Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
ಯೋನಿಯ ದುರ್ವಾಸನೆ ಸಮಸ್ಯೆ! ಸಂಕೋಚ ಪಟ್ಟರೆ ಇನ್ನಷ್ಟು ಸಂಕಷ್ಟ!
ದೇಹದ ಪ್ರತಿಯೊಂದು ಭಾಗವು ಸ್ವಚ್ಛವಾಗಿದ್ದರೆ ನಮಗೆ ಅನಾರೋಗ್ಯ ಬರುವ ಸಾಧ್ಯತೆಗಳು ತುಂಬಾ ಕಡಿಮೆ ಇರುವುದು. ಆದರೆ ದೇಹದ ಕೆಲವೊಂದು ಅಂಗಗಳು ವಾಸನೆ ಉಂಟುಮಾಡುವುದು. ಇದರಲ್ಲಿ ಪ್ರಮುಖವಾಗಿ ಬಾಯಿ, ಕಿವಿ, ಯೋನಿ ಇತ್ಯಾದಿ. ಅದರಲ್ಲೂ ಯೋನಿಯಲ್ಲಿ ಕೆಲವೊಂದು ಸಲ ಕೆಟ್ಟ ವಾಸನೆ ಬರಲು ಆರಂಭವಾಗುವುದು. ವಾಸನೆಯು ಬೇರೆ ಬೇರೆ ರೀತಿಯಾಗಿರುವ ಕಾರಣ ನಿಮಗೆ ತುಂಬಾ ಚಿಂತೆಯಾಗಬಹುದು.
ಅದಕ್ಕೆ ವಾಸನೆ ಬರಲು ಕಾರಣವೇನೆಂದು ಮೊದಲು ತಿಳಿದುಕೊಳ್ಳಬೇಕು. ಜನನಾಂಗದ ಸುತ್ತಲು ಇರುವ ಯೀಸ್ಟ್ ಮತ್ತು ಬ್ಯಾಕ್ಟೀರಿಯಾಗಳು ವಾಸನೆ ಉಂಟು ಮಾಡುವುದು. ಸೂಕ್ಷ್ಮಾಣು ಜೀವಿಗಳು ಆರೋಗ್ಯಕರ ಸಮತೋಲನ ಕಾಯ್ದುಕೊಂಡಿದ್ದರೆ ಹೆಚ್ಚು ವಾಸನೆ ಬರದು. ಆದರೆ ಸಮತೋಲನ ಕಳಕೊಂಡಾಗ ವಾಸನೆ ಬರುವುದು. ಇದು ಸೋಂಕೇ ಅಥವಾ ಗಂಭೀರ ಸಮಸ್ಯೆಯೇ? ಯೋನಿಯ ವಿವಿಧ ರೀತಿಯ ವಾಸನೆ ಬಗ್ಗೆ ಇಲ್ಲಿ ವಿವರ ನೀಡಲಾಗಿದೆ....

ಮೀನಿನಂತ ವಾಸನೆ ಬಂದರೆ.....
ಮೀನಿನಂತಹ ವಾಸನೆ ಕಂಡುಬಂದರೆ ಇದು ಬ್ಯಾಕ್ಟೀರಿಯಾದಿಂದ ಹೀಗೆ ಆಗುವುದು. 15ರಿಂದ 44 ಹರೆಯದ ಮಹಿಳೆಯರಲ್ಲಿ ಈ ರೀತಿಯ ವಾಸನೆ ಕಾಣಿಸಿಕೊಳ್ಳುವುದು.

ಇದು ಹೇಗೆ ಬರುವುದು
ಅತಿಯಾಗಿ ಬ್ಯಾಕ್ಟೀರಿಯಾ ಉತ್ಪತ್ತಿಯಾದರೆ ಅದರಿಂದ ಬಿವಿ ಉಂಟಾಗುವುದು. ಇದು ಯಾವುದೇ ಹಾನಿ ಉಂಟು ಮಾಡುವುದಿಲ್ಲ. ಆದರೆ ವಾಸನೆ ಕಡಿಮೆಯಾಗಿ ಮೊದಲಿನ ಸ್ಥಿತಿಗೆ ಬರಲು ಯೋನಿಯ ಪಿಎಚ್ ಮಟ್ಟ ಪುನರ್ ಸ್ಥಾಪಿಸುವುದು ಒಳ್ಳೆಯದು. ವೈದ್ಯರನ್ನು ಭೇಟಿಯಾಗಿ ಆ್ಯಂಟಿಬಯೋಟಿಕ್ ಪಡೆಯಿರಿ.

ಯೀಸ್ಟ್ ನಿಂದ ಬರುವ ವಾಸನೆ ಹೇಗಿರುವುದು?
ಯೀಸ್ಟ್ ಸೋಂಕಿನಿಂದ ಉಂಟಾಗುವಂತಹ ವಾಸನೆಯು ಅಷ್ಟು ಕೆಟ್ಟದಾಗಿರುವುದಿಲ್ಲ. ಆದರೆ ಚೀಸ್ ನಂತಹ ದ್ರವು ಹೊರಬರುವುದು. ಇದರಿಂದ ತುರಿಕೆ ಉಂಟಾಗಬಹುದು.

ಇದನ್ನು ಪತ್ತೆ ಮಾಡುವುದು ಹೇಗೆ?
ಮೂತ್ರ ವಿಸರ್ಜನೆ ವೇಳೆ ಜನನಾಂಗದ ಸುತ್ತ ಉರಿ ಅಥವಾ ನೋವು, ಯೀಸ್ಟ್ ಸೋಂಕಿನ ಕೆಲವೊಂದು ಲಕ್ಷಣಗಳಾಗಿವೆ.

ಮಸ್ಕಿ ವಾಸನೆಯ ಅರ್ಥವೇನು?
ಒಳ ಉಡುಪಿನ ಬಟ್ಟೆಯಿಂದಾಗಿ ಇಂತಹ ವಾಸನೆ ಬರಬಹುದು. ಬೆವರು ಒಳ ಉಡುಪಿನಲ್ಲಿ ನಿಲ್ಲುವುದರಿಂದ ಈ ವಾಸನೆ ಬರಬಹುದು. ವ್ಯಾಯಾಮ ಮಾಡುವ ವೇಳೆ ಬಿಗಿಯಾದ ಒಳ ಉಡುಪು ಧರಿಸಿಕೊಂಡು ಹೋಗಿದ್ದರೆ ಆಗ ಈ ರೀತಿಯ ವಾಸನೆ ನಿಮಗೆ ಕಂಡುಬರುವುದು.

ಇದರಿಂದ ಸಮಸ್ಯೆಯಿದೆಯಾ?
ಇಲ್ಲ, ಇದು ಸ್ನಾನ ಮಾಡಿದ ಬಳಿಕ ಕಡಿಮೆಯಾಗುವುದು. ವಾಸನೆ ಹಾಗೆ ಉಳಿದುಕೊಂಡಿದ್ದರೆ ನೀವು ಹತ್ತಿಯ ಒಳ ಉಡುಪು ಧರಿಸಿಕೊಳ್ಳಿ.

ಲೋಹದಂತಹ ವಾಸನೆ ಬಂದರೆ?
ರಕ್ತದಲ್ಲಿ ಕಬ್ಬಿನಾಂಶವಿರುವುದು. ಇದರಿಂದ ಲೋಹದಂತಹ ವಾಸನೆ ಬರಬಹುದು. ಋತುಚಕ್ರದ ಬಳಿಕ ಲೋಹದಂತಹ ವಾಸನೆಯು ಕಡಿಮೆಯಾಗುವುದು. ಯಾವುದೇ ರೀತಿಯ ಸುಗಂಧ ದ್ರವ್ಯ ಬಳಸಬೇಡಿ. ಇದರಿಂದ ವಾಸನೆ ಮತ್ತಷ್ಟು ಕೆಡಬಹುದು.

ಇತರ ಕೆಟ್ಟ ವಾಸನೆಗಳು
ಕೆಲವು ಸಂದರ್ಭಗಳಲ್ಲಿ ಇಂತಹ ಕೆಟ್ಟ ವಾಸನೆಗಳು ಬರಬಹುದು. ಟ್ಯಾಂಪನ್ ನ್ನು ಒಂದು ದಿನಕ್ಕಿಂತ ಹೆಚ್ಚು ಬಿಟ್ಟರೆ ಈ ರೀತಿಯ ವಾಸನೆ ಬರುವುದು. ಬ್ಯಾಕ್ಟೀರಿಯಾ ಬೆಳೆಯುವುದೇ ಇದಕ್ಕೆ ಕಾರಣವಾಗಿದೆ. ಟ್ಯಾಂಪನ್ ಸಿಲುಕಿಕೊಂಡಿದ್ದರೆ ಅದರಿಂದ ತುಂಬಾ ಅಪಾಯಕಾರಿ ಪರಿಣಾಮವಾಗಬಹುದು. ತಕ್ಷಣ ವೈದ್ಯರನ್ನು ಭೇಟಿಯಾಗಿ.



Click it and Unblock the Notifications