For Quick Alerts
ALLOW NOTIFICATIONS  
For Daily Alerts

ನೆನಪಿಡಿ: ಬೆಳಿಗ್ಗೆ ಎದ್ದು ಬಿಸಿನೀರಿನ ಸ್ನಾನ ಮಾತ್ರ ಮಾಡಲೇಬೇಡಿ!

By Arshad
|

ಬೆಳಿಗ್ಗೆದ್ದು ಸ್ನಾನ ಮಾಡುವುದು ಅತ್ಯಂತ ಆರೋಗ್ಯಕರ. ಆದರೆ ಇದು ತಣ್ಣೀರಿನಲ್ಲಿ ಆಗಬೇಕೋ, ಬಿಸಿನೀರಿನಲ್ಲಿಯೋ ಎಂಬುದೊಂದು ಆಯ್ಕೆ. ಎರಡೂ ವಿಧಾನಗಳಲ್ಲಿ ಕೆಲವು ಒಳ್ಳೆಯ ಕೆಲವು ಒಳ್ಳೆಯದಲ್ಲದ ಅಂಶಗಳಿವೆ. ಕೆಲವು ಪುರುಷರು ಬೆಳಿಗ್ಗೆದ್ದ ಬಳಿಕ ತಣ್ಣೀರಿನ ಸ್ನಾನವನ್ನು ಬಯಸುತ್ತಾರೆ. ಹೌದು, ಪುರುಷರಿಗೆ ಬೆಳಿಗ್ಗೆದ್ದ ಬಳಿಕ ತಣ್ಣೀರಿನ ಸ್ನಾನ ಆರೋಗ್ಯಕರ ಎಂದು ಕಂಡುಬಂದಿದೆ.

ಮೈ ಕೊರೆಯುವ ಚಳಿಯಲ್ಲಿಯೂ ತಣ್ಣೀರು ಸ್ನಾನ ಆರೋಗ್ಯಕಾರಿಯೇ?

ಗುಹೆಯಲ್ಲಿ ವಾಸವಾಗಿದ್ದ ನಮ್ಮ ಪೂರ್ವಜರಿಗೆ ಬಿಸಿನೀರಿನ ಭಾಗ್ಯವೇ ಇರಲಿಲ್ಲ, ತಣ್ಣೀರೇ ಗತಿಯಾಗಿತ್ತು. ಆದರೆ ಪ್ರಾಯಶಃ ಇದೇ ಕಾರಣಕ್ಕೆ ಇವರಲ್ಲಿ ಅನಾರೋಗ್ಯ, ಅಶಕ್ತಿ, ನಪುಂಸಕತ್ವ ಮೊದಲಾದವು ಇರಲೇ ಇಲ್ಲ. ಒಂದು ವೇಳೆ ನೀವು ಬಿಸಿನೀರಿನ ಸ್ನಾನವನ್ನು ಇಷ್ಟಪಡುವ ಪುರುಷರಾಗಿದ್ದರೆ ನಿಮ್ಮ ನಂಬಿಕೆಗಳನ್ನು ಕೆಳಗಿನ ಮಾಹಿತಿ ಬದಲಿಸಬಲ್ಲುದು. ವಾಸ್ತವವಾಗಿ ಪುರುಷರಿಗೆ ಬೆಳಗ್ಗಿನ ಸ್ನಾನ ತಣ್ಣೀರಿನದ್ದಾದರೇ ಆರೋಗ್ಯಕರ ಎಂದು ಈಗ ಖಚಿತವಾಗಿದೆ.....

ವಾಸ್ತವಾಂಶ #1

ವಾಸ್ತವಾಂಶ #1

ಬಿಸಿನೀರಿನ ಸ್ನಾನವನ್ನು ಇಷ್ಟಪಡುವ ಪುರುಷರಲ್ಲಿ ನಪುಂಸಕತ್ವದ ತೊಂದರೆ ಹೆಚ್ಚಾಗಿರುವುದು ಕಂಡುಬರುತ್ತದೆ. ಪುರುಷರ ದೇಹದ ತಾಪಮಾನಕ್ಕಿಂತಲೂ ಕೊಂಚ ಕಡಿಮೆ ತಾಪಮಾನದಲ್ಲಿ ವೀರ್ಯಾಣುಗಳು ಉತ್ಪತ್ತಿಯಾಗುವಂತೆ ನಿಸರ್ಗ ಪುರುಷರ ವೃಷಣಗಳನ್ನು ದೇಹದಿಂದ ಹೊರಗಿರಿಸಿದೆ. ತಾಪಮಾನಕ್ಕೆ ಅನುಗುಣವಾಗಿ ಹಿಗ್ಗುವಂತೆ ಮತ್ತು ಕುಗ್ಗುವಂತೆ ವೃಷಣದ ಚರ್ಮ ಅಪಾರ ನೆರಿಗೆಗಳನ್ನು ಹೊಂದಿದೆ. ಹೀಗಿರುವಾಗ ಬಲವಂತವಾಗಿ ಬಿಸಿಯನ್ನು ಉಣಿಸಿದರೆ ಇದು ವೀರ್ಯಾಣುಗಳ ಸಂಖ್ಯೆ ಹಾಗೂ ಗುಣಮಟ್ಟದ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಬಿಸಿ ಹೆಚ್ಚಾದಷ್ಟೂ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ.

ವಾಸ್ತವಾಂಶ #2

ವಾಸ್ತವಾಂಶ #2

ವಿಶೇಷವಾಗಿ ವಾತಾವರಣದಲ್ಲಿ ಚಳಿ ಇದ್ದಾಗ ಬಿಸಿನೀರಿನಲ್ಲಿ ಸ್ನಾನ ಮಾಡುವುದು ಹೃದಯಕ್ಕೆ ಅಪಾಯಕರ. ಇದು ಹೃದಯದ ಆಘಾತದ ಸಾಧ್ಯತೆಯ ಹಚ್ಚಳಕ್ಕೂ ಕಾರಣವಾಗಬಹುದು.

ವಾಸ್ತವಾಂಶ #3

ವಾಸ್ತವಾಂಶ #3

ಚರ್ಮದ ಹೊರಪದರಲ್ಲಿರುವ ಅತಿ ಸೂಕ್ಷ್ಮ ರಂಧ್ರಗಳಲ್ಲಿರುವ ಆರ್ದ್ರತೆಯನ್ನು ಬಿಸಿನೀರು ಬಸಿದು ಸೆಳೆದುಬಿಡುತ್ತದೆ. ಇದರ ಪರಿಣಾಮವಾಗಿ ಚರ್ಮ ಒಣಗುತ್ತದೆ ಹಾಗೂ ಪದರವೇಳುವುದು, ಸೀಳುವುದು ಮೊದಲಾದ ತೊಂದರೆಗಳು ಎದುರಾಗುತ್ತವೆ. ಒಣಚರ್ಮ ಸುಲಭವಾಗಿ ಘಾಸಿಗೊಳ್ಳುವುದರಿಂದ ಸಹಜ ಸೌಂದರ್ಯ ಉಡುಗುತ್ತದೆ.

ವಾಸ್ತವಾಂಶ #4

ವಾಸ್ತವಾಂಶ #4

ಕೆಲವಾರು ಸಂಶೋಧನೆಗಳ ಮೂಲಕ ತಣ್ಣೀರಿನ ಸ್ನಾನದಿಂದ ರೋಗ ನಿರೋಧಕ ಶಕ್ತಿ ಹೆಚ್ಚಿರುವುದನ್ನು ಕಂಡುಕೊಳ್ಳಲಾಗಿದೆ. ಇದಕ್ಕೆ ತದ್ವಿರುದ್ದವಾಗಿ ಬಿಸಿನೀರಿನ ಸ್ನಾನದಿಂದ ರೋಗ ನಿರೋಧಕ ಶಕ್ತಿ ಉಡುಗುವುದು ಕಂಡುಬಂದಿದೆ. ವಿಶೇಷವಾಗಿ ಮದ್ಯಪಾನ ಅಥವಾ ಬೇರಾವುದಾದರೂ ವ್ಯಸನದ ಅಮಲು ಆವರಿಸಿದಾಗ ಬಿಸಿನೀರಿನಿಂದ ಸ್ನಾನ ಮಾಡಿದರೆ ಅಪಾಯಕರವೂ ಆಗಿದೆ. ಇವು ಹೃದಯದ ಒತ್ತಡವನ್ನು ಒಳಗಿನಿಂದ ಮೊದಲೇ ಏರುಪೇರುಗೊಳಿಸಿದ್ದು ಇದರ ಮೇಲೆ ಬಿಸಿನೀರಿನ ಸ್ನಾನ ಹೃದಯದ ಬಡಿತದ ಗತಿಯನ್ನು ಇನ್ನಷ್ಟು ಏರುಪೇರುಗೊಳಿಸಿ ಆರೋಗ್ಯವನ್ನು ಜಟಿಲಗೊಳಿಸುತ್ತದೆ.

ವಾಸ್ತವಾಂಶ #5

ವಾಸ್ತವಾಂಶ #5

ಬಿಸಿನೀರಿನ ಸ್ನಾನದಿಂದ ರಕ್ತದ ಒತ್ತಡದಲ್ಲಿ ತಕ್ಷಣದ ಬದಲಾವಣೆ ಕಂಡುಬರಬಹುದು. ಚರ್ಮದ ಮೇಲೆ ಬಿಸಿನೀರು ಬೀಳುವ ಮೂಲಕ ರಕ್ತನಾಳಗಳು ಹಿಗ್ಗುತ್ತವೆ. ಇದಕ್ಕೆ vasodilation ಎನ್ನುತ್ತಾರೆ. ರಕ್ತನಾಳಗಳ ಒಳವ್ಯಾಸ ಹಿಗ್ಗಿರುವ ಕಾರಣ ಹೃದಯಕ್ಕೆ ಹೆಚ್ಚಿನ ಒತ್ತಡವನ್ನು ಹೇರಬೇಕಾಗುತ್ತದೆ. ಇದು ಕೊಂಚ ಅಪಾಯಕರ. ಅದರಲ್ಲೂ ಅಧಿಕ ರಕ್ತದ ಒತ್ತಡವಿರುವ ವ್ಯಕ್ತಿಗಳಿಗೆ ಇದು ಅಪಾಯವನ್ನು ಇನ್ನಷ್ಟು ಹೆಚ್ಚಿಸಬಹುದು.

ವಾಸ್ತವಾಂಶ #6

ವಾಸ್ತವಾಂಶ #6

ಕೆಲವು ವ್ಯಕ್ತಿಗಳಿಗೆ ಬಿಸಿನೀರಿನ ಸ್ನಾನದ ಬಳಿಕ ತಲೆಸುತ್ತುವುದು ಕಂಡುಬರಬಹುದು. ಏಕೆಂದರೆ ಇವರಲ್ಲಿ ರಕ್ತದ ಒತ್ತಡದ ಏರುಪೇರಿನ ತೊಂದರೆ ಮೊದಲೇ ಇದ್ದು ಬಿಸಿನೀರಿನ ಸ್ನಾನದ ಬಳಿಕ ಇನ್ನಷ್ಟು ಏರುಪೇರುಗೊಳ್ಳುವ ಮೂಲಕ ತಲೆ ಸುತ್ತುತ್ತದೆ.

ಉಪ್ಪು ನೀರು ಸ್ನಾನದ 10 ಅದ್ಭುತ ಆರೋಗ್ಯ ಪ್ರಯೋಜನಗಳು

English summary

Reasons to Stop Taking Hot Showers Every Morning

There are advantages of both hot showers and cold showers. But still, if you want to choose only one out of them, then choose cold showers especially if you are a male. Yes, for men cold showers are healthy anytime. Actually, cave men never got a chance to bath with hot water. They enjoyed better fertility, strength and immunity. If you are still arguing with others about hot water then read on to know why you must give up hot showers and enjoy cold showers.
Story first published: Friday, June 2, 2017, 20:03 [IST]
X
Desktop Bottom Promotion