Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಆರೋಗ್ಯ ಟಿಪ್ಸ್: ಪುಟ್ಟ ಜೀರಿಗೆಯಲ್ಲಿ ಬೆಟ್ಟದಷ್ಟು ಗುಣಗಳು
ಆರೋಗ್ಯಕರ ಪರಿಣಾಮಗಳನ್ನು ಕಂಡುಕೊಂಡ ನಮ್ಮ ಹಿರಿಯರು ಪ್ರತಿದಿನ ಒಂದು ಔಷಧಿಯಂತೆ ಉಪಯೋಗಿಸುತ್ತಿದ್ದರು. ಕೇರಳ ಮತ್ತು ತಮಿಳುನಾಡುಗಳಲ್ಲಂತೂ ಹೋಟೆಲುಗಳಲ್ಲಿ ಮತ್ತು ಮನೆಗಳಲ್ಲಿ ಕುಡಿಯಲು ಜೀರಿಗೆ ಕುದಿಸಿ ಸೋಸಿದ ನೀರನ್ನೇ ಕುಡಿಯಲು ನೀಡುತ್ತಾರೆ
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಯನ್ನು ಕೇಳಿರಬಹುದು...ಇದು ನಮ್ಮ ಅಡುಗೆಮನೆಯಲ್ಲಿರುವ ಜೀರಿಗೆಗೆ ಸರಿಯಾಗಿ ಅನ್ವಯವಾಗುತ್ತದೆ....ಹೌದು, ಗಾತ್ರದಲ್ಲಿ ಚಿಕ್ಕದಾಗಿದ್ದರೂ ಕಾರ್ಯದಲ್ಲಿ ದೊಡ್ಡದನ್ನು ಸಾಧಿಸುವ ಯಾವುದೇ ಕ್ರಿಯೆ ಅಥವಾ ವ್ಯಕ್ತಿಯನ್ನು ಜೀರಿಗೆಯೊಂದಿಗೆ ಹೋಲಿಸಲಾಗುತ್ತದೆ! ಏಕೆಂದರೆ ಈ ಪುಟ್ಟ ಜೀರಿಗೆಯಲ್ಲಿ ಆರೋಗ್ಯಕರ ಗುಣಗಳ ಗಣಿಯೇ ಇದೆ. ಆರೋಗ್ಯಕರ ಮಾತ್ರವಲ್ಲ, ರುಚಿಕರವೂ ಆದುದರಿಂದ ಭಾರತದ ಬಹುತೇಕ ಎಲ್ಲಾ ಮಸಾಲೆಯ ಅಡುಗೆಗಳಲ್ಲಿ ಒಗ್ಗರಣೆ, ಮಸಾಲೆಗಳಲ್ಲಿ ಉಪಯೋಗಿಸಲಾಗುತ್ತದೆ. ಗರ್ಭಿಣಿಯರ ಸಮಸ್ಯೆಗಳಿಗೆ ದಿವ್ಯೌಷಧ ಜೀರಿಗೆ ನೀರು
ಜೀರಿಗೆಯನ್ನು ನೇರವಾಗಿ ಇಲ್ಲವೇ ಪುಡಿಯ ರೂಪದಲ್ಲಿಯೂ ಸಹ ಬಳಸಿಕೊಳ್ಳಬಹುದು. ಜೀರಿಗೆಯು ಜೀರ್ಣಕ್ರಿಯೆಗೆ ಪೂರಕವಾಗಿರುವುದರಿ೦ದ, ಜೀರಿಗೆಯನ್ನು ಭಾರತೀಯ ಶೈಲಿಯ ಹೆಚ್ಚುಕಡಿಮೆ ಎಲ್ಲಾ ಆಹಾರಪದಾರ್ಥಗಳಲ್ಲಿಯೂ ಬಳಸಿಕೊಳ್ಳುತ್ತಾರೆ. ಜೊತೆಗೆ, ಜೀರಿಗೆಯು ಚಿಕಿತ್ಸಾತ್ಮಕ ಗುಣಲಕ್ಷಣಗಳನ್ನೂ ಹೊ೦ದಿದೆ. ಜೀರಿಗೆಯ ಆರೋಗ್ಯಕರ ಗುಣಗಳಲ್ಲಿ ಪ್ರಮುಖವಾದುದನ್ನು ಹೆಸರಿಸುವುದಾದರೆ ಮಧುಮೇಹವನ್ನು ತಡೆಗಟ್ಟುವುದು, ದುರ್ಮಾಂಸ, ಶಿಲೀಂಧ್ರದ ಸೋಂಕು ಮೊದಲಾದವನ್ನು ಪರಿಗಣಿಸಬಹುದು. ಜೀರಿಗೆ ಬೆರೆಸಿದ ಬೆಲ್ಲದ ನೀರು, ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ
ಇದರ ಆರೋಗ್ಯಕರ ಪರಿಣಾಮಗಳನ್ನು ಕಂಡುಕೊಂಡ ನಮ್ಮ ಹಿರಿಯರು ಪ್ರತಿದಿನ ಒಂದು ಔಷಧಿಯಂತೆ ಉಪಯೋಗಿಸುತ್ತಿದ್ದರು. ಕೇರಳ ಮತ್ತು ತಮಿಳುನಾಡುಗಳಲ್ಲಂತೂ ಹೋಟೆಲುಗಳಲ್ಲಿ ಮತ್ತು ಮನೆಗಳಲ್ಲಿ ಕುಡಿಯಲು ಜೀರಿಗೆ ಕುದಿಸಿ ಸೋಸಿದ ನೀರನ್ನೇ ಕುಡಿಯಲು ನೀಡುತ್ತಾರೆ.... ಬನ್ನಿ ಈ ಪುಟ್ಟ ಜೀರಿಗೆಯ ಇನ್ನಷ್ಟು ಪ್ರಯೋಜನಗಳನ್ನು ಮುಂದೆ ಓದಿ....

ಅಸ್ತಮಾ ಅಥವಾ ಉಬ್ಬಸ ರೋಗದ ನಿಯಂತ್ರಣಕ್ಕೆ
ಅಸ್ತಮಾ ಅಥವಾ ಉಬ್ಬಸ ರೋಗಕ್ಕಾಗಿ ಉಬ್ಬಸರೋಗಕ್ಕೆ ದಾರಿ ಮಾಡಿಕೊಡಬಲ್ಲ ಉರಿಯೂತವನ್ನು ಶಮನಗೊಳಿಸುವ ಸಾಮರ್ಥ್ಯವು ಜೀರಿಗೆ ಕಾಳುಗಳಿಗಿರುವುದರಿ೦ದ, ಉಬ್ಬಸ ರೋಗದಿ೦ದ ಬಳಲುತ್ತಿರುವವರ ಪಾಲಿಗೆ ಜೀರಿಗೆಯು ಅತ್ಯುತ್ತಮವಾದುದಾಗಿದೆ.

ರಕ್ತ ಶುದ್ಧೀಕರಣಗೊಳಿಸಲು
ರಕ್ತವನ್ನು ಶುದ್ಧೀಕರಣಗೊಳಿಸುತ್ತದೆ ರಕ್ತವನ್ನು ಶುದ್ಧೀಕರಿಸುವ ವಿಚಾರದಲ್ಲಿಯೂ ಸಹ ಜೀರಿಗೆ ಕಾಳುಗಳು ಮಹತ್ತರ ಭೂಮಿಕೆಯನ್ನು ನಿಭಾಯಿಸಬಲ್ಲವು. ನಿಮ್ಮ ಆಹಾರಕ್ರಮದ ಮೂಲಕ ಪುಡಿಯ ರೂಪದಲ್ಲಿ ಜೀರಿಗೆಯನ್ನು ಸೇವಿಸುವುದು ನಿಮ್ಮ ರಕ್ತದ ಸ್ವಾಸ್ಥ್ಯದ ದೃಷ್ಟಿಯಿ೦ದ ಒಳ್ಳೆಯದು.

ಚಯಾಪಚಯ ಕ್ರಿಯೆಯ ಮೇಲೆ ಪ್ರಭಾವ ಬೀರುತ್ತದೆ
ಆರೋಗ್ಯಕರವಾದ ರೀತಿಯಲ್ಲಿ ಚಯಾಪಚಯ ಕ್ರಿಯೆಯನ್ನು ಕಾಪಾಡಿಕೊಳ್ಳಲೂ ಸಹ ಜೀರಿಗೆ ಕಾಳುಗಳು ನೆರವಾಗಬಲ್ಲವು. ಜೀರಿಗೆಯ ಆರೋಗ್ಯಕಾರಿ ಪ್ರಯೋಜನಗಳ ಪೈಕಿ ಇದೂ ಕೂಡ ಒ೦ದು.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಹಾಗೂ ದೇಹಕ್ಕೆ ಹಾನಿಕರವಾದ ಫ್ರೀ ರ್‍ಯಾಡಿಕಲ್ ಕಣಗಳನ್ನು ಮತ್ತು ಕೆಲವು ಸೋಂಕುಗಳನ್ನು ತಡೆಗಟ್ಟುವ ಮೂಲಕ ಆರೋಗ್ಯವನ್ನು ಕಾಪಾಡುತ್ತದೆ.

ನಿದ್ರಾಹೀನತೆಯನ್ನು ತೊಡೆಯುತ್ತದೆ
ನಿದ್ದೆ ಬರದೇ ಹೊರಳಾಡುವ ತೊಂದರೆಯಿಂದ ಮುಕ್ತಿ ಪಡೆಯಲು ರಾತ್ರಿ ಊಟದ ಬಳಿಕ ಸಾಕಷ್ಟು ಜೀರಿಗೆ ನೀರು ಕುಡಿದು ಕೊಂಚಕಾಲ ಅಡ್ಡಾಡಿ ಬಳಿಕ ಮಲಗಿದರೆ ತಡೆರಹಿತ ನಿದ್ದೆ ಆವರಿಸುತ್ತದೆ.

ಗಂಟಲ ಬೇನೆ, ಗಂಟಲ ಕೆರೆತ ಇದ್ದರೆ
ಗಂಟಲ ಬೇನೆ, ಗಂಟಲ ಕೆರೆತ ಮೊದಲಾದ ತೊಂದರೆಗಳಿಗೆ ಜೀರಿಗೆ ನೀರನ್ನು ಕುಡಿಯುವುದರಿಂದ ಕೊಂಚ ಪರಿಹಾರ ದೊರಕುತ್ತದೆ. ಆದರೆ ಉತ್ತಮ ಪರಿಹಾರ ಬೇಕೆಂದರೆ ಕೊಂಚ ನೀರಿನಲ್ಲಿ ಹೆಚ್ಚು ಪ್ರಮಾಣದಲ್ಲಿ ಜೀರಿಗೆಯನ್ನು ಹೆಚ್ಚು ಕಾಲ ಕುದಿಸಿ ಗಾಢವಾಗಿಸಿ ಬಳಿಕ ಸೋಸಿ ಉಗುರುಬೆಚ್ಚಗಾಗುವಷ್ಟು ತಣಿಸಿ ಗಳಗಳ ಮಾಡಿ ಉಗುಳಬೇಕು. ಇದು ಗಂಟಲಕೆರೆತವನ್ನು ತಕ್ಷಣವೇ ನಿಲ್ಲಿಸುತ್ತದೆ.

ಇತರ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು....
ಕೆಲವು ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುತ್ತದೆ ಕೆಲವು ಚಿಕ್ಕ ಪುಟ್ಟ ದೊಂದರೆಗಳಾದ ಹಲ್ಲುನೋವು, ಕಣ್ಣಿನಲ್ಲಿ ತುರಿಕೆ, ಕರುಳಿನಲ್ಲಿಉರಿ, ಸಂಧಿವಾತ, ಉಸಿರಾಟದಲ್ಲಿ ಕಷ್ಟವಾಗುವುದು, ಊತ, ನಡುಕ ಮೊದಲಾದ ತೊಂದರೆಗಳು ಜೀರಿಗೆ ನೀರನ್ನು ನಿಯಮಿತವಾಗಿ ಕುಡಿಯುತ್ತಿದ್ದರೆ ಕಾಡುವುದಿಲ್ಲ.

ಜೀರಿಗೆ ನೀರು ತಯಾರಿಸುವ ವಿಧಾನ
ಕೊಂಚ ನೀರನ್ನು ಕುದಿಯಲು ಪ್ರಾರಂಭಿಸಿದ ಬಳಿಕ ಹತ್ತು ನಿಮಿಷದವರೆಗೆ ಕುದಿಯಲು ಬಿಟ್ಟು ಬಳಿಕ ಕೊಂಚ ಜೀರಿಗೆಯನ್ನು ಹಾಕಿ ಮತ್ತೂ ಹತ್ತು ನಿಮಿಷ ಕುದಿಯಲು ಬಿಡಬೇಕು. ಬಳಿಕ ಜೀರಿಗೆಯನ್ನು ಸೋಸಿ ತಣಿಯಲು ಬಿಡಿ, ಉಗುರು ಬೆಚ್ಚಗಿರುವಂತೆಯೇ ಕುಡಿಯಲು ಪ್ರಾರಂಭಿಸಿ. ಈ ನೀರನ್ನು ಊಟಕ್ಕೂ ಮೊದಲು ಸೂಪ್‌ನಂತೆಯೂ ಸೇವಿಸಬಹುದು. ಈ ನೀರಿನ ಗುಣವನ್ನು ಹೆಚ್ಚಿಸಲು ಪ್ರಮುಖವಾದ ಪೋಷಕಾಂಶವೆಂದರೆ cuminaldehyde ಎಂಬ ಫೈಟೋಕೆಮಿಕಲ್. ಜೀರಿಗೆಯ ರುಚಿಗೂ ಈ ಪೋಷಕಾಂಶವೇ ಕಾರಣ. ಬನ್ನಿ, ಈ ಪುಟ್ಟ ಜೀರಿಗೆಯ ದೊಡ್ಡ ಗುಣಗಳನ್ನು ನೋಡೋಣ:

ಮಲವಿಸರ್ಜನೆಯ ಸಮಸ್ಯೆಗೆ
ಜೀರಿಗೆಯು ಒ೦ದು ನೈಸರ್ಗಿಕ ಮಲವಿರೇಚಕದ ರೂಪದಲ್ಲಿ ಕಾರ್ಯವೆಸಗುತ್ತದೆಯೆ೦ದು ನ೦ಬಲಾಗಿದೆ. ನಿಮಗೊ೦ದುವೇಳೆ ಮಲವಿಸರ್ಜನೆಯು ಒ೦ದು ಸಮಸ್ಯೆಯಾಗಿದ್ದಲ್ಲಿ, ನೀವು ಜೀರಿಗೆ ಪುಡಿಯನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳಲು ಪ್ರಯತ್ನಿಸಬಹುದು.



Click it and Unblock the Notifications








