For Quick Alerts
ALLOW NOTIFICATIONS  
For Daily Alerts

ಶೀಘ್ರವಾಗಿ ಹೊಟ್ಟೆಯ ಕೊಬ್ಬನ್ನು ಕರಗಿಸಲು ಹೀಗೆ ಮಾಡಿ

By Arshad
|

ಸ್ಥೂಲಕಾಯ ಇಂದು ವಿಶ್ವದಾದ್ಯಂತ ಕಾಡುತ್ತಿದ್ದು ವಿಶೇಷವಾಗಿ ಸೊಂಟದಲ್ಲಿ ತುಂಬಿರುವ ಹಾಗೂ ಹೊಟ್ಟೆಯ ಕೊಬ್ಬನ್ನು, ಕರಗಿಸುವುದೇ ಹೆಚ್ಚಿನವರ ಚಿಂತೆಯಾಗಿದೆ. ನಮ್ಮ ದೇಹದಲ್ಲಿ ಮೊದಲಾಗಿ ಸೊಂಟದ ಸುತ್ತ ಕೊಬ್ಬು ಸಂಗ್ರಹಿಸಲು ಪ್ರಾರಂಭವಾದರೂ ಬಳಸಿಕೊಳ್ಳುವಾಗ ಮಾತ್ರ ಈ ಕೊಬ್ಬನ್ನು ಕಟ್ಟ ಕಡೆಯದಾಗಿ ದೇಹ ಬಳಸುವ ಕಾರಣದಿಂದ ಇದನ್ನು ಕರಗಿಸುವುದು ಅಷ್ಟು ಸುಲಭವಲ್ಲ. ಅದರಲ್ಲೂ ಕೊಂಚವೇ ಬಿಗಿಯಾದ ಬಟ್ಟೆಗಳನ್ನು ಧರಿಸಿದರೂ ಸ್ಪಷ್ಟವಾಗಿ ಕಾಣುವ ಹೊಟ್ಟೆಯ ಗಾತ್ರ ಸಹಜ ಸೌಂದರ್ಯವನ್ನು ಅಳಿಸುವುದರ ಜೊತೆಗೇ ಕೆಲವಾರು ಆರೋಗ್ಯಕರ ತೊಂದರೆಗಳ ಸಾಧ್ಯತೆಯನ್ನೂ ಹೆಚ್ಚಿಸುತ್ತದೆ. ಈ ಕೊಬ್ಬನ್ನು visceral fat ಎಂದು ಕರೆಯುತ್ತಾರೆ.

ಈ ಕೊಬ್ಬು ಹೆಚ್ಚಿದ್ದಷ್ಟೂ ಹೃದಯ ಸ್ತಂಭನ, ಬುದ್ಧಿಮಾಂದ್ಯತೆ, ಪಾರ್ಶ್ವವಾಯು ಮೊದಲಾದ ಕೆಲವಾರು ತೊಂದರೆಗಳು ಆವರಿಸುವ ಸಾಧ್ಯತೆ ಹೆಚ್ಚುತ್ತಾ ಹೋಗುತ್ತದೆ. ಆದ್ದರಿಂದ ಹೊಟ್ಟೆಯ ಕೊಬ್ಬನ್ನು ಕರಗಿಸಿ ಸೂಕ್ತವಾದ ದೇಹದ ತೂಕವನ್ನು ಪಡೆಯುವುದು ಸೌಂದರ್ಯದ ದೃಷ್ಟಿಯಿಂದ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲೂ ಅನಿವಾರ್ಯ.

ನಿಮ್ಮ ಹೊಟ್ಟೆಯ ಕೊಬ್ಬನ್ನು 10 ದಿನಗಳಲ್ಲೇ ಕರಗಿಸಿಕೊಳ್ಳಿ!

ನಮ್ಮಲ್ಲಿ ಹೆಚ್ಚಿನವರು ಹೊಟ್ಟೆ ಕರಗಬೇಕು ಎಂದು ಬಯಸುತ್ತಾರೆಯೇ ವಿನಃ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವುದಿಲ್ಲ. ಬೆರಳೆಣಿಕೆಯಷ್ಟು ಜನರು ಈ ಬಗ್ಗೆ ಕೊಂಚ ದಿನ ವ್ಯಾಯಾಮ, ಜಿಮ್, ಏರೋಬಿಕ್ಸ್, ಯೋಗ ಎಂದೆಲ್ಲಾ ಹಾರಾಡಿ ನಾಲ್ಕು ದಿನದ ಬಳಿಕ ಮತ್ತೆ ಎಲ್ಲಕ್ಕೂ ಚಕ್ಕರ್ ಹಾಕುವವರಾಗಿದ್ದಾರೆ. ಉಳಿದ ಕೆಲವು ಜನರು ಮಾತ್ರವೇ ತಮ್ಮ ತೂಕ ಇಳಿಸುವ ಪ್ರಯತ್ನಗಳನ್ನು ಸತತವಾಗಿಸುತ್ತಾರೆ. ಆದರೆ ಯಾವುದೇ ಪ್ರಯತ್ನದ ಜೊತೆಗೇ ಸೂಕ್ತ ಆಹಾರ ಹಾಗೂ ಆರೋಗ್ಯಕರ ಜೀವನಕ್ರಮವನ್ನು ಅಳವಡಿಸಿಕೊಂಡರೆ ಮಾತ್ರವೇ ಈ ಪ್ರಯತ್ನಗಳು ಸಫಲವಾಗುತ್ತವೆ.

ಆದ್ದರಿಂದ ವ್ಯಾಯಾಮದ ಜೊತೆಗೇ ಕೊಬ್ಬನ್ನು ಹೆಚ್ಚು ಬಳಸುವ ಆಹಾರಗಳನ್ನು ಸೇವಿಸುವುದು ಹಾಗೂ ಕೊಬ್ಬನ್ನು ಹೆಚ್ಚಿಸುವ ಆಹಾರಗಳನ್ನು ವರ್ಜಿಸುವುದು ಜಾಣತನದ ಕ್ರಮ. ಈ ಕಾರ್ಯದಲ್ಲಿ ನೆರವಾಗುವ ಕೆಲವು ಆಹಾರಗಳನ್ನು ಇಂದು ಸಂಗ್ರಹಿಸಲಾಗಿದ್ದು ಇವುಗಳನ್ನು ನಿಮ್ಮ ನಿತ್ಯದ ಆಹಾರಗಳನ್ನಾಗಿಸುವ ಮೂಲಕ ಕ್ಷಿಪ್ರ ಸಮಯದಲ್ಲಿಯೇ ಸೊಂಟದ ಕೊಬ್ಬನ್ನು ಇತಿಹಾಸವಾಗಿಸಬಹುದು...

ಲಿಂಬೆ ರಸವನ್ನು ಕುಡಿಯಿರಿ

ಲಿಂಬೆ ರಸವನ್ನು ಕುಡಿಯಿರಿ

ಕೊಬ್ಬು ಸಂಗ್ರಹವಾಗಲು ನಮ್ಮ ಯಕೃತ್ (liver) ಆಯಾಸಗೊಂಡಾಗ ಪೂರ್ಣಪ್ರಮಾಣದಲ್ಲಿ ಕೊಬ್ಬನ್ನು ಜೀರ್ಣಿಸಿಕೊಳ್ಳಲು ಅಸಮರ್ಥವಾಗಿ ಹೆಚ್ಚಿನ ಕೊಬ್ಬು ಸಂಗ್ರಹವಾಗುತ್ತಾ ಹೋಗುತ್ತದೆ. ಲಿಂಬೆರಸದ ಸೇವನೆಯಿಂದ ದೇಹದಲ್ಲಿ ಹಲವು ಎಂಜೈಮ್ ಅಥವಾ ಕಿಣ್ವಗಳ ಪ್ರಮಾಣವನ್ನು ಹೆಚ್ಚಿಸಿ ಯಕೃತ್ ನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಕೊಬ್ಬು ಜೀರ್ಣಗೊಂಡು ಸಂಗ್ರಹವಾಗಬಹುದಾಗಿದ್ದ ಕೊಬ್ಬನ್ನು ತಡೆದಂತಾಗುತ್ತದೆ. ಅತ್ತ ಇತರ ದೈಹಿಕ

ಚಟುವಟಿಕೆಗಳ ಮೂಲಕ ಕೊಬ್ಬು ಕರಗತೊಡಗುತ್ತದೆ.

ಬಳಕೆಯ ವಿಧಾನ

*ಪ್ರತಿದಿನ ಬೆಳಿಗ್ಗೆ ಎದ್ದ ಬಳಿಕ ಪ್ರಥಮವಾಗಿ ಲಿಂಬೆ ಹಣ್ಣಿನ ರಸ ಸೇರಿಸಿದ ನೀರು ಕುಡಿಯಿರಿ.

*ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಚಿಕ್ಕದಾದರೆ ಒಂದು, ದೊಡ್ಡದಾದರೆ ಅರ್ಧ ಲಿಂಬೆಯ ರಸವನ್ನು ಸೇರಿಸಿ. ಉಗುರು ಬೆಚ್ಚನೆಯ ನೀರು ಲಭ್ಯವಿಲ್ಲದಿದ್ದರೆ ಸಾಮಾನ್ಯ ತಾಪಮಾನದಲ್ಲಿರುವ ನೀರನ್ನು ಸಹಾ ಬಳಸಬಹುದು. ಆದರೆ ಐಸ್ ಸೇರಿಸಿದ ಅಥವಾ ಫ್ರಿಜ್ಜಿನ ನೀರು ಬೇಡ.

*ನಂತರ ನಿಮ್ಮ ದೈನಂದಿನ ವ್ಯಾಯಾಮಗಳನ್ನು ಮಾಡಿ. ಕನಿಷ್ಟ ಮುಕ್ಕಾಲು ಗಂಟೆಯವರೆಗೆ ಬೇರೇನನ್ನೂ ಸೇವಿಸಬೇಡಿ. *ಅತ್ಯಂತ ಆಯಾಸ ಅನ್ನಿಸಿದರೆ ಮಾತ್ರ ಅರ್ಧಗಂಟೆಯ ಬಳಿಕ ಕೊಂಚ ನೀರು ಕುಡಿಯಬಹುದು. ಇದರೊಂದಿಗೆ ಕೊಂಚ ಜೇನನ್ನೂ ಸೇರಿಸಬಹುದು.

ಕ್ರ್ಯಾನ್ಬೆರಿ ಹಣ್ಣಿನ ರಸ

ಕ್ರ್ಯಾನ್ಬೆರಿ ಹಣ್ಣಿನ ರಸ

ಅಗತ್ಯವಿರುವ ಸಾಮಾಗ್ರಿಗಳು:

ಸಕ್ಕರೆ ಬೆರೆಸದ ಕ್ರ್ಯಾನ್ಬೆರಿ ಹಣ್ಣಿನ ರಸ

ಉಗುರುಬೆಚ್ಚನೆಯ ನೀರು- ಒಂದು ಲೋಟ.

ವಿಧಾನ

ಒಂದು ಲೋಟ ನೀರಿಗೆ ಎರಡೂವರೆ ದೊಡ್ಡ ಚಮಚದಷ್ಟು ಹಣ್ಣಿನ ರಸವನ್ನು ಬೆರೆಸಿ ನಿಮ್ಮ ದಿನದ ಆಹಾರ ಸೇವನೆಗೆ ಕೊಂಚ ಹೊತ್ತು ಮುಂಚೆ ಸೇವಿಸಿ. ಅಂತೆಯೇ ದಿನದ ಇತರ ಹೊತ್ತಿನಲ್ಲಿಯೂ ಕೊಂಚಕೊಂಚವಾಗಿ ಸೇವಿಸುತ್ತಾ ಬನ್ನಿ.

ಕೃಷ್ಣ ಜೀರಿಗೆ ಬೀಜಗಳ ಎಣ್ಣೆ

ಕೃಷ್ಣ ಜೀರಿಗೆ ಬೀಜಗಳ ಎಣ್ಣೆ

ಅಗತ್ಯವಿರುವ ಸಾಮಾಗ್ರಿಗಳು

ಕೃಷ್ಣ ಜೀರಿಗೆ ಬೀಜಗಳ ಎಣ್ಣೆ (Nigella seed oil)- ½ ಚಿಕ್ಕ ಚಮಚ

ಉಗುರುಬೆಚ್ಚನೆಯ ನೀರು- ಒಂದು ಲೋಟ.

ವಿಧಾನ: ನೀರಿನಲ್ಲಿ ಎಣ್ಣೆಯನ್ನು ಬೆರೆಸಿ ದಿನದಲ್ಲಿ ಕನಿಷ್ಠ ಎರಡು ಬಾರಿಯಾದರೂ ಕುಡಿಯಿರಿ. ಇದು ಹೊಟ್ಟೆಯ ಕೊಬ್ಬನ್ನು ಕರಗಿಸಲು ಸುಲಭವಾದ ವಿಧಾನವಾಗಿದೆ.

ಅಗಸೆ ಬೀಜಗಳ ಪುಡಿ

ಅಗಸೆ ಬೀಜಗಳ ಪುಡಿ

ಅಗಸೆ ಬೀಜಗಳ ಪುಡಿ (Flax seed powder-)- 1 ಚಿಕ್ಕ ಚಮಚ

ಇಸಬ್ಗೋಲ್ ಪುಡಿ: ಒಂದು ಚಿಕ್ಕ ಚಮಚ

ಜೇನು : ಒಂದು ಚಿಕ್ಕ ಚಮಚ

ಉಗುರುಬೆಚ್ಚನೆಯ ನೀರು- ಒಂದು ಲೋಟ.

ವಿಧಾನ: ಎಲ್ಲವನ್ನೂ ನೀರಿನಲ್ಲಿ ಬೆರೆಸಿ ರಾತ್ರಿ ಮಲಗುವ ಮುನ್ನ ಕುಡಿಯಿರಿ. ಕೆಲವೇ ದಿನಗಳಲ್ಲಿ ಹೊಟ್ಟೆಯ ಕೊಬ್ಬು ಕರಗಿರುವುದನ್ನು ಕಾಣಬಹುದು.

ತಾಜಾ ಪಾರ್ಸ್ಲೆ ಎಲೆಗಳು

ತಾಜಾ ಪಾರ್ಸ್ಲೆ ಎಲೆಗಳು

ಅಗತ್ಯವಿರುವ ಸಾಮಾಗ್ರಿಗಳು

ತಾಜಾ ಪಾರ್ಸ್ಲೆ ಎಲೆಗಳು - ಒಂದು ಕಟ್ಟು

ಒಂದು ಲಿಂಬೆಯ ರಸ

ಉಗುರುಬೆಚ್ಚನೆಯ ನೀರು- ಅರ್ಧ ಲೋಟ.

ವಿಧಾನ: ಪಾರ್ಸ್ಲೆ ಎಲೆಗಳನ್ನು ಮಿಕ್ಸಿಯ ಬ್ಲೆಂಡರಿನಲ್ಲಿ ಕೊಂಚವೇ ನೀರಿನೊಂದಿಗೆ ಚೆನ್ನಾಗಿ ಗೊಟಾಯಿಸಿ ಬಳಿಕ ಲಿಂಬೆರಸ ಬೆರೆಸಿ. ಬಳಿಕ ಉಳಿದ ನೀರು ಬೆರೆಸಿ ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸತತವಾಗಿ ಐದು ದಿನ ಸೇವಿಸಿ. ಬಳಿಕ ಕನಿಷ್ಟ ಹತ್ತು ದಿನ ಈ ವಿಧಾನವನ್ನು ಅನುಸರಿಸದಿರಿ. ಆಗಲೂ ಹೊಟ್ಟೆಯ ಕೊಬ್ಬು ಕರಗದೇ ಇದ್ದರೆ ಹೀಗೆ ಹತ್ತು ದಿನಗಳ ಅಂತರದಲ್ಲಿ ಐದು ದಿನಗಳ ಕಾಲ ಈ ವಿಧಾನವನ್ನು ಮುಂದುವರೆಸಿ.

ಹಸಿರು ಟೀ

ಹಸಿರು ಟೀ

ಅಗತ್ಯವಿರುವ ಸಾಮಾಗ್ರಿಗಳು

ಹಸಿರು ಟೀ - ಒಂದು ಚಿಕ್ಕ ಚಮಚ

ದಾಲ್ಚಿನ್ನಿ ಚೆಕ್ಕೆ: ಅರ್ಧ ಇಂಚು

ಲಿಂಬೆ : ಕಾಲುಭಾಗ

ಜೇನು: ಎರಡು ಚಿಕ್ಕ ಚಮಚ

ನೀರು- ಒಂದು ಲೋಟ.

ವಿಧಾನ: ಮೊದಲು ನೀರನ್ನು ಕುದಿಸಿ ಇದಕ್ಕೆ ಉಳಿದೆಲ್ಲಾ ಸಾಮಾಗ್ರಿಗಳನ್ನು ಬೆರೆಸಿ ಸುಮಾರು ಮೂರು ನಿಮಿಷ ಹಾಗೇ ಬಿಡಿ. ಉತ್ತಮ ಫಲಿತಾಂಶ ಪಡೆಯಲು ಈ ನೀರನ್ನು ದಿನದಲ್ಲಿ ಕನಿಷ್ಟ ಎರಡು ಬಾರಿ ಕುಡಿಯಿರಿ.

ಜೇನು

ಜೇನು

ಅಗತ್ಯವಿರುವ ಸಾಮಾಗ್ರಿಗಳು

ಜೇನು: ಎರಡು ಚಿಕ್ಕ ಚಮಚ

ಉಗುರುಬೆಚ್ಚನೆಯ ನೀರು- ಒಂದು ಲೋಟ.

ವಿಧಾನ: ಬೆಳಿಗ್ಗೆದ್ದ ಬಳಿಕ ದಿನದ ಪ್ರಥಮ ಆಹಾರವಾಗಿ ಇವೆರಡನ್ನೂ ಬೆರೆಸಿ ನಿಧಾನವಾಗಿ ಕುಡಿಯಿರಿ. ನಂತರದ ಕನಿಷ್ಠ ನಲವತ್ತೈದು ನಿಮಿಷ ಏನನ್ನೂ ಸೇವಿಸದಿರಿ.

ಶುಂಠಿ ಸೇರಿಸಿದ ಟೀ ಕುಡಿಯಿರಿ

ಶುಂಠಿ ಸೇರಿಸಿದ ಟೀ ಕುಡಿಯಿರಿ

ಹಸಿಶುಂಠಿ ಜೀರ್ಣಶಕ್ತಿಯನ್ನು ಹೆಚ್ಚಿಸುವುದು ಸರಿ, ಆದರೆ ಇದು ದೇಹದ ಬಿಸಿಯನ್ನೂ ಹೆಚ್ಚಿಸುತ್ತದೆಂದು (thermogenic) ನಿಮಗೆ ಗೊತ್ತಿತ್ತೇ? ದೇಹದ ಬಿಸಿಯನ್ನು ಏರಿಸುವ ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬು ಕರಗಲು ನೆರವಾಗುತ್ತದೆ. ಸೊಂಟದ ಸುತ್ತ ಈಗಾಗಲೇ ಸಂಗ್ರಹವಾಗಿರುವ ಕೊಬ್ಬು ಎಷ್ಟೋ ವರ್ಷಗಳ ಹಿಂದಿನಿಂದ ಸಂಗ್ರಹವಾಗುತ್ತಾ ಬಂದಿರಬಹುದಾಗಿದ್ದು ಶುಂಠಿಯ ನಿಯಮಿತ ಸೇವನೆಯಿಂದ ನಿಧಾನವಾಗಿ ಕರಗತೊಡಗುತ್ತದೆ. ಜೊತೆಗೇ ಶುಂಠಿಯ ಸೇವನೆಯಿಂದ ದೇಹದಲ್ಲಿ ಒತ್ತಡದ ಕಾರಣ ಉತ್ಪತ್ತಿಯಾಗುವ ಕಾರ್ಟಿಸೋಲ್ (cortisol) ಎಂಬ ಹಾರ್ಮೋನು ಉತ್ಪತ್ತಿಯನ್ನು ತಡೆಯಬಹುದು. ಇದರಿಂದ ರಕ್ತದಲ್ಲಿ ಹೆಚ್ಚಬಹುದಾಗಿದ್ದ ಸಕ್ಕರೆಯ ಪ್ರಮಾಣವನ್ನು ಮಿತಿಗೊಳಿಸಿ ಸಂಗ್ರಹವಾಗಿದ್ದ ಕೊಬ್ಬು ಕರಗಲು ನೆರವಾಗುತ್ತದೆ.

ಬಳಕೆಯ ವಿಧಾನ

*ಒಂದು ಲೋಟಕ್ಕಿಂತ ಕೊಂಚ ಹೆಚ್ಚು ನೀರನ್ನು ಕುದಿಸಿ.

*ಈ ನೀರಿನಲ್ಲಿ ಒಂದು ಇಂಚು ಹಸಿಶುಂಠಿಯನ್ನು ಜಜ್ಜಿ ಸುಮಾರು ಹತ್ತು ನಿಮಿಷಗಳವೆರೆಗೆ ಚಿಕ್ಕ ಉರಿಯಲ್ಲಿ ಕುದಿಸಿ.

*ಈಗ ಪಾತ್ರೆಯನ್ನು ಒಲೆಯಿಂದ ಕೆಳಗಿಳಿಸಿ ಒಂದು ಚಮಚ ಈಗತಾನೇ ಹಿಂಡಿದ

*ಲಿಂಬೆರಸ ಮತ್ತು ಒಂದು ಚಮಚ ಜೇನು ಸೇರಿಸಿ.

*ಈ ಚಹಾ ಅನ್ನು ಸೋಸಿ ಬಿಸಿಬಿಸಿ ಇರುವಂತೆಯೇ ಸೇವಿಸಿ. ಒಂದು ದಿನಕ್ಕೆ ಕನಿಷ್ಠ ಎರಡು ಕಪ್ ಈ ಟೀ ಸೇವಿಸಿ ಕೊಬ್ಬಿನಿಂದ ಮುಕ್ತಿಪಡೆಯಿರಿ.

ಬೆಳ್ಳುಳ್ಳಿಯನ್ನು ಹೆಚ್ಚು ಹೆಚ್ಚು ಬಳಸಿ

ಬೆಳ್ಳುಳ್ಳಿಯನ್ನು ಹೆಚ್ಚು ಹೆಚ್ಚು ಬಳಸಿ

ಬೆಳ್ಳುಳ್ಳಿಯನ್ನು ನಿಮ್ಮ ಆಹಾರದ ಮೂಲಕ ಸೇವಿಸುವುದರಿಂದ ಜೀರ್ಣಾಂಗಗಳ ಕಾರ್ಯಕ್ಷಮತೆ ಹೆಚ್ಚುತ್ತದೆ. ವಿಶೇಷವಾಗಿ ಕರುಳಿನ ಹುಣ್ಣು, ಅಜೀರ್ಣತೆ, ಹೊಟ್ಟೆಯ ಉರಿ ಮೊದಲಾದವುಗಳನ್ನು ತಡೆಯುವ ಬೆಳ್ಳುಳ್ಳಿ ಅಧಿಕ ಮತ್ತು ಕಡಿಮೆ ರಕ್ತದೊತ್ತಡವನ್ನು ತಹಬಂದಿಗೆ ತರುವ ಗುಣವಿದೆ. ಬೆಳ್ಳುಳ್ಳಿಯ ನಿಯಮಿತ ಸೇವನೆಯಿಂದ ರಕ್ತದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ (HDL-High density Lipoprotein) ಹೆಚ್ಚುತ್ತದೆ ಹಾಗೂ ನರಗಳ ಗೋಡೆಗಳ ದಪ್ಪವನ್ನು ಕಡಿಮೆಗೊಳಿಸುವ atherosclerosis, ಹೃದಯ ಸ್ತಂಭನಕ್ಕೆ ಕಾರಣವಾಗುವ ಟ್ರೈಗ್ಲಿಸರೈಡ್ ಎಂಬ ಕಣಗಳನ್ನು ನಿಯಂತ್ರಿಸಲೂ ನೆರವಾಗುತ್ತದೆ. ಈ ಪುಟ್ಟ

ಬೆಳ್ಳುಳ್ಳಿಗೆ ಸ್ಥೂಲಕಾಯವನ್ನು ನಿಯಂತ್ರಿಸುವ ಶಕ್ತಿಯೂ ಇದೆ. ಪಚನಕ್ರಿಯೆಯನ್ನು ಶೀಘ್ರಗೊಳಿಸಲು ಕರಗಿದ್ದ ಕೊಬ್ಬನ್ನು ಬಳಸುವುದರಿಂದ ಸೊಂಟದ ಸುತ್ತಳತೆ ಶೀಘ್ರವೇ ಕಡಿಮೆಯಾಗುತ್ತಾ ಹೋಗುತ್ತದೆ.

ಬಳಕೆಯ ವಿಧಾನ

*ಒಂದು ಕಪ್ ತಣ್ಣನೆಯ ಅಥವಾ ಉಗುರುಬೆಚ್ಚನೆಯ ನೀರಿಗೆ ಒಂದು ಲಿಂಬೆಹಣ್ಣಿನ ರಸವನ್ನು ಹಿಂಡಿರಿ

*ಮೂರು ಎಸಳು ಬೆಳ್ಳುಳ್ಳಿಯನ್ನು ಸಿಪ್ಪೆ ಸುಲಿದು ಹಸಿಯಾಗಿಯೇ ಅಗಿಯಿರಿ ಮತ್ತು ಲಿಂಬೆರಸ ಹಿಂಡಿದ ನೀರಿನ ಜೊತೆ ಅಗಿದ ಬೆಳ್ಳುಳ್ಳಿಯನ್ನು ನುಂಗಿ.

*ಈ ನೀರನ್ನು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿದ ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬೇಡಿ.

*ಎರಡು ವಾರದಲ್ಲಿಯೇ ಸೊಂಟದ ಸುತ್ತಳತೆ ಕಡಿಮೆಯಾಗುವ ಲಕ್ಷಣಗಳು ಗೋಚರಿಸತೊಡಗುತ್ತವೆ.

ವಿವಿಧ ತರಕಾರಿ ಮತ್ತು ಎಲೆಗಳನ್ನು ಕುದಿಸಿದ ನೀರು ಕುಡಿಯಿರಿ

ವಿವಿಧ ತರಕಾರಿ ಮತ್ತು ಎಲೆಗಳನ್ನು ಕುದಿಸಿದ ನೀರು ಕುಡಿಯಿರಿ

ಸೊಂಟದ ಸುತ್ತಳತೆ ಕಡಿಮೆಗೊಳಿಸಲು ವಿವಿಧ ತರಕಾರಿ ಮತ್ತು ಸೊಪ್ಪುಗಳು ತಮ್ಮದೇ ರೀತಿಯ ನೆರವು ನೀಡುತ್ತವೆ. ಇವೆಲ್ಲವನ್ನೂ ಕ್ರೋಢೀಕರಿಸಿದ ವಿಧಾನ ಶೀಘ್ರವೇ ಪರಿಣಾಮ ಬೀರಲು ತೊಡಗುತ್ತದೆ. ಶುಂಠಿ, ಪುದಿನಾ ಎಲೆಗಳು ಮತ್ತು ಸೌತೆಕಾಯಿಗಳಂತಹ ನಿತ್ಯಬಳಕೆಯ ಸಾಮಾಗ್ರಿಗಳು ಸಹಾ ಕೊಬ್ಬು ಕರಗಿಸಬಲ್ಲವು. ಇವುಗಳ ಜೊತೆಗೆ ಲಿಂಬೆರಸ ಸೇರಿದರೆ ಕೊಬ್ಬು ಕರಗಿಸಲು ಒಂದು ಅದ್ಭುತವಾದ ಮತ್ತು ಸುಲಭವಾದ ವಿಧಾನ ದೊರಕುತ್ತದೆ.

ಬಳಕೆಯ ವಿಧಾನ

*ಎರಡು ಲೀಟರ್ ನೀರಿಗೆ ಕೆಳಗಿನ ತರಕಾರಿಗಳನ್ನು ಸೇರಿಸಿ, ಒಂದು ಮಧ್ಯಮ ಗಾತ್ರದ ಸೌತೆ ಸಿಪ್ಪೆ ಸಹಿತವಾಗಿ ಚಿಕ್ಕದಾಗಿ ಕತ್ತರಿಸಿದ್ದು

*ಸುಮಾರು

ಎರಡು ಇಂಚಿನಷ್ಟು ಗಾತ್ರದ ಹಸಿಶುಂಠಿ, ಜಜ್ಜಿದ್ದು (ತುರಿದದ್ದಾದರೆ ಸುಮಾರು ಒಂದು ಚಿಕ್ಕಚಮಚ)

*ಲಿಂಬೆಹಣ್ಣು- 1 (ಚಿಕ್ಕದಾದರೆ 2) ಹಿಂಡಿ ತೆಗೆದ ರಸ ಪುದಿನಾ ಎಲೆಗಳು-ಸುಮಾರು ಹನ್ನೆರಡು (ಬೆರಳುಗಳಲ್ಲಿ ಹಿಚುಕಿದ್ದು) ಎಲ್ಲವನ್ನೂ ನೀರಿನಲ್ಲಿ ಮುಳುಗಿಸಿ ಮುಚ್ಚಳ ಮುಚ್ಚಿ ಇಡಿಯ ರಾತ್ರಿ ನೆನೆಸಿಡಿ.

*ಮರುದಿನ ಈ ತರಕಾರಿಗಳು ಹಾಗೇ ಇರುವಂತೆ ಈ ನೀರನ್ನು ಇಡಿಯ ದಿನ ಸ್ವಲ್ಪ ಸ್ವಲ್ಪವಾಗಿ ಕುಡಿಯುತ್ತಾ ಇರಿ.

*ಕೆಲವೇ ದಿನಗಳಲ್ಲಿ ಪರಿಣಾಮ ಗೋಚರಿಸಲು ತೊಡಗುತ್ತದೆ.

 ಜೀರಿಗೆ ನೀರು

ಜೀರಿಗೆ ನೀರು

ಇನ್ನೊಂದು ಪರ್ಯಾಯ ಪದ್ಧತಿಯೆಂದರೆ ಬೆಳಗ್ಗೆ ಕಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಕುಡಿಯುವುದು. ಒಂದು ಟೀ ಚಮಚ ಜೀರಿಗೆಯನ್ನು ತೆಗೆದುಕೊಂಡು ನೀರಿನಲ್ಲಿ ಕುದಿಸಿ. ನಂತರ ಜೀರಿಗೆಯನ್ನು ಸೋಸಿ ತೆಗೆಯಿರಿ. ಬಿಸಿಯಿರುವಾಗಲೇ ಇದನ್ನು ಸೇವಿಸಿದರೆ ಹೆಚ್ಚು ಆರೋಗ್ಯ ಪೂರ್ಣವಾದದ್ದು. ಇದು ಕಿಬ್ಬೊಟ್ಟೆ ಹಾಗೂ ಸೊಂಟದ ಭಾಗದಲ್ಲಿ ಶೇಖರಣೆಗೊಂಡ ಕೊಬ್ಬನ್ನು ಕರಗಿಸುತ್ತದೆ.

ಹಚ್ಚ ಹಸಿರು ಜ್ಯೂಸ್

ಹಚ್ಚ ಹಸಿರು ಜ್ಯೂಸ್

ಇದುವರೆಗೆ ಹಸಿರು ರಸವನ್ನು ಸೇವಿಸದೇ ಇದ್ದಲ್ಲಿ ಮೊದಲು ಈ ಸಂಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ. ಇದರಲ್ಲಿ ಸೂಕ್ತ ಪ್ರಮಾಣದ ವಿಟಮಿನ್ ಮತ್ತು ಖನಿಜಗಳಿವೆ ಹಾಗೂ ಅಲ್ಪಪ್ರಮಾಣದಲ್ಲಿ ಸೆಲ್ಯುಲೋಸ್ ಇದೆ. ಸಮಪ್ರಮಾಣದಲ್ಲಿ ಅನಾನಾಸ್, ಹಸಿರು ಸೇಬು ಮತ್ತು ಒಂದು ಲೋಟಕ್ಕೆ ಅರ್ಧ ಇಂಚು ಗಾತ್ರದ ಶುಂಠಿ ಮತ್ತು ಎರಡು ದೊಡ್ಡ ಚಮಚದಷ್ಟು ಅಚ್ಚು ಮೂಡ ಸೊಪ್ಪು (ಅಥವಾ parsley leaves) (ಇದು ನೋಡಲು ಕೊತ್ತಂಬರಿ ಸೊಪ್ಪಿನಂತೆಯೇ ಇರುತ್ತದೆ, ಆದರೆ ರುಚಿಯಲ್ಲಿ ಬದಲಾವಣೆ ಇರುತ್ತದೆ) ಮತ್ತು ಇಷ್ಟೇ ಪ್ರಮಾಣದ ಕೇಲ್ ಎಲೆಗಳನ್ನು ಹಾಕಿ ಮಿಕ್ಸಿಯಲ್ಲಿ ಗೊಟಾಯಿಸಿ. ದಿನಕ್ಕೊಂದು ಲೋಟ ಈ ಜ್ಯೂಸ್ ಕುಡಿಯುವುದರಿಂದ ಬೊಜ್ಜು ನಿಧಾನವಾಗಿ ಕರಗುತ್ತದೆ.

English summary

Quick Ways To burn Belly Fat

Belly fat is the cause of embarrassment for a number of people around the globe. It is the stubborn fat around the abdomen which is very easily visible whenever you wear tight-fitted clothes. Unfortunately, it is not very easy to get rid of; in fact, it is considered to be the most difficult area to lose flab and is considered to be a health hazard as well. Belly fat, also known as the visceral fat is one of the major reasons behind certain health issues like heart diseases, blood pressure and diabetes. It also increases the risk of stroke, dementia, heart attack etc. Hence, losing belly fat is not just a fashion requirement but it is more of a necessity for a healthy body.
X
Desktop Bottom Promotion