ಮೆಂತೆ ಸೊಪ್ಪಿನಲ್ಲಿದೆ ಆರೋಗ್ಯವರ್ಧಕ ಗುಣಗಳು, ಇಂದಿನಿಂದಲೇ ಹೆಚ್ಚು ಬಳಸಿ

By Manu
Subscribe to Boldsky

ಮೆಂತೆ ಸೊಪ್ಪು ಆಯುರ್ವೇದದಲ್ಲಿ ಮಹತ್ತರವಾದ ಮಹತ್ವವನ್ನು ಪಡೆದುಕೊಂಡಿದೆ. ಅಲ್ಲದೆ ವಿವಿಧ ಆಹಾರ ಪದಾರ್ಥಗಳ ತಯಾರಿಯಲ್ಲಿ ಇದನ್ನು ವಿಶೇಷವಾಗಿ ಬಳಸುತ್ತಾರೆ. ಈ ಸಸ್ಯದ ಬೀಜವನ್ನು ಸುವಾಸನೆಗಾಗಿ ಹಾಗೂ ಎಲೆಗಳನ್ನು ವಿಶೇಷ ಪೋಷಣೆಗಳಿಗೆ ಉಪಯೋಗಿಸುತ್ತಾರೆ.

ಪೌಷ್ಟಿಕಾಂಶದ ಆಗರವಾದ ಮೆಂತೆಯ ಉಪಯೋಗಗಳು ಹಲವಾರು. ಹೊಟ್ಟೆ ನೋವು, ಪಿತ್ತ, ಅಜೀರ್ಣ, ಗ್ಯಾಸ್ ಹಾಗೂ ತ್ವಚೆಯ ಸಮಸ್ಯೆ ಸೇರಿದಂತೆ ಇನ್ನೂ ಅನೇಕ ತೊಂದರೆಗಳಿಗೆ ಮೆಂತೆಯಿಂದ ಮನೆ ಔಷಧಿ ತಯಾರಿಸಬಹುದು. ಇಷ್ಟೇ ಅಲ್ಲದೆ ಇನ್ನೂ ಯಾವೆಲ್ಲಾ ಉಪಯೋಗ ಪಡೆದುಕೊಳ್ಳಬಹುದು ಎನ್ನುವ ವಿವರಣೆ ಇಲ್ಲಿದೆ ನೋಡಿ...

Fenugreek Leaves

* ಹಸಿರು ಮೆಂತೆ

ಮೆಂತೆ ಎಲೆಗಳು ಮೂಲಭೂತವಾಗಿ ಒಂದು ಹಸಿರು ಎಲೆಗಳ ತರಕಾರಿ. ಇದನ್ನು ಒಣಗಿಸಿದರೆ ಕಸೂರಿ ಮೇಥಿಯಾಗುತ್ತದೆ. ಒಣಗಿಸಿರುವ ಮೆಂತೆಗಿಂತ ಹಸಿರು ಎಲೆಗಳಲ್ಲಿ ಹೆಚ್ಚು ಪೋಷಕಾಂಶ ಸಿಗುತ್ತದೆ. ಅಲ್ಲದೆ ಇದರಿಂದ ತಯಾರಿಸಿರುವ ಆಹಾರ ಪದಾರ್ಥಗಳು ಹೆಚ್ಚು ರುಚಿಯನ್ನು ಹೊಂದಿರುತ್ತವೆ. 

ಮೆಂತೆ ಕಾಳಿನ ಕಾರುಬಾರಿಗೆ ಭೇಷ್ ಎನ್ನಲೇಬೇಕು!

* ಕಬ್ಬಿಣದ ಮೂಲ

ಇದರಲ್ಲಿ ಅಧಿಕ ಪ್ರಮಾಣದಲ್ಲಿ ಕಬ್ಬಿಣಾಂಶ ಇರುವುದರಿಂದ ರಕ್ತ ಹೀನತೆಗೆ ಪ್ರಮುಖ ಔಷಧಿಯನ್ನಾಗಿ ಉಪಯೋಗಿಸುತ್ತಾರೆ. ರಕ್ತ ಹೀನತೆ ಇರುವವರು ಮೆಂತೆಯ ಆಹಾರ ಮತ್ತು ಇತರ ತರಕಾರಿಗಳ ಜೊತೆ ಸಲಾಡ್ ರೂಪದಲ್ಲಿ ಹಸಿ ಮೆಂತೆಯ ಸೊಪ್ಪನ್ನು ಸೇವಿಸಿದರೆ ಹಿಮೋಗ್ಲೋಬಿನ್ ಪ್ರಮಾಣ ಏರಿಕೆ ಆಗುವುದು.

Fenugreek Leaves

* ಇನ್ಸುಲಿನ್ ನಿಯಂತ್ರಕ

ಮೆಂತೆ ಎಲೆಯನ್ನು ರುಬ್ಬಿ, ಒಂದು ಗ್ಲಾಸ್ ರಸವನ್ನು ತಯಾರಿಸಿ ಕುಡಿದರೆ ಇನ್ಸುಲಿನ್ ಹಾರ್ಮೋನ್‍ಗಳ ಮಟ್ಟವನ್ನು ನಿಯಂತ್ರಿಸಬಹುದು. ಆರೋಗ್ಯ ಪೂರ್ಣ ಪಾನೀಯವಾದ ಇದರಲ್ಲಿ ಕಹಿ ಗುಣವು ಇರುವುದರಿಂದ ಮಧುಮೇಹಕ್ಕೂ ಹೆಚ್ಚು ಪರಿಣಾಮಕಾರಿ ಚಿಕಿತ್ಸೆ ನೀಡುವುದು.

* ವಿಟಮಿನ್ ಕೆ

ಬಸಳೆ, ಪುದೀನಗಳಂತಹ ಸೊಪ್ಪಿಗೆ ಮೆಂತೆಸೊಪ್ಪು ಹೆಚ್ಚು ಸ್ಪರ್ಧಾತ್ಮಕ ಪೈಪೋಟಿ ನೀಡುವುದು. ಇವುಗಳಲ್ಲಿರುವ ವಿಟಮಿನ್ ಕೆ ಪ್ರಮಾಣದಷ್ಟೇ ಮೆಂತೆ ತನ್ನ ಒಡಲಲ್ಲೂ ಸಮೃದ್ಧವಾದ ವಿಟಮಿನ್ ಕೆಯನ್ನು ಹೊಂದಿದೆ. ಇದು ಕಿಣ್ವಗಳ ಆರೈಕೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುತ್ತದೆ.

* ಸೂಕ್ತ ನಾರಿನಂಶ

ಮೆಂತೆ ಎಲೆಯು ದೇಹಕ್ಕೆ ಬೇಕಾಗುವ ನಾರಿನಂಶವನ್ನು ಅಧಿಕ ಪ್ರಮಾಣದಲ್ಲಿ ನೀಡುತ್ತದೆ. ಮಲಬದ್ಧತೆಯ ಸಮಸ್ಯೆಯನ್ನು ಪರಿಹಾರ ಗೊಳಿಸುವುದರ ಜೊತೆಗೆ ಕರುಳಿನ ಚಲನೆಯನ್ನು ಮೃದುಗೊಳಿಸುತ್ತದೆ. 

ಅಡುಗೆಮನೆಯ ಮೆಂತೆ- ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು!

* ಉತ್ತಮ ಮಟ್ಟದ ಪ್ರೋಟೀನ್

ಮೆಂತೆಯಲ್ಲಿ ಸಮೃದ್ಧವಾದ ಪ್ರೋಟೀನ್ ಮತ್ತು ನಿಕೋಟಿನ್ ಆಮ್ಲಗಳಿವೆ. ಇವು ನಮ್ಮ ಕೇಶರಾಶಿಯ ಹೊಳಪನ್ನು ಹೆಚ್ಚಿಸಿ ಬೆಳವಣಿಗೆ ಸಹಾಯ ಮಾಡುತ್ತದೆ, ಜೊತೆಗೆ ದೇಹದಲ್ಲೂ ಶಕ್ತಿಯನ್ನು ವೃದ್ಧಿಸುತ್ತದೆ.

Fenugreek Leaves

* ಕಹಿಯ ಗುಣ

ಮೆಂತೆಯಲ್ಲಿ ಇರುವ ಪೋಷಕಾಂಶಗಳು ದೇಹದ ಆರೋಗ್ಯವನ್ನು ಕಾಪಾಡುವಂತೆ, ಇದರಲ್ಲಿ ಇರುವ ಕಹಿ ಅಂಶಗಳು ದೇಹದ ಆರೋಗ್ಯವನ್ನು ಕಾಪಾಡುತ್ತದೆ. ರಕ್ತವನ್ನು ಶುದ್ಧಿಗೊಳಿಸುತ್ತದೆ. ಜೊತೆಗೆ ದೇಹದಲ್ಲಿರುವ ನಂಜಿನ ಪ್ರಮಾಣ ಕಡಿಮೆಯಾಗುತ್ತದೆ. ದೇಹದಲ್ಲಿರುವ ಗಾಯಗಳನ್ನು ಬಹು ಬೇಗ ಗುಣಪಡಿಸುವ ಸಾಮರ್ಥ್ಯವನ್ನು ಒಳಗೊಂಡಿದೆ.

For Quick Alerts
ALLOW NOTIFICATIONS
For Daily Alerts

    English summary

    Nutritional Benefits Of Fenugreek Leaves

    Benefits of fenugreek or methi are hardly known when we consider it as a herb instead of a spice. In the Eastern cultures, especially India, fenugreek leaves are more widely used as compared to seeds primarily due to its immense nutritional benefits. While the seeds of this plant are used for only for the flavour, the leaves have herb nutrition value in them.
    Story first published: Wednesday, August 2, 2017, 23:45 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more