ಸಾಮಾನ್ಯ ಈರುಳ್ಳಿ v/s ಸಾಂಬಾರ್ ಈರುಳ್ಳಿ-ಯಾವುದು ಆರೋಗ್ಯಕಾರಿ?

Posted By: Arshad
Subscribe to Boldsky

ಮಾರುಕಟ್ಟೆಯಲ್ಲಿ ಈರುಳ್ಳಿಯ ಹೃಸ್ವರೂಪವೊಂದು ಲಭ್ಯವಿದೆ. ಇದಕ್ಕೆ ಸಾಂಬಾರ್ ಈರುಳ್ಳಿ ಎಂದು ಕರೆಯುತ್ತಾರೆ. ಗಾತ್ರದಲ್ಲಿ ಚಿಕ್ಕದು ಎಂಬ ಒಂದೇ ಕಾರಣ ಹೊರತುಪಡಿಸಿದರೆ ನೋಡಲಿಕ್ಕೆ ಎಲ್ಲಾ ರೀತಿಯಲ್ಲಿಯೂ ಸಾಮಾನ್ಯ ಈರುಳ್ಳಿಯನ್ನೇ ಹೋಲುತ್ತದೆ. ಆದರೆ ಈ ಈರುಳ್ಳಿಯನ್ನು ಸಿಪ್ಪೆ ಸುಲಿದು ಹೆಚ್ಚಲು ಹೆಚ್ಚಿನ ಸಮಯ ಬೇಕಾಗಿರುವ ಕಾರಣ ದೊಡ್ಡ ಈರುಳ್ಳಿಯೇ ಅತ್ಯಂತ ಜನಪ್ರಿಯವಾಗಿದೆ.

ಭಾರತೀಯ ಅಡುಗೆಗಳಲ್ಲಿ ಅತಿ ಸಾಮಾನ್ಯವಾಗಿರುವ ಈರುಳ್ಳಿ ಆರೋಗ್ಯಕರವಾದ ತರಕಾರಿಯಾಗಿದ್ದು ಹಸಿಯಾಗಿಯೂ ಸೇವಿಸಬಹುದು. ಇದರಲ್ಲಿ ಕೊಲೆಸ್ಟ್ರಾಲ್ ಕಡಿಮೆಗೊಳಿಸುವ ಗುಣ, ಕೆಲವಾರು ಕ್ಯಾನ್ಸರ್ ತಡೆಗಟ್ಟುವ ಸಾಮರ್ಥ್ಯ, ಶಿಲೀಂಧ್ರ ನಿವಾರಕ ಗುಣ, ಬ್ಯಾಕ್ಟೀರಿಯಾ ನಿವಾರಕ ಹಾಗೂ ವೈರಸ್ ನಿವಾರಕ ಗುಣಗಳೂ ಇವೆ.

ಈರುಳ್ಳಿಯ ಸೇವನೆಯಿಂದ ಕಡಿಮೆ ರಕ್ತದ ಒತ್ತಡವನ್ನು ಸರಿಪಡಿಸಲು, ಮಧುಮೇಹವನ್ನು ನಿಯಂತ್ರಿಸಲು, ನರಗಳ ಉರಿಯೂತವನ್ನು ಕಡಿಮೆಗೊಳಿಸಲು ಹಾಗೂ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಹಲವಾರು ಪೋಷಕಾಂಶಗಳು ಲಭ್ಯವಾಗುತ್ತವೆ. ಒಂದು ವೇಳೆ ಚಿಕ್ಕ ಈರುಳ್ಳಿಯ ಸಿಪ್ಪೆ ಸುಲಿದು ಹೆಚ್ಚುವಷ್ಟು ಸಮಯ ಹಾಗೂ ವ್ಯವಧಾನವಿದ್ದರೆ ಈರುಳ್ಳಿಯ ಎಲ್ಲಾ ಕೆಲಸಗಳಿಗೂ ಸಾಂಬಾರ್ ಈರುಳ್ಳಿಯನ್ನು ಬಳಸಬಹುದು. 

ಈರುಳ್ಳಿ ಸಿಪ್ಪೆಯನ್ನು ಇನ್ನು ಅಪ್ಪಿತಪ್ಪಿಯೂ ಕಸದ ಬುಟ್ಟಿಗೆ ಬಿಸಾಡಬೇಡಿ!!

ಆದರೆ ಸಾಂಬಾರ್ ಈರುಳ್ಳಿಯ ರುಚಿ ಮಾತ್ರ ಕೊಂಚ ಭಿನ್ನವಾಗಿರುತ್ತದೆ. ಅಲ್ಲದೇ ಸಾಮಾನ್ಯವಾದ ಬಿಳಿ ಹಾಗೂ ಕೆಂಪು ಈರುಳ್ಳಿಗಳಲ್ಲಿ ಸಾಂಬಾರ್ ಈರುಳ್ಳಿಗಿಂತಲೂ ಹೆಚ್ಚಿನ ಪೋಷಕಾಂಶಗಳಿರುವ ಕಾರಣ ಇವನ್ನೇ ಪ್ರಧಾನವಾಗಿ ಬಳಸುವುದು ಸೂಕ್ತ. ಈ ತೀರ್ಮಾನಕ್ಕೆ ತಜ್ಞರು ಏಕೆ ಬಂದಿದ್ದಾರೆ ಎಂಬುದನ್ನು ಕೆಳಗಿನ ಮಾಹಿತಿಗಳು ಸ್ಪಷ್ಟಪಡಿಸುತ್ತವೆ.

ಪೋಷಕಾಂಶಗಳ ವಿವರ

ಪೋಷಕಾಂಶಗಳ ವಿವರ

ಕ್ಯಾಲೋರಿಗಳು: ಬಿಳಿ ಹಾಗೂ ಕೆಂಪು ಈರುಳ್ಳಿಯಲ್ಲಿ ಕ್ಯಾಲೋರಿಗಳು ಕಡಿಮೆ ಇವೆ. ನೂರು ಗ್ರಾಂ ನಷ್ಟು ಕೆಂಪು ಹಸಿ ಈರುಳ್ಳಿಯಲ್ಲಿ ಕೇವಲ ಮೂವತ್ತೇಳು ಕ್ಯಾಲೋರಿಗಳಿದ್ದರೆ ಬಿಳಿ ಈರುಳ್ಳಿಯಲ್ಲಿ ನಲವತ್ತೆರಡು ಹಾಗೂ ಸಾಂಬಾರ್ ಈರುಳ್ಳಿಯಲ್ಲಿ ಎಪ್ಪತ್ತೆರಡು ಕ್ಯಾಲೋರಿಗಳಿವೆ.

ಕರಗುವ ನಾರು

ಕರಗುವ ನಾರು

ಪ್ರತಿ ನೂರು ಗ್ರಾಂ ಕೆಂಪು ಈರುಳ್ಳಿಯಲ್ಲಿ ಹನ್ನೆರಡು ಗ್ರಾಂ, ಬಿಳಿ ಈರುಳ್ಳಿಯಲ್ಲಿ ಹತ್ತು ಗ್ರಾಂ ಹಾಗೂ ಸಾಂಬಾರ್ ಈರುಳ್ಳಿಯಲ್ಲಿ ಕೇವಲ ಐದು ಗ್ರಾಂ ಇದೆ.

ಸಮೃದ್ಧ ಪೋಷಕಾಂಶಗಳ ಆಗರ - ಬಿಳಿ ಈರುಳ್ಳಿ

ವಿಟಮಿನ್ ಸಿ

ವಿಟಮಿನ್ ಸಿ

ಬಿಳಿ ಹಾಗೂ ಕೆಂಪು ಈರುಳ್ಳಿ ಎರಡರಲ್ಲಿಯೂ ಉತ್ತಮ ಪ್ರಮಾಣದ ವಿಟಮಿನ್ ಸಿ ಇದ್ದು ನಿತ್ಯದ ಅಗತ್ಯದ ಶೇಖಡಾ ಹತ್ತರಷ್ಟು ಪ್ರಮಾಣವನ್ನು ಪೂರೈಸುತ್ತದೆ. ಆದರೆ ಸಾಂಬಾರ್ ಈರುಳ್ಳಿಯಲ್ಲಿ ವಿಟಮಿನ್ ಸಿ ಇಲ್ಲವೇ ಇಲ್ಲ.

ಬಿಳಿ ಹಾಗೂ ಕೆಂಪು ಈರುಳ್ಳಿ

ಬಿಳಿ ಹಾಗೂ ಕೆಂಪು ಈರುಳ್ಳಿ

ಬಿಳಿ ಹಾಗೂ ಕೆಂಪು ಈರುಳ್ಳಿ ಎರಡರಲ್ಲಿಯೂ ಕ್ವೆರ್ಸಟಿನ್ ಎಂಬ ಫ್ಲೇವನಾಯ್ಡುಗಳಿವೆ. ಇವು ಕ್ಯಾನ್ಸರ್ ನಿರೋಧಕ ಹಾಗೂ ಉರಿಯೂತ ನಿವಾರಕ ಗುಣಗಳನ್ನು ಹೊಂದಿವೆ.

ದಿನಕ್ಕೊಂದು ಹಸಿ ಈರುಳ್ಳಿ ತಿಂದರೆ, ಆರೋಗ್ಯಕ್ಕೆ ಹತ್ತಾರು ಲಾಭ!

ಸಾಂಬಾರ್ ಈರುಳ್ಳಿಯಲ್ಲಿ....

ಸಾಂಬಾರ್ ಈರುಳ್ಳಿಯಲ್ಲಿ....

ಆದರೆ ಸಾಂಬಾರ್ ಈರುಳ್ಳಿಯಲ್ಲಿ ಆಲಿಸಿನ್ ಎಂಬ ಆಂಟಿ ಆಕ್ಸಿಡೆಂಟು ಇದ್ದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಗುಣ ಹೊಂದಿದೆ. ಅಲ್ಲದೇ ಇದರಲ್ಲಿ ಗಂಧಕದ ಅಂಶವೂ ಇದ್ದು ಸಾಂಬಾರಿಗೆ ವಿಶಿಷ್ಟ ರುಚಿ ಹಾಗೂ ಪರಿಮಳವನ್ನು ನೀಡುವ ಕಾರಣಕ್ಕೇ ಇದಕ್ಕೆ ಸಾಂಬಾರ್ ಎಂಬ ಗುಣವಿಶೇಷಣ ಪದವನ್ನು ಸೇರಿಸಲಾಗಿದೆ.

ಕ್ಯಾಲ್ಸಿಯಂ

ಕ್ಯಾಲ್ಸಿಯಂ

ಕೆಂಪು ಈರುಳ್ಳಿಯಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಇದೆ. ಆದರೆ ಬಿಳಿ ಮತ್ತು ಸಾಂಬಾರ್ ಈರುಳ್ಳಿಗಳಲ್ಲಿ ಕ್ಯಾಲ್ಸಿಯಂ ಇಲ್ಲವೇ ಇಲ್ಲ. ಆದ್ದರಿಂದ ಕೆಂಪು ಈರುಳ್ಳಿಯನ್ನು ಹಸಿಯಾಗಿ ತಿನ್ನುವುದು ಹೆಚ್ಚು ಪ್ರಯೋಜನಕಾರಿಯಾಗಿದೆ.

ಕಣ್ಣಿನ ದೃಷ್ಟಿ ಉತ್ತಮಗೊಳ್ಳಲು ಸಾಂಬಾರ್ ಈರುಳ್ಳಿ ಸಹಕಾರಿ

ಕಣ್ಣಿನ ದೃಷ್ಟಿ ಉತ್ತಮಗೊಳ್ಳಲು ಸಾಂಬಾರ್ ಈರುಳ್ಳಿ ಸಹಕಾರಿ

ನೂರು ಗ್ರಾಂ ಸಾಂಬಾರ್ ಈರುಳ್ಳಿಯಲ್ಲಿ 1190 IU ವಿಟಮಿನ್ ಎ ಇದೆ. ಆದರೆ ಬಿಳಿ ಹಾಗೂ ಕೆಂಪು ಈರುಳ್ಳಿ ಎರಡರಲ್ಲಿಯೂ ವಿಟಮಿನ್ ಎ ಇಲ್ಲ. ಹಾಗಾಗಿ ಕಣ್ಣಿನ ದೃಷ್ಟಿ ಉತ್ತಮಗೊಳ್ಳಲು ಸಾಂಬಾರ್ ಈರುಳ್ಳಿ ಸಹಕಾರಿಯಾಗಿದೆ.

ಕಬ್ಬಿಣ

ಕಬ್ಬಿಣ

ಕೆಂಪು ಈರುಳ್ಳಿಯಲ್ಲಿ ಉತ್ತಮ ಪ್ರಮಾಣದ ಕಬ್ಬಿಣವಿದೆ. ಆದರೆ ಬಿಳಿ ಹಾಗೂ ಸಾಂಬಾರ್ ಈರುಳ್ಳಿಯಲ್ಲಿ ಕಬ್ಬಿಣ ಇಲ್ಲ.

For Quick Alerts
ALLOW NOTIFICATIONS
For Daily Alerts

    English summary

    Onions vs shallots – what’s healthier?

    Shallots are small-sized onions with a mild taste and odour. Onions need no introduction. They are a key ingredient in most recipes and are even consumed raw. They are packed with several health benefits. They help you control cholesterol levels, prevent certain type of cancers, provide antifungal, antibacterial and antiviral protection, lower blood pressure, manage diabetes, soothe nerves and circulation and speed up digestion.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more