ಎದೆಯಲ್ಲುಂಟಾಗುವ ದಟ್ಟಣೆ ತಿಳಿಗೊಳಿಸಲು ಸರಳ ಮನೆಮದ್ದುಗಳು

By: Hemanth
Subscribe to Boldsky

ಎದೆಯಲ್ಲಿ ದಟ್ಟಣೆ ಉಂಟಾಗುವ ಸಮಸ್ಯೆಯು ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಸಲ ಬಂದೇ ಬರುತ್ತದೆ. ಮಕ್ಕಳು ಹಾಗೂ ದೊಡ್ಡವರಲ್ಲಿ ಇದು ಸಾಮಾನ್ಯ ಸಮಸ್ಯೆಯಾಗಿದೆ. ಇಂತಹ ಸಮಸ್ಯೆಯಾದಾಗ ಹೆಚ್ಚಿನವರು ಇದನ್ನು ಕಡೆಗಣಿಸುವರು ಮತ್ತು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ಎದೆ ದಟ್ಟಣೆಯ ಬಗ್ಗೆ ಆರಂಭದಲ್ಲಿಯೇ ಚಿಕಿತ್ಸೆ ಪಡೆದುಕೊಂಡರೆ ಅದರಿಂದ ಅಸ್ತಮಾದಂತಹ ಸಮಸ್ಯೆ ಬರುವ ಸಾಧ್ಯತೆಯು ಕಡಿಮೆಯಾಗುವುದು. ಎದೆ ದಟ್ಟಣಿಯು ಬ್ಯಾಕ್ಟೀರಿಯಾ ಮತ್ತು ಅಲರ್ಜಿಯಿಂದ ಉಂಟಾಗುವುದು. ಇದರ ಪ್ರಮುಖ ಲಕ್ಷಣಗಳೆಂದರೆ ಅದರಿಂದ ಉಸಿರಾಟದ ಸಮಸ್ಯೆಯಾಗುವುದು.

ಎಚ್ಚರ: ಎದೆ ನೋವು ಎನ್ನುವುದು ಸಾಮಾನ್ಯ ಕಾಯಿಲೆ ಅಲ್ಲ..!

ಶ್ವಾಸಕೋಶದಲ್ಲಿ ಕಫ ತುಂಬಿಕೊಂಡು ಉಸಿರಾಟದ ಮೇಲೆ ಪರಿಣಾಮವಾಗುವುದು. ಇದರಿಂದ ಶ್ವಾಸಕೋಶದ ವ್ಯವಸ್ಥೆಗೆ ಕಿರಿಕಿರಿಯಾಗುವುದು. ಎದೆ ದಟ್ಟಣೆ ಉಂಟಾದರ ಅದರಿಂದ ಎದೆ ಭಾರವಾಗುವುದು, ಎದೆನೋವು, ಕಫ, ಉಸಿರಾಟದ ಸಮಸ್ಯೆ ಮತ್ತು ಉಬ್ಬಸ ಕಂಡುಬರಬಹುದು. ಬಾಯಿಯಲ್ಲಿರುವ ಕಫವನ್ನು ಬೇರೆಯವರ ಮುಂದೆ ಹೊರಗೆ ಹಾಕುವುದು ತುಂಬಾ ಮುಜುಗರ ಸಂಗತಿಯಾಗಿರುವುದು. ಇಂತಹ ಸಮಯದಲ್ಲಿ ಈ ಸಮಸ್ಯೆಯನ್ನು ಸುಲಭವಾಗಿ ಪರಿಹಾರ ಮಾಡಲು ಕೆಲವೊಂದು ವಿಧಾನಗಳು ಇವೆ. ಇದನ್ನು ಪಾಲಿಸಿಕೊಂಡು ಹೋಗಿ...  

ಬಿಸಿ ನೀರು ಕುಡಿಯುವುದು

ಬಿಸಿ ನೀರು ಕುಡಿಯುವುದು

ಎದೆ ದಟ್ಟಣೆ ಉಂಟಾಗಿರುವಂತಹ ಸಂದರ್ಭದಲ್ಲಿ ನಿಮಗೆ ಬಾಯಾರಿಕೆಯಾದ ಸಮಯದಲ್ಲೂ ಬಿಸಿ ನೀರು ಕುಡಿಯಲು ಪ್ರಯತ್ನಿಸಿ. ಎದೆಯಲ್ಲಿ ಜಮೆಯಾಗಿರುವಂತಹ ಶ್ಲೇಷ್ಮವನ್ನು ಬಿಸಿ ನೀರು ಸಡಿಲಗೊಳಿಸುವುದು. ಇದರಿಂದ ಕಫ ಕಡಿಮೆಯಾಗುವುದು. ಈ ರೀತಿಯಾಗಿ ನಿಮಗೆ ಆರಾಮ ಸಿಗುವುದು.

ಹಾಲು+ಅರಿಶಿನ+ಜೇನು

ಹಾಲು+ಅರಿಶಿನ+ಜೇನು

ಎದೆ ದಟ್ಟಣೆಗೆ ಹಲವಾರು ಶತಮಾನಗಳಿಂದ ಮಾಡಿಕೊಂಡು ಬಂದಿರುವಂತಹ ಮನೆಮದ್ದು ಇದಾಗಿದೆ. ಅರಶಿನದಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇದೆ ಎಂದು ತಿಳಿದಿದೆ. ಇದರಲ್ಲಿ ಇರುವ ಆ್ಯಂಟಿಆಕ್ಸಿಡೆಂಟ್ ಹಲವಾರು ಆರೋಗ್ಯ ಸಮಸ್ಯೆ ನಿವಾರಣೆ ಮಾಡುವುದು. ಒಂದು ಲೋಟ ಬಿಸಿ ಹಾಲಿಗೆ ಒಂದು ಚಮಚ ಅರಿಶಿನ ಮತ್ತು ಎರಡು ಚಮಚ ಜೇನುತುಪ್ಪ ಹಾಕಿಕೊಳ್ಳಿ. ಒಂದು ಚಿಟಿಕೆ ಕರಿಮೆಣಸಿನ ಹುಡಿ ಹಾಕಿ. ಬಿಸಿಯಾಗಿರುವಾಗಲೇ ಈ ಹಾಲನ್ನು ಕುಡಿದರೆ ಎದೆ ದಟ್ಟಣೆ ಕಡಿಮೆ ಮಾಡಬಹುದು.

ಲಿಂಬೆರಸ ಮತ್ತು ಜೇನುತುಪ್ಪ

ಲಿಂಬೆರಸ ಮತ್ತು ಜೇನುತುಪ್ಪ

ತಾಜಾ ಲಿಂಬೆಹಣ್ಣಿನ ರಸ ಮತ್ತು ಜೇನುತುಪ್ಪ ತೆಗೆದುಕೊಳ್ಳಿ. ಒಂದು ಲೋಟ ಬಿಸಿ ನೀರಿಗೆ ಇದನ್ನು ಹಾಕಿ. ಎದೆ ದಟ್ಟಣೆ ನಿವಾರಣೆಗೆ ಇದು ಒಳ್ಳೆಯ ಮದ್ದು. ವೇಗವಾಗಿ ಉಪಶಮನ ಪಡೆಯಬೇಕಾದರೆ ಬೆಳಗ್ಗೆ ಮತ್ತು ರಾತ್ರಿ ವೇಳೆ ಇದನ್ನು ಕುಡಿಯಬೇಕು. ಜೇನುತುಪ್ಪವು ಶ್ವಾಸಕೋಶದಲ್ಲಿ ಇರುವಂತಹ ಸೋಂಕನ್ನು ಕಡಿಮೆ ಮಾಡುವುದು ಮತ್ತು ಲಿಂಬೆಯಲ್ಲಿರುವ ಆಮ್ಲೀಯ ಗುಣವು ಕಫವನ್ನು ತೆಳು ಮಾಡುವುದು.

ಬಿಸಿ ನೀರು ಮತ್ತು ಉಪ್ಪಿನ ಮಿಶ್ರಣದಿಂದ ಬಾಯಿ ಮುಕ್ಕಳಿಸಿ

ಬಿಸಿ ನೀರು ಮತ್ತು ಉಪ್ಪಿನ ಮಿಶ್ರಣದಿಂದ ಬಾಯಿ ಮುಕ್ಕಳಿಸಿ

ಎದೆಯು ಕಫದಿಂದ ಮುಕ್ತಿ ಪಡೆಯುವ ತನಕ ದಿನದಲ್ಲಿ ಹಲವಾರು ಸಲ ಉಪ್ಪು ಬೆರೆಸಿದ ಬಿಸಿ ನೀರಿನಿಂದ ಬಾಯಿ ಮುಕ್ಕಳಿಸಿಕೊಳ್ಳಿ. ಇದನ್ನು ದಿನದಲ್ಲಿ 3-4 ಸಲ ಮಾಡಿ. ಉಪ್ಪು ಎದೆಯಲ್ಲಿರುವ ಕಫವನ್ನು ತೆಗೆಯುವುದು ಮತ್ತು ಬಿಸಿ ನೀರು ಗಂಟಲಿನ ಕಿರಿಕಿರಿ ತಪ್ಪಿಸುವುದು. ಒಂದು ಲೋಟ ಬಿಸಿ ನೀರಿಗೆ ಒಂದು ಚಮಚ ಉಪ್ಪು ಹಾಕಿ ಬೆರೆಸಿ ಬಾಯಿ ಮುಕ್ಕಳಿಸಿಕೊಳ್ಳಿ.

ಶುಂಠಿ ಚಹಾ

ಶುಂಠಿ ಚಹಾ

ಉರಿಯೂತ ಶಮನಕಾರಿ ಗುಣವನ್ನು ಹೊಂದಿರುವಂತಹ ಶುಂಠಿಯು ತುಂಬಾ ಪರಿಣಾಮಕಾರಿ ಬೇರು. ಶುಂಠಿಯಲ್ಲಿ ಇರುವಂತಹ ಪಾಲಿಫೆನಾಲ್ಸ್ ನಿಂದಾಗಿ ಕಫದ ಸ್ರವಿಸುವಿಕೆ ನಿಲ್ಲುವುದು. ಚಹಾಕ್ಕೆ ಶುಂಠಿ ಹಾಕಿ ಸೇವಿಸಬಹುದು. ಒಂದು ಚಮಚ ತಾಜಾ ಶುಂಠಿಯನ್ನು ಕತ್ತರಿಸಿಕೊಂಡು ಒಂದು ಲೋಟ ಬಿಸಿ ನೀರಿಗೆ ಹಾಕಿ. ಶುಂಠಿಯ ರಸವು ಸರಿಯಾಗಿ ಹೊರಬರಲು ಬಿಡಿ. ಇದನ್ನು ಸೋಸಿಕೊಂಡು ಅದಕ್ಕೆ ಜೇನುತುಪ್ಪ ಬೆರೆಸಿ. ಇದನ್ನು ದಿನದಲ್ಲಿ ಮೂರು ಸಲ ಸೇವಿಸಿ.

ಶುಂಠಿ ಚಹಾ ತಯಾರಿಸುವ ವಿಧಾನ

ಸುಮಾರು ಮಧ್ಯಮಗಾತ್ರದ ಶುಂಠಿಯನ್ನು ತೊಳೆದು ಸಿಪ್ಪೆ ಸುಲಿಯಿರಿ. ಇದನ್ನು ತೆಂಗಿನಕಾಯಿ ತುರಿದಂತೆ ಚಿಕ್ಕ ಚಿಕ್ಕ ಎಳೆಗಳಾಗಿ ತುರಿಯಿರಿ ಅಥವಾ ಸಾಧ್ಯವಾದಷ್ಟು ಚಿಕ್ಕ ಚಿಕ್ಕ ತುಂಡುಗಳನ್ನು ಮಾಡಿ. ಇದನ್ನು ಒಂದು ಲೋಟದಷ್ಟು ಕುದಿಸಿದ ನೀರಿಗೆ ಹಾಕಿ ಮುಚ್ಚಳ ಮುಚ್ಚಿ ಹತ್ತರಿಂದ ಹದಿನೈದು ನಿಮಿಷ ಹಾಗೇ ಬಿಡಿ (ಮತ್ತೆ ಕುದಿಸಬಾರದು) ಈ ನೀರು ನಿಧಾನವಾಗಿ ತಣ್ಣಗಾಗಲು ಬಿಡಿ. ಬಳಿಕ ಈ ನೀರನ್ನು ನೋಸಿ ಕುಡಿಯಿರಿ. ರುಚಿಗೆ ಸ್ವಲ್ಪ ಜೇನು, ತುಳಸಿ ಎಲೆಗಳು ಅಥವಾ ಲಿಂಬೆರಸವನ್ನೂ ಸೇರಿಸಿ ಸವಿಯಬಹುದು. ಸ್ವಲ್ಪ ಒಗರು ಅನಿಸಿದರೆ ಸ್ವಲ್ಪ ಬೆಲ್ಲವನ್ನೂ ಸೇರಿಸಬಹುದು.

ಬ್ಲ್ಯಾಕ್ ಕಾಫಿ

ಬ್ಲ್ಯಾಕ್ ಕಾಫಿ

ಎದೆ ದಟ್ಟಣೆಯ ಪ್ರಮುಖ ಸಮಸ್ಯೆಯೆಂದರೆ ಕೆಮ್ಮು ಮತ್ತು ಉಸಿರಾಟದ ಸಮಸ್ಯೆ. ದಿನದಲ್ಲಿ ಒಂದು ಅಥವಾ ಎರಡು ಕಪ್ ಬ್ಲ್ಯಾಕ್ ಕಾಫಿ ಕುಡಿದರೆ ಅದರಿಂದ ಉಸಿರಾಟದ ಸಮಸ್ಯೆ ಕಡಿಮೆಯಾಗುವುದು. ಅದಾಗ್ಯೂ ಅತಿಯಾಗಿ ಬ್ಲ್ಯಾಕ್ ಕಾಫಿ ಸೇವನೆ ಮಾಡಿದರೆ ಅದರಿಂದ ರಕ್ತದೊತ್ತಡ ಮತ್ತು ಎದೆಬಡಿತವು ಹೆಚ್ಚಾಗುವಂತಹ ಸಾಧ್ಯತೆಗಳು ಇವೆ.

ಹಬೆ

ಹಬೆ

ಬಿಸಿ ನೀರಿನ ಹಬೆಗೆ ಮುಖವನ್ನು ಒಡ್ಡಿದರೆ ಆಗ ಅದರ ಬಿಸಿ ಮತ್ತು ತೇವವು ಎದೆಯಲ್ಲಿ ತುಂಬಿರುವ ಕಫವನ್ನು ಕಡಿಮೆ ಮಾಡುವುದು. ಒಂದು ಲೋಟ ನೀರನ್ನು ಬಿಸಿ ಮಾಡಿ ಮತ್ತು ಕುದಿಯುತ್ತಿರಲಿ. ಇದಕ್ಕೆ ಪುದೀನಾದ ಎಣ್ಣೆ ಹಾಕಿದರೆ ತುಂಬಾ ಒಳ್ಳೆಯದು. ಪಾತ್ರೆಗೆ ಮುಖವನ್ನು ಒಡ್ಡಿ ಮತ್ತು ಟವೆಲ್ ನಿಂದ ಮುಚ್ಚಿಕೊಳ್ಳಿ. ಇದರಿಂದ ಆವಿಯು ಹೊರಹೋಗುವುದಿಲ್ಲ. ದೀರ್ಘ ಶ್ವಾಸ ತೆಗೆದುಕೊಳ್ಳಿ ಮತ್ತು ದಿನದಲ್ಲಿ 2-3 ಸಲ ಹೀಗೆ ಮಾಡಿ.

ಅರಿಶಿನ ಮತ್ತು ಬಿಸಿನೀರಿನಿಂದ ಬಾಯಿ ಮುಕ್ಕಳಿಸಿ

ಅರಿಶಿನ ಮತ್ತು ಬಿಸಿನೀರಿನಿಂದ ಬಾಯಿ ಮುಕ್ಕಳಿಸಿ

ಕಫ ಮತ್ತು ಎದೆನೋವಿನ ಸಮಸ್ಯೆಯನ್ನು ಅರಶಿನವು ತುಂಬಾ ಪರಿಣಾಮಕಾರಿಯಾಗಿ ನಿವಾರಣೆ ಮಾಡುವುದು. ಅರಶಿನದಲ್ಲಿ ಇರುವಂತಹ ಕರ್ಕ್ಯೂಮಿನ್ ಎನ್ನುವ ಅಂಶವು ಎದೆ ದಟ್ಟಣೆಯಿಂದ ತುಂಬಾ ಪರಿಣಾಮಕಾರಿಯಾಗಿ ಪರಿಹಾರ ನೀಡುವುದು. ಒಂದು ಲೋಟ ಬಿಸಿ ನೀರಿಗೆ ಒಂದು ಚಿಟಿಕೆ ಅರಶಿನ ಹಾಕಿಕೊಂಡು ಕಲಸಿ ಮತ್ತು ಅದರಿಂದ ಬಾಯಿ ಮುಕ್ಕಳಿಸಿ. ದಿನದಲ್ಲಿ ಹಲವಾರು ಸಲ ಹೀಗೆ ಮಾಡಿ.

ಈರುಳ್ಳಿ ರಸ ಮತ್ತು ಲಿಂಬೆ ರಸ

ಈರುಳ್ಳಿ ರಸ ಮತ್ತು ಲಿಂಬೆ ರಸ

ಈರುಳ್ಳಿಯಲ್ಲಿ ಸಲ್ಫರ್ ಮತ್ತು ಕ್ವೆರ್ಸೆಟನ್ ಅಂಶವು ಇದ್ದು, ಇದು ಕಫವನ್ನು ಸಡಿಲಗೊಳಿಸುವುದು. ಇದಕ್ಕೆ ಜೇನುತುಪ್ಪ ಮತ್ತು ಲಿಂಬೆರಸ ಹಾಕಿದರೆ ಇದು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುವುದು. ಸಣ್ಣ ಈರುಳ್ಳಿಯ ಜ್ಯೂಸ್ ನ್ನು ತಯಾರು ಮಾಡಿ. ಇದಕ್ಕೆ ಒಂದು ಚಮಚ ಲಿಂಬೆರಸ ಮತ್ತು ನೀರು ಹಾಕಿ. ಇದಕ್ಕೆ ಅರ್ಧ ಚಮಚ ಜೇನುತುಪ್ಪ ಕೂಡ ಬೆರೆಸಿ. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಕುಡಿಯುವ ಮೊದಲು ಸ್ವಲ್ಪ ಬಿಸಿ ಮಾಡಿ. ದಿನದಲ್ಲಿ ಮೂರು ಸಲ ಇದನ್ನು ಸೇವಿಸಿ.

ಉಪ್ಪು + ಬಿಸಿ ನೀರು

ಉಪ್ಪು + ಬಿಸಿ ನೀರು

ಒಂದು ಚಿಟಿಕೆ ಉಪ್ಪನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ ಕುಡಿಯಿರಿ. ದಿನದಲ್ಲಿ ಮೂರು ಸಲ ಹೀಗೆ ಮಾಡಿ. ಇದು ಲೋಳೆ ನಿವಾರಣೆ ಮಾಡಿ ಕಿರಿಕಿರಿ ಕಡಿಮೆ ಮಾಡುತ್ತದೆ

English summary

Quick Ways To Treat Chest Congestion At Home

Chest congestion hampers easy breathing by blocking the trachea and respiratory tract with mucus that builds up during this time. This literally irritates the respiratory system. Some of the symptoms that can be seen are a heavy chest, chest pain, cough, shortness of breath, and dizziness It is also quite embarrassing and annoying to keep clearing the throat of the mucus in front of other people. So, take the reins and tackle the problem in an easy way by following the given home methods meticulously.
Please Wait while comments are loading...
Subscribe Newsletter