಗೆ ಕಾರಣವಾಗುವುದು.

ರಕ್ತದಲ್ಲಿ ಸಕ್ಕರೆ ಪ್ರಮಾಣ

ರಕ್ತದಲ್ಲಿ ಸಕ್ಕರೆ ಪ್ರಮಾಣ

ಹೈಪೋಗ್ಲೈಕಾಮಿಯಾ ಅಥವಾ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದಾಗ ರಾತ್ರಿ ಆಯಾಸ ಮತ್ತು ತಲೆನೋವಿನಿಂದ ಬೆವರುವಿಕೆ ಕಾಣಿಸಿಕೊಳ್ಳುತ್ತದೆ. ನಿದ್ರೆಯಲ್ಲಿದ್ದದ್ದಾದರೆ ಹಾಸಿಗೆಯ ಬಟ್ಟೆಯು ತೇವಾಂಶದಿಂದ ಕೂಡಿರುತ್ತದೆ.

ಕಡಿಮೆ ಪ್ರಮಾಣದ ಟೆಸ್ಟೋಸ್ಟೆರಾನ್ ಲೀವ್

ಕಡಿಮೆ ಪ್ರಮಾಣದ ಟೆಸ್ಟೋಸ್ಟೆರಾನ್ ಲೀವ್

ಪುರುಷರ ಮುಖ್ಯ ಲೈಂಗಿಕ ಹಾರ್ಮೋನ್ ಆದ ಟೆಸ್ಟೋಸ್ಟೆರಾನ್ ಲೀವ್ ಪ್ರಮಾಣ ಕಡಿಮೆಯಾದರೂ ರಾತ್ರಿವೇಳೆ ಬೆವರುತ್ತಾರೆ. ಈ ಸಮಸ್ಯೆಗೆ ವೈದ್ಯರಿಂದ ಚಿಕಿತ್ಸೆ ಪಡೆಯಲೇ ಬೇಕು.

ಎಚ್‍ಐವಿ ಸೋಂಕು!

ಎಚ್‍ಐವಿ ಸೋಂಕು!

ಎಚ್‍ಐವಿ ಸೋಂಕಿಗೆ ಒಳಗಾಗಿ, ಚಿಕಿತ್ಸೆ ಪಡೆಯದೆ ಇದ್ದರೆ ಹತ್ತು ವರ್ಷದ ಬಳಿಕ ಏಡ್ಸ್ ಎನಿಸಿಕೊಳ್ಳುತ್ತದೆ. ಏಡ್ಸ್‍ಗೆ ತುತ್ತಾದವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಾ ಬರುವುದು. ಆಗ ಅತಿಸಾರ, ಚರ್ಮದ ದದ್ದುಗಳು ಮತ್ತು ವಿವರಿಸಲಾಗದ ಆಯಾಸದಿಂದ ರಾತ್ರಿವೇಳೆಯ ಬೆವರು ಅತಿಯಾಗುತ್ತದೆ.

ನರಮಂಡಲದ ತೊಂದರೆ

ನರಮಂಡಲದ ತೊಂದರೆ

ನರಮಂಡಲದಲ್ಲಾಗುವ ಅಸ್ವಸ್ಥತೆಯು ಮೆದುಳಿನ ಮೇಲೆ ಪ್ರಭಾವ ಬೀರುತ್ತದೆ. ನರವ್ಯವಸ್ಥೆಯ ತೊಂದರೆಯಿಂದ ಬೆನ್ನುಹುರಿ, ನರಮಂಡಲದ ಗಾಯಗಳು ಮತ್ತು ಮೆದುಳಿನ ಗಾಯದಿಂದ ವಿಪರೀತ ಬೆವರುವಿಕೆ ಕಾಣಿಸಿಕೊಳ್ಳುತ್ತದೆ. ಈ ತೊಂದರೆಗೆ ಅಲಕ್ಷ ಮಾಡದೆ ವೈದ್ಯರಲ್ಲಿ ಸಲಹೆ ಮತ್ತು ಸೂಕ್ತ ಚಿಕಿತ್ಸೆ ಪಡೆಯುವುದು ಒಳ್ಳೆಯದು.

ಮೈ ತುಂಬಾ ಬೆವರುವುದನ್ನು ತಡೆಯಲು ಟಿಪ್ಸ್

English summary

Reasons Why You Are Sweating At Night

Everybody sweats; yet there is always a difference in the way people sweat, as it can't be the same for everyone. Are you dripping in sweat every night? There are a few people who experience sweating while at sleep. Sometimes, people do wake up with a flushed look on their face and are completely covered in perspiration either due to a haunting nightmare or terrified from a bad dream.
X
Desktop Bottom Promotion