ಫುಟ್ಬಾಲ್ ಆಡಿದರೆ ನೀವು ಇನ್ನಷ್ಟು ಸುಂದರವಾಗಿ ಕಾಣುವಿರಿ

By: manu
Subscribe to Boldsky

ಕ್ರೀಡೆ ಎನ್ನುವುದು ಕೇವಲ ಸಾಧನೆ ಹಾಗೂ ಖುಷಿಯ ವಿಚಾರಕ್ಕೆ ಸೀಮಿತವಾಗಿಲ್ಲ. ಬದಲಿಗೆ ದೈಹಿಕ ಆರೋಗ್ಯವನ್ನು ವೃದ್ಧಿಸುತ್ತದೆ. ದೇಹವೂ ಹೆಚ್ಚು ಸದೃಢವಾಗಿರುವಂತೆ ಮಾಡುತ್ತದೆ. ಅಂತಹ ಒಂದು ಅದ್ಭುತ ಕ್ರೀಡೆಯೆಂದರೆ ಫುಟ್ಬಾಲ್. ಹೌದು ಅನೇಕ ದೇಶಗಳಲ್ಲಿ ಮಹಿಳೆಯರು ತಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕಾಗಿ ಫುಟ್ಬಾಲ್ ಆಟವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

ಜಿಮ್ ಅಥವಾ ಇನ್ನಿತರ ವ್ಯಾಯಾಮಗಳನ್ನು ಮಾಡುತ್ತಿದ್ದರೆ ಬೇಸರ ಹಾಗೂ ಉದಾಸೀನ ಉಂಟಾಗುತ್ತದೆ. ಅದೇ ಫುಟ್ಬಾಲ್ ಆಡಿದರೆ ಖುಷಿ, ಉತ್ಸಾಹ ಹಾಗೂ ಉತ್ತಮ ದೈಹಿಕ ಶ್ರಮವಾಗುತ್ತದೆ ಎಂಬುದನ್ನು ನಂಬಿದ್ದಾರೆ. ಅನೇಕ ವರ್ಷಗಳ ಹಿಂದ ಫುಟ್ಬಾಲ್ ಎನ್ನುವುದು ಕೇವಲ ಪುರುಷರ ಆಟವಾಗಿತ್ತು. ಆದರೀಗ ಮಹಿಳೆಯರೂ ಇದನ್ನು ಆಡುತ್ತಿದ್ದಾರೆ.

ದಿನದಲ್ಲಿ ಸ್ವಲ್ಪ ಸಮಯ ಆಟ ವಾಡುವುದರಲ್ಲಿ ಕಾಲ ಕಳೆದರೆ ಮಹಿಳೆಯರಲ್ಲಿ ಅನೇಕ ಧನಾತ್ಮಕ ಬದಲಾವಣೆಗಳಾಗುತ್ತವೆ. ಇದರಿಂದ ಅವರು ಹಾಗೂ ಅವರ ಸುತ್ತಲಿನ ಜನರೂ ಸಹ ಖುಷಿಯಲ್ಲಿರುತ್ತಾರೆ ಎನ್ನಲಾಗುತ್ತದೆ. ಈ ವಿಚಾರ ನಿಮಗೆ ಆಶ್ಚರ್ಯ ಎನಿಸುವಷ್ಟು ಕುತೂಹಲ ಮೂಡಿಸುತ್ತಿದ್ದರೆ ಮುಂದೆ ಓದಿ....

ದೈಹಿಕ ಚಟುವಟಿಕೆಗಾಗಿ

ದೈಹಿಕ ಚಟುವಟಿಕೆಗಾಗಿ

ಕ್ರೀಡೆಗಳು ದೈಹಿಕ ಚಲನೆಯನ್ನು ಒಳಗೊಂಡಿರುತ್ತದೆ. ದೇಹ ಚಟುವಟಿಕೆಯಿಂದ ಕೂಡಿದ್ದರೆ ಮನಸ್ಸಿಗೂ ಅನೂಕೂಲವಾಗುತ್ತದೆ. ಮಹಿಳೆಯರ ಮೇಲೆ ನಡೆಸಿದ ಒಂದು ಅಧ್ಯಯನದ ಪ್ರಕಾರ ಫುಟ್ಬಾಲ್ ಆಡುವ ಮಹಿಳೆಯರು ಇತರ ಮಹಿಳೆಯರಿಗಿಂತ ಹೆಚ್ಚು ಕಲಿಕಾ ಕೌಶಲ್ಯವನ್ನು ಅರಿತಿರುತ್ತಾರೆ.

ಉತ್ತಮ ದೈಹಿಕ ದೃಢತೆ

ಉತ್ತಮ ದೈಹಿಕ ದೃಢತೆ

ಫುಟ್ಬಾಲ್ ಎನ್ನುವುದು ತಮಾಷೆಯಲ್ಲ. ಈ ಆಟ ಆಡುವಾಗ ಓಡುವುದು, ಬಾಲ್ ಪಳಗಿಸಿಕೊಂಡು ಹೋಗುವುದು, ಎದುರಾಳಿಯ ಚಿಂತನೆಯನ್ನು ನಿರ್ಧರಿಸುವುದು ಮತ್ತು ಗುರಿ ಎಲ್ಲವನ್ನು ಒಳಗೊಂಡಿರುತ್ತದೆ. ಹಾಗಾಗಿ ಇದನ್ನು ಕಠಿಣವಾದ ದೈಹಿಕ ಹಾಗೂ ಮಾನಸಿಕ ಚಟುವಟಿಕೆ ಎನ್ನಲಾಗುತ್ತದೆ. ಹೀಗಾಗಿ ನೀವು ಈ ಆಟವನ್ನು ಆಯ್ಕೆ ಮಾಡಿಕೊಂಡರೆ ನಿಮಗೆ ವ್ಯಾಯಾಮದ ಅಗತ್ಯ ಇರುವುದಿಲ್ಲ.

ಸಮತೋಲನ ಮತ್ತು ಸಹಕಾರದ ಭಾವನೆ

ಸಮತೋಲನ ಮತ್ತು ಸಹಕಾರದ ಭಾವನೆ

ದೇಹವು ಚಲನೆಯ ಸಮಯದಲ್ಲಿ ಸ್ವತಃ ಸಮತೋಲನ ಮಾಡುವುದನ್ನು ಕಲಿಯುತ್ತದೆ. ಜೊತೆಗೆ ಆಡುವಾಗ ಇತರ ಕ್ರೀಡಾಪಟುಗಳೊಂದಿಗೆ ಸಹಕರಿಸಿ ಆಡಬೇಕಾಗುತ್ತದೆ. ಈ ಅಭ್ಯಾಸಗಳು ಮಹಿಳೆಯರ ವ್ಯಕ್ತಿತ್ವದಲ್ಲಿ ಅಳವಡಿಕೆ ಯಾಗುತ್ತವೆ. ಅವರಿಗೇ ತಿಳಿಯದಷ್ಟು ಸಮತೋಲನ ಹಾಗೂ ಸಹಕಾರದ ಗುಣಗಳು ವೃದ್ಧಿಯಾಗಿರಯತ್ತವೆ.

ದೇಹ ಸುಂದರಾಕೃತಿ ಪಡೆಯುವುದು

ದೇಹ ಸುಂದರಾಕೃತಿ ಪಡೆಯುವುದು

ಫುಟ್ಬಾಲ್ ದೇಹವನ್ನು ಸಮತೋಲನದ ರೀತಿಯಲ್ಲಿ ವ್ಯಾಯಾಮಗೊಳಿಸುತ್ತವೆಯಾದ್ದರಿಂದ ನಿಮ್ಮ ದೇಹ ಕಾಯವು ಬಹಳ ಸುಂದರ ಆಕೃತಿಯಲ್ಲಿರುತ್ತವೆ.

ಸಾಧಕರಾಗುವಿರಿ

ಸಾಧಕರಾಗುವಿರಿ

ಮಹಿಳಾ ಕ್ರೀಡಾ ಸಂಸ್ಥೆಯು ನಡೆಸಿದ ಇತ್ತೀಚಿನ ಕೆಲವು ವರದಿಯ ಪ್ರಕಾರ ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಯ ನಿರ್ವಾಹಕರು ಅಂದರೆ ಸುಮಾರು ಶೇ.75ರಷ್ಟು ಜನರು ಫುಟ್ಬಾಲ್ ಆಡುತ್ತಾರೆ. ಇದರಿಂದ ಅವರು ತಮ್ಮ ವೃತ್ತಿಯಲ್ಲೂ ಸಾಧಕರಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತದೆ.

ಎಂಡಾರ್ಫಿನ್ ಬಿಡುಗಡೆ

ಎಂಡಾರ್ಫಿನ್ ಬಿಡುಗಡೆ

ದಿನದಲ್ಲಿ 40 ನಿಮಿಷ್ ಫುಟ್ಬಾಲ್ ಆಡಬೇಕು. ಈ ಆಟದಿಂದ ಸೂಕ್ತ ದೈಹಿಕ ವ್ಯಾಯಾಮವಾಗಿ ಮೆದುಳು, ನರವ್ಯವಸ್ಥೆ ಹಾಗೂ ದೈಹಿಕ ಚಟುವಟಿಕೆ ಅಗತ್ಯವಾದ ಎಂಡಾರ್ಫಿನ್ ಹಾರ್ಮೋನ್ ಬಿಡುಗಡೆಯಾಗುತ್ತದೆ ಎನ್ನಲಾಗುವುದು.

ಸ್ವಾಭಿಮಾನ ಹಾಗೂ ನಿರ್ವಹಣಾ ಕೌಶಲ್ಯ

ಸ್ವಾಭಿಮಾನ ಹಾಗೂ ನಿರ್ವಹಣಾ ಕೌಶಲ್ಯ

ಕ್ರೀಡೆಯಲ್ಲಿ ಭಾಗಿಯಾಗುವವರು ನೈಸರ್ಗಿಕವಾಗಿಯೇ ಹೆಚ್ಚು ಸ್ವಾಭಿಮಾನಿಗಳಾಗಿರುತ್ತಾರೆ. ಜೊತೆಗೆ ತಾವು ಮಾಡುವ ಕೆಲಸಗಳಲ್ಲಿ ಉತ್ತಮ ಗುಣಮಟ್ಟದ ಕಾರ್ಯ ನಿರ್ವಹಣಾ ಕಲೆಯನ್ನು ಕಲಿತಿರುತ್ತಾರೆ.

English summary

Playing Football For Fitness!

Playing football for fitness is a good idea. And yes, all women should try it. Sports are the best way of staying fit and healthy. And football is fun. Women play football in many countries. But this article discusses why more women can embrace football as their fitness activity.
Subscribe Newsletter