For Quick Alerts
ALLOW NOTIFICATIONS  
For Daily Alerts

  ಆರೋಗ್ಯ ಟಿಪ್ಸ್: ಸಣ್ಣ ತುಂಡು ಬೆಳ್ಳುಳ್ಳಿಯ ಎಸಳನ್ನು ಬಾಯಲ್ಲಿಟ್ಟುಕೊಳ್ಳಿ!

  By Manu
  |

  ಭಾರತೀಯ ಅಡುಗೆಗಳು ಬೆಳ್ಳುಳ್ಳಿಯಿಲ್ಲದೆ ಅಪೂರ್ಣ. ಈ ಪುಟ್ಟ ಬೆಳ್ಳುಳ್ಳಿಯು ಉತ್ತಮ ಆರೋಗ್ಯಕ್ಕೆ ಬೇಕಾದ ಅಂಶಗಳ ಕಣಜವಾಗಿದೆ. ಇದು ನೋಡಲು ಗಟ್ಟಿಯಾಗಿದೆ ಮತ್ತು ರುಚಿಯಲ್ಲಿ ಕಹಿ ಆದರೆ ನಂಬಲಸಾಧ್ಯವಾದ ರೀತಿಯಲ್ಲಿ ಅಡುಗೆಗೆ ರುಚಿ ನೀಡುತ್ತದೆ. ಬೆಳ್ಳುಳ್ಳಿಯ ವಿವರಣೆ ಅದರ ಔಷಧೀಯ ಗುಣಗಳ ಬಗ್ಗೆ ಹೇಳದಿದ್ದರೆ ಅಪೂರ್ಣವಾಗುತ್ತದೆ. ಈ ಪವಾಡ ಸದೃಶ ಗುಣವುಳ್ಳ ಬೆಳ್ಳುಳ್ಳಿಯನ್ನು ಬಹಳ ಹಿಂದಿನಿಂದಲೂ ಹಲವು ಕಾಯಿಲೆಗಳನ್ನು ತಡೆಗಟ್ಟಲು ಮತ್ತು ಗುಣಪಡಿಸಲು ಬಳಸುತ್ತಿದ್ದಾರೆ.

  ಪುಟ್ಟ ಬೆಳ್ಳುಳ್ಳಿಯ ಚಿನ್ನದಂತಹ ಗುಣಗಳು...

  ಹೌದು ಬೆಳ್ಳುಳ್ಳಿ ಅಡುಗೆ ಹಾಗೂ ಔಷಧ ತಯಾರಿಕೆಯಲ್ಲಿ ಅತ್ಯಂತ ಮಹತ್ವದ ಕಾರ್ಯ ನಿರ್ವಹಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲ ಬೆಳ್ಳುಳ್ಳಿ ಶೀತ, ಅಪಧಮನಿಯ ತೊಂದರೆ, ಮೂತ್ರಪಿಂಡಗಳ ಕಾಯಿಲೆಗಳನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿದೆ. ಅದಕ್ಕಾಗಿಯೇ ಚೀನಿಯರು ಇದನ್ನು ಔಷಧ ಹಾಗೂ ಚಿಕಿತ್ಸಾ ಕ್ರಮಗಳಿಗೆ ಹೆಚ್ಚಾಗಿ ಬಳಸುತ್ತಾರೆ.

  ದಿಂಬಿನಡಿ ಬೆಳ್ಳುಳ್ಳಿ ಇಟ್ಟು ಮಲಗಿದರೆ, ಆರೋಗ್ಯಕ್ಕೆ ದುಪ್ಪಟ್ಟು ಲಾಭ!

  ಅದರಲ್ಲೂ ಬೆಳ್ಳುಳ್ಳಿಯ ಒಂದು ಎಸಳನ್ನು ನಮ್ಮ ಬಾಯಲ್ಲಿ ಇರಿಸಿಕೊಂಡು ಸ್ವಲ್ಪ ಜಗೆದು, ಲಾಲಾರಸದಲ್ಲಿ ನೆನೆಸಬೇಕು. ನಂತರ ಹುಳುಕಾದ ಜಾಗದಲ್ಲಿ ಇದನ್ನು ನಾಲಿಗೆಯಲ್ಲಿಯೇ ತಂದು ಇರಿಸಬೇಕು. ಆಗ ಹಲ್ಲುಗಳ ನೋವು ಕಡಿಮೆಯಾಗುತ್ತದೆ, ಇಷ್ಟೇ ಅಲ್ಲದೆ ದವಡೆಯನ್ನು ಬಲಪಡಿಸಿ, ಹಲ್ಲಿನ ಸೋಂಕು, ರಕ್ತಸ್ರಾವ, ಹುಳುಕೆಟ್ಟೆಗಳನ್ನು ನಿಯಂತ್ರಿಸುತ್ತದೆ.... ಇಷ್ಟು ಮಾತ್ರವಲ್ಲದೆ, ಇನ್ನೂ ಹಲವು ರೀತಿಯ ಪ್ರಯೋಜನಗಳನ್ನು ಬೆಳ್ಳುಳ್ಳಿಯಿಂದ ಪಡೆಯಬಹುದು, ಅವು ಯಾವುದು ಎಂಬುದನ್ನು ಮುಂದೆ ಓದಿ...

  ಹಸಿವನ್ನೂ ಉದ್ದೀಪಿಸುತ್ತದೆ

  ಹಸಿವನ್ನೂ ಉದ್ದೀಪಿಸುತ್ತದೆ

  ಬೆಳ್ಳುಳ್ಳಿಯ ಒಂದು ಸಣ್ಣ ಎಸಳನ್ನು ಜಗಿಯುವುದರಿಂದ ಸರಿಯಾದ ಪಚನಕ್ರಿಯೆಯನ್ನೂ ಹಾಗೂ ಒಳ್ಳೆಯ ಹಸಿವನ್ನೂ ಉದ್ದೀಪಿಸುತ್ತದೆ. ಜೊತೆಗೆ ಬೆಳ್ಳುಳ್ಳಿಯು ಮಾನಸಿಕ ಒತ್ತಡವನ್ನು ನಿಯ೦ತ್ರಿಸಲೂ ಕೂಡ ನೆರವಾಗುತ್ತದೆ ಹಾಗೂ ತನ್ಮೂಲಕ ನೀವು ಒತ್ತಡಕ್ಕೊಳಗಾದಾಗಲೆಲ್ಲಾ ನಿಮ್ಮ ಶರೀರವು ಉತ್ಪತ್ತಿ ಮಾಡುವ ಜಠರರಸದ ಉತ್ಪತ್ತಿಯನ್ನು ಹತ್ತಿಕ್ಕುತ್ತದೆ.

  ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ

  ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ

  ಬೆಳ್ಳುಳ್ಳಿಯಲ್ಲಿ ಆಲೈಸಿನ್ (Allicin) ಎಂಬ ಇನ್ನೊಂದು ಪೋಷಕಾಂಶವಿದ್ದು ಇದು ರಕ್ತದಲ್ಲಿ ಟ್ರೈಗ್ಲಿಸರೈಡ್ ಪ್ರಮಾಣವನ್ನು ನಿಯಂತ್ರಿಸುವ ಗುಣ ಹೊಂದಿದೆ. ಇದು ಒಟ್ಟು ಕೊಲೆಸ್ಟ್ರಾಲ್ ಮಟ್ಟದ ಮೇಲೆ ಪ್ರಭಾವ ಬೀರುವ ಮೂಲಕ ಕೆಟ್ಟ ಕೊಲೆಸ್ಟ್ರಾಲ್ ನ ಪ್ರಭಾವವನ್ನು ಕಡಿಮೆಗೊಳಿಸುತ್ತದೆ, ಹಾಗಾಗಿ ಪ್ರತಿದಿನ ಒಂದು ಬೆಳ್ಳುಳ್ಳಿಯ ಒಂದು ಸಣ್ಣ ಎಸಳನ್ನು ಜಗಿದು ತಿನ್ನಿ...

  ರಕ್ತ ಶುದ್ಧಿಯಾಗುತ್ತದೆ

  ರಕ್ತ ಶುದ್ಧಿಯಾಗುತ್ತದೆ

  ನಿತ್ಯವೂ ಒಂದು ಸಣ್ಣ ಎಸಳು ಬೆಳ್ಳುಳ್ಳಿಯನ್ನು ಸ್ವಲ್ಪ ಹೊತ್ತು ಬಾಯಲ್ಲಿ ಇಟ್ಟುಕೊಂಡು, ಜಗಿಯುವುದರಿಂದ ಸಂಪೂರ್ಣವಾಗಿ ರಕ್ತ ಶುದ್ಧಿಯಾಗುತ್ತದೆ.

  ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

  ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

  ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ, ಆಹಾರ ಸೇವಿಸುವಂತೆ ಮಾಡುತ್ತದೆ. ಜೊತೆಗೆ ಜಠರಕ್ಕೆ ಯಾವುದೇ ಸೋಂಕು ಮತ್ತು ಗಾಯವಾಗದಂತೆ ಕಾಪಾಡುವುದು.

  ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

  ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

  ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಈ ಬೆಳ್ಳುಳ್ಳಿಯನ್ನು ಬಾಯಲ್ಲಿ ಇಟ್ಟುಕೊಳ್ಳುವುದರಿಂದ ಸಾಂಕ್ರಾಮಿಕ ಜ್ವರ ಮತ್ತು ಉಸಿರಾಟದ ತೊಂದರೆಯಿಂದ ಮುಕ್ತರಾಗಿ ಇರಬಹುದು.

  ರಕ್ತ ಹೀನತೆ ಇದ್ದವರು

  ರಕ್ತ ಹೀನತೆ ಇದ್ದವರು

  ರಕ್ತ ಹೀನತೆ ಇದ್ದವರು ಬೆಳ್ಳುಳ್ಳಿ ಎಸಳನ್ನು ಬಾಯಲ್ಲಿ ಇಟ್ಟುಕೊಳ್ಳಬೇಕು. ಲಾಲಾರಸದ ಮೂಲಕ ಆಹಾರದಲ್ಲಿ ಸೇರುತ್ತದೆ. ಹೀಗೆ ಮಾಡುವುದರಿಂದ ದೇಹದಲ್ಲಿ ರಕ್ತ ಹೀನತೆ ನಿವಾರಣೆಯಾಗುವುದು.

  ಹಸಿ ಬೆಳ್ಳುಳ್ಳಿಯ ಪವರ್

  ಹಸಿ ಬೆಳ್ಳುಳ್ಳಿಯ ಪವರ್

  ಹಸಿ ಬೆಳ್ಳುಳ್ಳಿಯಲ್ಲಿರುವ ಆಲಿಸಿನ್ ಬೇಯಿಸಿದ ಬೆಳ್ಳುಳ್ಳಿಗಿಂತಲೂ ಹೆಚ್ಚು ಪ್ರಬಲವಾಗಿರುತ್ತದೆ ಹಾಗೂ ಗುಣಪಡಿಸುವ ಕ್ಷಮತೆ ಕಡಿಮೆಯಾಗುತ್ತದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಆದ್ದರಿಂದ ಬೆಳ್ಳುಳ್ಳಿಯನ್ನು (ಒಂದೆರಡು ಎಸಳು) ಹಸಿಯಾಗಿ ಸೇವಿಸುವುದು ಆರೋಗ್ಯಕ್ಕೆ ಉತ್ತಮ. ಇದರ ಘಾಟನ್ನು ಸಹಿಸಿ ಹಸಿಯಾಗಿ ಒಂದೆರಡು ಎಸಳು ಸೇವಿಸಲು ತೊಡಗಿದ ಬಳಿಕ ಆರೋಗ್ಯದಲ್ಲಿ ವೃದ್ಧಿಯಾಗುವುದನ್ನು ಕೆಲವೇ ದಿನಗಳಲ್ಲಿ ಗಮನಿಸಬಹುದು... ಆದರೆ ಸೇವಿಸುವ ಮೊದಲು ಒಮ್ಮೆ ನಿಮ್ಮ ಫ್ಯಾಮಿಲಿ ವೈದ್ಯರ ಸಲಹೆ ಪಡೆದುಕೊಳ್ಳಿ...

  ನೆನಪಿಡಿ

  ನೆನಪಿಡಿ

  ಒಂದು ಎಸಳು ಬೆಳ್ಳುಳ್ಳಿಯನ್ನು ಬಾಯಲ್ಲಿ ಇರಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಸಣ್ಣ ತುಣುಕು ಬೆಳ್ಳುಳ್ಳೀಯನ್ನಾದರೂ ಬಾಯಲ್ಲಿ ಇರಿಸಿಕೊಳ್ಳಬೇಕು.

  English summary

  Put a clove of garlic in your mouth and wait for a few minutes

  Garlic– a premium item, with numerous useful homes. This extraordinary vegetable has anti-bacterial houses, treatment options numerous illnesses, consisting of many colds, atherosclerosis and kidney disease, strengthens capillaries.Take a small clove of garlic, positioned it in the mouth and soak with saliva, “rolling” it inside the oral cavity. This approach is executed for 30 minutes within the morning, when is a “offer off” in our mouth.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more