For Quick Alerts
ALLOW NOTIFICATIONS  
For Daily Alerts

  ಚಳಿಗಾಲದ ಚಳಿಗೆ ಔಷಧ ರೀತಿಯ ಆರೈಕೆ ಮಾಡುವ ಬೀಜಗಳು

  By Divya Pandith
  |

  ಶುಷ್ಕ ವಾತಾವರಣ ಉಂಟಾಗುವುದರಿಂದ ಚರ್ಮವು ಬಹುಬೇಗ ತನ್ನ ಆರೋಗ್ಯವನ್ನು ಕಳೆದುಕೊಳ್ಳುತ್ತದೆ. ಅಂತಹ ಸಮಯದಲ್ಲಿ ಕೇವಲ ಚರ್ಮದ ಬಾಹ್ಯ ಆರೈಕೆ ನಡೆಸಿದರೆ ಸಾಲದು. ಆಂತರಿಕವಾಗಿ ಅಂದರೆ ಆಹಾರದ ಮೂಲಕ ಚರ್ಮದ ಆರೋಗ್ಯಕ್ಕೆ ಪೂರಕವಾದ ಆಹಾರವನ್ನು ಸೇವಿಸಬೇಕು. ಅಂತಹ ಉತ್ತಮ ಆಹಾರವೆಂದರೆ ಬೀಜಗಳು ಹಾಗೂ ಕೆಲವು ಒಣ ಹಣ್ಣುಗಳು. ಇವು ಹೆಚ್ಚಿನ ಎಣ್ಣೆಯಂಶ ಹಾಗೂ ಉಷ್ಣತೆಯನ್ನು ಉಂಟುಮಾಡುತ್ತದೆ.

  ಇದರ ಸೇವನೆಯಿಂದ ಆಂತರಿಕವಾಗಿ ದೇಹವು ಉಷ್ಣತೆಯನ್ನು ಪಡೆದುಕೊಂಡು, ಚರ್ಮಕ್ಕೆ ಬೇಕಾದ ತೈಲವನ್ನು ಬಿಡುಗಡೆ ಮಾಡುತ್ತದೆ.

  ಕೊಬ್ಬಿನ ಆಮ್ಲ ಮತ್ತು ಎಣ್ಣೆಯಿಂದ ಕೂಡಿರುವ ಬೀಜಗಳನ್ನು ಸೇವಿಸಿದರೆ ಚಳಿಗಾಲದ ಸಾಮಾನ್ಯ ಸಮಸ್ಯೆಗಳಾದ ತುಟಿ ಬಿರುಕು, ಹಿಮ್ಮಡಿಯ ಬಿರುಕು, ತ್ವಚೆಯಲ್ಲಿ ಶುಷ್ಕತೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಇಂತಹ ಆರೋಗ್ಯಕರ ಆರೈಕೆ ಮಾಡಬಲ್ಲ ಬೀಜಗಳು ಹಾಗೂ ಹಣ್ಣಿನ ಪರಿಚಯವನ್ನು ಇಂದು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡುತ್ತಿದೆ....

  ಅಗಸೆ ಬೀಜ

  ಅಗಸೆ ಬೀಜ

  ಅಗಸೆ ಬೀಜವು ನಿಮಗೆ ದೀರ್ಘಾವಧಿಯ ಕಾಲ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ನಿಮಗೆ ತೂಕ ಇಳಿಸುವ ಹಂಬಲವಿದ್ದರೆ ಅದಕ್ಕೂ ಈ ಬೀಜ ಸಹಾಯ ಮಾಡುವುದು. ದೇಹದಲ್ಲಿರುವ ಅನಗತ್ಯ ಕೊಲೆಸ್ಟ್ರಾಲ್ಅನ್ನು ಕಡಿಮೆ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಅಲ್ಲದೆ ಮೂಳೆಯನ್ನು ಬಲಪಡಿಸುವಂತಹ ವಿಶೇಷ ಗುಣವನ್ನು ಅಗಸೆ ಬೀಜ ಹೊಂದಿದೆ.

  ಎಳ್ಳು

  ಎಳ್ಳು

  ಎಳ್ಳು ಆರೋಗ್ಯಕರ ಕೊಲೆಸ್ಟ್ರಾಲ್ಅನ್ನು ನೀಡುತ್ತದೆ. ವಿಟಮಿನ್ ಬಿ 1, ಫೈಬರ್, ಆರೋಗ್ಯಕರ ಕೊಬ್ಬು, ಕ್ಯಾಲ್ಸಿಯಂ ಮತ್ತು ಇನ್ನೂ ಅನೇಕ ಆರೋಗ್ಯ ಗುಣವನ್ನು ಒಳಗೊಂಡಿದೆ. ದೇಹದಲ್ಲಿ ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಈ ಬೀಜಗಳು ಸಹಾಯ ಮಾಡುತ್ತವೆ. ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳು ಸಮೃದ್ಧವಾಗಿವೆ. ಉತ್ತಮ ಹೃದಯ ಆರೋಗ್ಯವನ್ನು ಕಾಪಾಡಿಕೊಳ್ಳುತ್ತವೆ ಮತ್ತು ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತವೆ. ಈ ಹೆಚ್ಚುವರಿ ಬೀಜಗಳಿಗೆ ನಿಯಮಿತ ಸಲಾಡ್‌ಗಳಿಗೆ ಈ ಬೀಜಗಳನ್ನು ಸೇರಿಸಬಹುದು. ಇದನ್ನು ಲಾಡು ಮತ್ತು ಚಿಕ್ಕಿಗಳ ರೂಪದಲ್ಲಿ ಈ ಬೀಜವನ್ನು ತಿನ್ನಬಹುದು. ಚಳಿಗಾಲಕ್ಕೆ ಒಳ್ಳೆಯ ಸಹಕಾರ ನೀಡುತ್ತದೆ.

  ಬಾದಾಮಿ

  ಬಾದಾಮಿ

  ಬಾದಾಮಿ ವಿಟಮಿನ್ ಬಿ 2, ವಿಟಮಿನ್ ಇ, ಪ್ರೋಟೀನ್, ಮೆಗ್ನೀಷಿಯಂ, ಫಾಸ್ಫರಸ್ ಮತ್ತು ಮ್ಯಾಂಗನೀಸ್ ಗಳನ್ನು ಒಳಗೊಂಡಿರುವ ಅತ್ಯುತ್ತಮ ಮೂಲವಾಗಿದೆ. ಬಾದಾಮಿ ಶೀತಗಳ ವಿರುದ್ಧ ಹೋರಾಡಿ ಶಕ್ತಿಯನ್ನು ನೀಡುತ್ತದೆ. ಈ ಬಾದಾಮಿ ಬೀಜವು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಮೂತ್ರಪಿಂಡದಲ್ಲಿ ಕಲ್ಲುಗಳ ಸಂಭವಿಸುವಿಕೆಯನ್ನು ತಡೆಯುತ್ತದೆ.

  ವಾಲ್‌ನೆಟ್

  ವಾಲ್‌ನೆಟ್

  ಇದರಲ್ಲಿ ವಿಟಮಿನ್ ಗಳು, ಖನಿಜಗಳು, ಪ್ರೋಟೀನ್‌ಗಳನ್ನು ಒಳಗೊಂಡಿರುವ ಉತ್ತಮ ಮೂಲವಾಗಿದೆ. ಇದು ಕ್ಯಾನ್ಸರ್ ವಿರೋಧಿ ಲಕ್ಷಣವನ್ನು ಒಳಗೊಂಡಿದೆ. ಚರ್ಮಕ್ಕೆ ಎಣ್ಣೆಯಂಶವನ್ನು ನೀಡಿ, ಉತ್ತಮ ಆಕರ್ಷಣೆ ಹಾಗೂ ಕಾಂತಿಯಿಂದ ಕೂಡಿರುವಂತೆ ಮಾಡುತ್ತದೆ. ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು, ಉರಿಯೂತದ ಲಕ್ಷಣಗಳನ್ನು ತಡೆಗಟ್ಟಲು ಮತ್ತು ಮೆದುಳಿನ ಮೆಮೊರಿ ಶಕ್ತಿ ಹೆಚ್ಚಿಸಲು ಸಹಾಯ ಮಾಡುವುದು.

  ನೆಲಗಡಲೆ/ಕಡಲೆಕಾಯಿ

  ನೆಲಗಡಲೆ/ಕಡಲೆಕಾಯಿ

  ನೆಲಗಡಲೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅವು ಸತು, ಫೈಬರ್, ಮೆಗ್ನೀಸಿಯಮ್, ಪ್ರೊಟೀನ್, ವಿಟಮಿನ್ ಡಿ, ವಿಟಮಿನ್ ಇ, ಪೊಟ್ಯಾಸಿಯಮ್, ಸತು ಮತ್ತು ಇತರ ಖನಿಜಾಂಶಗಳನ್ನು ಒಳಗೊಂಡಿರುವ ಅತ್ಯುತ್ತಮ ಮೂಲವಾಗಿದೆ. ಆದ್ದರಿಂದ, ಕಡಲೆಕಾಯಿಯನ್ನು ಹುರಿದು ಸಿಪ್ಪೆಯನ್ನು ತೆಗೆಯಬೇಕು. ನಂತರ ಗಾಳಿಯಾಡದ ಡಬ್ಬದಲ್ಲಿ ಶೇಖರಿಸಿಟ್ಟುಕೊಂಡರೆ, ನಿತ್ಯವೂ ಸ್ವಲ್ಪ ಸ್ವಲ್ಪವೇ ಸೇವಿಸಬಹುದು. ಇದರಿಂದ ಆರೋಗ್ಯಕರ ಫಲಿತಾಂಶವನ್ನು ಪಡೆಯಬಹುದು.

  ಕಡಲೆಕಾಯಿ-ಇದು 'ಬಡವರ ಬಾದಾಮಿ' ಒಟ್ಟಾರೆ ಆರೋಗ್ಯದ ಕಣಜ

  ಕುಂಬಳಕಾಯಿ ಬೀಜಗಳು

  ಕುಂಬಳಕಾಯಿ ಬೀಜಗಳು

  ಕುಂಬಳಕಾಯಿ ಬೀಜಗಳು ಫೈಬರ್ನ ಸಮೃದ್ಧ ಮೂಲ, ವಿಟಮಿನ್ ಎ, ಕೆ ಮತ್ತು ಸಿ ಗಳನ್ನು ಒಳಗೊಂಡಿದೆ. ವಿಟಮಿನ್ ಸಿ ನಿದ್ರೆ ಪಡೆಯುವಲ್ಲಿ ನಿಮಗೆ ಸಹಾಯ ಮಾಡುತ್ತದೆ. ಪಿತ್ತಕೋಶದ ಸಮಸ್ಯೆಗಳನ್ನು ತಡೆಗಟ್ಟುತ್ತದೆ. ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ. ಭಕ್ಷ್ಯದೊಳಗೆ ಹೆಚ್ಚುವರಿ ತಿರುವನ್ನು ಪಡೆಯಲು ನಿಮ್ಮ ಅಚ್ಚುಮೆಚ್ಚಿನ ಸೂಪ್, ಸಲಾಡ್ ಮತ್ತು ಇತರ ಪಾಕವಿಧಾನಗಳಿಗೆ ಈ ಕುರುಕುಲಾದ ಬೀಜಗಳನ್ನು ಸೇರಿಸಬಹುದು.

  ಗೋಡಂಬಿ ಬೀಜ

  ಗೋಡಂಬಿ ಬೀಜ

  ಗೋಡ೦ಬಿ ಬೀಜಗಳು ಆರೋಗ್ಯಕರ ಕೊಬ್ಬಿನಾ೦ಶದಿ೦ದ ಸಮೃದ್ಧವಾದವುಗಳಾಗಿದ್ದು, ಕೊಲೆಸ್ಟ್ರಾಲ್ ಅನ್ನು ಶೂನ್ಯ ಮಟ್ಟದಲ್ಲಿ ಒಳಗೊ೦ಡಿವೆ. ಇದರಿ೦ದಾಗಿ ಗೋಡ೦ಬಿ ಬೀಜಗಳು ಅನಾರೋಗ್ಯಕರ LDL ಕೊಲೆಸ್ಟ್ರಾಲ್ ಹಾಗೂ ಟ್ರೈಗ್ಲಿಸರೈಡ್‌ನ ಪ್ರಮಾಣವನ್ನು ದೇಹದಲ್ಲಿ ತಗ್ಗಿಸಬಲ್ಲವು ಹಾಗೂ ತನ್ಮೂಲಕ ಹೃದಯದ ಸ್ವಾಸ್ಥ್ಯಕ್ಕೆ ದಾರಿಮಾಡಿಕೊಡಬಲ್ಲವು. ಅನೇಕರು ಭಾವಿಸಿಕೊ೦ಡಿರುವ ಪ್ರಕಾರ, ಕೊಬ್ಬಿನಾ೦ಶದ ಸೇವನೆಯನ್ನು ತಗ್ಗಿಸುವುದು ಅಥವಾ ನಿಲ್ಲಿಸುವುದು ಆರೋಗ್ಯದ ದೃಷ್ಟಿಯಿ೦ದ ಹಿತಕರವೆ೦ಬುದಾಗಿದೆ. ಆದರೆ ಇದೊ೦ದು ತಪ್ಪು ಕಲ್ಪನೆ. ಕೊಬ್ಬಿನಾ೦ಶವನ್ನೂ ಒಳಗೊ೦ಡ೦ತೆ ನಮ್ಮ ಶರೀರಕ್ಕೆ ಎಲ್ಲಾ ತೆರನಾದ ಆಹಾರವರ್ಗಗಳಿ೦ದಲೂ ದೊರಕುವ ಪೋಷಕಾ೦ಶಗಳ ಅವಶ್ಯಕತೆ ಇದೆ. ಈ ವಿಚಾರದ ಕುರಿತು ವಹಿಸಬೇಕಾಗುವ ಒ೦ದು ಎಚ್ಚರಿಕೆ ಏನೆ೦ದರೆ, ಅ೦ತಹ ಪೋಷಕಾ೦ಶಗಳನ್ನು ಕಾಜುವಿನ೦ತಹ (ವಿಶೇಷವಾಗಿ ಕೊಬ್ಬಿನಾ೦ಶ) ಆರೋಗ್ಯಕರ ಮೂಲಗಳಿ೦ದ ಶರೀರಕ್ಕೆ ಪಡೆದುಕೊಳ್ಳಬೇಕೇ ಹೊರತು, ಅನಾರೋಗ್ಯಕರ ಮೂಲಗಳಿ೦ದ (ಉದಾಹರಣೆಗೆ ಎಣ್ಣೆಯಲ್ಲಿ ಕರಿದ ತಿನಿಸುಗಳು) ಅಲ್ಲ.

  ಚಿಯಾ ಬೀಜಗಳು

  ಚಿಯಾ ಬೀಜಗಳು

  ಹೃದಯ ರೋಗಗಳು, ಮಧುಮೇಹ, ಇತ್ಯಾದಿಗಳ ಅಪಾಯವನ್ನು ಕಡಿಮೆಮಾಡುವ ಗುಣಗಳಲ್ಲಿ ಸಮೃದ್ಧವಾಗಿರುವ ಈ ಬೀಜಗಳು ಅಮೈನೊ ಆಮ್ಲಗಳು, ಫೈಬರ್‌ಗಳ ಸಮೃದ್ಧ ಮೂಲವಾಗಿದೆ. ಉರಿಯೂತದ ಗುಣಲಕ್ಷಣಗಳನ್ನು ತಡೆಯುತ್ತದೆ. ದೇಹದ ಅನಗತ್ಯ ತೂಕ ಕಡಿಮೆ ಮಾಡಲು ಸಹಾಯ ಮಾಡುವುದು. ಇದು ದೇಹದಲ್ಲಿರುವ ಹೆಚ್ಚುವರಿ ನೀರಿನಂಶವನ್ನು ಹೀರಿಕೊಳ್ಳುತ್ತದೆ. ಈ ಬೀಜವು ದೇಹದ ಜೀವಕೋಶದಲ್ಲಿರುವ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಈ ಕುರುಕುಲಾದ ಮತ್ತು ಟೇಸ್ಟಿ ಬೀಜಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ವಿಶೇಷವಾಗಿ ಚಳಿಗಾಲದಲ್ಲಿ ಶೀತ ಉಷ್ಣತೆಯನ್ನು ಸಮತೋಲನದಲ್ಲಿಟ್ಟು ಅನೇಕ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸುತ್ತವೆ. ಇವುಗಳ ಸೇವನೆ ನಿಮ್ಮ ದಿನದ ಯೋಜನೆಗಳನ್ನು ಅಡ್ಡಿಪಡಿಸದಿರಲಿ. ಅಂತಹ ಎಲ್ಲಾ ಆರೋಗ್ಯಕರ ಆಯ್ಕೆಗಳನ್ನೂ ಒಳಗೊಂಡಂತೆ ಆಹಾರವನ್ನು ಸಮತೋಲನಗೊಳಿಸಿ ಸಂತೋಷ ಮತ್ತು ಆರೋಗ್ಯವಾಗಿರಿ. ಹ್ಯಾಪಿ ವಿಂಟರ್ !!

  English summary

  Nuts & Seeds That Are A Must Have For Winters!

  Winter is here and we are already out with warm clothes and some extra care towards our health and body. But just wearing warm clothes and sleeping in warm blankets wouldn't do. This winter season, pamper your body with warmth and the required nourishment from inside, so that you are fit and healthy during the harsh weather changes. So, here are some nuts and seeds that are a must have during the winter season. Take them and protect yourself from the winter dryness of the skin, cold, cracked heels, chapped lips, etc. Here you go!
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more